ಕಳೆದ ವರ್ಷ ಬರೆದಿದ್ದು,ತೆಲುಗು ಲೇಖನವೊಂದು ಕುತೂಹಲಕಾರಿ ಅನ್ನಿಸಿ ಅನುವಾದಿಸಿದೆ.ಓದಿಕೊಳ್ಳಿ:
ಟಿಪ್ಪುವಿನ ಕುರಿತು ನನ್ನ ಬೆಳಗಿನ ಅನುವಾದದ ಸ್ಪಷ್ಟೀಕರಣ
ಬೆಳಿಗ್ಗೆ ಏನೋ ಬರೆಯಬೇಕು ಅಂದಕೊಂಡೆ.ಸ್ಪೂರ್ತಿ ಹುಟ್ಟಲಿಲ್ಲ.ಮನೆಯಲಿದ್ದರೆ ಎದೆ ಭಾರದ ಹೊರತು ಅಕ್ಷರಗಳು ಮೂಡುವುದಿಲ್ಲ.ಲಹರಿ ಬಾರದೆ ನಾನು ಏನನ್ನೂ ಬರೆಯಲಾರೆ.ಹಾಗೆ ಏನನ್ನಾದರು ಬರೆಯಬೇಕು ಎಂದರೆ ನಾನು ಮನೆ ಆಚೆ ಬರಲೇಬೇಕು.ಏನು ಬರೆಯಬೇಕು?ಬೆರಳ ತುರಿತ ಅಧಿಕವಾಯಿತು.ಆಗ ಕಂಡಿದ್ದೆ ವಿಶ್ವನಾದುಲಾಚಾರ್ಯರ ಒಂದು ಲೇಖನ,ಅವರು ತೆಲಗು ಲೇಖಕರು. ಇತಿಹಾಸದ ಕುರಿತಂತೆ ಅವರ ಬರಹಗಳು ಸತ್ಯಕ್ಕೆ ಹತ್ತಿರ ಇರುತ್ತವೆ.ಇತಿಹಾಸಕ್ಕೆ ಸಂಬಂಧಿಸಿದಂತೆ ಅವರು ಹಲವು ಲೇಖನಗಳನ್ನು ಬರೆಯುತ್ತಿರುತ್ತಾರೆ.ಅದರಲ್ಲಿ ನನಗಿಷ್ಟವಾಗುವ ಲೇಖನಗಳನ್ನು ಆಗಾಗ ಕನ್ನಡಕ್ಕೆ ಅನುವಾದ ಮಾಡುತ್ತಲೇ ಬಂದಿದ್ದೇನೆ.ಈ ಅನುವಾದ ಎನ್ನುವುದು ನನ್ನದೊಂದು ಖಯಾಲಿ,ಅಥವಾ ಚಟ!ತಲೆ ಖಾಲಿ ಇದ್ದಾಗ ನಾನಾ ಕೆಲಸವನ್ನು ಮಾಡುತ್ತೇನೆ.
ಇಂದು ಬೆಳಿಗ್ಗೆ ಕಣ್ಣಿಗೆ ಬಿದ್ದಿದ್ದು ಟಿಪ್ಪುವಿನ ಕುರಿತು ಲೇಖನ.ಅರೆ,ಟಿಪ್ಪುವಿನ ಕುರಿತು ಆಂದ್ರದಲ್ಲೂ ಗಲಭೆ ಗೊಂದಲಗಳಿವೆಯಾ ಎಂದು ಕುತೂಹಲ ಮೂಡಿತು.ಇತ್ತ ಕೇರಳಿಗರು ಆತನೆಂದರೆ ಕೆರಳುತ್ತಾರೆ.ಇತ್ತೀಚಿನ ದಿನಗಳಲ್ಲಿ ಟಿಪ್ಪು ಒಂದು ನಕಾರಾತ್ಮಕ ಪಾತ್ರವಾಗಿ ಸಾಮಾಜಿಕ ಶಾಂತಿ ಕದಡುವ ಒಂದು ಘಟನೆಯಾಗಿ ನಾಡನ್ನು ಕಾಡಿತು.ಚುನಾವಣೆ ರಾಜಕೀಯಕ್ಕೋ ಮತ್ತಾವುದೋ ಸ್ವಾರ್ಥಕ್ಕೊ ಯಾವ ಪ್ರಸ್ತಾವನೆಯೂ ಇಲ್ಲದ ಇಸ್ಲಾಂ ಧರ್ಮ ಒಪ್ಪದ ಜಯಂತಿಯನ್ನು ನಮ್ಮ ಸಿದ್ದರಾಮಯ್ಯನವರು ತಂದು ಬಿಟ್ಟರು.ಅಲ್ಲಿಂದ ಟಿಪ್ಪುವಿನ ಸ್ವರೂಪವೇ ಬದಲಾಯಿತು.ಇತಿಹಾಸ ವಿಲಕ್ಷಣ ನರ್ತನಗೈಯಿತು.ಟಿಪ್ಪು ಹಲವು ಆರೋಪ,ಹಲವು ರೂಪಗಳಿಂದ ಪ್ರತ್ಯಕ್ಷನಾದ.ಟಿಪ್ಪುವಿನನ್ನು ದೇಶಪ್ರೇಮಿ ಎಂದರು;ರಾಕ್ಷಸ ಎಂದರು;ಮತೋನ್ಮಾದಿ ಎಂದರು;ಟಿಪ್ಪುವಿನ ಕುರಿತು ಪುಂಖಾನುಪುಂಖವಾಗಿ ಲೇಖನಗಳು,ಪುಸ್ತಕಗಳು ಬಂದವು.ಸ್ಪರ್ಧೆಗೆ ಬಿದ್ದಂತೆ ಎಡ ಬಲ ವಾದಗಳು ಮಂಡನೆಯಾದವು.ಕೆಲವು ಕಡೆ ರಕ್ತಪಾತಗಳೂ ನಡೆದವು.ಟಿಪ್ಪು ವಿವಿಧ ರೀತಿಯಲ್ಲಿ ತನ್ನ ಜಯಂತಿಯನ್ನು ಆಚರಿಸಿಕೊಂಡ!fine!ಅನುವಾದ ಮಾಡತೊಡಗಿದೆ.
ಆ ತೆಲುಗು ಲೇಖನವೂ ಟಿಪ್ಪುವಿನನ್ನು ಕ್ರೂರಿಯನ್ನಾಗಿ ಬಿಂಬಿಸಿತು.unfortunately ನಾನದನ್ನು ಶೇರ್ ಮಾಡಿದೆ.ಕೆಲವು ಮುಸ್ಲಿಂ ಸ್ನೇಹಿತರು ನೊಂದುಕೊಂಡರು,ನಾನು ಜಾತಿವಾದಿ ಧರ್ಮವಾದಿ,ಇಸ್ಲಾಂ ವಿರೋಧಿ ಎನ್ನುವಂತೆ ಕೆಲವು ಟೀಕೆ ಟಿಪ್ಪಣಿಗಳು ಬಂದವು.ನಾನು ಯಾವುದೂ ಅಲ್ಲ.ಟಿಪ್ಪುವಿನ ಬಗ್ಗೆ ನನಗೇನು ಗೊತ್ತಿಲ್ಲ.ಟಿಪ್ಪುವಿನ ಕುರಿತು ಓದಿಲ್ಲ.ಯಾವಾಗಲೋ ಬಾಲ್ಯ ಕಾಲದಲ್ಲಿ ಒಂದು ಪಾಠ ಇದ್ದದ್ದು ನೆನಪು.ಟಿಪ್ಪುವಿನನ್ನು ಮೇಷ್ಟ್ರು ಮೈಸೂರು ಹುಲಿ ಎಂದು ಹೇಳಿದ್ದು ನೆನಪು,ಹುಲಿಯನ್ನು ಸೀಳುತ್ತಿರುವ ಫೋಟದ ನೆನಪು.ಅಷ್ಟು ಬಿಟ್ಟರೆ ನನಗೇನು ಗೊತ್ತಿಲ್ಲ.
ಇನ್ನು ಸ್ವಾತಂತ್ರ್ಯದ ವಿಷಯಕ್ಕೆ ಬರುವುದಾದರೆ ಅದರ ಕಾವು ಏರಿದ್ದು ಹತ್ತೊಂಬತ್ತನೆಯ ಶತಮಾನದಲ್ಲಿ. ೧೮೫೭ರಲ್ಲಿ ಸ್ವಾತಂತ್ರ್ಯದ ಮೊದಲ ಕಿಡಿ ಹತ್ತಿತಾದರೂ ಅದು ಸ್ವಾತಂತ್ರ್ಯದ ಸ್ವರೂಪವನ್ನು ಹೊಂದಿರಲಿಲ್ಲ.ದನದ ಕೊಬ್ಬಿನಿಂದ ಮತ ಕಲಹ ಸೃಷ್ಟಿಸುವ ಇಂಗ್ಲಿಷ್ ಕುತಂತ್ರದಿಂದ ಹುಟ್ಟಿದ ಸಿಪಾಯಿ ದಂಗೆ ಅದು.ಭಾರತವನ್ನು ಇಡಿ ಇಡಿಯಾಗಿ ಬ್ರಿಟೀಷರು ಆಕ್ರಮಿಸಿಕೊಂಡ ಮೇಲೆ ಬದುಕಲಿಕ್ಕೆ ತೀರಾ ಕಷ್ಟ ಅನ್ನಿಸಿದಾಗಲೇ ಇಲ್ಲಿನ ಸಂಸ್ಥಾನಗಳ ರಾಜರ ಅಂಡು ಉರಿದಿದ್ದು.ಇದಕ್ಕೂ ಮುನ್ನ ಬ್ರಿಟಿಷರ ವಿರುದ್ಧ ಯಾರೂ ಧ್ವನಿ ಎತ್ತಿರಲಿಲ್ಲ;ಬ್ರಿಟಿಷರ ಆಮಿಷಕ್ಕೆ ನೆರೆಯ ದೊರೆಗಳನ್ನು ಬ್ರಿಟಿಷರೊಂದಿಗೆ ಕೈಗೂಡಿಸಿ ಷಡ್ಯಂತ್ರ ಮಾಡಿ ನಾಶ ಮಾಡಿದ್ದೆ ಹೆಚ್ಚು.ಬ್ರಿಟಿಷರು ಭಾರತದ ಮುಗ್ದ ನಾಗರಿಕರಿಗೆ ಏನನ್ನೂ ಮಾಡಲಿಲ್ಲ.ಸಂಸ್ಥಾನಗಳನ್ನು ವಶ ಮಾಡಿಕೊಳ್ಳುತ್ತಾ,ತಮ್ಮ ವ್ಯಾಪಾರವನ್ನು ವೃದ್ಧಿಸುತ್ತಾ ಹೋದರು.ಅದರ ಜೊತೆಗೆ ಸಾರಿಗೆ ವ್ಯವಸ್ಥೆ ಮತ್ತು ಶಿಕ್ಷಣವನ್ನೂ ತಂದರು.ಆಳುವವನು ಮಾಡಬೇಕಾದ ಕೆಲಸವನ್ನು ಮಾಡಲೇಬೇಕಿತ್ತು.ಅದು ಬ್ರಿಟೀಷರಾದರೇನು,ಈ ದೇಶದ ರಾಜರಾದರೇನು?ಭಾರತವೆನ್ನುವ ಭೌಗೋಳಿಕ ಚೌಕಟ್ಟಿನ ಒಳಗಿನ ಹಲವು ದೇಶಗಳು ಬ್ರಿಟಿಷರ ಪಾಲಾದ ಮೇಲೆಯೇ ಬ್ರಿಟಿಷರ ವಿರುದ್ಧ ದಂಗೆಗಳು,ಹೋರಾಟಗಳು,ಸ್ವಾತಂತ್ರ್ಯದ ಹೆಸರಿನಲ್ಲಿ ಕಗ್ಗೊಲೆಗಳು ಮೊದಲಾದವು.ಅವುಗಳ ಪೈಕಿ ಮುಂಚೂಣಿಯ ಹೆಸರುಗಳೆ ರಾಜಾ ವೆಂಕಟಪ್ಪ ನಾಯಕ,ಶಿವಾಜಿ,ಝಾನ್ಸಿ ರಾಣಿ ಲಕ್ಷ್ಮೀಬಾಯಿ,ಇದಕ್ಕೂ ಮುನ್ನ ಟಿಪ್ಪುಸುಲ್ತಾನ...ಹೀಗೆ.
ನನ್ನ ಕಟ್ಟ ಕಡೆಯ ಪ್ರಶ್ನೆ ಎಂದರೆ ಇವರೆಲ್ಲಾ ಹೇಗೆ ದೇಶಪ್ರೇಮಿ ಹೋರಾಟಗಾರರಾಗುತ್ತಾರೆ,ದೇಶ ಎನ್ನುವ ಪರಿಕಲ್ಪನೆ ಇಲ್ಲದ ಹೊತ್ತಿನಲ್ಲಿ?
ಆಗಿನ ಯುದ್ಧಗಳ ಉದ್ದೇಶ ಲೂಟಿ,ಲೂಟಿ,ಲೂಟಿ!ಹಣವನ್ನು ಲೂಟಿ ಮಾಡುವುದು,ದವಸ ಧಾನ್ಯಗಳನ್ನು ಲೂಟಿ ಮಾಡುವುದು,ಸುಂದರವಾದ ಹೆಂಗಸರನ್ನು ಲೂಟಿ ಮಾಡುವುದು;ಅಂತಿಮವಾಗಿ ಲೂಟಿ ಮಾಡುವುದು.ಆಗಿನ ಅಲ್ಪಸ್ವಲ್ಪ ಜನ ಸಂಖ್ಯೆಯ ಗುಡ್ಡ ಗಾಡಿನ ಮೇಲೆ ಕೋಟೆ ಕಟ್ಟಿಕೊಂಡು ರಾಜರೆಂದುಕೊಂಡ ಜನ ಲೂಟಿಕೋರರೆ!
ಯಾರು ದೇಶಭಕ್ತರು,ಯಾರು ಹೋರಾಟಗಾರರು,ಯಾರು ಸ್ವಾತಂತ್ರ್ಯ ಆಕಾಂಕ್ಷೆಗಳು?
ಮೈಡಿಯರ್ ಫ್ರೆಂಡ್ಸ್,ಬೆಳಗಿನ ನನ್ನ ಅನುವಾದ ನನ್ನ curiosityಗೆ ಬರೆದಿದ್ದು.ಅದರ ಹಿಂದೆ ದ್ವೇಷವಿಲ್ಲ.ನನಗೆ ಹಿಂದೂ ಬೇಕಿಲ್ಲ.ಮುಸ್ಲಿಂ ಬೇಕಿಲ್ಲ.
ಬೇಕಿರುವುದು ಸ್ವಸ್ಥ ಸಮಾಜ,ಸ್ನೇಹಮಯವಾದ ಸಮಾಜ,ಮಾನವೀಯ ಮೌಲ್ಯಗಳ ಒಂದು ಅದ್ಬುತ ಸಮಾಜ.
ಅಷ್ಟೇ..
ಇತಿಹಾಸಕ್ಕೆ ನಾನಾ ಮಗ್ಗಲುಗಳು ಇರುತ್ತವೆ,ಅದರ ಒಂದು ಭಾಗ ಇದು.ಇದನ್ನು ಸತ್ಯ ಎಂದು ದೃಢೀಕರಿಸಲಾರೆ.ಸುಮ್ಮನೆ ಓದಿ.ಇದು ತೆಲುಗು ಲೇಖಕರೊಬ್ಬರ ಬರಹ,ನಾನು ಯಥಾರೀತಿ ಅನುವಾದಿಸಿದ್ದೇನಷ್ಟೆ.ಟಿಪ್ಪುವಿನ ಕುರಿತು,ಭಾರತದ ನೈಜ ಇತಿಹಾಸದ ಕುರಿತು ನಾನಿನ್ನೂ ಓದಬೇಕಿದೆ.ವಾದ-ವಿವಾದ-ಟೀಕೆಗಳು ಬೇಡ.
ಟಿಪ್ಪು ಭಕ್ತರಿಗೊಂದು ಸಂದೇಶ
ಓಪ್ಪು ಸುಲ್ತಾನನ ಕಡು ಘೋರ ಕೃತ್ಯಗಳು...ಇಂಥಹ ನೀಚನಿಗೆ ಜಯಂತಿ ಮತ್ತು ಉತ್ಸವಗಳನ್ನು ನಡೆಸುವ ನಡೆಸುತ್ತಿರುವವರನ್ನು ದೇಶದ್ರೋಹಿಗಳು ಎನ್ನಬೇಕೋ ಏನನ್ನಬೇಕೋ?ಅವನು ನಡೆಸಿದ ಕ್ರೂರಕೃತ್ಯಗಳನ್ನು ಒಂದು ಸಾರಿ ನೋಡೋಣ:
1)ಕಿತ್ತೂರ ಚೆನ್ನಮ್ಮಾ ರಾಜ್ಯದಲ್ಲಿ ಮತಾಂತರಗೊಳ್ಳದ ನಲವತ್ತು ಸಾವಿರ ಜನರ ತಲೆಗಳನ್ನು ಕಡಿಸಿದ್ದಾನೆ.
2)ಕೇರಳದಲ್ಲಿ ಮತಾಂತರವಾಗದ ಹತ್ತು ಸಾವಿರ ಬ್ರಾಹ್ಮಣರಿಗೆ ಬಲವಂತವಾಗಿ ಸುನ್ನಿ ಮಾಡಿಸಿದ್ದಾನೆ.
3)ಹಿಂದೂ ಸ್ತ್ರೀಯರನ್ನು ಸಾಕಷ್ಟು ಅನುಭವಿಸಿ ನಂತರ ಸೈನಿಕರಿಗೆ ಅನುಭವಿಸಲು ಬಹುಮಾನವಾಗಿ ನೀಡುತ್ತಿದ್ದ.
4)ಇಪ್ಪತ್ತು ವರ್ಷಗಳ ಯುವಕರ ಬೀಜಗಳನ್ನು ತೆಗೆದು ನಪುಂಸಕರನ್ನಾಗಿಸುವ ವಿಲಕ್ಷಣ ಖಯಾಲಿ ಅವನಿಗಿತ್ತು.ಸಲಿಂಗಿ ಕಾಮಿ ಅವನು.
5)ಕರ್ನಾಟಕದ ಕೊಡುಗು ಹಿಂದುಗಳನ್ನು ಕತ್ತು ಕೊಯ್ದು ಕೊಂದಿದ್ದಾನೆ.
6)ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು ಟಿಪ್ಪುವಿನ ತಂದೆ ಹೈದರಾಲಿ ಲೂಟಿ ಮಾಡಿದ್ದಾನೆ.
7)ಕೊಡುಗು ಹಿಂದೂ ಸ್ತ್ರೀಯರ ಅಂಗಾಂಗಳನ್ನು ಕತ್ತರಿಸಿದನು ಟಿಪ್ಪು ಸುಲ್ತಾನ್
8)ಕೈಗಳನ್ನು ಮೇಲಕ್ಕೆತ್ತಿಸಿ ಕುಂಕಳ ಕೂದಲು ಕಾಣಿಸದ ಪ್ರತಿ ಹಿಂದೂ ಬಾಲಕರನ್ನು ಕೊಂದ ಪರಮ ದುರ್ಮಾಗಿ ಈ ಟಿಪ್ಪು.
9)ಕರ್ನಾಟಕ ರಾಜ್ಯದಲ್ಲಿ ಮೇಲುಕೋಟೆ ಪ್ರಾಂತ್ಯದಲ್ಲಿ ಪವಿತ್ರವಾದ ದೀಪಾವಳಿ ಹಬ್ಬದ ದಿನ 800 ಮಂದಿ ವೇದ ಪಂಡೀತರನ್ನು,ಚಿಕ್ಕ ಮಕ್ಕಳನ್ನು,ಮಹಿಳೆಯರನ್ನು,ಅತ್ಯಂತ ದಾರುಣವಾಗಿ ಕುತ್ತಿಗೆಯ ನಾಳ ಕತ್ತರಿಸಿ ಹತ್ಯ ಮಾಡಿದ್ದಾನೆ ಟಿಪ್ಪು ಸುಲ್ತಾನ,ಇದಕ್ಕೆ ನಿದರ್ಶನವಾಗಿ ಮೇಲುಕೋಟೆ ಪ್ರಾಂತ್ಯದಲ್ಲಿ ಹಿಂದುಗಳು ದೀಪಾವಳಿ ಹಬ್ಬವನ್ನು ಆಚರಿಸುವುದಿಲ್ಲ.ಅದೊಂದು ಕರಾಳ ನೆನಪಾಗಿ ಉಳಿದಿದೆ.ಕರ್ನಾಟಕ,ಕೇರಳ ಪ್ರಾಂತ್ಯಗಳಲ್ಲಿ ಸರಾಸರಿ ಲಕ್ಕಕ್ಕೂ ಮೇಲ್ಪಟ್ಟು ಅಮಾಯಕ ಹಿಂದುಗಳನ್ನು ಅತ್ಯಂತ ದಾರುಣವಾಗಿ ಕ್ರೂರವಾಗಿ ಹತ್ಯೆಗಳನ್ನು ಮಾಡಿದ್ದಾನೆ ಮುಸ್ಲಿಂ ಮತೋನ್ಮಾದಿ ಟಿಪ್ಪು ಸುಲ್ತಾನ್ ಸಾವಿರಾರು ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿ ದೇವಸ್ಥಾನಗಳಲ್ಲಿರುವ ಸಂಪತ್ತು ಮತ್ತು ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾನೆ. ಮತ್ತು ಅವುಗಳನ್ನು ಮಸೀದಿಯನ್ನಾಗಿ ಮಾರ್ಪಡಿಸಿದ್ದಾನೆ.
ಇತಿಹಾಸವನ್ನು ಹಿಂದೂ ವ್ಯತಿರೇಕವಾಗಿಬರೆದ ಕೆಲ ಸಂಘಟನೆಗಳಿಗೆ ಟಿಪ್ಪು ಚರಿತ್ರೆ ಬಹುದೊಡ್ಡ ಉದಾಹರಣೆಯಾಗಿದೆ.ಟಿವಿಯಲ್ಲಿ ಬರುವ ಧಾರಾವಾಹಿಯನ್ನು ನೋಡಿದ ಜನ ಟಿಪ್ಪು ಸುಲ್ತಾನನ್ನು ದೊಡ್ಡ ದೇಶಭಕ್ತನನ್ನಾಗಿ,ಕರುಣಾಳು ದೊರೆಯನ್ನಾಗಿ ಭಾವಿಸುತ್ತಾರೆ.ಜಾತ್ಯಾತೀತವಾದಿಗಳು ಜನರನ್ನು ಆ ಭ್ರಮೆಯೊಳಗೆ ಮುಳುಗಿಸಿದ್ದಾರೆ.ಟಿಪ್ಪುವಿನ ಕತ್ತಿಯ ಮೇಲೆ ಏನು ಬರೆಯಲಾಗಿದೆಯೋ ಒಂದು ಸಾರಿ ಓದಿರಿ: “ಕಾಫೀರರನ್ನು ಅಟ್ಟಾಡಿಸಿ ಕೊಂದ ಮುಸ್ಲಿಂ ವೀರ”ಅಂತ ಬರೆದಿದೆ!(ಕಾಫೀರರು ಎಂದರೆ ಇಸ್ಲಾಂ ಭಾಷೆಯಲ್ಲಿ ಹಿಂದುಗಳು ಅಂತ ಅರ್ಥ)
(ಟಿಪ್ಪುವಿನ ಹತ್ತಿರ ಹಿಂದೂ ಮಂತ್ರಿ ಹೇಗೆ ಕೆಲಸ ಮಾಡಿದ್ದಾರೋ ಎನ್ನುವುದನ್ನು ಕೇಳುವವರು ಒಂದು ಸಲ ಪಿ.ಚಿದಂಬರಂ,ಡಿಗ್ಗಿ ರಾಜಾನನ್ನು ಕೇಳಿರಿ,ಇಟಲಿ ಪರವಾರದಲ್ಲಿ ಅವರೇಗೆ ಕೆಲಸ ಮಾಡುತ್ತಾರೆ ಅವರಿಗೆ ಚೆನ್ನಾಗಿ ಗೊತ್ತು.ಕುತರ್ಕಿಗಳು ಎಲ್ಲಾ ಕಾಲಗಳಲ್ಲೂ ಇರುತ್ತಾರೆ)
ಲಕ್ಷ್ಮೀಕಾಂತ ನಾಯಕ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ