ಶನಿವಾರ, ಡಿಸೆಂಬರ್ 4, 2021

ಹೋರಾಟವೂ ಉದ್ದಿಮೆಯಾಗಿ ಹೋದ ಈ ಸಂಕೀರ್ಣ ಕಾಲಘಟ್ಟದ ಕುರಿತು

 ನೀವು ಪರೀಕ್ಷಿಸಿ ನೋಡಿ:ಲಕ್ಷಾಂತರ,ಕೋಟ್ಯಾಂತರ ಸಂಘಟನೆಗಳು ಹೋರಾಟಗಾರರು ಜನ್ಮತಳೆದಿದ್ದಾರೆ;ಅಷ್ಟೇ ಸಮಸ್ಯೆಗಳು ಹೆಚ್ಚಾಗುತ್ತಿವೆ.ಇವೆಲ್ಲವನ್ನೂ ವಿಶ್ಲೇಷಿಸಿ ನೋಡಿದಾಗ ಎರಡು ಅಂಶಗಳು ಸ್ಪಷ್ಟವಾಗುತ್ತವೆ.೧)ಆತ್ಮರತಿ ೨)ಅಜೀರ್ಣದ ಸಮಸ್ಯೆ! ತುಂಬಾ ಸಂಪಾದಿಸಿದವರು ಅಜೀರ್ಣವೆನ್ನುವ ರೋಗಕ್ಕೆ ಗುರಿಯಾಗಿ ಸಮಾಜ ಸೇವೆಯ ವೇಷ ಹಾಕುತ್ತಾರೆ,ಅದೊಂದು ಚಟ ಅಥವಾ ವ್ಯಸನ.ತುಂಬಾ ಹಣವಿರುವವರಿಗೆ ಆತ್ಮರತಿಯ ದುರಭ್ಯಾಸವಿರುತ್ತದೆ,ಇದು ತಮ್ಮನ್ನು ತಾವು ಹೊಗಳಿಕೊಳ್ಳುವ,ಹೊಗಳಿಸಿಕೊಳ್ಳುವ ಚಟ.ಬಲು ಅಪಾಯಕಾರಿ.ಇದೆಲ್ಲದರ ಆಚೆ ಇನ್ನೊಂದು ವರ್ಗವಿರುತ್ತದೆ: black hole ಮುಚ್ಚಿಕೊಳ್ಳಲು ವೇಷ ಹಾಕುವವರ ವರ್ಗ!ತುಂಬಾ ತುಂಬಾ ಅಪಾಯವಿರುವುದು ಇವರಿಂದ.ದುರಂತ ಎಂದರೆ ಇಡೀ ಪ್ರಪಂಚವೇ ಇವರ ನಿಯಂತ್ರಣದಲ್ಲಿದೆ.ಇವರನ್ನು white collar criminals ಅಂತ ಕರೆಯುತ್ತಾರೆ,ಅಪರಾಧ ಮಾಡುತ್ತಿರುವುದು,ಪಾಪದ ಹಣದಿಂದ ಜೀವಿಸುತ್ತಿರುವುದು ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತದೆ,ಇವರನ್ನು ಯಾರೂ ಟಚ್ ಮಾಡುವುದಿಲ್ಲ.ಇವರು ಏನನ್ನು ಬೇಕಾದರೂ ಮಾಡಬಹುದು.ಕೊಲೆಯಿಂದ ಹಿಡಿದು ೩೦೭ವರೆಗೆ,ಅಂದರೆ ೩೦೨ ಮತ್ತು ೩೦೭ ಇವರ ಆಯುಧಗಳು.


ಹೇಳಿ ಮತ್ತೆ?ಮತ್ತೇಕೆ ಸಮಸ್ಯೆಗಳು ತಗ್ಗುತ್ತಿಲ್ಲ?ಮತ್ತೇಕೆ ಮೌಢ್ಯ ವಿಜೃಂಭಿಸುತ್ತಿದೆ,ಮತ್ತೇಕೆ ಲಂಚಗುಳಿತನ,ಭ್ರಷ್ಟಾಚಾರ,ಸರ್ಕಾರಿ ನೌಕರರ ಸೋಮಾರಿತನ,ತೆರಿಗೆಗಾರರ ದಾರುಣ ಮೋಸ... ಏಕೆ ಕಡಿಮೆಯಾಗುತ್ತಿಲ್ಲ?ಕೆಲವೇ ಕೆಲವರು ಮಾತ್ರ ಏಕೆ ವಿಜೃಂಭಣೆಯ ಜೀವನ ಮಾಡುತ್ತಿದ್ದಾರೆ?


ಈ ಪ್ರಶ್ನೆಗಳು ಜಟಿಲವಾಗಿಯೇನೂ ಇಲ್ಲ,ತುಂಬಾ ಸರ ಇವೆ.ನೀವು ಯೋಚಿಸಬೇಕಷ್ಟೇ.


ಈ ಬಗ್ಗೆ ನಿಮಗೆ ಕೊಂಚ ಅರ್ಥವಾಗಬೇಕು ಎಂದರೆ ನಂದಮೂರಿ ಬಾಲಕೃಷ್ಣ ನಟಿಸಿದ ನಿನ್ನೆಯಷ್ಟೇ ಬಿಡುಗಡೆಯಾದ "ಅಖಂಡ" ಎನ್ನುವ ಸಿನೆಮಾ ನೋಡಬೇಕು ನೀವು,ನಾನು ನಿನ್ನೆ ನೋಡಿದೆ.


ಅದರ inspire ಮೇಲೆ ಈ ಸಾಲುಗಳನ್ನು ಬರೆದೆ.ಅತಿಯಾದ ಅಭಿಮಾನವೂ ನಮ್ಮ ಮೂರ್ಖತೆಯನ್ನು ಬಿಂಬಿಸುತ್ತದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹೋರಾಟವೂ ಉದ್ದಿಮೆಯಾಗಿ ಹೋದ ಈ ಸಂಕೀರ್ಣ ಕಾಲಘಟ್ಟದ ಕುರಿತು

 ನೀವು ಪರೀಕ್ಷಿಸಿ ನೋಡಿ:ಲಕ್ಷಾಂತರ,ಕೋಟ್ಯಾಂತರ ಸಂಘಟನೆಗಳು ಹೋರಾಟಗಾರರು ಜನ್ಮತಳೆದಿದ್ದಾರೆ;ಅಷ್ಟೇ ಸಮಸ್ಯೆಗಳು ಹೆಚ್ಚಾಗುತ್ತಿವೆ.ಇವೆಲ್ಲವನ್ನೂ ವಿಶ್ಲೇಷಿಸಿ ನೋಡಿದಾಗ ಎ...