ಶನಿವಾರ, ಮಾರ್ಚ್ 14, 2020

*ಇತಿಹಾಸದ ಕೆಲವು ಸುಳ್ಳುಗಳ ಕುರಿತು ಒಂದು ನೋಟ!*


*ಇತಿಹಾಸದ ಕೆಲವು ಸುಳ್ಳುಗಳ ಕುರಿತು ಒಂದು ನೋಟ!*

1901ರಿಂದ ಲೆಖ್ಖ ಆರಂಭಿಸೋಣ;ದೇಶದ ಜನ ಸಂಖ್ಯೆಗೆ ಕುರಿತಂತೆ.ಸದ್ಯಕ್ಕಿದು ಬಹು ಮುಖ್ಯವಾದದ್ದು. ಲೆಖ್ಖ ನಮ್ಮ ಕೆಲವು ಮಿಥ್ಯೆಗಳನ್ನು ದೂರ ಮಾಡಬಹುದು ಎನ್ನುವುದು ನನ್ನ ಲೆಖ್ಖಾಚಾರ. ಮಿಥ್ಯೆಗಳು ಯಾವು ಎನ್ನುವುದರ ವಿಚಾರಕ್ಕೆ ನಂತರ ಬರೋಣ.1901 ಸೆನ್ಸಸ್ಪ್ರಕಾರ ಭಾರತದ ಜನ ಸಂಖ್ಯೆ ಕೇವಲ 23ಕೋಟಿ.ಆಗಿದು ಬ್ರಿಟೀಷ್ಭಾರತ.ಬ್ರಿಟಿಷ್ಭಾರತ ಬ್ರಿಟೀಷರಿಂದ ಮುಕ್ತವಾದದ್ದು 1947 ಆಗಷ್ಟ್‌ 15ನೆಯ ತಾರೀಖು ಮಧ್ಯೆ ರಾತ್ರಿ ಎನ್ನುವುದು ನಮಗೆಲ್ಲಾ ಗೊತ್ತಿದೆ.ಬ್ರಿಟೀಷರು ಭಾರತವನ್ನು ಬಿಟ್ಟು ಹೊರಟಾಗ ಇದರ ಜನ ಸಂಖ್ಯೆ 31 ಕೋಟಿ.ಜನ ಸಂಖ್ಯೆ ಹೇಗೆ ಹೆಚ್ಚಳವಾಗುತ್ತಾ ಬಂದಿದೆ ಒಮ್ಮೆ ನೋಡೋಣ:1901 ರಲ್ಲಿ 23 ಕೋಟಿ ಇದ್ದ ಜನ ಸಂಖ್ಯೆ 1911 ಹೊತ್ತಿಗೆ 25ಕೋಟಿ.ಅಂದರೆ ಹತ್ತು ವರ್ಷದಲ್ಲಿ ಪಾಪ್ಯುಲೇಷನ್ಏರಿಕೆ ಕಂಡಿದ್ದು ಎರಡು ಕೋಟಿ.1921 ರಲ್ಲಿ ಕೇವಲ ಒಂದು ಪರ್ಸೆಂಟ್ಏರಿಕೆ ತೋರಿಸುತ್ತಿದೆ.ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಜನ ಸಂಖ್ಯಾ ಹೆಚ್ಚಳದ ಪರ್ಸಂಟೇಜ್ಹೆಚ್ಚಾಗುತ್ತಾ ಬಂದಿದೆ.2001 ಸೆನ್ಸಸ್ಹೊತ್ತಿಗೆ ಭಾರತದ ಜನ ಸಂಖ್ಯೆ 128 ಕೋಟಿ.ಸದ್ಯಕ್ಕೀಗ 135 ಕೋಟಿ ಎಂದು ಘೋಷಿಸಲಾಗಿದೆ. ಜನ ಸಂಖ್ಯೆಯ ಹೆಚ್ಚಳ ದೇಶದ ಅಭಿವೃದ್ಧಿಗೆ ಮಾರಕವಾ ಅಥವಾ ಪೂರಕವಾ ಎನ್ನುವುದು ನಂತರದ ವಿಷಯ.ಭಾರತವನ್ನು ವಿಶ್ವದ ಏಳನೇ ಅತಿದೊಡ್ಡ ದೇಶ ಎಂದು ಕರೆಯಲಾಗುತ್ತದೆ.ಭಾರತದ ಒಟ್ಟು ಭೂ ವಿಸ್ತೀರ್ಣ 32287263 ಚದರ ಅಡಿಗಳು.ಫೈನ್!‌ಇಷ್ಟೊಂದು ದೊಡ್ಡ ಮೊತ್ತದ ಭೂ ವಿಸ್ತೀರ್ಣತೆಯನ್ನು ಹೊಂದಿದ ಭಾರತದ ಕ್ರಿ..1100 ಜನ ಸಂಖ್ಯೆ 7 ಕೋಟಿ ಮಾತ್ರ.
ಇನ್ನು ಇತಿಹಾಸ ಮಿಥ್ಯೆಗಳ ಕಡೆಗೆ ಬರೋಣ.ರಾಮಾಯಣ ಮಾಹಾಭಾರತಗಳು ಭಾರತದ ಭೂಭಾಗದಲ್ಲಿ ನಡೆದ ನೈಜ ಕಥೆಗಳು ಎಂದು ಹೇಳಲಾಗುತ್ತದೆ.ಇದಕ್ಕೆ ಸಂಬಂಧಿಸಿದಂತೆ ಶಾಸನಗಳು ಮತ್ತಿತರ ಪುರಾವೆಗಳು ಇತಿಹಾಸದಲ್ಲಿ ದಾಖಲಾಗಿಲ್ಲ ಎನ್ನುವುದು ಬೇರೆ ಮಾತು.ಇವತ್ತಿಗೂ ಇತಿಹಾಸಕಾರರು ಕುರಿತು ತಿಣುಕುತ್ತಲೇ ಇದ್ದಾರೆ.ಬುದ್ಧನು,ಬಸವನು,ಕ್ರಿಸ್ತನು ಜನಿಸಿದ್ದಕ್ಕೆ ಭೂಮಿಯ ಮೇಲೆ ಬದುಕಿದ್ದಕ್ಕೆ ಅನೇಕ ಪುರಾವೆಗಳಿವೆ.ಅವರೆ ಬರೆದ ಗ್ರಂಥಗಳು,ಅವರ ಪ್ರತಿಪಾದನೆಗಳು ಇನ್ನೂ ಜೀವಂತ ಇವೆ.ರಾಮ ಮತ್ತು ಕೃಷ್ಣರ ಜೀವಂತಿಕೆಗೆ ಸಂಬಂಧಿಸಿದಂತೆ ಯಾವ ಆಧಾರಗಳೂ ಸಿಗುತ್ತಿಲ್ಲ.ಭಾರತದ ಶಿಲ್ಪಕಲೆಯನ್ನು ಅಮೂಲಾಗ್ರವಾಗಿ ಪರಿಶೀಲಿಸಲಾಗಿ ನಮಗೆ ಅತ್ಯಂತ ಹೇರಳವಾದ ರೀತಿಯಲ್ಲಿ ರಾಮಾಯಣದ ಮತ್ತು ಮಾಹಾ ಭಾರತದ ಕೆತ್ತನೆಗಳು ಸಿಗುತ್ತವೆ.ದೇಶದ ಉದ್ದಗಲಕ್ಕೂ ಸಿಗುತ್ತವೆ. ಶಿಲ್ಪಗಳನ್ನು ಅದರ ಪ್ರಾಚೀನತೆಯನ್ನು ಸಂಶೋಧಿಸಲಾಗಿ ಅವು ಕ್ರಿಸ್ತ ಪೂರ್ವದ ಕಾಲ ಮಾನದ ಶಿಲ್ಪಗಳು ಎಂದು ದೃಢವಾಗಿವೆ.ಹಾಗಾದರೆ ರಾಮಾಯಣ ರಚಿತವಾದದ್ದು ಯಾವ ಕಾಲದಲ್ಲಿ ಎನ್ನುವ ಪ್ರಶ್ನೆ ಮೂಡುತ್ತದೆ.ಕ್ರಿಸ್ತ ಶಕೆ 1100 ನೆಯ ಶತಮಾನದಲ್ಲಿ ಏಳು ಕೋಟಿಯಷ್ಟಿದ್ದ ಜನ ಸಂಖ್ಯೆ ಸತ್ಯಯುಗ,ತ್ರೇತಾಯುಗ,ದ್ವಾಪರಯುಗಗಳ ಕಾಲದಲ್ಲಿ ಎಷ್ಟಿತ್ತು ಎನ್ನುವುದು ಮುಖ್ಯೆ ಪ್ರಶ್ನೆ.
ಹಿಂದೂ ತತ್ವಶಾಸ್ತ್ರದ ಪ್ರಕಾರ ಒಂದು ನಾಲ್ಕು ಅವದಿಯ ಚಕ್ರದಲ್ಲಿ ಒಂದು  ಶಕ,ಪರ್ವ ಎಂದು ಕರೆಯಲಾಗುತ್ತದೆ.ಇದೇ ಶಾಸ್ತ್ರದಲ್ಲಿ ಸತ್ಯಯುಕ ಅಥವಾ ಕೃತಯುಗದ ಅವದಿಯನ್ನು 172800 ಎಂದು ಹೇಳಲಾಗಿದೆ.ಅದು ಪ್ರಜೆಗಳನ್ನು ದೇವರು ನೇರವಾಗಿ ಆಳುವ ಕಾಲವಾಗಿತ್ತು ಎಂದು ಹೇಳಲಾಗುತ್ತಿದೆ. ಯುಗದಲ್ಲಿ ಮನುಷ್ಯರ ಸರಾಸರಿ ಉದ್ದ 21 ಮೊಳವಾಗಿತ್ತಂತೆ!ಆಗ ಮನುಷ್ಯನ ಆಯಷ್ಯು ಒಂದು ಲಕ್ಷ ವರ್ಷಗಳಾಗಿದ್ದವಂತೆ!ಬ್ರಹ್ಮನ ಒಂದು ಹಗಲು ಮತ್ತು ರಾತ್ರಿಯ ಕಾಲಮಾನ 311 ಟ್ರಿಲಿಯನ್ಮತ್ತು 40 ಬಿಲಿಯನ್ವರ್ಷಗಳಂತೆ!!ಆದಾದ ನಂತರ ತ್ರೇತಾಯುಗ ಬಂತು;ಅದೇ ರಾಮ ಇದ್ದನು ಎನ್ನುವ ಕಾಲ! ಯುಗದಲ್ಲಿ ಮನುಷ್ಯನ ಆಯಷ್ಯು 10000 ವರ್ಷಗಳಂತೆ,ಆಗ ಮನುಷ್ಯನ ಅಳತೆ 14 ಮೊಳವಾಗಿತ್ತಂತೆ!ಇನ್ನು ದ್ವಾಪರಯುಗದ ಕಥೆಗೆ ಬಂದರೆ ಮನುಷ್ಯನ ಆಯಷ್ಯು 1000 ವರ್ಷಗಳಾಗುತ್ತವೆ ಮತ್ತು ಆತನ ಅಳತೆ 7 ಏಳು ಮೊಳಗಳಾಗುತ್ತದೆ.ಸದ್ಯ ಕಲಿಯುಗ;ಮನುಷ್ಯನ ಆಯಷ್ಯು 100 ವರ್ಷಗಳು,ಮೂರುವರೆ ಮೊಳವಿದ್ದಾನಂತೆ ಮನುಷ್ಯ!
ಯುಗ ಚರಿತ್ರೆಗಳು ಯುಗಗಳು ಸಂಪೂರ್ಣವಾಗಿ ಜಲಮಯವಾಗಿ ನಾಶವಾದ ಮೇಲೆ ಮುಂದಿನ ಯುಗಕ್ಕೆ ತಲುಪಿಸಿದವರು ಯಾರು ಎನ್ನುವುದು ಯಕ್ಷಪ್ರಶ್ನೆ!ಅದರ ಬಗ್ಗೆ ಯೋಚಿಸುವುದು ಬೇಡ,ಏಕೆಂದರೆ...
ವಿಜ್ಞಾನ ಹೇಳುತ್ತದೆ:370 ಕೋಟಿ ವರ್ಷಗಳ ಹಿಂದೆಯೇ ಭೂಮಿಯ ಮೇಲೆ ಜೀವ ಅಸ್ತಿತ್ವ ಇತ್ತು ಎಂದು ಹೇಳುತ್ತದೆ.ಭೂಮಿಯೂ 370 ಕೋಟಿ ವರ್ಷಗಳ ಹಿಂದೆಯೇ ಜೀವ ಪೋಷಕವಾಗಿತ್ತೇ ಎನ್ನುವ ಪ್ರಶ್ನೆಗೆ ವಿಜ್ಞಾನ ಇತ್ತು ಎನ್ನುವ ಉತ್ತರ ನೀಡುತ್ತದೆ.370 ಕೋಟಿ ವರ್ಷಗಳ ಹಿಂದಿನ ಸ್ಟ್ರೊಮಾಟೊಲೈಟ್ಪಳೆಯುಳಿಕೆಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಕಾಲದಲ್ಲಿ ಭೂಮಿಯ ಮೇಲೆ ಜೀವಿಗಳು ಇದ್ದವು ಎನ್ನುವ ವಾದಕ್ಕೆ ಪುರಾವೆಗಳಾಗಿ ಅವು ನಿಂತಿವೆ.ವೊಲ್ಲಾಂಗಾಂಗ್ವಿಶ್ವವಿದ್ಯಾಲಯದ ಹಳೆಯ ಪಳುವಳಿಕೆಗಳ ಪತ್ತೆ ಮತ್ತು ಸಂಶೋಧನೆಯ ನೇತೃತ್ವವಹಿಸಿದ್ದ ಅಲೆನ್ನೆಟ್ಮನ್ಪಶ್ಚಿಮ ಆಸ್ಟ್ರೆಲಿಯಾದಲ್ಲಿ ಪತ್ತೆಯಾಗಿದ್ದ 22 ಕೋಟಿ ವರ್ಷಗಳ ಹಿಂದಿನ ಪಳೆಯುಳಿಕೆಗಳು ಇದುವರೆಗೆ ಭೂಮಿಯ ಮೇಲೆ ಕಂಡು ಬಂದಿದ್ದ ಅತ್ಯಂತ ಹಳೆಯ ಪಳುವಳಿಕೆಗಳು ಎಂದು ಹೇಳಿದ್ದ.ಅದೇನೆ ಇರಲಿ,ಜೀವ ವಿಕಾಸಕ್ಕೆ ಸಂಬಂಧಿಸಿದಂತೆ ಮೂರು ಯುಗಗಳನ್ನಾಗಿ ವಿಭಾಗಿಸಿ ಅದು ಹೇಳುತ್ತದೆ:1)ಪೂರ್ವ ಪ್ರಾಚೀನ ಯುಗ 2500000000 ಮುಂದುವರೆದ ಏಕಾಣು ಜೀವಕೋಶಗಳ ಯುಗವೆಂದು.2)ಮಧ್ಯೆ ಪ್ರಾಚೀನ ಯುಗ 1600000000 ಕೇಂದ್ರ ಬೀಜವುಳ್ಳ ಜೀವಕೋಶಗಳ ಯುಗ.3)ನವ್ಯ ಪ್ರಾಚೀನ ಯುಗ 1000000000 ಮೃದು ದೇಹದ ಬೆನ್ನೆಲುಬು ಇಲ್ಲದ -ಕಶೇರುಕಗಳ ಯುಗವೆಂದು.4) ಹಿಮಯುಗ.60 ಕೋಟಿ ವರ್ಷಗಳ ಹಿಂದೆ ಮೊದಲ ಪ್ರಳಯ ಸಂಭವಿಸಿದೆ ಎನ್ನುವುದು ಒಂದು ಅಂದಾಜು.ಪ್ರಳಯದ ನಂತರವೇ ಜೀವವಿಕಾಸ ಪ್ರಕ್ರಿಯೆಗಳು ಜರುಗಿದವು ಎನ್ನುವುದು ವಿಜ್ಞಾನದ ಉಲ್ಲೇಖ.
ಕಾಡಿನಲ್ಲಿ ಒಬ್ಬ ವ್ಯಾಧನಿದ್ದ.ಅತ್ಯಂತ ಅನಾಗರಿಕ.ಆತನ ವೃತ್ತಿ ದರೋಢೆ;ಕಳ್ಳತನ ಮಾಡುವುದು,ಕೊಲೆ ಮಾಡುವುದು ಮತ್ತು ಪ್ರಾಣಿಗಳನ್ನು ಭೇಟೆಯಾಡಿ ಅವುಗಳನ್ನು ಆಹಾರವಾಗಿ ಸೇವಿಸುತ್ತಾ ಆತ ಜೀವಿಸುತ್ತಿದ್ದ.ಆತನಿಗೆ ನಾಗರಿಕ ಪ್ರಪಂಚದ ಅರಿವಿರಲಿಲ್ಲ.ಆತ ಕಾಡಿನಿಂದ ಆಚೆ ಬರುತ್ತಿರಲಿಲ್ಲವಾದ್ದರಿಂದ ಆತನಿಗೆ ಯಾವ ಜ್ಞಾನವೂ ಇರಲಿಲ್ಲ.ಆತನಿಗೆ ಮಕ್ಕಳಿದ್ದರಾ?ಉತ್ತರವಿಲ್ಲ!ಆತನಿಗೆ ಹೆಂಡತಿ ಇದ್ದಳಾ?ಉತ್ತರವಿಲ್ಲ.ಆತನ ಕುಟುಂಬ ಹೇಗಿತ್ತು?ಉತ್ತರವಿಲ್ಲ.ಆತನ ಪರಿವಾರದ ಪರಿಚಯ ಇವತ್ತಿನ ಜಗತ್ತಿಗೆ ಪರಿಚಯವೇ ಇಲ್ಲ.ಆತನೊಬ್ಬ ವ್ಯಾಧ;ಕ್ರೂರಿ.
ಅದೊಂದು ದಿನ ಕಾಡಿನ ಹಾದಿಯಲ್ಲಿ ಮಹಾಶಯನೊಬ್ಬ ನಡೆದು ಹೋಗುವಾಗ ವ್ಯಾಧ ಆತನನ್ನು ದರೋಢೆ ಮಾಡಲು ತಡೆಯುತ್ತಾನೆ.ಆತ ಬುದ್ಧಿವಂತ; ಖೂಳನಿಂದ ತಪ್ಪಿಸಿಕೊಳ್ಳುವುದು ಹೇಗೆಂದು ಯೋಚಿಸಿ ಉಪಾಯವೊಂದನ್ನು ಹುಡುಕುತ್ತಾನೆ.ಕಳ್ಳನನ್ನು ಉದ್ದೇಶಿಸಿ ಹೀಗೆ ಹೇಳುತ್ತಾನೆ:ಅಪ್ಪಾ ಮಹಾಶಯ,ನಾನೊಬ್ಬ ಅಲೆಮಾರಿ,ನೀನು ನನ್ನನ್ನು ದೋಚಲಿಕ್ಕೆ ನನ್ನ ಹತ್ತಿರ ಏನೂ ಇಲ್ಲ.ಜೀವವೊಂದನ್ನು ಬಿಟ್ಟು! ಜೀವವೇ ಬೇಕಾದರೆ ಜೀವ ಹೊಡೆದ ಮೇಲೆ ಪಾಪ ಪ್ರಾಪ್ತವಾಗುತ್ತತದಲ್ಲಾ ಹಾಗೇನು ಮಾಡುತ್ತಿ ಎಂದು ಕೇಳುತ್ತಾನೆ!ಪಾಪ ಪುಣ್ಯಗಳ ಯಾವ ಪರಿಚಯವೂ ಇಲ್ಲದ ವ್ಯಾಧನ ತಲೆಯೊಳಗೆ ಮಾಹಾಶಯ ಹುಳುವೊಂದನ್ನು ಬಿಡುತ್ತಾನೆ..ಪಾಪ ಎನ್ನುವ ಪದದ ಕುರಿತು ವ್ಯಾಧನಲ್ಲಿ ಕುತೂಹಲ ಮೂಡುತ್ತದೆ;ಆತ:ಹಾಗೆಂದರೆ ಏನು ಎಂದು ಕೇಳುತ್ತಾನೆ.
ನಂತರ ಮಹಾಶಯ,ಸ್ವರ್ಗದ ಬಗ್ಗೆ,ನರಕದ ಬಗ್ಗೆ,ಪಾಪದಿಂದ ಪ್ರಾಪ್ತವಾಗುವ ಕ್ರೂರಶಿಕ್ಷೆಯ ಬಗ್ಗೆ ವಿವರಿಸಿ ಹೇಳುತ್ತಾನೆ.ಪಾಪ ಯಾವ ಯಾವ ಕೃತ್ಯಗಳನ್ನು ಎಸಗುವುದರಿಂದ ಪ್ರಾಪ್ತವಾಗುತ್ತದೆ ಎನ್ನುವುದನ್ನು ಅತಿರಂಜಕವಾಗಿ ವಿವರಿಸಿ ಹೇಳುತ್ತಾನೆ;ಏಕೆಂದರೆ ಆತ ಮಾತುಗಾರ,ಮೂರು ಯುಗದಲ್ಲೂ ಜೀವಂತವಿದ್ದವನು!ವ್ಯಾಧ ಚಿಂತಾಮಗ್ನನಾಗುತ್ತಾನೆ.ತಾನು ತನ್ನ ಜೀವಿತಾವಧಿಯಲ್ಲಿ ಮಾಡಿದ ಎಲ್ಲಾ ಪಾಪಗಳನ್ನು ಸ್ಮರಿಸುತ್ತಾನೆ. ಪಾಪಗಳಿಂದ ತನಗೆ ಒದಗಬಹುದಾದ ಕ್ರೂರ ಶಿಕ್ಷೆಯ ಕುರಿತು ಯೋಚಿಸಿ ಭೀತನಾಗುತ್ತಾನೆ.ಇದಕ್ಕೇನು ಪರಿಹಾರ ಎಂದು ಮಹಾಶಯನನ್ನು ಕೇಳುತ್ತಾನೆ.ಆತ:ಚಿಂತಿಸದಿರು, ಪಾಪಗಳನ್ನು ಕೇವಲ ನೀನು ನಿನಗಾಗಿ ಮಾಡಿಲ್ಲ.ಇವು ನಿನ್ನ ಹೆಂಡಿರು ಮತ್ತು ಮಕ್ಕಳಿಗಾಗಿ ಮಾಡಿರುವೆ;ಅವರೂ ಪಾಪಗಳಲ್ಲಿ ಪಾಲು ತೆಗೆದುಕೊಳ್ಳಲಿ.ಹೋಗು,ನಾನು ಇಲ್ಲೇ ಇರುತ್ತೇನೆ;ನಿನ್ನ ಪರಿವಾರದವರು ಯಾರು ಎಷ್ಟು ಪಾಪಗಳನ್ನು ಸ್ವೀಕರಿಸುತ್ತಾರೋ ಕೇಳಿ ಬಾ,ನಂತರ ನಾನು ನಿನಗೊಂದು ಉಪಾಯ ಹೇಳುತ್ತೇನೆ ಎಂದು ಹೇಳುತ್ತಾನೆ.
ವ್ಯಾಧ ಮನೆಗೆ ಹೋಗುತ್ತಾನೆ.ನಡೆದ ಘಟನೆಯನ್ನು ತನ್ನ ಪತ್ನಿಗೂ ಮತ್ತು ಮಕ್ಕಳಿಗೂ ವಿವರಿಸುತ್ತಾನೆ.ನಿಮಗಾಗಿ ಮಾಡಿದ ಪಾಪ ಎಷ್ಟೊಂದು ಇದೆ.ಇದರಲ್ಲಿ ನೀವೊಂದಿಷ್ಟು ಪಾಲು ತೆಗೆದುಕೊಂಡರೆ ನಾನು ಹಗುರ,ಪ್ಲೀಸ್ಎನ್ನುತ್ತಾನೆ. ಪಾಪಕೃತ್ಯಗಳಿಂದ ನರಕ ಎನ್ನುವ ಸ್ಥಳದಲ್ಲಿ ಒದಗಬಹುದಾದ ಘೋರ ಶಿಕ್ಷೆಗೆ ಭಯಗೊಂಡ ಆತನ ಹೆಂಡತಿ ಮಕ್ಕಳು ಪಾಪದ ಪಾಲನ್ನು ಸ್ವೀಕರಿಸಲು ನಿರಾಕರಿಸುತ್ತಾರೆ.ನಿರಾಶೆಗೊಳ್ಳುವ ವ್ಯಾಧ ಮಾಹಾಶಯನ ಹತ್ತಿರಕ್ಕೆ ಬರುತ್ತಾನೆ.ಮಹಾಶಯ:ಹುಚ್ಚ!ಯಾರು ಮಾಡಿದ ಪಾಪವನ್ನು ಅವರೇ ಅನುಭವಿಸಬೇಕು,ಇಲ್ಲ್ಯಾರು ನಮ್ಮ ಪಾಪಗಳನ್ನು ಹಂಚಿಕೊಳ್ಳುವುದಿಲ್ಲ.ಚಿಂತಿಸದಿರು,ಪರಿಹಾರವಿದೆ.ಇಂದಿನಿಂದ ಕೃತ್ಯಗಳನ್ನು ನಿಲ್ಲಿಸು.ಎಲ್ಲಾ ಪಾಪಗಳನ್ನು ತೊಳೆಯುವ ಶಿವನನ್ನು ಸ್ಮರಿಸು,ಧ್ಯಾನಮಗ್ನನಾಗು,ತಪಸ್ಸು ಮಾಡು.ನಿನ್ನ ತಪಸ್ಸಿನಿಂದ ನಿನ್ನೆಲ್ಲಾ ಪಾಪಗಳು ತೊಳೆದು ಹೋಗಿ ನೀನು ಶುದ್ಧನಾಗುತ್ತೀಯ.ನಿನಗೆ ಸ್ವರ್ಗ ಪ್ರಾಪ್ತವಾಗುತ್ತದೆ ಎಂದು ಹೇಳಿ ಮಾಯವಾಗುತ್ತಾನೆ.
ನಂತರ ವ್ಯಾಧ ಶಿವನಾಮ ಸ್ಮರಣೆಗೆ ತೊಡಗಿದ.ತಪೋನಿರತನಾದ.ಆತನ ತಪ್ಪಸ್ಸು ಹೇಗಿತ್ತೆಂದರೆ ಆತನ ದೀರ್ಘಕಾಲೀನ ತಪ್ಪಸ್ಸಿನ ಪರಿಣಾಮವಾಗಿ ಆತನ ಮೇಲೆ ಹುತ್ತು ಬೆಳೆದು ಬಿಟ್ಟಿತಂತೆ.
ಇದಾದ ನಂತರ ಆತನಿಗೆ ಶಿವ ದರ್ಶನವಾಗಿರಬೇಕು.ಏನೂ ಅಕ್ಷರ ಜ್ಞಾನವಿಲ್ಲದ ಆತ ಪುಸ್ತಕವೊಂದನ್ನು ಬರೆಯುತ್ತಾನೆ. ಪುಸ್ತಕ ಭಾರತದಲ್ಲಿ ಮಹತ್ವ ಪಡೆದು ಬರೆದವನನ್ನು ಮರೆತು ಅದರೊಳಗಿನ ಪಾತ್ರವೊಂದನ್ನು ಗುತ್ತಿಗೆ ಹಿಡಿದು ರಾಜಕಾರಣ ಪ್ರಾರಂಭವಾಗುತ್ತದೆ.ಲಕ್ಷಾಂತರ ಹೆಣಗಳು ಬೀಳುತ್ತವೆ.ಅಂತಿಮವಾಗಿ ಪಕ್ಷವೊಂದು ಅಧಿಕಾರಕ್ಕೆ ಬರುತ್ತದೆ.ಪಾತ್ರ ಹುಡುಗರಲ್ಲಿ ಕೋಪವನ್ನು,ದ್ವೇಷವನ್ನು,ರಕ್ತಪಾತಗಳನ್ನೂ ಸೃಷ್ಟಿಸುತ್ತಾ ಮುಂದುವರೆಯುತ್ತದೆ!
ಕಾಡಿನ ಹಾದಿಯ ದಾರಿಹೋಕ ನಾರದ!ರಾಬರಿಗೆ ಬಂದವನು ಬೇಡನಂತೆ! ಬೇಡ ನಾರದನ ದರ್ಶನದಿಂದ ಜ್ಞಾನ ಪಡೆದು ರಾಮಾಯಣ ಬರೆದನಂತೆ.ನಂತರ ಆತ ವಾಲ್ಮೀಕಿಯಾದನಂತೆ!ಇದು ನಡೆದದ್ದು ಯಾವ ಕಾಲದಲ್ಲಿ ಎಂದು ಹೇಳುವುದು ಮತ್ತು ಹುಡುಕುವುದು ಲೇಖನದ ಉದ್ದೇಶ.ಭಗವದ್ಗೀತೆ ಬರೆದದ್ದು ಯಾವಾಗ?ಮಾಹಾಭಾರತ ಬರೆದದ್ದು ಯಾವಾಗ?ಇವು ನಿಜವಾಗಿಯೂ ಭೂಮಿಯ ಮೇಲೆ ಘಟಿಸಿದ ಕಥೆಗಳಾ?ಇದಕ್ಕೂ ಮುನ್ನ ಅಕ್ಷರ ಜ್ಞಾನಿಗಳಾದ ಬ್ರಾಹ್ಮಣರಾ ಸೃಷ್ಟಿಯಾ ಇದು?ಇವುಗಳಿಗೆ ನಿಖರ ದಾಖಲೆಗಳು ಇವೆಯಾ?ಇದ್ದರೆ ಅವು ಎಲ್ಲಿವೆ?ಎನ್ನುವ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗಿದೆ.
ಭಾರತದ ಆದುನಿಕ ಇತಿಹಾಸದ ಪ್ರಕಾರ ಶೂದ್ರ ವರ್ಗಗಳು ಒಂದು ಶುದ್ಧ ಶಬ್ದ ಉಚ್ಚರಿಸಿದರೇ ನಾಲಿಗೆ ಕೊಯ್ದ ಉದಾಹರಣೆಗಳಿವೆ.ನೆನಪಿರಲಿ:ದಲಿತರ ಮಗುವೊಂದು ಶಿವನಾಮ ಸ್ಮರಣೆ ಮಾಡಿದ ಕಾರಣಕ್ಕೆ ನಾಲಿಗೆ ಕೊಯ್ಯಲಾಗುತ್ತದೆ.ಶೂದ್ರರು ಅಕ್ಷರ ಕಲೆತದ್ದು ಇತ್ತೀಚೆಗೆ;ಬ್ರಿಟೀಷ್ಭಾರತದಲ್ಲಿ.ಮೊದಲು ಗುರುಕುಲಗಳು ಇರುತ್ತಿದ್ದವಂತೆ.ಅವು ಕ್ಷತ್ರೀಯರಿಗೆ ಮತ್ತು ಉನ್ನತ ವರ್ಗಗಳಿಗೆ ವಿದ್ಯಾಭ್ಯಾಸ ಮಾಡುತ್ತಿದ್ದವಂತೆ.ಇತಿಹಾಸವೇ ಹೇಳುವ ಪ್ರಕಾರ ರಾಜನ ಮಕ್ಕಳು ಬ್ರಾಹ್ಮಣರು ಅಕ್ಷರಾಭ್ಯಾಸ ಮಾಡುತ್ತಿದ್ದರಂತೆ.ಬ್ರಾಹ್ಮಣ ಇತಿಹಾಸದಲ್ಲಿ ಗುರುವಾಗಿ,ಪೂಜಾರಿಯಾಗಿ,ಪುರೋಹಿತನಾಗಿ ದಾಖಲಾಗಿದ್ದಾನೆ.ಇವತ್ತಿಗೂ ಬ್ರಾಹ್ಮಣರು ಮಡಿ ಮೈಲಿಗೆ ಎಂದು ಆಚೆ ಬರುವುದಿಲ್ಲ.ದಲಿತರ ಗಾಳಿಯನ್ನೂ ಸೋಕಿಸಿಕೊಳ್ಳುವುದಿಲ್ಲ.ಇಂತಿರುವಾಗ ಶೂದ್ರನೊಬ್ಬ ಅಕ್ಷರ ಅಭ್ಯಾಸ ಮಾಡುವುದೆಂದರೆ ಸುಲಭದ ಮಾತೇ?
ಸಾವಿರ ಶತಮಾನಗಳ ಹಿಂದೆ ಭಾರತದ ಜನ ಸಂಖ್ಯೆ ಕೇವಲ ಆರು ಏಳು ಕೋಟಿ ಇತ್ತು ಎಂದರೆ ಭಾರತದ ವಿಶಾಲವಾದ ಭೂಪ್ರದೇಶ ಯಾವುದರಿಂದ ಆವೃತವಾಗಿತ್ತು ಎನ್ನುವುದನ್ನು ನೀವು ಊಹಿಸಿ.ದಟ್ಟಾರ್ಯಣ್ಯದಿಂದ ಕೂಡಿದ್ದ ಭೂ ಪ್ರದೇಶದಲ್ಲಿ ಮನುಷ್ಯರಿಗಿಂತ ಕಾಡು ಪ್ರಾಣಿಗಳೇ ಹೇರಳವಾಗಿರುತ್ತಿದ್ದವು.ಎತ್ತರದ ಬೆಟ್ಟ ಪ್ರದೇಶಗಳಲ್ಲಿ ಸಂಸ್ಥಾನಗಳು ಸ್ಥಾಪಿತವಾಗಿರುತ್ತಿದ್ದವು.ಅವಷ್ಟೇ ಊರುಗಳು! ಬೆಟ್ಟಕ್ಕೆ ಪ್ರಾಣಿ ಮತ್ತು ಇನ್ನೊಂದು ಸಂಸ್ಥಾನಗಳ ದಾಳಿಯಾಗದಿರಲಿ ಎಂದು ಸುಭದ್ರ ಕೋಟೆಗಳನ್ನು ಕಟ್ಟಿಕೊಂಡಿರುತ್ತಿದ್ದರು.ಆಗಿನ ಕಾಲದಲ್ಲಿ ಲೂಟಿ ಮತ್ತು ಹತ್ಯಾಚಾರದ ಹೊರತು ಏನೂ ನಡೆಯುತ್ತಿರಲಿಲ್ಲ.ಒಂದು ಕಬ್ಬಿಣದ ಕತ್ತಿ ಇರುವವನೆ ಬಲಶಾಲಿ!ಆತ ರಾಜ!ಇರುವ ನೂರು ಮಂದಿಗೆ!(ಮುಂದುವರೆಯುತ್ತದೆ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹೋರಾಟವೂ ಉದ್ದಿಮೆಯಾಗಿ ಹೋದ ಈ ಸಂಕೀರ್ಣ ಕಾಲಘಟ್ಟದ ಕುರಿತು

 ನೀವು ಪರೀಕ್ಷಿಸಿ ನೋಡಿ:ಲಕ್ಷಾಂತರ,ಕೋಟ್ಯಾಂತರ ಸಂಘಟನೆಗಳು ಹೋರಾಟಗಾರರು ಜನ್ಮತಳೆದಿದ್ದಾರೆ;ಅಷ್ಟೇ ಸಮಸ್ಯೆಗಳು ಹೆಚ್ಚಾಗುತ್ತಿವೆ.ಇವೆಲ್ಲವನ್ನೂ ವಿಶ್ಲೇಷಿಸಿ ನೋಡಿದಾಗ ಎ...