ಶನಿವಾರ, ಮಾರ್ಚ್ 14, 2020

ಮೋದಿ ಎಂಬ ಅವತಾರ ಪುರುಷ!




ಮೋದಿ ಎಂಬ ಅವತಾರ ಪುರುಷ!






     2014 ಲೋಕಸಭಾ ಚುನಾವಣೆಗೆ ಪ್ರಚಾರ ಆರಂಭಿಸುವ ಮುನ್ನ ಭಾರತೀಯ ಜನತಾ ಪಕ್ಷ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿತು;ಆತ ನರೇಂದ್ರ ಮೋದಿ ಎಂದು!ಆತನ ಯಾವ ಅರ್ಹತೆಯ ಆಧಾರದ ಮೇಲೆ ಹಾಗೆ ಘೋಷಿಸಿತು ಎಂದು ಪ್ರಶ್ನೆ ಕೇಳಿಕೊಳ್ಳಲಾಗಿ ನಮಗೆ ದೊರೆಯಬಹುದಾದ ಉತ್ತರ ಆತನ ತೀವ್ರತರವಾದ ಹಿಂದೂ ನಿಲುವುಗಳು ಮತ್ತು ಆತನ ಭಾಷಣ ಪ್ರಮುಖ ಅಂಶವಾಗಿತ್ತು.ಹಿಂದೂ ಮುಸ್ಲಿಂ ಘರ್ಷಣೆಯಲ್ಲಿ ಹೊತ್ತಿ ಉರಿದಿದ್ದ ಗುಜರಾತ್ದೇಶವನ್ನು ತನ್ನೆಡೆಗೆ ತಿರುಗಿಸಿಕೊಂಡಿತ್ತು. ಹಿನ್ನೆಲೆಯಲ್ಲಿ ಮುಸ್ಲಿಂ ನರಮೇಧಕ್ಕೆ ಮುಕ್ತ ಅವಕಾಶಕೊಟ್ಟು ದೇಶದ ಹಿಂದೂ ಯುವಕರ ನಾಯಕನಾಗಿ ಆತ ಘೋಷಿತನಾಗಿದ್ದ.ಗೋದ್ರಾ ಹತ್ಯಾಕಾಂಡ ನಡೆದ ಮೇಲೆ ಜಾಗತಿಕ ರಾಷ್ಟ್ರಗಳು ಈತನನ್ನು ನರಭಕ್ಷಕ ಎಂದು ಕರೆದಿದ್ದವು;ಅಮೇರಿಕಾ ತನ್ನ ದೇಶದ ಪ್ರವಾಸಕ್ಕೆ ವೀಸಾ ನಿರಾಕರಿಸಿತ್ತು.ಧರ್ಮವನ್ನು ಮತ್ತದರ ಕಡೆ ಇರುವ ಜನಗಳ ಬಲಹೀನತೆಯನ್ನು ಬಳಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವ ಯಾವುದೇ ಪಕ್ಷದ ನಾಯಕನನ್ನು ನರಭಕ್ಷಕ ಎನ್ನದೆ ಬೇರೇನೂ ಅನ್ನಲಿಕ್ಕಾಗದು! ಹೊತ್ತಿಗಾಗಲೇ ಮನಮೋಹನಸಿಂಗ್ಸರ್ಕಾರ ಅನೇಕ ಹಗರಣಗಳಲ್ಲಿ ಸಿಲುಕಿಕೊಂಡಿತ್ತು.ಕೆಲ ಕಾಂಗ್ರೇಸ್ನಾಯಕರು ಅಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದರು.ಮತ್ತು ಮನಮೋಹನಸಿಂಗರ ಮೌನ ಕೂಡಾ ಅಪಹಾಸ್ಯಕ್ಕೆ ತೀವ್ರ ಟೀಕೆಗೂ ಕಾರಣವಾಗಿತ್ತು.ಆಕೆ ವಿದೇಶಿ ಮಹಿಳೆ ಎಂದು ಆರೋಪಿಸಿ ಪ್ರಧಾನಿ ಪಟ್ಟ ತಪ್ಪಿಸಿದ ಬಿಜೆಪಿ ಪರೋಕ್ಷವಾಗಿ ಮನಮೋಹನಸಿಂಗರು ಪ್ರಧಾನಿಯಾಗುವಂತೆ ಮಾಡಿದ್ದರು;ಸೋನಿಯಾ ತೆರೆಯ ಮರೆಯಲ್ಲಿ ಉಳಿಯಬೇಕಾಯಿತು.ಅಷ್ಟೆಲ್ಲಾ ಹಗರಣಗಳ ಆರೋಪ ಹೊತ್ತ ಕಾಂಗ್ರೇಸ್ಸರ್ಕಾರ ಭಾರತದ ಆರ್ಥಿಕ ಸ್ಥಿತಿಗೆ ಯಾವುದೇ ದಕ್ಕೆ ತಂದಿರಲಿಲ್ಲ.ಜನ ಸಾಮಾನ್ಯರು ಯಾವುದೇ ಕೊರೆತೆಯನ್ನು ಎದುರಿಸಿರಲಿಲ್ಲ.ಜಾಗತಿಕ ತೈಲ ಮಾರುಕಟ್ಟೆಯ ನಿಯಮದಂತೆ ಕೊಂಚ ಪೆಟ್ರೋಲ್ಮತ್ತು ಡಿಸೇಲ್ಬೆಲೆಗಳು ದುಭಾರಿಯಾಗಿದ್ದವು.ಉಳಿದಂತೆ ಭಾರತ ಸುಭದ್ರವಾಗಿತ್ತು.ಬ್ಯಾಂಕುಗಳು ಚೆನ್ನಾಗಿದ್ದವು;ಎಟಿಎಂಗಳು ಎಸಿಯನ್ನು ಹೊಂದಿದ್ದವು;ಕ್ಯೂ ಇರಲಿಲ್ಲ ಎಲ್ಲೂ!

 

       ಇರಲಿ ಬಿಡಿ ವಿಷಯ;ಸದ್ಯದ ದೇಶದ ಸ್ಥಿತಿಗತಿಗಳ ಬಗ್ಗೆ ಯೋಚಿಸೋಣ.ರಾಮನ ಭಕ್ತರ ಬಿಜೆಪಿ ಪಡೆ ದೇಶದ ನೇತೃತ್ವ ವಹಿಸಿಕೊಂಡಿತು.ಐವತ್ತಾರು ಇಂಚಿರುವ ಅವತಾರ ಪುರುಷನೊಬ್ಬ ಭಾರತದ ಪ್ರಧಾನಿಯಾದ ಎಂದು ಜನ ಸಂಭ್ರಮಿಸಿದರು.ಇನ್ನೇನು ಭಾರತ ಬದಲಾಗಿ ಅಮೇರಿಕಾ,ಸಿಂಗಪೂರಗಳ ರೀತಿಯಲ್ಲಿ ಸುಭಿಕ್ಷುವಾಗುತ್ತದೆ ಎಂದು ಅನೇಕ ತಲೆಮಾಸದ ವಿದ್ವಾಂಸರು ಭವಿಷ್ಯ ನುಡಿದರು. “ತಿನ್ನಂಗಿಲ್ಲ,ತಿನ್ನೋಕೆ ಬಿಡಂಗಿಲ್ಲಎನ್ನುವ ಆತನ ಮಾತು ನೂರು ಕೋಟಿ ಜನಕ್ಕೆ ಮೆಚ್ಚಿಗೆಯಾಗಿತ್ತು,ಇವತ್ತಿಗೂ ಮೆಚ್ಚಿಗೇನೆ! “ಪಾಪ ಮೋದಿ ಕಣ್ರೀ,ಆತನಿಗೇನು ಹೆಂಡ್ರಾ ಮಕ್ಳಾ?ನೋಡಿ ಆತನ ಕುಟುಂಬವನ್ನು?ಸಹೋದರರು ಸಹಜ ಜೀವನವನ್ನೇ ಮಾಡುತ್ತಿದ್ದಾರೆ,ತಾಯಿ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಾಳೆಎಂದು ಜನ ಉದ್ಗರಿಸುತ್ತಾರೆ!ಈತನ ಕೆಲವು ತಂತ್ರಗಳನ್ನು ನಾವು ಮೆಚ್ಚಲೇಬೇಕಿದೆ;ನೆಲಕ್ಕೆ ಹಣೆ ಹಚ್ಚಿ ನಮಸ್ಕರಿಸುವುದು ಮತ್ತದನ್ನು ಚಿತ್ರಿಕರಿಸಿ ಹರಿಬಿಡುವುದು!ದೇವಸ್ಥಾನಗಳಿಗೆ ಅಲೆಯುವುದು,ಹಿಂದೂ ಧಾರ್ಮಿಕ ಸಂಪ್ರದಾಯಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾ ಉಪವಾಸ ವನವಾಸಗಳನ್ನು ಮಾಡಿ ಸುದ್ದಿ ಮಾಡುವುದು...ಇವೆಲ್ಲಾ ಮೆಚ್ಚಬೇಕಿರುವ ತಂತ್ರಗಳು.

 

     ಯೂಪಿಎ ಸರ್ಕಾರದ ನ್ಯೂನತೆಗಳನ್ನು ಚುನಾವಣೆಯಲ್ಲಿ ಎಷ್ಟೊಂದು ಸಮರ್ಥನೀಯವಾಗಿ ಈತ ಬಳಸಿಕೊಂಡನೆಂದರೆ,ಪಾಕಿಸ್ತಾನದ ಸೈನಿಕರು ಎನ್ನಲಾಗುವ ಒಂದು ದೃಶ್ಯ ಸರಿಯಾಗಿ 2014 ಚುನಾವಣೆಯ ಹೊತ್ತಿನಲ್ಲಿ ವೈರಲ್ಆಯ್ತು,ಅದು ಹೇಗಿತ್ತು ಎಂದರೆ ಸೈನಿಕರು ಭಾರತೀಯ ಸೈನಿಕನ ತಲೆ ಎನ್ನಬಹುದಾದ ತಲೆಯನ್ನು ಫುಟ್ಬಾಲ್ಆಡುತ್ತಿರುವ ದೃಶ್ಯ!ಭಾರತೀಯ ಯುವಕರ ಮನಸ್ಸುಗಳು ಕುದ್ದು ಹೋದವು, ಷಂಡ ಕಾಂಗ್ರೇಸ್ಸರ್ಕಾರದ ಆಡಳಿತ ಇರುವವರೆಗೆ ಭಾರತಕ್ಕೆ ಸುರಕ್ಷಿತವಿಲ್ಲ ಎನ್ನುವ ಮನೋಭಾವ,ಉದ್ರಿಕ್ತದ ಮನೋಭಾವ ಬೆಳೆಯಿತು.ಇದಕ್ಕೆಲ್ಲಾ ಪರಿಹಾರ ನರೇಂದ್ರ ಮೋದಿಯಂತವರು ಅಧಿಕಾರಕ್ಕೆ ಬರಬೇಕು ಎಂದು ಪರೋಕ್ಷವಾಗಿ ಪ್ರಚಾರ ಮಾಡಲಾಯಿತು.ಕಾಶ್ಮೀರದಲ್ಲಿ ಹೆಚ್ಚಾದ ಆಜಾದಿಗಳ ಹಿಂಸಾಚಾರವೂ ಮೋದಿ ಗೆಲುವಿಗೆ ಕಾರಣವಾಗಿತ್ತು.ತಮಾಷೆ ಏನೆಂದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾಶ್ಮೀರದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಹುಮತ ಬರದ ಬಿಜೆಪಿ ಪೀಪಲ್ಡೆಮಾಕ್ರಟಿಕ್ಪಾರ್ಟಿಯೊಂದಿಗೆ ಒಪ್ಪಂದ ಮಾಡಿಕೊಂಡು ಸರ್ಕಾರ ರಚಿಸಿತ್ತು!

 

     ಗೋದ್ರಾ ಹತ್ಯಾಕಾಂಡದ ಬಗ್ಗೆ ನಿಮಗೊಂದಿಷ್ಟು ಮಾಹಿತಿ ಇರಲಿ:27 ಫೆಬ್ರವರಿ 2002ರಂದು ಅಯೋಧ್ಯೆಯಿಂದ ಹಿಂದುರುಗುತ್ತಿದ್ದರು ಎನ್ನಲಾದ 57 ಜನ ಕರಸೇವಕರು ಸಾಬರಮತಿ ರೈಲಿಗೆ ಹಚ್ಚಿದ ಬೆಂಕಿಯಲ್ಲಿ ಸುಟ್ಟು ಕರಕಲಾದರು.ಅಲ್ಲಿಂದ ಆರಂಭವಾಯಿತು ಹಿಂಸಾಚಾರ! ಹಿಂಸಾಚಾರ ಮೂರು ತಿಂಗಳವರೆಗೆ ಮುಂದುವರೆಯಿತು.ಅಧಿಕೃತ ಅಂಕಿ ಅಂಶಗಳ ಪ್ರಕಾರ ಹಿಂಸೆಯಲ್ಲಿ ಬಲಿಯಾದವರ ಸಂಖ್ಯೆ 1044!ಇದರಲ್ಲಿ ಮರಣಿಸಿದ ಮುಸ್ಲೀಮರ ಸಂಖ್ಯೆ 790 ಆದರೆ ಹಿಂದುಗಳು 254! 223 ಜನ ಕಾಣೆಯಾದವರಾದರೆ ಒಟ್ಟು ಗಾಯಗೊಂಡವರ ಸಂಖ್ಯೆ 2500;ಇಷ್ಟೊಂದು ವಿಧ್ವಂಸದೊಂದಿಗೆ ಗಲಭೆ ಕೊನೆಗೊಂಡಿತು.ಆಗ ಗುಜರಾತಿನ ಮುಖ್ಯ ಮಂತ್ರಿಯಾಗಿದ್ದವರು ನರೇಂದ್ರ ದಾಮೋದರ್ಮೋದಿ,ಈಗಿನ ಪ್ರಧಾನಿ!ಕೋಮು ಸಂಘರ್ಷದ ಹೊರತು ಬೇರೆ ದಾರಿಯೇ ಇಲ್ಲದ ಪಕ್ಚವೊಂದರ ಆಟೋಪಾಟಗಳೆ ಇದಕ್ಕೆಲ್ಲಾ ಕಾರಣ.ಸಾವಿನ ಮೇಲೆ ಸಾಮ್ರಾಜ್ಯ ಕಟ್ಟುವ ಕನಸು 2014ರಲ್ಲಿ ಈಡೇರಿದೆ!

 

     ಇಷ್ಟಕ್ಕೂ ಎನ್ಡಿಎ ನೇತೃತ್ವದ ಸರ್ಕಾರ ಭಾರತದ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಭಾರತಕ್ಕಾದ ಲಾಭವೇನು?ಇದು ಬಹು ಮುಖ್ಯ ಪ್ರಶ್ನೆ.ಮೊದಲ ಆರಂಭದ ಅವದಿಯಲ್ಲಿ ಸನ್ಮಾನ್ಯ ಮೋದಿಯವರು ಬರೀ ವಿದೇಶ ಪ್ರವಾಸದಲ್ಲಿ ನಿರತರಾದರು;ಏಕೀ ವಿನಾಕಾರಣ ಪ್ರವಾಸಗಳು ಎನ್ನುವ ಪ್ರಶ್ನೆಗೆ ವಿದೇಶಿ ಬಂಡವಾಳದ ಆಕರ್ಷಣೆಗೆ ಎಂದು ಹೇಳಲಾಯಿತು!ಇನ್ನೇನು ನರೇಂದ್ರ ಮೋದಿಯವರ ಎಲ್ಲಾ ವಿದೇಶ ಪ್ರವಾಸಗಳು ಯಶಸ್ವಿಯಾಗಿ ವಿದೇಶದಿಂದ ಬಂಡವಾಳಗಳ ಮಾಹಾಪೂರವೇ ಹರಿದು ಬರುತ್ತದೆ,ದೇಶ ಆರ್ಥಿಕವಾಗಿ ಅಮೇರಿಕಾವನ್ನೂ ಮೀರಲಿದೆ,ಡಾಲರ್ಮತ್ತು ರೂಪಾಯಿ ಮೌಲ್ಯ ಸಮವಾಗಲಿದೆ ಎಂದು ಕನಸು ಕಾಣುವ ಹೊತ್ತಿನಲ್ಲಿ ಡಿಜಿಟಲ್ಇಂಡಿಯಾ ಮತ್ತು ಇತರೆ ತೆರಿಗೆ ನೀತಿಗಳಿಂದ ದೇಶದಲ್ಲಿ ಇಂದೊಂದೇ ಸಣ್ಣ ಕೈಗಾರಿಕೆಗಳು ಕಣ್ಮರೆಯಾಗತೊಡಗಿದವು!ಸದ್ಯ ಈಗ ದೊಡ್ಡ ದೊಡ್ಡ ಕೈಗಾರಿಕೆಗಳು ಇನ್ನು ನಮ್ಮಿಂದಾಗದು ಎಂದು ಕೈಚೆಲ್ಲಿ ಕುಳಿತಿವೆ.ಭಾರತದ ಜಿಡಿಪಿ ಮೌಲ್ಯ ಅತ್ಯಂತ ಹೇಯವಾಗಿದೆ.ಮೊನ್ನೆ ಮೊನ್ನೆ ಕೇಂದ್ರ ಸರ್ಕಾರ ರಿಜರ್ವ ಬ್ಯಾಂಕಿನ ಮೀಸಲು ನಿಧಿಗೂ ಕೈ ಹಾಕಿತ್ತು!ನೆನಪಿರಲಿ:ಭಾರತದಲ್ಲಿ ಅನೇಕ ಬ್ಯಾಂಕುಗಳು ನಾಶವಾದವು,ಕೆಲವು ಮರ್ಜ್ಆದವು;ಇವತ್ತು ಎಸ್ಬ್ಯಾಂಕು!ಠೇವಣಿದಾರರ ಗೋಳು ಕೇಳುವವರಿಲ್ಲ.ಭಾರತದ ಬ್ಯಾಂಕುಗಳಿಂದ ಸಾವಿರಾರು ಕೋಟಿಗಳ ಸಾಲ ಮಾಡಿದ ನಕಲಿ ಉದ್ಯಮಿಗಳು ನಕಲಿ ದಾಖಲೆಗಳನ್ನು ಬಿಟ್ಟು ಓಡಿ ಹೋಗಿದ್ದಾರೆ,ಸನ್ಮಾನ್ಯ ನರೇಂದ್ರ ಮೋದಿಯವರ ಸರ್ಕಾರ ಅವರ ಮೇಲೆ ಯಾವೊಂದೂ ಕ್ರಮಗಳನ್ನು ಜರುಗಿಸಲಿಲ್ಲ.ಭಾರತ ಬ್ಯಾಂಕುಗಳೇ ನಾಶವಾದಾಗ ಭಾರತ ನಿರುದ್ಯೋಗಿ ಯುವಕರಿಗೆ ಸಾಲಸೌಲಭ್ಯಗಳು ದೊರೆಯವುದೆಲ್ಲಿ?ಇತ್ತ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ.ಮೋದಿ ಸರ್ಕಾರ ಅವರಿಗೊಂದು      ಪುಗಸಟ್ಟೆ ಉದ್ಯೋಗ ಕೊಟ್ಟಿದೆ:ಹಿಂದೂಗಳಿಗೆ ಜಯವಾಗಲಿ ಎನ್ನುವ ಘೋಷಣೆ ಕೂಗುವ ಉದ್ಯೋಗ!ರಾಮನಿಗೂ ತಮಗೂ ಏನೂ ಸಂಬಂಧವಿರದ ಅಸಲು ರಾಮಾಯಣವನ್ನು ಒಬ್ಬ ಕೀಳುಕುಲದವನು ಬರೆದ ಎನ್ನುವ ತಿರಸ್ಕಾರ ಮನೋಭಾವವಿರುವ ಜನಗಳಿಗೆ ಅವರನ್ನು ಅಭಿಮಾನಿಸಲಿಕ್ಕೆ ಅವರಿಗೆ ಜೈ ಕಾರ ಹಾಕಲಿಕ್ಕೆ ದಲಿತ ಹುಡುಗರು ಸಿದ್ದರಾಗಿದ್ದಾರೆ.ಅವರು ಮೋದಿಯನ್ನು ವಿಷ್ಣುವಿನ ಹನ್ನೊಂದನೆ ಅವತಾರ ಎನ್ನುತ್ತಾರೆ.

 

     ಹನ್ನೊಂದನೆ ಅವತಾರ ಎತ್ತಿರಬಹುದಾದ ಮಾಹಾ ವಿಷ್ಣು ಏನು ಮಾಡಿದ? ನೋಟ್ಬ್ಯಾನ್ಮಾಡಿದ,ಕಾರಣ ಹೇಳಲಿಲ್ಲ.ದೇಶದ ಸಮಸ್ತ ಬಡ ಶ್ರಮಿಕ ಕುಟುಂಬಗಳು ಅತ್ಯಂತ ಸಂಕಷ್ಟಕ್ಕೆ ಗುರಿಯಾದರು.ಇವರು ಬ್ಯಾಂಕಿನ ಮುಂದೆ ನಿಂತು ನೋಯುತ್ತಿದ್ದರೆ ಶ್ರೀಮಂತರ ಮನೆಗಳಿಗೆ ಹಣ ಕಂತೆ ಕಂತೆಯಲ್ಲಿ ಅವರ ಮನೆಗೇ ಹರಿದು ಹೋಯಿತು,ಬ್ಯಾಂಕಿನ ಅಧಿಕಾರಿಗಳು ಖುದ್ದಾಗಿ ಕೊಂಡೊಯ್ದು ಕೊಟ್ಟರು! “ಹೇ ಇದರಿಂದ ಕಪ್ಪು ಹಣ ಹೊರಬಂದು ದೇಶದ ಬಡವರಿಗೆ ಒಳ್ಳೆಯದಾಗುತ್ತದಂತೆ ಸುಮ್ನಿರಿಎಂದು ಬಡವರನ್ನು ನಂಬಿಸಲಾಯಿತು.ಅಂದು ನೀಡಿದ ಆರ್ಥಿಕ ಹೊಡೆತದಿಂದ ದೇಶ ಸುಧಾರಿಸಿಕೊಳ್ಳಲೇ ಇಲ್ಲ.ಅವತ್ತು ಅಸ್ತವ್ಯಸ್ತಗೊಂಡ ಬ್ಯಾಂಕುಗಳು ಈಗಲೂ ಹಾಗೆಯೇ ಇವೆ,ಎಟಿಎಂಗಳಲ್ಲಿ ಸದಾ ಹಣದ ಕೊರೆತೆ,ಕ್ಯೂ!ಕೇವಲ ಸಾವಿರ ಮುಖಬೆಲೆಯ ನೋಟನ್ನು ಮಾತ್ರ ಏಕೆ ನಿರಬಂಧಿಸಲಾಯಿತು ಎಂದರೆ ಹಳ್ಳಿಗಳಲ್ಲಿ ಜೋಕೊಂದು ಇದೆ:ಬಿಟ್ಟಿ ಸೂಮಕ್ಕಳು ಸಾವಿರ ರೂಪಾಯಿ ನೋಟಿರುವ ಎರಡು ಸೂಟುಕೇಸುಗಳನ್ನು ಕೊಂಡೋಯ್ಯುವ ಬದಲು ಅವರಿಗೆ ಹಗುರವಾಗಲಿ ಎಂದು ಎರಡು ಸಾರ ನೋಟಿನ ಒಂದೇ ಸೂಟಕೇಸ್ಮಾಡಿದ್ದಾನೆ ಎಂದು!ನೆನಪಿರಲಿ:ಯಾವ ಕಪ್ಪು ಹಣವೂ ಮರಳಿ ಬಂದು ಸರ್ಕಾರಕ್ಕೆ ನೆರವಾಗಲಿಲ್ಲ.ಬದಲಾಗಿ ಜಿಎಸ್ಟಿ ಮತ್ತಿತರ ಆಸ್ತಿ ತೆರಿಗೆಗಳ ಮುಖಾಂತರ ಜನಗಳನ್ನು ಲೂಟ್ಮಾಡುವುದು ಹೊಸದಾಗಿ ಆರಂಭಗೊಂಡಿತು.ಇಷ್ಟೊಂದು ಭಾರೀ ಪ್ರಮಾಣದಲ್ಲಿ ಸಂಗ್ರಹವಾಗುತ್ತಿರುವ ತೆರಿಗೆ ಎಲ್ಲಿಗೆ ಹೋಗುತ್ತಿದೆ ಎನ್ನುವುದಕ್ಕೆ ಉತ್ತರವಿಲ್ಲ.ಜನ ಸಾಮಾನ್ಯನ ಬದುಕು ತೀರಾ ಅಧ್ವಾನಗೊಂಡಿದೆ.

 

     ತ್ರಿವಳಿ ತಲಾಖ್ರದ್ದು ಮಾಡು ತಂದೆ ಎಂದು ಯಾವ ಮುಸ್ಲೀಮ್ಮಹಿಳೆಯೂ ಮೋದಿ ಮನೆಯ ಬಾಗಿಲಿಗೆ ಹೋಗಲಿಲ್ಲ.ರದ್ಧು ಮಾಡಿದ;ಬಹುಶ ಹಾಗೊಮ್ಮೆ ಮತ್ತೆ ದೇಶ ಕೋಮು ದಳ್ಳುರಿಗೆ ಕಾರಣವಾಗುತ್ತದೇನೋ ಎಂದು ಭಾವಿಸಿದ್ದರೇನೋ?ಅದು ಮಹಿಳೆಯ ಹಕ್ಕಲ್ಲವಾ ಎಂದು ಮುಸ್ಲಿಂ ಸಮುದಾಯಗಳು ಸುಮ್ಮನೆ ಕುಳಿತವು;ನಿರೀಕ್ಷಿತ ಫಲಿತಾಂಶ ಬರಲಿಲ್ಲ.ಕಾಶ್ಮೀರದ ಆರ್ಟಿಕಲ್‌ 370 ರದ್ಧತಿ ದೇಶವನ್ನು ಚಿತಾಗಾರ ಮಾಡೀತೆ ಎಂದು ಭಾವಿಸಿದರೆ ಅದರ ವಿರುದ್ಧವೂ ವ್ಯಾಪಕ ಹೋರಾಟಗಳು ನಡೆಯಲಿಲ್ಲ.ಅದರ ಅಗತ್ಯ ಯಾರಿಗೂ ಇರಲಿಲ್ಲ.ಆರ್ಟಿಕಲ್‌ 370 ಯಿಂದ ಮುಸ್ಲಿಂ ಸಹೋದರರು ಕಳೆದುಕೊಳ್ಳುವುದು ಏನನ್ನೂ?ನಷ್ಟವಾಗುವುದು ರಾಜಕೀಯ ಮುಖಂಡರಿಗೆ, ರಾಜಕೀಯ ಮುಖಂಡರನ್ನು ಅದಾಗಲೇ ಗೃಹ ಬಂಧನದಲ್ಲಿ ಇಡಲಾಗಿತ್ತು!ಮತ್ತ್ಹೇಗೆ?ಎನ್ಸಿ ಸಿ/ ಅರ್ಸಿ?

 

     ಯೆಸ್!‌ ದೇಶ ಹೊತ್ತಿ ಉರಿಯುತ್ತಿದೆ!

 

     ದೇಶದ ಮಹಾನಗರಗಳೆಲ್ಲಾ ಹೊತ್ತಿ ಉರಿದವು;ಸಾವು ನೋವು ಸಂಭವಿಸಿದವು;ದೇಶದ ರಾಜಧಾನಿ ದೆಹಲಿಯಲ್ಲೆ ಮೊನ್ನೆ ಟ್ರಂಪ್ಬಂದ ಕಾಲಕ್ಕೆ ಸಾವುಗಳು ಸಂಭವಿಸಿದವು,ದೇಶ ಹೊತ್ತಿ ಉರಿಯುತ್ತಲೇ ಇದೆ!

 

     ಖಾಯೇ,ಖಾನೆ ಧೂಂಗಾಮಂತ್ರ ಯಶಸ್ವಿಯಾಗಿದೆಯಾ?ಇಲ್ಲ.ಎಲ್ಲೆಲ್ಲೂ ಭ್ರಷ್ಟಾಚಾರ ತಾರಕಕ್ಕೇರಿದೆ.ರಾಮನ ಪಕ್ಷದ ಶಾಸಕರು ಸಮೃದ್ಧ ಮೇಜೂಟದಲ್ಲಿ ತೊಡಗಿದ್ದಾರೆ.ಕಾಮಗಾರಿಗಳ ಹಂಚಿಕೆಯಲ್ಲಿ ಪರ್ಸಂಟೇಜು,ಒಂದು ಶಾಸಕರ ಲೆಟರ್ಪಡೆಯಲು ಇಂತಿಷ್ಟು ಅಂತ ಕೊಡಲೇಬೇಕು.ಶಾಸಕ ಸುಲಭವಾಗಿ ಸಿಗುವುದಿಲ್ಲ.ಅಸಲು ದೇಶದಲ್ಲಿ ಪ್ರಭಾವಶಾಲಿ ಭ್ರಷ್ಟಾಚಾರ ತಡೆಯುವ ತನಿಖಾ ಸಂಸ್ಥೆಗಳೇ ಇಲ್ಲ.ಜನ ಸಾಮಾನ್ಯರಿಗೆ ಮಾಹಿತಿ ಮತ್ತು ದಾಖಲೆಗಳು ದೊರೆಯುತ್ತಿಲ್ಲ.ಕಳಪೆ ಕಾಮಗಾರಿಗಳು,ಕಾಮಗಾರಿಗಳನ್ನು ಮಾಡದೆ ಹಣ ಹೊಡೆಯುವ ಯತ್ನಗಳು ನಿರಾತಂಕವಾಗಿ ನಡೆದಿವೆ.ಮಾಹಿತಿ ಹಕ್ಕು ಕಾಯ್ದೆ ಸರ್ಕಾರದಲ್ಲಿ ಕೆಲಸ ಮಾಡುತ್ತಿಲ್ಲ.ಅದನ್ನು ವ್ಯವಸ್ಥಿತವಾಗಿ ದುರ್ಬಲ ಮಾಡಲಾಗಿದೆ.ಒಬ್ಬ ಗ್ರಾಮ ಪಂಚಾಯತಿ ಪಿಡಿಓ ಕೂಡಾ ಅದಕ್ಕೆ ಹೆದರುತ್ತಿಲ್ಲ.ಮಾಹಿತಿ ಆಯೋಗಕ್ಕೆ ಹೋಗತೀರಾ ಹೋಗಿ,ನೋಡಿಕೊಳ್ಳುತೇನೆ ಎನ್ನುತ್ತಾನೆ.ಲೋಕಾಯುಕ್ತಕ್ಕೆ ಸಲ್ಲಿಸಿದ ದೂರುಗಳು ವಿಚಾರಣೆಗೆ ಬರುತ್ತಿಲ್ಲ.

 

     ಹೀಗಾಗಿದೆ ನೋಡಿ ದೇಶ!ಆದರೂ ನಮ್ಮ ದೇಶ ಭವ್ಯ ದೇಶ,ಮೇರಾ ಭಾರತ್ಮಹಾನ್!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹೋರಾಟವೂ ಉದ್ದಿಮೆಯಾಗಿ ಹೋದ ಈ ಸಂಕೀರ್ಣ ಕಾಲಘಟ್ಟದ ಕುರಿತು

 ನೀವು ಪರೀಕ್ಷಿಸಿ ನೋಡಿ:ಲಕ್ಷಾಂತರ,ಕೋಟ್ಯಾಂತರ ಸಂಘಟನೆಗಳು ಹೋರಾಟಗಾರರು ಜನ್ಮತಳೆದಿದ್ದಾರೆ;ಅಷ್ಟೇ ಸಮಸ್ಯೆಗಳು ಹೆಚ್ಚಾಗುತ್ತಿವೆ.ಇವೆಲ್ಲವನ್ನೂ ವಿಶ್ಲೇಷಿಸಿ ನೋಡಿದಾಗ ಎ...