ಹೆಣ್ಣು ಪುರುಷನ ಅಪನಂಬಿಕೆ,ಆತನ ಅಹಂ,ಆತನ ಅನಾರೋಗ್ಯಕಾರಿ ಸ್ವಾರ್ಥ,ಮತ್ತು ಆತನ ಹೇಡಿತನ ಗುಲಾಮಳಾಗಿದ್ದಾಳೆ.ಕೈಲಾಗದ ಪುರುಷ ಹೆಣ್ಣಿನ ಮೇಲೆ ಅಪನಂಬಿಕೆ ತಾಳುತ್ತಾನೆ ಎನ್ನುವುದು ನನ್ನ ಬಲವಾದ ಪ್ರತಿಪಾದನೆ.ಈ ಹಿನ್ನೆಲೆಯಲ್ಲಿ ಹೆಣ್ಣಿ ಭಾವನೆಗಳ ಸುತ್ತಾ ಒಂದು ಚಿಕ್ಕ ಬರಹ,ಮನೆಯಲ್ಲಿಯೇ ಇದ್ದೀರಲ್ಲ,ಆಕೆಯ ಭಾವನೆ ಅರ್ಥವಾಗಲೆಂದು!ಓದಿಕೊಳ್ಳಿ:
ಗಂಡಸಿನ ಪ್ರೇಮ ಬಂಧನದಲ್ಲಿ ಬಂಧಿಯಾದ ಹೆಂಗಸಿನ ಭಾವನೆಗಳ ಮೇಲೊಂದು ವಿಚಾರ ಲಹರಿ
“ಏನಿದೆ?ಕಸ,ಮುಸುರೆ,ಮನೆವಕೆಲಸ,ರಾತ್ರಿ ಹಾಸಿಗೆಯ ಸೇವೆಯ ಹೊರತು ಹೆಣ್ಣಿಗೆ!”ಎಂದಳು ಆಕೆ.ಆಕೆಯ ಕಣ್ಣುಗಳಲ್ಲಿ ಹತಾಶೆಯ ಭಾವ ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತಿತ್ತು.ಎಲ್ಲವೂ ಇದೆ ಆಕೆಗೆ;ಹಣ,ಆಸ್ತಿ,ಬಂಗಾರ,ಬಂಗಲೆ,ಹವಾನಿಯಂತ್ರಿತ ವ್ಯವಸ್ಥೆ;ಸ್ವಾತಂತ್ರ್ಯವೊಂದನ್ನು ಬಿಟ್ಟು!ಕನಸುಗಳಿಗೆ ಸಮಾಧಿ ಕಟ್ಟುತ್ತಾ ಪ್ರೇಮದ ಸಂಕೋಲೆಯಲ್ಲಿ ಸಮಾಧಿಯಾಗುತ್ತಾ ಆಕೆ ಸುಖವಾಗಿದ್ದಾಳೆ;ದೊಡ್ಡ ಮನೆ ಹೆಣ್ಣು ಮಗಳಾಕೆ.ಪ್ರಪಂಚ ಆಕೆಯ ಸುಖದ ಸುಪ್ಪತ್ತಿಗೆ ಕಂಡು ಹೊಟ್ಟೆ ಉರಿದುಕೊಳ್ಳುತ್ತಿದ್ದರೆ ಆಕೆ ಸ್ವಾತಂತ್ರ್ಯ ರಹಿತ ಜೀವನಕ್ಕೆ ಬೇಸತ್ತು ಸುಖದ ಸಂಕೋಲೆಯೊಳಗೆ ಉರಿದು ಹೋಗುತ್ತಿದ್ದಾಳೆ.ಮನಸ್ಸು,ಅದರೊಳಗಿನ ಕನಸು,ಜಗ ಬೆಳಗುವ ಆಕೆಯ ಆಸೆಯ ಶವ ಸತ್ತು ನಾರುತ್ತಿದ್ದರೂ ಯಾರಿಗೂ ಅರ್ಥವಾಗುತ್ತಿಲ್ಲ.
“ಯಾರು ಹೇಳಿದ್ದಾರೋ ಕಾಣೆ,ಹೆಣ್ಣಿನ ಜೀವನವೊಂದು ನರಕ.ಆಕೆ ಅನೇಕ ಸಂಕಟಗಳನ್ನು ಸುಖವೆಂದು ಭಾವಿಸಿ ನುಂಗಬೇಕು.ಆಕೆಗೆ ಪ್ರೇಮದ ಕವಚ ತೊಡಿಸಿ ಪ್ರೇಮವನ್ನೇ ಸುಖವೆಂದು ನಂಬಿಸಿ ಪ್ರೇಮ ಪಂಚರದಲ್ಲಿ ಬಂಧಿಸಿ ಬಿಡುತ್ತಾರೆ.ಆಕೆ ಮೂರು ಹೊತ್ತೂ ಚಾಕರಿ ಮಾಡಬೇಕು;ಗಂಡನ ಚಾಕರಿ,ಅತ್ತೆ ಮಾವಂದಿರ ಚಾಕರಿ,ಅವರ ಬಂಧು ಬಳಗದ ಚಾಕರಿ,ಮಕ್ಕಳ ಚಾಕರಿ!ಆಕೆ ವ್ಯವಸ್ಥಿತವಾಗಿ ದಾಸಿ;ಸಂವಿಧಾನ ಸ್ತ್ರೀ ಸ್ವಾತಂತ್ರ್ಯ ಕಲ್ಪಿಸಿಕೊಟ್ಟರೂ ಅದು ಪುಸ್ತಕದ ಪುಟಗಳಲ್ಲಿ ಮಾತ್ರ ಉಳಿದಿದೆ. ‘ನಿನಗೇನು ಕಡಿಮೆ ಮಾಡಿದ್ದೀರಿ,ಬಂಗಾರ ಕೊಟ್ಟಿಲ್ಲವಾ,ಬಂಗಾರದಂತಹ ಮಕ್ಕಳನ್ನು ಕೊಟ್ಟಿಲ್ಲವಾ,ಬಂಗಲೆ ಕೊಟ್ಟಿಲ್ಲವಾ,ಕೇಳಿದಾಗೆಲ್ಲಾ ನಿನಗಿಷ್ಟವಾಗುವ ಬಟ್ಟೆ ಕೊಟ್ಟಿಲ್ಲವಾ?’ಎನ್ನುತ್ತಾನೆ ಗಂಡ.ಮನಸ್ಸು ಮೂಕವಾಗಿ ರೋಧಿಸುತ್ತದೆ:ಸ್ವಾತಂತ್ರ್ಯ ಎಲ್ಲಿ ಕೊಟ್ಟಿದ್ದೀರಿ ಎಂದು.ಹೆಣ್ಣಿನ ಜೀವನ ಅಡುಗೆ ಮನೆಯ ನಾಲ್ಕು ಗೋಡೆಗಳಲ್ಲಿ ಕಮರಿ ಹೋಗುತ್ತದೆ;ಹಾಸಿಗೆಯಲ್ಲಿ ಇಷ್ಟವಿರಲಿ ಬಿಡಲಿ;ತೆರೆದುಕೊಳ್ಳಬೇಕು:ಅಪ್ಪಟ ಸೂಳೆಯಂತೆ!”ಎಂದಳಾಕೆ.
“ಕನಿಷ್ಠ ಹೆಣ್ಣಿಗೆ ತನ್ನ ದೇಹದ ಮೇಲೂ ಸ್ವಾತಂತ್ರ್ಯವಿರದಿದ್ದದ್ದು ದುರದೃಷ್ಟ!ಗಂಡು ತನ್ನ ತೆವಲಿಗಾಗಿ ಆಕೆಯ ದೇಹವನ್ನು ಹಿಂಸ್ರ ಪಶುವಿನಂತೆ ಬಳಸಿಕೊಳ್ಳುತ್ತಾನೆ!ಆಕೆ ಸಹಿಸಲೇಬೇಕು.ಏಕೆಂದರೆ ಆಕೆಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯ ಭಯ!ನೋವನ್ನೂ ಸುಖವೆಂದೇ ಭಾವಿಸಬೇಕು,ಭಾವನೆಗಳನ್ನು ವ್ಯಕ್ತಪಡಿಸುವಂತಿಲ್ಲ!”ಆಕೆ ನೋವಿನಿಂದ ಈ ಮಾತನ್ನು ಹೇಳಿದಳು.
ಮೈಡಿಯರ್ ಫ್ರೇಂಡ್ಸ್,
ಜಗತ್ತಿನ ಕೋಟ್ಯಾಂತರ ಮಹಿಳೆಯರ ಒಳಮನಸ್ಸಿನ ಅಳಲಿದು.ಹೆಂಡತಿ ತಾನು ಹೇಳಿದಂತೆಯೇ ಕೇಳಬೇಕು.ಆಕೆ ಮನೆಯ ಹೊಸಿಲು ದಾಟಿ ಆಚೆ ಬರುವಂತಿಲ್ಲ.ಗಂಡಸು ಆಕೆ ಸುಂದರವಾಗಿರಬೇಕು ಎಂದು ಭಾವಿಸುತ್ತಾನೆ;ಸೌಂದರ್ಯವನ್ನು ಹೊರ ಪ್ರಪಂಚಕ್ಕೆ ತೋರಿಸುವಂತಿಲ್ಲ.ಆಕೆ ಮುಕ್ತವಾಗಿ ಮಾತಾಡುವಂತಿಲ್ಲ.ಆಕೆ ಆರೋಗ್ಯವಂತ ಸ್ನೇಹವನ್ನೂ ಹೊಂದುವಂತಿಲ್ಲ.ಆಕೆ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತಿಲ್ಲ.ಆಕೆಯ ಕನಸುಗಳನ್ನು ಸಾರ್ವತ್ರಿಕವಾಗಿ ಅಭಿವ್ಯಕ್ತಿಸುವಂತಿಲ್ಲ.ಅದೇನೋ ತಿಳಿಯದು,ಗಂಡಸು ಈ ವಿಷಯದಲ್ಲಿ ಅಪ್ಪಟ ಸ್ವಾರ್ಥಿ,ಹೆಂಡತಿಯನ್ನು ಗೃಹ ಬಂಧನದಲ್ಲಿ ಇಡಲೇ ಇಷ್ಟಪಡುತ್ತಾನೆ.ಸ್ತ್ರೀ ಸ್ವಾತಂತ್ರ್ಯದ ಅರ್ಥಕ್ಕೆ ಮತ್ತದರ ಆಶಯಕ್ಕೆ ಘೋರ ಅನ್ಯಾಯ ಮಾಡುತ್ತಾನೆ..ಇದರಿಂದಾಗಿ ಜಗ ಬೆಳಗಬೇಕೆನ್ನುವ ಜಗ ಬೆಳಗುವ ಸಾಮರ್ಥ್ಯವಿರುವ ಎಷ್ಟೊಂದು ಚೈತನ್ಯಗಳು ಕೇವಲ ತೊಟ್ಟಿಲು ತೂಗುವ ಕೈಗಳಾಗಿಯೇ ಉಳಿದು ಹೋಗುತ್ತವೆ;ಜಾಗತಿಕವಾಗಿ ಈ ಮಾತು ಎಷ್ಟರ ಪ್ರಮಾಣದಲ್ಲಿ ಸತ್ಯವೋ ಅರಿಯೆ,ಭಾರತದ ಮಟ್ಟಿಗೆ ಹೇಳುವುದಾದರೆ ಹೆಣ್ಣೊಂದು ದಾಸಿ,ಆಕೆ ಅಡುಗೆ ಮತ್ತು ಮನೆ ಕೆಲಸ ಮಾಡುವ ಯಂತ್ರ.ಹಾಸಿಗೆಯಲ್ಲಿ ಸೂಳೆ,ಮಕ್ಕಳ ಕಾರ್ಖಾನೆ ಮಾತ್ರ!
ಹೌದಲ್ವಾ?
ಇತ್ತೀಚೆಗೆ ನನಗೊಬ್ಬ ಹೋರಾಟಗಾರ್ತಿಯ ಪರಿಚಯವಾಯಿತು.ಆಕೆ ಅದ್ಭುತ ಮಾತುಗಾರಳು.ಮೈಕು ಹಿಡಿದರೆ ಪುಂಖಾನುಪುಂಕಾಗಿ ಮಾತಾಡುವಾಕೆ.ಆಕೆ ಒಂದು ದಿನ ನನಗೊಂದು ಮಾತು ಹೇಳಿದಳು, “ನೋಡಿ,ಈ ಭಾರತದ ಸದ್ಯದ ಸ್ಥಿತಿಯಲ್ಲಿ ಮೇಲ್ವರ್ಗ ಅಥವಾ ಆರ್ಥಿಕವಾಗಿ ಮುಂದುವರೆದಂತಹ ಮನೆಗಳಿಂದ ಹೆಣ್ಣು ಮಕ್ಕಳು ಹೊರಗೆ ಬರುವುದು ಎಂದರೆ ತುಂಬಾ ಕಠಿಣವಾದ ವಿಚಾರ,ಆಕೆ ಗಂಡನಿಗೆ ಉತ್ತರ ಹೇಳಬೇಕು,ಮಕ್ಕಳಿಗೆ ಸಮಜಾಯಿಸಿ ನೀಡಬೇಕು ಮತ್ತು ಸಮಾಜದಿಂದ ಬರುವ ಎಲ್ಲಾ ಟೀಕೆ ಟಿಪ್ಪಣಿಗಳನ್ನು ಸಹಿಸಬೇಕು.ಒಂದಂತೂ ಸತ್ಯ,ಹೆಣ್ಣೊಂದು ತಾನು ಈ ಸಮಾಜಕ್ಕೆ ತನ್ನದೇ ಆದ ಕೊಡುಗೆಯೊಂದನ್ನು ನೀಡಬೇಕು ಎಂದು ಕಠಿಣ ಶಪಥ ಹಾಕಿಕೊಂಡಿದ್ದೇ ಆದರೆ ಆಕೆಯನ್ನು ತಡೆಯಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ.ಆಕೆ ಆಣೆಕಟ್ಟೆ ಆಗಲಾರಳು,ಯಾವಾಗಲು ಭೋರ್ಗರೆಯುವ ನದಿ.ಹೇಗೆ ಯಶಸ್ವಿ ಪುರುಷನ ಹಿಂದೆ ಹೆಂಗಸೊಬ್ಬಳಿರುತ್ತಾಳೋ ಹಾಗೆ ಯಶಸ್ವಿ ಮಹಿಳೆಯ ಹಿಂದೆ ಪುರುಷನೊಬ್ಬನ ಅಗತ್ಯವಿರುತ್ತದೆ.ಆ ಪುರುಷ ಗಂಡನೇ ಆಗಿರಬೇಕು.ಇಲ್ಲಿ ಮುಖ್ಯವಾಗಿ ಬೇಕಿರುವುದು ಪರಸ್ಪರ ನಂಬಿಕೆ.ಪ್ರೀತಿ,ಹಾಂ ಪ್ರೀತಿ ಎಂದರೆ ವ್ಯವಸ್ಥಿತ ಬೇಲಿಯಾಗಿರಬಾರದು.ಮೊದಮೊದಲು ನಮ್ಮವರು ವಿರೋಧಿಸುತ್ತಿದ್ದರು,ಅವರ ಅಗತ್ಯಗಳನ್ನು ರಾತ್ರೋರಾತ್ರಿ ಪೂರೈಸಿ ನಾನು ಬೆಳಗಿನ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಿದ್ದವಾಗಿರುತ್ತಿದ್ದೆ.ಇವತ್ತು ರಾಜ್ಯಾದ್ಯಂತ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ,ಮಕ್ಕಳು ಮತ್ತು ಯಜಮಾನರು ಇವತ್ತು ಪ್ರೋತ್ಸಾಹಿಸುತ್ತಿದ್ದಾರೆ.ಒಂದಂತೂ ಸತ್ಯ,ಹೆಣ್ಣು ಪ್ರೇಮ ಪಂಜರದಲ್ಲಿ ಬಂಧಿಯಾದ ಗಿಣಿ!”ಎಂದಳಾಕೆ.ಆಕೆ ಇವತ್ತು ಯಶಸ್ವಿ ಹೋರಾಟಗಾರ್ತಿ.
ಸುದೀರ್ಘ ದಾಂಪತ್ಯದ ನಂತರ ಮಕ್ಕಳು ಇತ್ಯಾದಿ ಅಗತ್ಯಗಳು ಮುಗಿದ ಮೇಲೂ ಪುರುಷ ಪ್ರಪಂಚ ಹೆಣ್ಣನ್ನು ನಾಲ್ಕು ಗೋಡೆಗಳಿಗೆ ಮಾತ್ರ ಏಕೆ ಸೀಮಿತವಾಗಿಡಬಯಸುತ್ತದೆ ಎನ್ನುವುದು ಸದ್ಯಕ್ಕೆ ನಮ್ಮ ಮುಂದಿರುವ ಪ್ರಶ್ನೆ.ಜೀವನವನ್ನು ಸುದೀರ್ಘವಾಗಿ ಅನುಭವಿಸಿ ಆಗಿರುತ್ತದೆ.ಶಯನಗೃಹದ ಹಾಸಿಗೆಯ ಮೇಲೆ ಗಾಳಿಗೂ ಆಸ್ಪದ ಕೊಡದ ದಾಂಪತ್ಯದ ದೀರ್ಘಾವದಿ ಸಾಹಚರ್ಯದ ನಂತರೂ ಪುರುಷ ಮತ್ತು ಸ್ತ್ರೀಯ ಮಧ್ಯೆ ಸಮಾನ ಭಾವದ ನಂಬಿಕೆ ಮೂಡದೆ ಹೋದರೆ ಹೇಗೆ?ಗಂಡು ಮತ್ತು ಹೆಣ್ಣು ದಾಂಪತ್ಯದ ಕೊಂಡಿಗಳಾದಾಗ ಒಂದು ಆತ್ಮ,ಎರಡು ದೇಹ ಎನ್ನಲಾಗುತ್ತದೆ;ಈ ಸಂದರ್ಭದಲ್ಲಿ ಪರಸ್ಪರರ ಏಳಿಗೆ ಮತ್ತು ಗೆಲುವುಗಳು ಏಕಪಕ್ಷೀಯವಾಗಿ ಒಬ್ಬರವು ತಾನೆ?ಏಕೆ ಪುರುಷ ತನ್ನ ಸ್ತ್ರೀಯ ವಿಷಯದಲ್ಲಿ ಸ್ವಾರ್ಥಿಯಂತೆ ವರ್ತಿಸುತ್ತಾನೆ?ಆತ ಭಯ ಪಡುತ್ತಾನಾ?ಇವು ಅರ್ಥವಾಗದ ಮತ್ತು ಉತ್ತರ ಸಿಗದ ಪ್ರಶ್ನೆಗಳಾಗಿ ನಮ್ಮನ್ನು ಕಾಡುತ್ತವೆ.
ಉತ್ತಮ ಗುಣಮಟ್ಟದ ವಸ್ತ್ರ,ಮಣಗಟ್ಟಲೆ ಬಂಗಾರ ಬಂಗಲೆಯ ಆಚೆಗೂ ಮನಸ್ಸಿಗೆ ಬೇಕಾಗಿರುವ ಸಂತೋಚ ಬೇರೆಯದೆ ಇರುತ್ತದೆ.ಸಮಾಜ ಸೇವೆಯ ಕನಸುಗಳಿರುತ್ತವೆ.ಪ್ರೇಮವನ್ನು ಸಾಮಜಿಕವಾಗಿ ವಿಸ್ತರಿಸಿ ಆತ್ಮೋನ್ನತಿಯ ಭಾವ ಅನುಭವಿಸುವ ಆಸೆ ತುಂಬಾ ಜನರನ್ನು ಕಾಡುತ್ತಿರುತ್ತದೆ,ಮುಖ್ಯವಾಗಿ ಇದು ಮಹಿಳೆಯರಲ್ಲಿ.ಪ್ರತಿ ಸಲ ಹೆಣ್ಣಿನ ಮನಸ್ಸು ನೋಯುವುದು ತನ್ನ ಪುರುಷನಿಂದಲೇ,ಅದನ್ನು ಆಕೆ ವ್ಯಕ್ತಪಡಿಸಲಾರಳು.ಅದಕ್ಕೆ ಅನೇಕ ಕಾರಣಗಳಿವೆ.ಗಂಡಿಗೆ ಹೆಣ್ಣು ಹೆಣ್ಣಿಗೆ ಗಂಡು ಪರಸ್ಪರ ವತ್ತಾಸೆಯಾಗಿ ನಿಲ್ಲದಿದ್ದರೆ ಅವರ ಸುದೀರ್ಘ ಸಾಹಚರ್ಯಕ್ಕೆ ಅರ್ಥವಿರಲಾರದು,ಇದರಿಂದ ಅತ್ಯಂತ ಸ್ಪಷ್ಟವಾಗಿ ಅರ್ಥವಾಗುವ ವಿಷಯ:ಅವರಿಬ್ಬರ ಮಧ್ಯೆ ನಂಬಿಕೆ ಮೂಡಿಲ್ಲವೆಂದು!ನೆನಪಿರಲಿ:ಆಕೆಯನ್ನು ನೀವು ಭಾವಿಸುವ ಸುಖದಿಂದ ಬಂಧಿಸ ಹೊರಟರೆ ಮನಸ್ಸು ನಿಮ್ಮಿಂದ ವಿಮುಕ್ತವಾಗುತ್ತಲೇ ಹೋಗುತ್ತದೆ.
ಶ್ರೀಮತಿ ಇಂದಿರಾಗಾಂಧಿಯವರು,ಸುಷ್ಮಾ ಸ್ವರಾಜ್,ಕುಮಾರಿ ಜಯಲಲಿತ ಇತಿಹಾಸ ಪುಟಗಳಲ್ಲಿ ಧ್ರುವ ತಾರೆಗಳಾದರು.ಅವರ ಖಾಸಗಿ ಬದುಕು ಕೂಡಾ ಉನ್ನತವಾಗಿತ್ತು.ಅವೂ ತೊಟ್ಟಿಲ ತೂಗುವ ಕೈಗಳು,ಜಗತ್ತನ್ನೇ ತೂಗಿದವು.ಆ ಶಕ್ತಿ ಸ್ತ್ರೀಯರಿಗೆ ಇದೆ.ಸ್ತ್ರೀ ಮೀಸಲಾತಿಯಿದೆ.ಆದರೆ ಸ್ತ್ರೀಯರು ಪುರುಷರಿಂದ ಸ್ವಾತಂತ್ರ್ಯಗೊಂಡಿಲ್ಲ.ಅವರನ್ನು ಸಂಸಾರದ ಜವಬ್ದಾರಿ ಎನ್ನುವ ಬಂಧನದಲ್ಲಿ ಬಂಧಿಸಿ ‘ಹೇ ನಮ್ ಹೆಣ್ಮಕ್ಕಳು ಆಚೆ ಬರಂಗಿಲ್ಲಪ್ಪಾ,ಆಕೆಗೆ ನನ್ನ ಮಾತೆಂದರೆ ವೇದವಾಕ್ಯ!’ಎನ್ನುವಂತ ಮಾತು ಮೂರ್ಖ ಗಂಡಸು ತನ್ನ ಅಹಂ ತೃಪ್ತಿ ಪಡಿಸಲಿಕ್ಕೆ ಸಾರ್ವಜನಿಕ ವಲಯದಲ್ಲಿ ಬಹು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.ಸ್ತ್ರೀ ಈತನ ಅಹಂಗೆ ಒಳಪಟ್ಟು ವ್ಯಕ್ತಿತ್ವರಾಹಿತ್ಯಳಾಗಿ ನಾಲ್ಕು ಗೋಡೆಗಳ ಮಧ್ಯೆ ಕಮರಿ ಹೋಗುತ್ತಾಳೆ.ಸುಖದ ಸುಪ್ಪತ್ತಿಗೆಯಲ್ಲಿ ಬಂಧಿತಳಾದ ಹೆಣ್ಣಿನ ಕೂಗು ಹೊರ ಪ್ರಪಂಚಕ್ಕೆ ಕೇಳಿಸುವುದೇ ಇಲ್ಲಲ.
ಅಂತಿಮವಾಗಿ ಆಕೆಯ ಆತ್ಮ ಕೂಗುತ್ತದೆ:
ನಾನು ಮನುಷ್ಯಳು ಎಂದು!
ಲಕ್ಷ್ಮೀಕಾಂತ ನಾಯಕ

ಚೆನ್ನಾಗಿದೆ
ಪ್ರತ್ಯುತ್ತರಅಳಿಸಿ