ಶನಿವಾರ, ಮಾರ್ಚ್ 14, 2020

...ಭಯೋತ್ಪಾದನೆಯೂ ಭಾರತದ ದೇಶಭಕ್ತಿಯ ಅನಾವರಣವೂ.


...ಭಯೋತ್ಪಾದನೆಯೂ ಭಾರತದ ದೇಶಭಕ್ತಿಯ ಅನಾವರಣವೂ.

 

ಜಾಗತಿಕವಾಗಿ ಭಯೋತ್ಪಾದನೆ ಎನ್ನುವುದು ತೀರಾ ಶಸ್ತ್ರ ಚಿಕಿತ್ಸೆಗೂ ಬಗ್ಗದ ಭಯಂಕರ ಅರ್ಬುದಾ ರೋಗವಾಗಿ ಪರಿಣಮಿಸಿದೆ.ಸ್ವಾರ್ಥ ಸಾಧನೆಗಾಗಿ ಮನುಷ್ಯ ಮನುಷ್ಯನನ್ನು ಅತ್ಯಂತ ಬರ್ಭರವಾಗಿ ಕೊಲ್ಲುವುದು ಒಂದು ಖಯಾಲಿಯಾಗಿ,ಚಟವಾಗಿ,ತಮಾಷೆಯ ವಿಷಯವಾಗಿ ಬದಲಾಗಿದೆ.ಕೋಳಿಯ ಕತ್ತನ್ನು ಕತ್ತರಿಸುವಷ್ಟೇ ಸಲೀಸಾಗಿ ಮನುಷ್ಯರ ಪ್ರಾಣ ತೆಗೆಯುವ ಸಂಪ್ರದಾಯ ತೀರಾ ಸಹಜ ಎನ್ನುವಂತಾಗಿದೆ.350 ಕೆಜಿ ಸುಸಜ್ಜಿತ ಆರ್‌ಡಿಎಕ್ಸ್‌ನ್ನು ತುಂಬಾ ಜಾಗ್ರತೆ ಇರುವಂತಹ,ದೇಶವನ್ನು ರಕ್ಷಿಸುವ ಜವಬ್ದಾರಿ ಹೊತ್ತ ಸೈನ್ಯ ಸಂಚರಿಸುವ ರಸ್ತೆಗೆ ಅದುನಿಕ ತಂತ್ರಜ್ಞಾನ ಅಳವಡಿಸಿದ ಈ ಸಂದರ್ಭದಲ್ಲೂ ಕೊಂಡೊಯ್ದು ಸ್ಪೊಟಿಸಿಕೊಂಡು ಸರಣಿ ಮಾನವ ಹತ್ಯೆಗಳನ್ನು ನಡೆಸುತ್ತಾರೆ ಎಂದರೆ ದೇಶ,ದೇಶದ ರಕ್ಷಣಾ ವ್ಯವಸ್ಥೆ, ಸೈನ್ಯ ಮತ್ತದಕ್ಕೆ ಬಳಸುವ ಬಜೆಟ್ ಎಲ್ಲವೂ ದಂಡ ಎನ್ನಿಸುತ್ತದೆ.ಸರ್ಕಾರ ತಲೆ ತಗ್ಗಿಸಬೇಕಾದ ವಿಷಯವಿದು!ತಿಳಿಯದೆ ತಪ್ಪು ನಡೆಯುವುದು ತಿಳಿದು ತಪ್ಪು ನಡೆಯುವುದು ತಪ್ಪು ನಡೆದಾದ ಮೇಲೆ ಅಂಡಿಗೆ ಚೇಳು ಕಡಿಸಿಕೊಂಡ ನಾಯಿಯಂತೆ ಅರಚುವುದಿದೆಯಲ್ಲ ಅದು ಅತ್ಯಂತ ನಾಚಿಕೆ ಗೇಡಿನ ವಿಷಯ.ಭಾರತ ಎಪ್ಪತ್ತು ವರ್ಷಗಳ ಹಿಂದಿನಿಂದಲೂ ಇದೇ ತಪ್ಪಿಗೆ ಒಳಗಾಗುತ್ತಿದೆ.ಕಾಶ್ಮೀರ ಮಾಯದ ವೃಣವಾಗಿ ಪರಿಣಮಿಸಿದೆ.ದೇಶದ ಆರ್ಥಿಕ ಸ್ಥಿತಿಯನ್ನು ಪಾಕಿಸ್ತಾನದ ಗಡಿ ರಕ್ಷಣೆಗೆ ಬಳಸಬೇಕಾದ ಪರಿಸ್ಥಿತಿಗೆ ಒಳಗಾಗಿದ್ದು ಅವಮಾನಕರ ವಿಷಯ!

 

Yes,ನಾವು ಭಾರತೀಯರು ಅಂಡಿಗೆ ಚೇಳು ಕಡಿದಾಗ ಮಾತ್ರ ಅರಚುತ್ತೇವೆ.

 

ನಮ್ಮಲ್ಲಿ ನಿಜವಾದ ದೇಶ ಪ್ರೇಮದ ಕೊರತೆ ಇದೆ.ಅಭಿಮಾನದ ಕೊರತೆ ಇದೆ.ಜಾತ್ಯಾತೀತ ಸೋಗಿನಲ್ಲಿ ನಮ್ಮ ಉದಾರವಾದಿ ನೀತಿ ನಮ್ಮನ್ನು ಷಂಡರನ್ನಾಗಿ ಮಾಡಿದೆ.ದೇಶದ್ರೋಹವನ್ನು ನಾವು ಸಮರ್ಥಿಸಿಕೊಳ್ಳುತ್ತೇವೆ.ಧರ್ಮಗಳನ್ನು ಓಲೈಸುತ್ತೇವೆ.ಮುಸ್ಲಿಂ ಎನ್ನುತ್ತೇವೆ;ಹಿಂದೂ ಎನ್ನುತ್ತೇವೆ;ಕ್ರೈಸ್ತ ಎನ್ನುತ್ತೇವೆ.ಈ ಮೂರು ಧರ್ಮಗಳ ಕಿತ್ತಾಟದಲ್ಲಿ ನಾವು ಹುಚ್ಚರ ಕೈಗೆ ಸಿಕ್ಕ ಕಲ್ಲಾಗಿದ್ದೇವೆ.ಭಯೋತ್ಪಾದಕರು ಅಟ್ಟಹಾಸ ಮೆರೆಯಲಿಕ್ಕೆ ಕಾರಣವಾಗಿದೆ.ಭಯೋತ್ಪಾದನೆಗೆ ಅವಕಾಶ ನೀಡುವುದು ಎಂದರೆ ಷಂಡತನವನ್ನು ಒಪ್ಪಿಕೊಂಡಂತೆ ಲೆಖ್ಖ.ಸೈನಿಕರ ಪ್ರಾಣಗಳು ದೇಶ ದೇಶಗಳ ಮಧ್ಯೆದ ಘರ್ಷಣೆಯಲ್ಲಿ,ಯುದ್ಧದಲ್ಲಿ ಹೋದರೆ ಅದನ್ನು ವೀರ ಮರಣ ಎನ್ನಬಹುದು.ಮತೋನ್ಮಾದಿಗಳು,ಸ್ವಾರ್ಥ ಸಾಧಕರ ಕೈಗಳಲ್ಲಿ ಪ್ರಾಣ ಹೋದರೆ ಆ ಸಾವನ್ನು ಏನೆಂದು ಕರೆಯಬೇಕು?ಹುತಾತ್ಮರಾದ ಆ ನಲವತ್ತೈದು crpf ಯೋಧರಿಗೆ ಪತ್ರಿಕೆ ಗೌರವಪೂರ್ಣ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತದೆ.

 

ಉಳಿದಂತೆ ರೈತನ ಸಮಸ್ಯೆ!ಇದು ಕೂಡಾ ಭಯೋತ್ಪಾದನೆಯಷ್ಟೆ ಭಯಾನಕವಾಗಿದೆ.ರೈತನ ಆತ್ಮಹತ್ಯೆ ಮತ್ತಾತನ ಬಸಮಸ್ಯೆಗೆ ಪ್ರಾಚೀನ ಕಾಲದ ಇತಿಹಾಸವೇ ಇದೆ.ರೈತ ಕೇವಲ ಬಳಕೆಯಾಗುವ ಒಂದು ಜೀವವಿರುವ ಸರಕಾಗಿದ್ದಾನೆ.ರಾಜಕೀಯ ಮತ್ತು ಉದ್ದಿಮೆಗಳ ಮಾಲಿಕರಿಗೆ ಆತ ಒಂದು ಎತ್ತಿನಂತೆ,ಬಟ್ಟೆ ಹೊರುವ ಕತ್ತೆಯಂತೆ,ರಾಜನ ಕುದುರೆಯಂತೆ,ಮಕ್ಕಳ ಕೈಯೊಳಗಿನ ಆಟಿಕೆಯಂತೆ ಬಳಕೆಯಾಗುತ್ತಿದ್ದಾನೆ.ಆತನ ಆತ್ಮಹತ್ಯೆಗೆ ಪರಿಹಾರವಿಲ್ಲ.ಬರು ಬರುತ್ತಾ ದಿನಗಳು ಅತ್ಯಂತ ಬರ್ಭರವಾಗಿ ಬದಲಾಗತೊಡಗಿವೆ.ಮಳೆ ಮರೀಚಿಕೆಯಾಗಿದೆ.ಗುಡುಗು ಸಿಡಿಲಿನ ಜೊತೆ ಮಳೆ ಕಾಣದೆ ದಶಮಾನಗಳೆ ಆದವು;ಮುಂಗಾರು ವೈಫಲ್ಯ, ಹಿಂಗಾರು ವೈಫಲ್ಯ,ಕಳಪೆ ಗೊಬ್ಬರ,ಕಳಪೆ ಬೀಜ ಇವು ಯಾವನ್ನೂ ನಿಯಂತ್ರಿಸದ ನಮ್ಮ ಸರ್ಕಾರಿ ವ್ಯವಸ್ಥೆ.ರೈತನ ದಾರುಣ ಸ್ಥಿತಿಗೆ ಕಾರಣವಾಗುತ್ತಿವೆ.ರಾಜಕೀಯ ಪಕ್ಷಗಳು ಸಾಲ ಮನ್ನಾದ ಅಸ್ತ್ರವನ್ನು ಕುದುರೆಗೆ ಹುಲ್ಲು ತೋರಿಸುವ ಜಟಕಾವಾಲಾನಂತೆ ಬಳಸಿಕೊಳ್ಳುತ್ತಿವೆ.ರೈತ ಸಾಲಮನ್ನಾದ ಆಮಿಷಕ್ಕೆ ಒಳಗಾಗಿ ಮೋಸ ಹೋಗುತ್ತಿದ್ದಾನೆ.ರೈತ ಮೂರ್ಖತೆಗೆ ಒಳಗಾಗುತ್ತಿದ್ದಾನೆ.ರೈತನನ್ನು ಈ ದೇಶದ ರಾಜಕಾರಣ ಸಾವಿನ ದವಡೆಗೆ ಸಿಲುಕಿಸುತ್ತಿದೆ.ಇದನ್ನು ಎದುರಿಸಲು ಈ ದುಷ್ಟ ರಾಜಕೀಯ ಸ್ವಾರ್ಥವನ್ನು ಮಟ್ಟ ಹಾಕಲು ರೈತ ಸಂಘಟನೆಗಳು ಬಲವಾದ ಹೋರಾಟವನ್ನು ರೂಪಿಸಬೇಕಿದೆ.

 

ಈ ಅಂಶಗಳ ಮೇಲೆ ಈ ಪತ್ರಿಕೆ ರೂಪುಗೊಂಡಿದೆ.ರಾಜಕೀಯ ಸ್ವಾರ್ಥ,ಮತಾಂಧರ ಧಮನ,ಚುನಾವಣೆ ದೇಶಭಕ್ತಿ ಇವುಗಳ ವಿರುದ್ಧ ಬರೆಯಬೇಕಿದೆ.ನಿಜವಾದ ದೇಶಭಕ್ತಿ ಪ್ರತಿಯೊಬ್ಬರೂ ಯಾವುದೇ ಆಮಿಷಕ್ಕೆ ಒಳಗಾಗದೆ ಸಂವಿಧಾನವನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಯೋಚಿಸುವುದರ ಮೂಲಕ ಮೆರೆಯಬೇಕಿದೆ.

 

                                                  ಧನ್ಯವಾದಗಳು

                                                ಲಕ್ಷ್ಮೀಕಾಂತ ನಾಯಕ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹೋರಾಟವೂ ಉದ್ದಿಮೆಯಾಗಿ ಹೋದ ಈ ಸಂಕೀರ್ಣ ಕಾಲಘಟ್ಟದ ಕುರಿತು

 ನೀವು ಪರೀಕ್ಷಿಸಿ ನೋಡಿ:ಲಕ್ಷಾಂತರ,ಕೋಟ್ಯಾಂತರ ಸಂಘಟನೆಗಳು ಹೋರಾಟಗಾರರು ಜನ್ಮತಳೆದಿದ್ದಾರೆ;ಅಷ್ಟೇ ಸಮಸ್ಯೆಗಳು ಹೆಚ್ಚಾಗುತ್ತಿವೆ.ಇವೆಲ್ಲವನ್ನೂ ವಿಶ್ಲೇಷಿಸಿ ನೋಡಿದಾಗ ಎ...