ಗುರುವಾರ, ಜುಲೈ 23, 2020

ಪ್ರಜ್ಞಾಹೀನ ಯುವಶಕ್ತಿಯೂ ಕಳಪೆ ಮತದಾರನು!

ಪ್ರಜ್ಞಾಹೀನ ಯುವಶಕ್ತಿಯೂ ಕಳಪೆ ಮತದಾರನು!

 

ಅದು ಭವ್ಯ ಭಾರತದ ಒಂದು ಹಳ್ಳಿ,ತಟ್ಟಿಯಿಂದ ಮಾಡಿಕೊಂಡ ಒಂದು ಹೋಟಲ.,ಚಹಾ,ಒಗ್ಗಾಣಿ,ಬಜಿ,ಖಾರ ಇತ್ಯಾದಿಗಳನ್ನು ಅಲ್ಲಿ ಮಾರುತ್ತಾರೆ,ಮನುಷ್ಯರಿಗಿಂತ ನೊಣ ಹೆಚ್ಚಿರುವ ಜಾಗವದು!ವಿಪರೀತವಾದ ಸಕ್ಕರೆಯನ್ನು ಅಲ್ಪ ಚಹಾಪುಡಿಯೊಂದಿಗೆ ಕೊಡ ನೀರಿನಲ್ಲಿ ಕುದಿಸಿದ ಚಹಾ ಎನ್ನುವ ದ್ರವ ಹೆಚ್ಚು ಮಾರಾಟವಾಗುವ ಸ್ಥಳ ಅದಾಗಿದ್ದರಿಂದ ಮತ್ತು ಆ ಪಾನಕ ಯಥೇಚ್ಛವಾಗಿ ಎಲ್ಲೆಂದರಲ್ಲಿ ಚೆಲ್ಲಾಡಿದ್ದರಿಂದ ನೊಣಗಳು ಗಂವ್ ಅಂತಿರುತ್ತವೆ!ನೀರು ಕುಡಿಯಲಿಕ್ಕೆಂದು ಪ್ಲಾಸ್ಟಿಕ್ ಜಗ್ಗುಗಳನ್ನು ಇಡಲಾಗಿರುತ್ತವೆ,ಅವೂ ನೊಣಗಳಿಂದ ಮುಕ್ಕರಿರುತ್ತವೆ,ಜನ ಏನೂ ಭಾವಿಸುವುದಿಲ್ಲ.ಏಕೆಂದರೆ ಇದರಕ್ಕಿಂತಲೂ ದಾರುಣವಾಗಿ ಅವರ ಮನೆ ಇರುತ್ತದೆ;ಕೆಲ ಜಾತಿಗಳಿಗೆ ಮನೆಯ ಸ್ವಚ್ಚತೆಯ ಕಾಳಜಿ ಇರುತ್ತದೆಯೇ ಹೊರತು ಈ ಕಾಟಿಗರಿಗೆ ಅಥವಾ ನಿಮ್ನ ವರ್ಗಗಳಿಗೆ ಅದರ ಕಾಳಜಿ ಇರುವುದಿಲ್ಲ.ಮನೆಯಲ್ಲಿ ನೊಣಗಳು ಗಂವ್ ಎನ್ನದಿದ್ದರೆ ಯಾವುದೋ ಇಷ್ಟದ ಸ್ವರ ಮಿಸ್ ಮಾಡಿಕೊಂಡ ಫೀಲ್ ಉಂಟಾಗುತ್ತದೆ.ನೊಣಗಳು,ಸೊಳ್ಳೆಗಳು,ಕೋಳಿ ಹೇಲು,ದನದ ಸೆಗಣಿ ಮತ್ತು ಮನೆಯ ಮುಂದೆ ತೆರೆದ ಚರಂಡಿ ಹರಿಯುತ್ತಿದ್ದರೆ ಸ್ವರ್ಗದ ಭಾವನೆ ಮತ್ತು ಸ್ವರ್ಗ ಸುಖದ ಭಾವನೆ ಉಂಟಾಗುತ್ತದೆ;ಅದೇ ಸ್ವರ್ಗ ಸುಖ ಕೂಡಾ!ಅದಾಗಲೇ ಫ್ರೆಶ್ ಆಗಿ ಬಯಲಿನಲ್ಲಿ ಕುಳಿತು ಬಂದ ಸಂಡಾಸು ಭೋಜನೆ ಮಾಡಿಬಂದ ನೊಣ ಮರಳಿ ಮನೆಗೆ ಸಂಡಾಸಿನ ಕಣಗಳನ್ನು ತರದಿದ್ದರೆ ಏನಿದೆ ಜೀವನದಲ್ಲಿ ಉಲ್ಲಾಸ?ಕಾಲರ,ಮಲೇರಿಯಾ,ಕರೋನಾ ಮತ್ತು ಈ ಮೂರರ ಅಪ್ಪ ಬಂದರೂ ಅವರಿಗೆ ಯಾವ ಭಯವಿಲ್ಲ!ಇದು ರೂಢಿಗತ ಗ್ರಾಮೀಣ ಬದುಕು,ಯಾರಾದರೂ ಇಂಥಹ ಬದುಕನ್ನು ನೋಡಲಿಕ್ಕೆ ಇಚ್ಚೆಪಟ್ಟರೆ ನನ್ನ ನಂಬರಿಗೆ ಕರೆ ಮಾಡಿರಿ,ಭೂ ಸ್ವರ್ಗವೆಂದು ಹೇಳಲ್ಪಡುವ ಭಾರತದ ಬದುಕನನ್ನು ನಿಮ್ಮ ಕಣ್ಣಿಗೆ ಕಟ್ಟುವಂತೆ ತೋರಿಸುತ್ತೇನೆ ಮತ್ತು ಉತ್ತಮ ನಿರೂಪಣೆಯನ್ನೂ ಕೊಡುತ್ತೇನೆ.ಆಸಕ್ತರು ಬರಬಹುದು,ಮುಖ್ಯವಾಗಿ ಹವಾನಿಯಂತ್ರಿತ ಕೋಣೆ,ಹವಾನಿಯಂತ್ರಿತ ದುಬಾರಿ ಕಾರಿನಲ್ಲಿ ಕುಳಿತು ಭಾರತ ಭೂ ಸ್ವರ್ಗ ಎಂದು ತೌಡು ಕುಟ್ಟುವವರು ಭಾರತದ ಗ್ರಾಮೀಣ ಜೀವನವನ್ನು ನೋಡಲು ಬರಬಹುದು,ಅಲ್ಲಿ ನಾನಿರುತ್ತೇನೆ,ನನ್ನಂಥವರೆ ಊರಿಗೊಬ್ಬರು ಇರುತ್ತಾರೆ.

ನವದೆಹಲಿಯಿಂದ ಬಂದ ಸುದ್ದಿಯೊಂದನ್ನು ಓದಿದೆ,15ನೇ ಹಣಕಾಸು ಆಯೋಗದ ಶಿಫಾರಸ್ಸಿನ ವರದಿಯನ್ನು ಆಧರಿಸಿದ ಸುದ್ದಿಯದು,ರಾಜ್ಯಕ್ಕೆ ಇದೇ ಮೊದಲ ಬಾರಿ ಗ್ರಾಮ ನೈರ್ಮಲ್ಯಕ್ಕಾಗಿ ಮತ್ತು ನೈರ್ಮಲ್ಯದ ಕುರಿತಿರುವ ಯೋಜನೆಗಳಿಗಾಗಿ ಕೇಂದ್ರ ಸರ್ಕಾರ 804 ಕೋಟಿಗಳನ್ನು ಬಿಡುಗಡೆ ಮಾಡಿದೆ ಎನ್ನುವುದು ಸುದ್ದಿ ಸಾರ.ಇದು ಮೊದಲೇನು ಅಲ್ಲ.ಪ್ರತಿ ವರ್ಷ ಗ್ರಾಮ ನೈರ್ಮಲ್ಯದ ಕುರಿತಿರುವ ಅನೇಕ ಯೋಜನೆಗಳಿಗಾಗಿ ಸರ್ಕಾರಗಳು ಸಾಕಷ್ಟು ಹಣವನ್ನು ಮೀಸಲಿಡುತ್ತವೆ,ಗ್ರಾಮ ಪಂಚಾಯತಿಗಳು ಖರ್ಚು ಮಾಡುತ್ತಲೇ ಇರುತ್ತವೆ,ಕಾಗದಗಳಲ್ಲಿ ಗ್ರಾಮಗಳು ನಿರಮಲವಾಗುತ್ತವೆ,ಸ್ವಚ್ಛವಾಗುತ್ತವೆ,ದೇಶ ಭವ್ಯವಾಗುತ್ತಲೇ ಹೋಗುತ್ತದೆ!ಪಂಚಾಯತ್ ರಾಜ್ ಇಲಾಖೆ ಮತ್ತದರ ಅಂಗ ಸಂಸ್ಥೆಗಳು ನಡೆಸುವ ಭ್ರಷ್ಟಾಚಾರವೇ ರಾಜಕಾರಣಿಯ ಸಂಪತ್ತು ವೃದ್ಧಿಯ ಮೂಲ.ಆ ವಿಷಯದ ಕುರಿತು ಇನ್ನೊಮ್ಮೆ ಬರೆಯೋಣ.

ಚಹಾದ ಅಂಗಡಿಯಲ್ಲಿ ಭವ್ಯ ಭಾರತದ ಯುವಶಕ್ತಿ ಕುಳಿತಿತ್ತು,ಅದು ಘನವಾಗಿತ್ತು,ದೃಢವಾಗಿತ್ತು.ಅದರ ಬಾಯಿ ತುಂಬಾ ದೇಶ ಭಕ್ತಿ ಇತ್ತು,ಅದರ ಸರ್ವ ಅಂಗವನ್ನು ಕೇಸರಿಮಯವಾಗಿಸಿಕೊಂಡಿತ್ತು,ಮತ್ತದು ಪ್ರಾಣಿಯೊಂದರ ಕುರಿತು ಒಲವನ್ನುಹೊಂದಿತ್ತು;ಮಾತಿನ ಮಧ್ಯೆ ದನಕ್ಕಾಗಿ ಮನುಷ್ಯರು ಸತ್ತರೆ ಪಾಡೇನು ಎಂದು ನಾನು ಕೇಳಿದ ಪ್ರಶ್ನೆಗೆ ಅದು ಗಂಭೀರವಾಗಿ ದನಗಳ ಕುರಿತು ಯಾರಿಗೆ ಒಲವು ಇಲ್ಲವೋ ಅವರು ಭೂಮಿಯ ಮೇಲೆ ಬದುಕಲಿಕ್ಕೆ ಅರ್ಹರಲ್ಲ ಎಂದಿತು,ಅದು ಭೂಮಿಯ ಮೇಲಿನ ಎಲ್ಲಾ ಪ್ರಾಣಿಗಳು ಎಂದರೆ ಎತ್ತು,ಎಮ್ಮೆ,ಕರು,ಕುರಿ,ಕೋಳಿ,ನಾಯಿ,ನರಿ,ಪಕ್ಷಿಗಳು ಇತ್ಯಾದಿ ಏನನ್ನೂ ತಿಂದರೆ ಪರವಾಗಿಲ್ಲ,ಆಕಳು ತಿನ್ನಬಾರದು ಎಂದಿತು.ಅದು ಮರೆತಿರುವ ಒಂದು ವಿಷಯವೆಂದರೆ ಭಾರತದ ಜನ ಸಂಖ್ಯೆಯ ಪ್ರತಿಶತ ತೊಂಬತ್ತೆಂಟು ಜನರ ಆಹಾರ ಮಾಂಸಾಹರವೆಂದೂ ಈ ಮಾಂಸಾಹಾರ ಪದ್ಧತಿಯಲ್ಲಿ ಎಲ್ಲಾ ಪ್ರಾಣಿಗಳೂ ಸೇರುತ್ತವೆ ಎಂದೂ ಕೇವಲ ಜನಾಂಗೀಯ ಸಂಘರ್ಷವನ್ನು ಜೀವಂತವಿಡುವ ನಿಟ್ಟಿನಲ್ಲಿ ಕೆಲ ಮಾನಸಿಕ ಅಸ್ವಸ್ಥರು ರಾಜಕೀಯ ಮತ್ತು ಧಾರ್ಮಿಕ ತಮ್ಮ ಹಿತಾಸಕ್ತಿಯ ಕಾರಣಗಳಿಗೆ ಸೃಷ್ಟಿ ಮಾಡಿದ ವಾದ ಎನ್ನುವುದನ್ನು ಅದು ತಿಳಿಯದಾಗಿತ್ತು.ಅದರ ಮೆದುಳಿನಲ್ಲಿ ಸಮಸ್ತ ವೈರಾಣುಗಳನ್ನೂ ತುಂಬಿಕೊಂಡಿದ್ದ ಜೀವಿಯಾಗಿತ್ತು!ಇಂತಿಪ್ಪ ಆ ಯುವಶಕ್ತಿಯೊಂದಿಗೆ ಕೆಲ ಮಾತುಕತೆಯನ್ನು ನಡೆಸುತ್ತಾ ಸದ್ಯ ಕೋವಿಡ್ ಸಂಕಷ್ಟದ ಈ ಸಮಯದಲ್ಲಿ ಕರ್ನಾಟಕ ಆರೋಗ್ಯ ಸಚಿವಾಲಯದ ಭ್ರಷ್ಟಾಚಾರದ ಬಗ್ಗೆ ಮಾತು ಬಂದಿತು,ಸಣ್ಣದಲ್ಲ,ಜನರ ಸಾವಿನ ಭೀತಿಯ ಮೇಲೆ(ಭಯ ಸೃಷ್ಟಿ ಮಾಡಲಾಗಿದೆ) ಸುಮಾರು 2200 ಕೋಟಿ ಹಣವನ್ನು ದುಷ್ಟ ರಾಜಕಾರಣಿಗಳು ತಿಂದು ಹಾಕಿದ್ದಾರಲ್ಲ ಇದರ ಕುರಿತು ಭಾರತೀಯ ಪ್ರಜ್ಞಾವಂತ ಯುವಕನಾಗಿ ನೀನು ಏನು ಹೇಳಲು ಇಷ್ಟ ಪಡ್ತೀಯ ಎಂದೆ,ಆತ ಯಾರು ಭ್ರಷ್ಟಾಚಾರ ಮಾಡುತ್ತಿಲ್ಲ ಹೇಳಿ,ಅಧಿಕಾರಕ್ಕೆ ಬರುವ ಮುನ್ನ ಎಲ್ಲರೂ ಹಾಗೇ ಹೇಳುತ್ತಾರೆ,ರವಿಕೃಷ್ಣಾರೆಡ್ಡಿಯಾಗಿರಬಹುದು ಮತ್ತೊಬ್ಬನಿರಬಹುದು ಎಂದ.ಹೋಗಲಿ ಕಳೆದ ಆರೇಳು ವರ್ಷದಿಂದ ಭಾರತ ಏನಾದರೂ ಬದಲಾಗಿರುವಂತೆ ಕಾಣಿಸುತ್ತಿದೆಯಾ ಎಂದು ಕೇಳಿದೆ,ಈ ಮಧ್ಯೆ ಕಪ್ಪು ಹಣದ ವಾಪಸಾತಿ ಮತ್ತು ಅದರ ನಿಯಂತ್ರಣದ ಕುರಿತು ಪ್ರಾಸ್ತಾಪಿಸುತ್ತಾ.ಕಾಂಗ್ರೇಸ್ಸಿನವರು ಮಾಡಿದ್ದರಲ್ಲಿ(ಭ್ರಷ್ಟಾಚಾರ) ನಮ್ಮ ಸರ್ಕಾರ ಹತ್ತು ಪ್ರತಿಶತವೂ ಮಾಡಿಲ್ಲ ಎಂದ.ನಂತರ ಭ್ರಷ್ಟಾಚಾರ ಸಾಮಾನ್ಯ ಎಂದ,ನೀವು ಮಾಡೋದಿಲ್ಲವಾ ಎಂದು ನನ್ನನ್ನು ಪ್ರಶ್ನಿಸಿದ(ನಾನು ಹರಕು ಅಂಗಿ ಮತ್ತು ಲುಂಗಿಯ ಮೇಲೆ ಅಲ್ಲಿದ್ದೆ,ನನ್ನ ವಸ್ತ್ರಗಳಿಗೆ ಹಾಗಷ್ಟೆ ಮೋಟರ್ ಲಿಫ್ಟ್ ಮಾಡಿದ್ದೆನಲ್ಲಾ ಅದರ ಕಿಲುಮು,ಜಂಗು ಹತ್ತಿತ್ತು).ಕಳ್ಳ ಮಾರ್ಗದಿಂದ ಹಣ ಗಳಿಸುವ ಉದ್ದೇಶ ನನಗಿದ್ದರೆ ನಾನೂ ಕಿವಿಯಲ್ಲಿ ವೈರ್ ಲೆಸ್ ಇಯರ್ ಫೋನ್ ಹಾಕಿಕೊಂಡು,ಮನೆಯಲ್ಲಿ ಏನೂ ಇರದಿದ್ದರೂ ಒಳ್ಳೊಳ್ಳೆ ವಸ್ತ್ರಗಳನ್ನು ಹಾಕಿಕೊಂಡು ಜನರ ಮಧ್ಯೆ ಬಿಲ್ಡಪ್ ಕೊಡುವ ಡೆಮ್ಮಿ ಕಾಲ್ ಮಾಡಿಕೊಂಡು ಇರುತ್ತಿದ್ದೆ ತಮ್ಮಾ ಅಂದೆ,ಮಾತು ಅಲ್ಲಿಗೇ ನಿಂತು ಹೋದವು!ಇದು ಭಾರತದ ಯುವಶಕ್ತಿಯ ಮನಸ್ಥಿತಿ.

ಎಲ್ಲರೂ ಅಂತ ಹೇಳುವುದಿಲ್ಲ,ನೈಂಟಿ ನೈನ್ ಪರ್ಸೆಂಟು ಯುವಕರು ಯಾವುದೋ ಮೂಲದಿಂದ ದೊರೆಯಬಹುದಾದ ಹಣದ ನೀರೀಕ್ಷೆಯಲ್ಲಿದ್ದಾರೆ,ಯಾವುದೋ ಮೂಲ,ಅಂದರೆ ಕಳ್ಳ ಮಾರ್ಗದಿಂದ!ತಮ್ಮ ತಮ್ಮ ಕುಲದ ರಾಜಕೀಯ ನಾಯಕರ ಅಭಿಮಾನಿ ಸಂಘಗಳನ್ನು ಮಾಡಿಕೊಂಡಿರುತ್ತಾರೆ.ಇವತ್ತು ಅಣ್ಣನ ಹುಟ್ಟು ಹಬ್ಬ,ಅಕ್ಕನ wedding annivarsory  ಅಂತ ಅವುಗಳಿಗೆ ಶುಭಾಶಯಗಳ ಬ್ಯಾನರ್ ಸೃಷ್ಟಿ ಮಾಡುತ್ತಾ ವಾಟ್ಸಪ್ ಫೇಸ್ ಬುಕ್ಕುಗಳಲ್ಲಿ ಹಂಚಿಕೊಳ್ಳುತ್ತಾ ಕಾಲಹರಣ ಮಾಡುತ್ತಾರೆ,ಎಮ್ಮೆಲ್ಲೆ,ಜೆಡ್ಪಿ ಮೆಂಬರ್ ಕರೆದು ಒಂದು ಕೆಲಸ ಕೊಡುತ್ತಾನೆ ಇರಿ ಎಂದು ದಾರಿ ಕಾಯುತ್ತಿರುತ್ತಾರೆ.ಅವರೂ ಕರೆದು ಐದು ಲಕ್ಷದ್ದೋ ಹತ್ತು ಲಕ್ಷದ್ದೊ ಒಂದು ಚಿಲ್ಲರೆ ಕಾಮಗಾರಿಯನ್ನು ಕೊಡುತ್ತಾರೆ,ಕೊಡುವ ಮುನ್ನ ಒಂದು ಕೆಲಸ ಮಾಡುತ್ತಾರೆ:ಹತ್ತು ಜನರನ್ನು ತಂಟು ಇಡುತ್ತಾರೆ,ನಾಳೆ ಕಿತ್ತಾಡಿಕೊಂಡು ಸಾಯಲಿ ಎಂದು!ಇಂಥವುಗಳನ್ನು ಸಾಕಷ್ಟು ಉದಾಹರಣೆಗಳನ್ನು ನಾನು ಕಂಡಿದ್ದೇನೆ.

“ಅದೇನದು ನೀರೇ ಇಲ್ಲದ ಬೋರಿನಲ್ಲಿ ಮೋಟರ್ ಅಳವಡಿಸಲು ಕಾಮಗಾರಿ ರೂಪಿಸಿದ್ದೀರಲ್ಲ?”ಎಂದು ಒಬ್ಬ ಸಹಾಯಕ ಇಂಜಿನಿಯರ್ ನನ್ನು ಕೇಳಿದೆ,ಆತ “ಸುಮ್ನಿರಿರಿ,ಅವರು ಶಾಸಕರ ಬೆಂಬಲಿಗರು,ಶಾಸಕರು ಹೇಳಿದ್ದಾರೆ!”ಎಂದ. “ಅಣ್ಣಾ ಹೆಂಗಾನ ಇಪ್ಪತ್ತು ಮೂವತ್ತು ಸಾವಿರ ರೂಪಾಯಿಯಲ್ಲಿ ನೀರು ಎಗರಿಸಿ ಕೊಡಬೇಕು,ಅದು ನಾಲ್ಕೇ ದಿನ ನಡೆದರೆ ಸಾಕು,ಬಿಲ್ ಆಗುವವರೆಗೆ!”ಎಂದ ಒಬ್ಬ ಯುವಕ,ಆತ ಭವ್ಯ ಭಾರತವನ್ನು ಕಟ್ಟುತ್ತೇವೆ ಎನ್ನುವ ಈಗಿರುವ ಸರ್ಕಾರದ ಕಾರ್ಯಕರ್ತ,ಶಾಸಕರ ಅನುಯಾಯಿ,ಅನುಸರಿಸುವ ನಾಯಿ! “ಎಷ್ಟಿದೆ ನಿಗದಿತ ಹಣ?” ಎಂದು ಕೇಳಿದ ಪ್ರಶ್ನೆಗೆ  “ಐದು ಲಕ್ಷ!”ಎಂದು ಉತ್ತರಿಸಿದ, “ತಪ್ಪಲ್ಲವಾ ಇದು?” ಎಂದು ಕೇಳಿದ ಪ್ರಶ್ನೆಗೆ ಕೆಲವು ಹೆಸರುಗಳನ್ನು ಉದಾಹರಿಸುತ್ತಾ “ಅವರು ಕೋಟಿ ಕೋಟಿ ಹಣ ಲೂಟಿ ಮಾಡುತ್ತಿಲ್ಲವಾ?”ಎಂದು ಮರು ಪ್ರಶ್ನೆ ಹಾಕಿದ.ನನ್ನ ಹತ್ತಿರ ದಾಖಲೆಗಳಿಲ್ಲವಾದ್ದರಿಂದ ದೃಢೀಕೃತವಾಗಿ ಬರೆಯುತ್ತಿಲ್ಲವಾಗಲಿ ಕರ್ನಾಟಕ ರಾಜ್ಯದ ಇಲಾಖೆಯೊಂದರ ಸಚಿವ ಒಂದೊಂದು ಕಚೇರಿಯಿಂದ ಕೋಟಿ ರೂಪಾಯಿಯ ಹಣ ಆ ಕಚೇರಿಗಳಿಗೆ ಬೇಡಿಕೆ ಇಟ್ಟಿರುವುದರ ಸುದ್ದಿ ನನಗೆ ಕಿವಿಗೆ ಬಿದ್ದಿದೆ,ಬರೀ ಲೂಟಿ,ಲೂಟಿ,ಲೂಟಿ!

ಒಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲಾ ಅನುದಾನಗಳನ್ನು ಸೇರಿ ಗ್ರಾಮವೊಂದಕ್ಕೆ ಈ ಐದು ವರ್ಷಗಳಲ್ಲಿ ವಿನಿಯೋಗಿಸಲಾಗಿರುವ ಹಣವನ್ನು ಪರಿಶೀಲಿಸಿ ನೋಡಿ,ಪುಟ್ಟ ಹಳ್ಳಿಯೊಂದಕ್ಕೆ ಸುಮಾರು ಐದಾರು ಕೋಟಿ ರೂಪಾಯಿಗಳ ಖರ್ಚು ಹಾಕಿರಲಾಗುತ್ತದೆ.ಗ್ರಾಮಾಭಿವೃದ್ಧಿಗಾಗಿ!ಕುಡಿಯುವ ನೀರು,ಗ್ರಾಮ ನೈರ್ಮಲ್ಯ,ರಸ್ತೆ,ಆರೋಗ್ಯ ಇತ್ಯಾದಿಗಳಿಗಾಗಿ.ಪ್ರಜ್ಞಾವಂತ ಕಣ್ಣುಗಳ ಸಾಕ್ಷಿಯಾಗಿ!

ಈ ಲೇಖನದ ಒಟ್ಟು ಸಾರಂಶ ಏನೆಂದರೆ ಭಾರತದ ಪ್ರತಿಶತ 95 ಜನ ಭ್ರಷ್ಟಾಚರದ ಪರವಾಗಿದ್ದಾರೆ,ಅವಕಾಶಗಳಿಗಾಗಿ ದಾರಿ ಕಾಯುತ್ತಿದ್ದಾರೆ.ಕೆಲವೊಂದು ತಾಲ್ಲೂಕಿನಲ್ಲಿ ಶಾಸಕನೊಬ್ಬ ಚುನಾವಣೆಯಲ್ಲಿ ಗೆಲ್ಲಬೇಕು ಎಂದರೆ ಅಕ್ರಮ ಮರಳುಗಣಿಗಾರಿಕೆಗೆ ಮುಕ್ತ ಅವಕಾಶ ಒದಗಿಸಿಕೊಡುವ ಭರವಸೆ ನೀಡಬೇಕು,ಏಕೆಂದರೆ ಆತನ ಸುತ್ತಾ ಇರುವ ಕಾರ್ಯಕರ್ತರು ಮರಳು ಗಣಿಗಾರಿಕೆಗೆ ಸಂಬಂಧಿಸಿದವರು;ಇನ್ನೊಂದು ರೀತಿಯಲ್ಲಿ ಹೇಳಬೇಕು ಎಂದರೆ ಕಳ್ಳರು.

ಭಾರತವನ್ನು ಕಳ್ಳರ ಕೂಟವೊಂದು,ಕಳ್ಳರನ್ನು ಸೃಷ್ಟಿ ಮಾಡುವ ಕೂಟವೊಂದು ರೂಲ್ ಮಾಡುತ್ತಿದೆ,ಇದು ಎಲ್ಲಾ ಪಕ್ಷಗಳಿಗೆ ಅನ್ವಯಿಸುವ ಮಾತು.ಸಾಮಾಜಿಕ ನ್ಯಾಯ ಎನ್ನುವುದು ಬರೀ ಬುಟಾಟಿಕೆ.ನ ಖಾಯೇಂಗೇ,ಖಾನೆ ದೂಂಗಾ ಎಂದ ಪುಣ್ಯಾತ್ಮ ತಾನು ತಿನ್ನುತ್ತಿಲ್ಲವೇನೋ,ಆದರೆ ತಿನ್ನಲು ಮುಕ್ತವಾದ ಎಲ್ಲಾ ಅವಕಾಶಗಳನ್ನು ಒದಗಿಸಿಕೊಟ್ಟಿದ್ದಾನೆ,ಏಕೆಂದರೆ-

ಸದ್ಯ ಭಾರತದಲ್ಲಿ ಪ್ರಾಮಾಣಿಕವಾಗಿ ಭ್ರಷ್ಟಾಚಾರವನ್ನು ನಿಗ್ರಹಿಸಬಲ್ಲ,ಭ್ರಷ್ಟರನ್ನು ಜೈಲಿಗೆ ಕಳಿಸಬಲ್ಲ ಪ್ರಭಾವೀಶಾಲಿ ತನಿಖಾ ಸಂಸ್ಥೆ ಇಲ್ಲ.ಒಂದು ವೇಳೆ ಇದ್ದಾವೆ ಅಂತ ನಿಮಗನ್ನಿಸಿ ಅವುಗಳಿಗೆ ದೂರು ನೀಡಲು ಹೋದಿರೋ,ನೀವಿನ್ನೂ ಆ ಕಚೇರಿ ಆವರಣ ದಾಟಿರುವುದಿಲ್ಲ;ಸಂಬಂದಿಸಿದವರೊಂದಿಗೆ ಮಾತುಕತೆಗಳು ಆರಂಭವಾಗಿರುತ್ತವೆ!ಯಾವ ಯಾವ ಕಚೇರಿಗಳಿಂದ ಈ ತನಿಖಾ ಸಂಸ್ಥೆಗಳಿಗೆ ಎಷ್ಟೆಷ್ಟು ಪಾಲು ಹೋಗುತ್ತಿದೆ ಎನ್ನುವುದು ಬರೀ ಮೌಖಿಕವಾಗಿ ಕೇಳಿದ್ದೇನೆಯೇ ಹೊರತು ಸ್ಪಷ್ಟ ದಾಖಲೆಗಳಿಲ್ಲ,ಇದ್ದರೆ ಅವುಗಳ ಕತೆ ಗತಿಗಣಪ ಮಾಡುತ್ತಿದ್ದೆ.

ಹಾಗಿದ್ದರೆ ಏನು ಮಾಡಬೇಕು,ಅಂದರೆ ಎಲ್ಲವೂ,ಎಲ್ಲರೂ ಭ್ರಷ್ಟಾಚಾರಮಯವಾಗಿರುವ ಸಂದರ್ಭದಲ್ಲಿ ಯಾರಾದರೂ ಏನು ಮಾಡಬೇಕು ಎನ್ನುವುದು ಸದ್ಯಕ್ಕೆ ನಮ್ಮ ಮುಂದಿರುವ ಪ್ರಶ್ನೆ.ಒಂದು ಗ್ರಾಮ,ಸಾವಿರ ಕುಟುಂಬಗಳು ನೂರು ಜನ ಲೀಡರ್ಸ್,ಈ ನೂರು ಜನರಲ್ಲಿ ತೊಂಬತ್ತೈದು ಜನರು ಹೇಲು ತಿನ್ನುವವರಾಗಿರುವಾಗ ಈ ಐದು ಜನರು ಏನು ಮಾಡಬೇಕು,ದೂರು ಬರೆಯಬೇಕಾ?ಯಾರಿಗೆ?ದೂರು ಬರೆದರೆ ಆಗುವ ಹಲ್ಲೆ ವಧೆಗಳನ್ನು ಹೇಗೆ ತಡೆಯುವುದು?ಪೋಲಿಸ್ ವ್ಯವಸ್ಥೆಯಾ?ಅದು ಅಧಿಕಾರಸ್ಥರ ಪರವಾಗಿರುತ್ತದೆ,ಮತ್ತೆ ಹೇಗೆ?

ಹಣ ಕೊಡದೆ,ಹೆಂಡ ಕೊಡದೆ,ಸೀರೆ ಕುಪ್ಪಸಗಳು,ಮಾಂಸದ ಊಟ ಇತ್ಯಾದಿಗಳನ್ನು ಮಾಡದೆ ಈ ದೇಶದಲ್ಲಿ ಚುನಾವಣೆಯನ್ನು ಎದುರಿಸುವುದು ಕಷ್ಟ.ಈ ಐದು ಪರ್ಸೆಂಟು ಭ್ರಷ್ಟಾಚಾರಿ ವಿರೋಧಿ ಧೋರಣೆ ಇರುವವರಿಗೆ ಬಲ ಯಾವಾಗ ಬಂದೀತು?

ಯಾವಾಗ ಬರುತ್ತದೆ ಎಂದರೆ ತಮ್ಮನ್ನು ಲೂಟಿ ಹೊಡೆಯುವ ದೃಷ್ಟರ ಬಗ್ಗೆ ಎಳೆ ಎಳೆಯಾಗಿ ಈ ದೇಶದ ಏನೂ ಅರಿಯದ ಹೆಂಡ ಮತ್ತು ಹಣ ಇತ್ಯಾದಿ ಆಮಿಷಗಳನ್ನು ಪಡೆಯದೆ ಮತ ನೀಡುತ್ತಾರಲ್ಲ ಆ ಜನಗಳಿಗೆ ತಿಳಿಸಬೇಕು,ಜನರಿಗೆ ಪ್ರಜಾಪ್ರಭುತ್ವ ಎಂದರೆ ಏನು ಎಂದು ಪ್ರಭಾವಿಶಾಲಿಯಾಗಿ ತಿಳಿಸಬೇಕು,ಯಾರು ಮಾಡಬೇಕು ಈ ಕೆಲಸವನ್ನು?ಆ ಐದು ಪರ್ಸೆಂಟು ಜನ,ಅವರು ಯಾವ ಅವಮಾನ ಟೀಕೆಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಮಾಡಬಲ್ಲವರಾದರೆ ಮುಂಬರುವ ದಿಗಳಲ್ಲಿ ಏನಾದರೂ ಬದಲಾವಣೆ ಕಾಣಬಹುದು.

ನಮಗಿರುವುದು ಜನತಾ ನ್ಯಾಯಲಯವೊಂದೆ,ಅದು ಶಕ್ತಿಶಾಲಿಯಾಗಬೇಕು.

 

                                                         ನಿಮ್ಮವನು-ಲಕ್ಷ್ಮೀಕಾಂತ ನಾಯಕ

ಶುಕ್ರವಾರ, ಜುಲೈ 17, 2020

ಸ್ವಾತಂತ್ರ್ಯದ ಸ್ವರ್ಗ ಸುಖದಲ್ಲಿ ತೇಲಾಡುತ್ತಿರುವ ಭಾರತೀಯರು!

ಈ ವಾರ ಬರೆದ ಅಂಕಣ ಬರಹ,ಸಮಚಿತ್ತದಿಂದ ಓದಿಕೊಳ್ಳಿ.ನಿನ್ನೆ SMJ NEWS YADGIR ದಲ್ಲಿ ಪ್ರಕಟಗೊಂಡಿದೆ.

ಸ್ವಾತಂತ್ರ್ಯದ ಸ್ವರ್ಗ ಸುಖದಲ್ಲಿ ತೇಲಾಡುತ್ತಿರುವ ಭಾರತೀಯರು!



“ಅಲಾ ಕಾದು ನಾಯಕ್ಗಾರು,ನೇನು ಚೆಪ್ಪೇದೆಂಟೆಂಟೆ ಭಾರತಾನಿಕಿ ಸ್ವಾಂತಂತ್ರ್ಯ ವಚ್ಚಿನಪ್ಪಡಿನಿಂಚಿ ಇಂತವರಿಕಿ ಆಂದ್ರ ಪ್ರದೇಶಾಲು ಕೊನ್ನಿ ಪ್ರಾಂತ್ಯಾಲು ಇಂತವರಿಕೂ ಕೊಂದರೂ ಎಲೆಕ್ಷನ್ ಸೆಂಟರಿಕಿ ವೆಳ್ಳಿ ಮತಂ ಎಯ್ಯಲೇದು ತೆಲುಸಾ?ಕಾವಾಲಂಟೆ ಡಬ್ಬಯ್ ಎನಬೈ ಸಂವತ್ಸರ ಉನ್ನ ಮುಸುಲೋಡನ್ನಿ ಅಡಿಗಿ ಸೂಡು,ಅಲಾ ಉಂದಿ ಪರಿಸ್ಥಿತಿ!”ಎಂದ ನನ್ನ ಒಬ್ಬ ಹಿರಿಯ ಸ್ನೇಹಿತ,ಆತನಿಗೂ ಸರಿ ಸುಮಾರು ಅರವತ್ತು ವರ್ಷಗಳು.ಇದು ಬರೀ ಆಂದ್ರದ ಕಥೆ ಮಾತ್ರವಲ್ಲ,ಕರ್ನಾಟಕದಲ್ಲೂ ಅನೇಕ ಪ್ರದೇಶಗಳಲ್ಲಿ ಇಂಥದ್ದೊಂದು ಪರಿಸ್ಥಿತಿ ಇದೆ.ದೇಶವ್ಯಾಪಿ ನೋಡುವುದಾದರೆ ವಿಹಾರ,ಓರಿಸ್ಸಾಗಳಲ್ಲಿ ಈ ತರಹದ ವಾತಾವರಣವಿದೆ;ಕಾಶ್ಮೀರವೂ ಇದಕ್ಕೆ ಹೊರತಲ್ಲ.ಪೋಲಿಸು,ಮಿಲಟರಿ ಇತ್ಯಾದಿಗಳವೆ,ಅವು ದುರ್ಬಲರ ಪಾಲಿಗೆ ಮಾತ್ರ.ಇಲ್ಲಿ ಬರೆದರುವ ಸತ್ಯವನ್ನು ಯಾವ ಸರ್ಕಾರಗಳೂ ಒಪ್ಪಿಕೊಳ್ಳುವುದಿಲ್ಲ.ಹಾಗೆ ಒಪ್ಪಿಕೊಂಡರೆ ಸಂವಿಧಾನಕ್ಕೂ ಕಾನೂನಿಗೂ ಮರ್ಯಾದೆ ಇರುವುದಲ್ಲ.ನನ್ನಗಿನ್ನೂ ಮತಾಧಿಕಾರ ಬಾರದ ದಿನಗಳಲ್ಲಿ ನಾನದನ್ನು ಕಣ್ಣಿನಿಂದ ನೋಡಿದ್ದೇನೆ.ಬ್ಯಾಲೆಟ್ ಪೇಪರ್ ಪದ್ಧತಿಯಲ್ಲಿ ಚುನಾವಣೆ ನಡೆಯುತ್ತಿದ್ದ ಕಳೆದ ಎರಡ್ಮೂರು ದಶಕಗಳ ಹಿಂದೆ ಮತ ಪೆಟ್ಟಿಗೆಗಳನ್ನು ನಾಶ ಮಾಡುವ,ನಾಪತ್ತೆ ಮಾಡುವ ಪ್ರಕರಣಗಳು ವರದಿಯಾಗುತ್ತಿದ್ದವು,ಮತ ಪೆಟ್ಟಿಗೆಗಳನ್ನು ಸಾರಾಸಗಟಾಗಿ ಬದಲಾಯಿಸಿದ ಉದಾಹರಣೆಗಳೂ ಉಂಟು!ಇದು ಬರೀ ಈ ದೇಶದ ಕಥೆಯಲ್ಲ;ಪ್ರಪಂಚದ ಅನೇಕದ ದೇಶಗಳಲ್ಲಿ ಇಂಥಹ ಘಟನೆಗಳು ಘಟಿಸುತ್ತವೆ.ಎಲ್ಲಿ ಆಯುದ್ಧಗಳಿಗೂ,ಹಣಕ್ಕೂ ಪ್ರಾಮುಖ್ಯತೆ ಇದೆಯೋ ಅಲ್ಲಿ ಇದೆಲ್ಲಾ ಸಹಜ.ಪಕ್ಕದ ಪಾಕಿಸ್ತಾನದಲ್ಲಿ ಬಂದೂಕು ರಾಜಕಾರಣವನ್ನು ನಿರ್ದೇಶಿಸುತ್ತದೆ.ಅಪಘಾನ ದೇಶದಲ್ಲಿ ತಾಲಿಬಾನ್ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದು ಹಾಗೇನೆ.ರಾಜ ಪ್ರಭುತ್ವ ಇರುವ ದೇಶಗಳಲ್ಲಿ ಬಂದೂಕು ಶಾಸನ ಬರೆಯುತ್ತದೆ!

ಈ ಲೇಖನ ಬರೆಯುವ ಮುನ್ನ ಮತ ಚಲಾವಣೆಯ ಕುರಿತು ಪ್ರಸ್ತಾವನೆ ಏಕೆಂದರೆ ಭಾರತದಲ್ಲಿ ನಿಜವಾದ ಪ್ರಜಾಪ್ರಭುತ್ವ ಅನುಷ್ಠಾನಗೊಂಡಿಲ್ಲ ಎಂದು ಹೇಳುವುದಕ್ಕೆ,ಮತದ ಘನತೆ ಪ್ರಜೆಗಳಿಗೆ ಅರ್ಥವಾಗಿಲ್ಲ ಎಂದು ಹೇಳುವುದಕ್ಕೆ,ಪ್ರಜಾ ಪ್ರಭುತ್ವದ ಹೆಸರಿನಲ್ಲಿ ಭಾರತದಲ್ಲಿ ನಡೆಯುತ್ತಿರುವ ಮತ್ತೊಂದು ಸುತ್ತಿನ ಸಾಮ್ರಾಜ್ಯಶಾಹಿ ಮಾದರಿಯ ರಾಜಕಾರಣವನ್ನು ವಿವರಿಸಲಿಕ್ಕೆ!ಇನ್ನೇನು ಮತ್ತೆ?ಭಾರತದ ಪ್ರಜೆ ಯಾವ ಅರ್ಥದಲ್ಲಿ ಪ್ರಭು?

ಹೆಂಡದ ಅಮಲಿನಲ್ಲಿ ಚುನಾವಣೆ ನಡೆಯುತ್ತದೆ,ಹಣದ ಆಮಿಷದಲ್ಲಿ ಚುನಾವಣೆ ನಡೆಯುತ್ತದೆ,ಜಾತಿಯ ಆಧಾರದಲ್ಲಿ ಚುನಾವಣೆ ನಡೆಯುತ್ತದೆ,ಧರ್ಮ ಸಂಘರ್ಷದ ಬೆಂಕಿಯ ಬಿಸಿಯಲ್ಲಿ ಚುನಾವಣೆ ನಡೆಯುತ್ತದೆ;ಜಾತ್ಯಾತೀತ ನಿಲುವು,ಅಭಿವೃದ್ಧಿಯ ಆಶಯದಲ್ಲಿ ಯಾವತ್ತು ಚುನಾವಣೆ ನಡೆದಿದೆ ಹೇಳಿ?ಒಬ್ಬ ಬೀದಿ ರೌಡಿ,ಒಂದು ಕಾಲದಲ್ಲಿ ಗಣೇಶ್ ಬೀಡಿಗೂ ಗತಿ ಇಲ್ಲದವನು ರಾಜಕೀಯ ಅಸ್ತಿತ್ವ ಪಡೆದ ಮೇಲೆ ಆತನ ವೈಭೋಗ ಜೀವನವನ್ನು ಗಮನಿಸಿ ನೋಡಿ;ಇವತ್ತು ಗ್ರಾಮ ಪಂಚಾಯತಿ ಚುನಾವಣೆಗೂ ಲಕ್ಷಾಂತರ ಹಣ ಸುರಿಯಬೇಕಾಗಿದೆ,ಸುರಿದಾದ ಮೇಲೆ?ಸ್ನೇಹಿತರೆ ನಿಮ್ಮ ನಿಮ್ಮ ಗ್ರಾಮಗಳಲ್ಲಿ ಗಮನಿಸಿ ನೋಡಿ;ಹದಿನಾಲ್ಕನೆಯ ಹಣಕಾಸಿನ ಬಳಕೆ ಮತ್ತದರ ದುರುಪಯೋಗ ಅರ್ಥವಾದೀತು!ಹಣ ಸುರಿದು ಚುನಾಯಿತನಾಗುವ ಸದಸ್ಯ ಹಣ ರಿಕವರಿಯಲ್ಲಿ ತೊಡಗುತ್ತಾನೆ,ಸಂಪೂರ್ಣ ರಾಜಕೀಯ ಈ ತಳಹದಿಯ ಮೇಲೆ ನಿಂತಿದೆ;ಹೀಗಾಗಿ ರಾಜಕೀಯ ಒಂದು ಉದ್ಯಮವಾಗಿ ಬದಲಾಗಿ ಹೋಗಿದೆ.ಒಬ್ಬ ಗ್ರಾಮ ಪಂಚಾಯತಿಯ ಅಧ್ಯಕ್ಷ ಏನಿಲ್ಲವೆಂದರೂ ಕೋಟಿಗಳ ಲೆಖ್ಖದಲ್ಲಿ ಲೂಟಿ ಹೊಡೆಯುತ್ತಾನೆ,ಲೆಖ್ಖ ಹುಡುಕುವುದು ಕಷ್ಟ.ಸರ್ಕಾರಿ ವ್ಯವಸ್ಥೆಯನ್ನು ಭ್ರಷ್ಟ ಕೂಟ ಆ ರೀತಿ ರೂಪಿಸಿಕೊಂಡಿದೆ.

ಬ್ರಿಟೀಷ್ ಭಾರತ ಚೆಂದಿತ್ತು!ಅವರು ಕ್ರೂರಿಗಳೇ ನಿಜ,ಕಟ್ಟುನಿಟ್ಟಿನ ಕಾನೂನುಗಳನ್ನು ಹೇರಿದ್ದರು,ಜನ ಪಾಲಿಸಬೇಕಿತ್ತು ಕೂಡಾ.ಆ ಕಾನೂನುಗಳಿಂದ ಇಕ್ಕಟ್ಟು ಉಂಟಾದಾಗ ಭಾರತದ ಕೆಲ ಪಟ್ಟಭದ್ರರು ಸ್ವಾತಂತ್ರ್ಯ ಚಳುವಳಿಯನ್ನು ಹುಟ್ಟು ಹಾಕಿರಬಹುದು.ಭಾರತದ ಇತಿಹಾಸದಲ್ಲಿ ಅಕ್ಷರ ಪರ್ವ ಆರಂಭವಾದದ್ದು ಬ್ರಿಟೀಷರಿಂದಲೇ,ಅವರು ಶಾಲೆಗಳನ್ನು,ವಿದ್ಯುತ್ ನ್ನು,ಸಂಚಾರಿ ವ್ಯವಸ್ಥೆಯನ್ನು ತಂದರು.ಇದಕ್ಕೂ ಮುನ್ನ ಭಾರತದಲ್ಲಿ ಏನಿತ್ತು?ಕತ್ತಿ ಕಠಾರಿಗಳಿಂದ ಸಂಸ್ಥಾನಗಳನ್ನು ಆಳುವುದು,ಗೆಲ್ಲುವುದು,ರಕ್ತ ಹರಿಸುವುದು ಇತ್ಯಾದಿ ಇತ್ತು.ಯುದ್ಧಗಳಾಗುತ್ತಿದ್ದವು;ಯುದ್ಧದ ಪರಿಣಾಮ ಜೀವ ಹಾನಿ,ಲೂಟಿ ಇತ್ಯಾದಿಯಾಗಿರುತ್ತಿತ್ತು.ಪ್ರತಿ ಯುದ್ಧದ ನಂತರದ ಪರಿಣಾಮಗಳನ್ನು ಗಮನಿಸಿ ನೋಡಿ:ಲೂಟಿ ಬಹು ಮುಖ್ಯ ಉದ್ದೇಶವಾಗಿ ಕಾಣಿಸುತ್ತದೆ.ಧನಕನಕಗಳ ಲೂಟಿ,ಸುಂದರ ಸ್ತ್ರೀಯರ ಒತ್ತುವರಿ,ಸೆರೆ ಸಿಕ್ಕವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವ ಪ್ರಕ್ರಿಯೆ!ಇದರಿಂದ ವ್ಯಕ್ತವಾಗುವುದೇನೆಂದರೆ ರಾಜನ ಉದ್ದೇಶ ದಾಹವಾಗಿರುತ್ತಿತ್ತು,ಬಹುತೇಕ ಅದು ರಕ್ತದಾಹವಾಗಿರುತ್ತಿತ್ತು.ಇದರ ಹೊರತು ಅಭಿವೃದ್ಧಿಯ ಉಲ್ಲೇಖಗಳು ನಮಗೆ ಇತಿಹಾಸದ ಉದ್ದಕ್ಕೂ ಬಹು ವಿರಳವಾಗಿ ಗೋಚರಿಸುತ್ತವೆ;ಭಾರತದಲ್ಲಿ ನಿರ್ಮಿಸಲಾಗಿರುವ ಕೆರೆ ಕಟ್ಟೆಗಳು,ಆಣೆಕಟ್ಟೆಗಳು ಮತ್ತು ಅಭಿವೃದ್ಧಿಪರ ಕಾರ್ಯಗಳು ಜರುಗಿದ್ದು ಬ್ರಿಟೀಷ್ ಭಾರತದಲ್ಲಿ!ಮತ್ತು ಸ್ವಾತಂತ್ರ್ಯಾನಂತರ.ರಾಜ ಮಹಾರಾಜರ ಕಾಲದ ಒಂದೇ ಒಂದು ಜನಾಭಿವೃದ್ಧಿ ಸ್ಮಾರಕವೊಂದನ್ನು ನಾವು ಕಾಣಲಾರೇವು,ಗುಡಿಗುಂಡಾರಗಳ ಹೊರತು!ಹೌದು,ಭಾರತದಲ್ಲಿ ಪುರಾತನ ಸಂಸ್ಕೃತಿ ಎಂದು ಬಲು ಹೆಮ್ಮೆಯಿಂದ ಹೇಳುವಂಥದ್ದು ಮೌಢ್ಯದಿಂದ ಕೂಡಿದೆ,ಗಮನಿಸಿ ನೋಡಿ.ದೇವರು ಕೊಡುತ್ತಾನೆ ಎಂದು ಆಕಾಶದ ಕಡೆಗೆ ಮುಖ ಮಾಡಲು ಹಚ್ಚಿದರು,ಜನರಲ್ಲಿ ಜ್ಞಾನದ ದೀವಿಗೆ ಹಚ್ಚಲಿಲ್ಲ.ಅರ್ಥ-ಪರಾಮರ್ಥವನ್ನು ಜ್ಞಾನ ಎಂದರು,ಆ ಜ್ಞಾನಿಗಳು ಬರೀ ಬೋಧನೆಗೆ ಮಾತ್ರ ಸೀಮಿತವಾದರು.ನೀವು ನೋಡಿ:ಜಗತ್ತಿಗೆ ಬುದ್ದಿ ಹೇಳಿದ ಯಾವ ದಾರ್ಶನಿಕನೂ ಸುಖ ಜೀವನ ಮಾಡಲಿಲ್ಲ.ಬುದ್ದ,ಬಸವ,ಅಂಬೇಡ್ಕರ್ ಯಾದಿಯಾಗಿ!ವಿಪರ್ಯಾಸವಲ್ಲವೇ?ಆತ್ಮ ಪರಮಾತ್ಮಗಳ ಪರಿಕಲ್ಪನೆ ಹುಟ್ಟು ಹಾಕಿದ ಸಾಕ್ರೆಟಿಸ್ ನೂ ಸುಖವಾದ ಸಾವನ್ನು ಕಾಣಲಿಲ್ಲ.ಜೀಸಸ್ ನ ಕೊನೆಯ ದಿನಗಳು ನಿಮಗೆ ಗೊತ್ತೇ ಇವೆ.

ಪುರಾತನ ಭಾರತದಲ್ಲಿ ಕ್ಷತ್ರೀಯರು,ಬ್ರಾಹ್ಮಣರು ಮಾತ್ರವಲ್ಲದೆ ದಲಿತ ವರ್ಗಗಳು ವಿದ್ಯೆ ಕಲಿತರೆ ನಾಲಿಗೆ ಕತ್ತರಿಸುವ ರೂಢಿ ಇತ್ತಂತೆ,ಎಂತಹ ದಾರುಣವಲ್ಲವೇ?ಭಾರತಕ್ಕೆ ಬ್ರಿಟೀಷರು ಬರುವ ಮುನ್ನ ಈ ದೇಶವನ್ನು ನಿರಕ್ಷರಿಗಳ ನಾಡು,ಹಾವಾಡಿಸುವವರ ನಾಡು,ಅನಾಗರಿಕರ ನಾಡು ಎಂದೇ ಕರೆಯಲಾಗುತ್ತಿತ್ತಂತೆ.ನಾಗರಿಕತೆ ಮೈಗೂಡಿದ್ದು ಭಾರತಕ್ಕೆ ಶಿಕ್ಷಣ ವ್ಯವಸ್ಥೆ ಪರಿಚಯವಾದ ಮೇಲೆ.ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ಭಾರತದಲ್ಲಿ ಮೊದಲು ಶಾಲೆಗಳನ್ನು ಪರಿಚಯಿಸಿದ್ದು ಬ್ರಿಟೀಷರು,ಈ ದೇಶದಲ್ಲಿ ಅಕ್ಷರದ ಬೀಜ ದಲಿತನ ಎದೆಯಲ್ಲಿ ಮೊಳಕೆ ಒಡೆದಿದ್ದು ಅಂದಿನಿಂದ.ಡಾ//ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಾಲ್ಯದ ಜೀವನದ ಶಿಕ್ಷಣದ ದಿನಗಳನ್ನು ನೀವು ಸ್ಮರಿಸಿಕೊಳ್ಳಿ,ಆತ ಅನೇಕ ಅವಮಾನ,ತಾತ್ಸಾರ,ತಿರಸ್ಕಾರಗಳನ್ನು ಭರಿಸಬೇಕಾಯಿತು.ಕಳೆದ ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ದಲಿತರನ್ನು ಮುಟ್ಟಬಾರದು ಎನ್ನುವ ನಿಲುವಿನ ಮಾಸ್ತರನ ಉದ್ದದ ಕೋಲಿನಿಂದಲೇ ನಾನು ಶಿಕ್ಷಣ ಕಲೆತಿದ್ದು.ಇವತ್ತಿನ ನಲವತ್ತು ನಲವತ್ತೈದು ವರ್ಷಗಳ ವಯೋಮಾನದ ವ್ಯಕ್ತಿಗಳು ತಮ್ಮ ಬಾಲ್ಯಕಾಲವನ್ನು ಸ್ಮರಿಸಿಕೊಳ್ಳಬಹುದು.

ನೀವೊಮ್ಮೆ ಅನಂತಮೂರ್ತಿಯವರ ಕಥೆಯೊಂದನ್ನು ಆಧರಿಸಿ ನಿರ್ಮಿಸಿದ ಚಲನಚಿತ್ರವೊಂದನ್ನು ನೋಡಿರಬಹುದು,ಅದು ತಬರನ ಕಥೆ ಎಂದು.ಬ್ರಿಟೀಷರು ಭಾರತವನ್ನು ಬಿಟ್ಟು ಹೋದ ಮೇಲೆ ಇಲ್ಲಿನ ದಲಿತ ವರ್ಗಗಳು ಅನುಭವಿಸಿದ ದಾರುಣ ಯಾತನೆಯನ್ನು ಆ ಕಥೆ ಸೂಕ್ಷ್ಮವಾಗಿ ವ್ಯಕ್ತಪಡಿಸುತ್ತದೆ.ಸ್ವಾತಂತ್ರ್ಯ ಹೋರಾಟಗಾರರು ಎಂದು ಹೇಳಿಕೊಳ್ಳುವ ಆಗಿನ ಪುಂಡ ಪೋಕರಿಗಳು 1947ರ ನಂತರದ ದಿಗಳನ್ನು ಬಹು ಕಠೋರ ಮಾಡುತ್ತವೆ.ಪಿಂಚನಿಗಾಗಿ ಸ್ವತಂತ್ರ ಭಾರತದ ಸರ್ಕಾರಿ ಕಛೇರಿಗಳಿಗೆ ಅಲೆಯುವ ತಬರ ಸಾವಿನ ಕೊನೆಯವರೆಗೆ ಅಲೆಯುತ್ತಲೇ ಇರುತ್ತಾನೆ,ಹೀಗೆ ಅಲೆಯುತ್ತಾ ಅಲೆಯುತ್ತಾ ಆತ ಹೆಂಡತಿಯನ್ನು,ತನ್ನ ಬದುಕನ್ನು ಕಳೆದುಕೊಳ್ಳುತ್ತಾನೆ.ಆತ ಕೊನೆಗೆ ನೊಂದು ಹೇಳುವ ಮಾತು ಬ್ರಿಟೀಷರೇ ಪಾಡಿದ್ದರು ಎನ್ನುವುದು!ಪ್ರಜಾಪ್ರಭುತ್ವವನ್ನು ಈ ನೆಲಕ್ಕೆ ಪರಿಚಯಿಸಿದವರೂ ಬ್ರಿಟೀಷರೆ!ಅವರ ನೀತಿಗಳು ಕಠೋರವಾಗಿದ್ದರೂ ದುಡಿದು ಉಣ್ಣುವವರಿಗೆ ತೊಂದರೆ ಇರಲಿಲ್ಲ ಎನ್ನುವುದನ್ನು ಆ ಕಥೆ ಹೇಳುತ್ತದೆ.ಸ್ವಾತಂತ್ರ್ಯಾನಂತರ ಈ ದೇಶದ ರಾಜಕೀಯ ಚುಕ್ಕಾಣಿ ಹಿಡಿದ ದೇಶದದೊಳಗಿನ ಬ್ರಿಟೀಷರು ದೇಶವನ್ನು ಸಮರ್ಥವಾಗಿ ಕಟ್ಟುವ ಕೆಲಸ ಮಾಡಲೇ ಇಲ್ಲ.

ವಿಚಾರ ಮಾಡಿ ನೋಡಿ:ಭಾರತದಲ್ಲಿ ಲೂಟಿ ಎಂಬ ಕರಕುಶಲ ವಿದ್ಯೆ ಬಲ್ಲವನು ಶ್ರೀಮಂತನಾಗಿದ್ದಾನೆ,ಉಳಿದಂತೆ ಅನೇಕ ವರ್ಗಗಳು ಪಾರಂಪಾರಿಕವಾಗಿ ಬಡತನವನ್ನು,ದಡ್ಡತನವನ್ನು ಹಾಗೇ ಹೊತ್ತುಕೊಂಡಿವೆ;ಅವಕ್ಕೆ ರಾಜಕೀಯವೆಂದರೆ ಏನು?ಸಂವಿಧಾನವೆಂದರೆ ಏನು?ತಮ್ಮ ಹಕ್ಕುಗಳು ಎಂದರೆ ಏನು?ಸರ್ಕಾರ ಯಾರದ್ದು,ಯಾರು ಈ ದೇಶದ ಪ್ರಭು ಎಂದು ಇಲ್ಲಿಯವರೆಗೆ ಅರ್ಥವೇ ಆಗಿಲ್ಲ.ಆತ ಸಾಕ್ಷರನಾಗದ ಹಾಗೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತಿದೆ.ಹೇಗೆ ಎಂದರೆ ಅದಕ್ಕೆ ಸ್ಪಷ್ಟ ಉದಾಹರಣೆಯನ್ನಾಗಿ ಆತ ತನ್ನ ಮತವನ್ನು ಕ್ಷುಲ್ಲಕ ಕಾರಣಗಳಿಗಾಗಿ ಮಾರಿಕೊಳ್ಳುತ್ತಿರುವುದನ್ನು ಹೇಳಬಹುದು.ಹೇಗಿದೆ ನೋಡಿ ಈ ದುಷ್ಟರ ಕೂಟ:ದೇಶದಲ್ಲಿ ಪ್ರಧಾನವಾಗಿ ಎರಡು ಪಕ್ಷಗಳು ಪ್ರಚಲಿತದಲ್ಲಿವೆ,ಒಂದು ಕಾಂಗ್ರೇಸ್ ಇನ್ನೊಂದು ಬಿಜೆಪಿ.ಒಂದು ಕನ್ನಡಿಯೊಳಗೆ ಬಂಗಾರ ತೋರಿಸುತ್ತಾ ತಾನು ಅಧಿಕಾರಕ್ಕೆ ಬಂದರೆ ಅದು ನಿಮಗೆ ದೊರೆಯಲಿದೆ ಎಂದು ಆಸೆ ತೋರಿಸುತ್ತಾ ಈ ದೇಶವನ್ನು ಆಳುತ್ತಾ ಬಂದಿದೆ.ಇನ್ನೊಂದು ರಾಮ ಮಂದಿರ ಮತ್ತು ಧರ್ಮಗಳ ಬೆಂಕಿ ಹಚ್ಚುತ್ತಾ ಅಧಿಕಾರಕ್ಕೆ ಬರುತ್ತಿದೆ.ಕನ್ನಡಿಯೊಳಗಿನ ಬಂಗಾರವೂ ಈ ಸ್ವಾತಂತ್ರ್ಯಾನಂತರದ ದಿನಗಳಿಂದ ದೊರೆಯಲಿಲ್ಲ.ಮತ್ತೊಂದರದ ಕಥೆ ನಿಮಗೆ ಗೊತ್ತೇ ಇದೆ:ಅದು ಮಾತಿನಲ್ಲೇ ಸಮಸ್ತ ದೇಶವಾಸಿಗಳ ಮನಸ್ತೃಪ್ತಿ ಪಡಿಸುತ್ತಿದೆ.

ಡಾ// ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದಿವ್ಯ ಜ್ಞಾನ ಮತ್ತು ಕಠಿಣ ಪರಿಶ್ರಮದಿಂದ ಈ ದೇಶಕ್ಕೆ ಜಗತ್ತಿನಲ್ಲಿ ಇನ್ನೆಲ್ಲೂ ಇಲ್ಲದಂತಹ ಸರ್ವಶ್ರೇಷ್ಠ ಸಂವಿಧಾನ ಲಭ್ಯವಾಯಿತು.ಅದು ಎಲ್ಲಾ ಮತ-ಧರ್ಮ-ಪಂಥಗಳಿಗೂ ಸಮಾನ ನ್ಯಾಯ ನೀಡುವ ಗ್ರಂಥ.ಭಾರತದಲ್ಲಿ ಒಂದು ವರ್ಗ ಅದನ್ನು ಸಂವಿಧಾನ ಲೋಕಾರ್ಪಣೆಯಾದ ದಿನದಿಂದಲೂ ದ್ವೇಷಿಸುತ್ತಲೇ ಬಂದಿದೆ.ಭಾರತದಲ್ಲಿ ಬಹು ಸಂಖ್ಯಾತ ದಲಿತ ವರ್ಗಗಳು ಇಲ್ಲದೇ ಹೋಗಿದ್ದರೆ,ದಲಿತ ವರ್ಗಗಳು ಸುಶಿಕ್ಷಿತವಾಗಿರದೇ ಹೋಗಿದ್ದರೆ ಸಂವಿಧಾನವನ್ನೂ ಬಾಬಾ ಸಾಹೇಬರನ್ನು ಒಳ ಒಳಗೇ ದ್ವೇಷಿಸುವ ಜನ ಯಾವತ್ತೋ ಸಮಾಧಿ ಮಾಡಿ ಬಿಡುತ್ತಿದ್ದರು.ಇಷ್ಟಾಗಿಯೂ ಸಂವಿಧಾನವನ್ನು ಸುಡುವಿಕೆ,ಸಂವಿಧಾನ ಶಿಲ್ಪಿಯ ತೇಜೋವಧೆಗೆ ಪ್ರಯತ್ನಿಸುತ್ತಲೇ ಇದ್ದಾರೆ.ಇತ್ತೀಚಿನ ಕೆಲ ವರ್ಷಗಳಲ್ಲಿ ದಲಿತ ಹುಡುಗರೇ ಮೀಸಲಾತಿ ಮತ್ತು ಸಂವಿಧಾನ ವಿರೋಧಿ ನಿಲುವು ತಾಳುತ್ತಿರುವ ಆಘಾತಕಾರಿ ಅಂಶಗಳು ಕಾಣತೊಡಗಿವೆ.ಅವು ಸಮ್ಮೋಹನಕ್ಕೆ ಒಳಗಾಗಿವೆ!

ಸರ್ಕಾರಿ ಕಛೇರಿಗಳು ಈ ದೇಶದ ಮುಗ್ಧ ಪ್ರಜೆಯ ಪಾಲಿಗೆ ಕಗ್ಗಂಟಾಗಿರುವ ಪ್ರಸ್ತುತ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಪ್ರಶ್ನಿಸಲ್ಪಡುತ್ತದೆ.ಎಲ್ಲಿ ನೋಡಿದರೂ ಹಣ,ಹಣ,ಹಣ.ಭ್ರಷ್ಟಾಚಾರ ತಾಂಡವವಾಡುತ್ತಿದೆ.ಕೋಟ್ಯಾಂತರ ತೆರಿಗೆ ಹಣದಲ್ಲಿ ರೂಪಿಸಲಾಗುತ್ತಿರುವ ಕಾಮಗಾರಿಗಳು ರಾಜಕೀಯ ಹಿಂಬಾಲಕ ಗುತ್ತಿಗೆದಾರರ ಮುಖೇನ ಮತ್ತೆ ರಾಜಕಾರಣಿಗಳ ಪಾಲಾಗುತ್ತಿದೆ,ಅಂದರೆ ಕಿಕ್ ಬ್ಯಾಕ್! ಮತವನ್ನು ಮಾರಿಕೊಂಡ ಜನ ಚಿಲ್ಲರೆ ಕನಸುಗಳಿಗಾಗಿ ದಾರಿ ಕಾಯುತ್ತಾರೆ,ಉದ್ಯೋಗಖಾತ್ರಿ ಕೂಲಿ,ಒಂದು ಶೌಚಾಲಯ ಹೆಚ್ಚೆಂದರೆ ಒಂದು ಆಶ್ರಯ ಯೋಜನೆ ಮನೆ;ಅವೂ ದುಡ್ಡುಕೊಟ್ಟು ಪಡೆದುಕೊಳ್ಳಲೇಬೇಕು.

ಈಗ ಹೇಳಿ?ನಾವು ಯಾವ ಅರ್ಥದ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ?

“ಲೇದು ನಾಯಕ್,ಎಲೆಕ್ಷನ್ ವಸ್ತುನ್ನಾಯ್ ಕದಾ,ಅಪ್ಪುಡು ಒಕ ಟೆಂಟ್ ಎಸ್ತುನ್ನಾರು,ಅಂದುಲು ಕೋಳಿ-ಕುರಿ ಮಾಂಸಂ ಕೋರ ಮರಿಯು ಬಿರ್ಯಾನಿ ಒಂಟಿಸ್ತಾರು.ಅಕ್ಕಡಿ ಜನಾಂದರೂ ಮಂದು ತಾಗೇಸಿ ಭೋಜನಂ ಚೇಸ್ತುನ್ನಪ್ಪಡು ಇಕ್ಕಡಿ ಓಟಿಂಗ್ ಆಯ್ ಪೋತುಂದಿ!”ಅಂದ ನನ್ನ ಗೆಳೆಯ,ಅಂದರೆ ಚುನಾವಣೆಯ ದಿನ ಗಲ್ಲಿಗಲ್ಲಿಗಳಲ್ಲಿ ಟೆಂಟು ಹಾಕಿ ಕೋಳಿ ಕುರಿ ಮಾಂಸದ ಏರ್ಪಾಡು ಮಾಡಲಾಗುತ್ತದೆ.ಜನ ಕುಡಿಯುತ್ತಾ ಊಟ ಮಾಡುವ ಸಂದರ್ಭದಲ್ಲಿ ಈ ಕಡೆ ಓಟಿಂಗ್ ಮುಗಿದಿರುತ್ತದೆ.ಭಾಗಶಃ ರಾಯಲಸೀಮಾ ಭಾಗದಲ್ಲಿ ಈ ಮಾದರಿಯ ಚುನಾವಣೆ ನಡೆಯುತ್ತದೆ ಎನ್ನುವುದು ಆತನ ಮಾತು.ಅದು ನಿಜವೂ ಹೌದು!

ಈ ಪುರುಷಾರ್ಥಕ್ಕಾಗಿ,ಈ ದುಷ್ಟರಿಗಾಗಿ ಸ್ವಾತಂತ್ರ್ಯ ಬೇಕಿತ್ತಾ ಅನ್ನಿಸುತ್ತದೆ.ಉಳಿದಿದ್ದು ಮುಂದಿನ ವಾರಕ್ಕೆ…



ನಿಮ್ಮವನು-ಲಕ್ಷ್ಮೀಕಾಂತ ನಾಯಕ

ಹೋರಾಟವೂ ಉದ್ದಿಮೆಯಾಗಿ ಹೋದ ಈ ಸಂಕೀರ್ಣ ಕಾಲಘಟ್ಟದ ಕುರಿತು

 ನೀವು ಪರೀಕ್ಷಿಸಿ ನೋಡಿ:ಲಕ್ಷಾಂತರ,ಕೋಟ್ಯಾಂತರ ಸಂಘಟನೆಗಳು ಹೋರಾಟಗಾರರು ಜನ್ಮತಳೆದಿದ್ದಾರೆ;ಅಷ್ಟೇ ಸಮಸ್ಯೆಗಳು ಹೆಚ್ಚಾಗುತ್ತಿವೆ.ಇವೆಲ್ಲವನ್ನೂ ವಿಶ್ಲೇಷಿಸಿ ನೋಡಿದಾಗ ಎ...