ಶನಿವಾರ, ಮಾರ್ಚ್ 14, 2020

*ಕೊಳಕೂರಿನ ಪ್ರಣಯ ಪ್ರಸಂಗಗಳು*

*ಕೊಳಕೂರಿನ ಪ್ರಣಯ ಪ್ರಸಂಗಗಳು*

     ಥೇಟ್ ಅಂಡಿಗೆ ಚೇಳು ಕಡಿಸಿಕೊಂಡ ನಾಯಿಯ ರೀತಿಯಲ್ಲಿ ಗಿರಿಗಿಸ್ಸಮ್ಮನ ತಮ್ಮ ಊಳಿಡುತ್ತಿದ್ದ;ಅತ್ಯಂತ ವಿಕೃತ ಸ್ವರದ ಆತನ ಆಕ್ರಂದನ ಹುಚ್ಚು ನಾಯಿಯ ರೀತಿಯನ್ನೇ ಹೋಲುತ್ತಿತ್ತು. ಆತನೊಬ್ಬ ಮದ್ಯ ವ್ಯಸನಿ!ಆ ಮದ್ಯದ ವ್ಯಸನಕ್ಕೂ ಹಲವು ಸಕಾರಣಗಳಿದ್ದವು.ಹತೋಟಿಗೆ ಬಾರದ ಆತನ ಹೆಂಡತಿಯ ಅನೇಕ ಅಕ್ರಮ ಸಂಬಂಧಗಳೂ ಅದಕ್ಕೆ ಕಾರಣವಾಗಿದ್ದವು.ಮಕ್ಕಳಿಲ್ಲದ ಬಾಧೆಯಲ್ಲಿ ಆಕೆ ತಾಯಿಯಾಗಬೇಕು ಎನ್ನುವ ಹಂಬಲದಲ್ಲಿ ತೊಡೆ ಬದಲಿ ತಂತ್ರಗಳನ್ನು ಅನುಸರಿಸುತ್ತಿದ್ದಳು.ನರಹೀನ ಗಂಡ ಆಕೆಗೆ ಒಂದು ಶಾಪವಾಗಿದ್ದ.ಕ್ಷಯರೋಗ ಉಲ್ಬಣಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆದಾಗ ಆತನ ವಿರ್ಯಾಣುಗಳು ನಾಶವಾಗಿದ್ದವು.ಮೊದಲೇ ನಪುಂಸಕತನದಿಂದ ಬಳಲುತಿದ್ದ ಆತ ಕ್ಷಯರೋಗಕ್ಕೆ ತುತ್ತಾದ ಮೇಲೆ ಭ್ರಮನಿರಸನಕ್ಕೆ ಒಳಗಾಗಿದ್ದ.ಆತನನ್ನು ಹತಾಶೆ ಕ್ರಮಕ್ರಮವಾಗಿ ಆಕ್ರಮಿಸಿ ಹುಚ್ಚನಾಗಿದ್ದ.ಯಾವೊಂದೂ ವಸ್ತುವೂ ಆತನ ಹಿಡಿತಕ್ಕೆ ಬಾರದೆ ಹುಚ್ಚು ಹೆಚ್ಚಾಗುತ್ತಲೇ ಹೋಗಿತ್ತು.ಆ ಹುಚ್ಚಿನ ಭಾಗವಾಗಿ ಆತನನ್ನು ಆಕ್ರಮಿಸಿಕೊಂಡ ಮದ್ಯ ಆತನನ್ನು ಊಳಿಡುವಂತೆ ಮಾಡಿತ್ತು.ಆತ ಆಕ್ರೋಶಗೊಂಡಿದ್ದ.ಆತನ ನರನಾಡಿಗಳನ್ನು ತನ್ನ ಹೆಂಡತಿ ಮತ್ತು ತನ್ನ ಪರಿವಾರದ ಅನೇಕ ಸ್ತ್ರೀಯರ ಅಕ್ರಮ ಮತ್ತು ಹಾದರದ ಸಂಗತಿಗಳು ಆವರಿಸಿಕೊಂಡಿದ್ದವು.

     ಆತ ಗಿರಿಗಿಸ್ಸಮ್ಮನ ಪ್ರೀತಿಯ ತಮ್ಮ.ತಮಾಷೆ ಎಂದರೆ ಗಿರಿಗಿಸ್ಸಮ್ಮ ಊರಿನ ಸಮಸ್ತ ಹಾದರದ ಒಡತಿಯಾಗಿದ್ದಳು.ಆಕೆ ದಾಟದ ಬೇಲಿ,ಆಕೆ ಸೇರದ ದೇಹ ಆ ಊರಿನಲ್ಲಿ ದೀಪ ಹಚ್ಚಿ ಹುಡುಕಿದರೂ ಸಿಗದ ಹಂತಕ್ಕೆ ತಲುಪಿತ್ತು.ಇಡೀ ಕುಟುಂಬ ಹಾದರವನ್ನು ತಮ್ಮ ಮನೆಯ ಲಾಂಛನವನ್ನಾಗಿ ಮಾಡಿಕೊಂಡ ಪರಿಣಾಮ ಆತನ ದೇಹವೆಂಬ ಕಾವಲಿಯಲ್ಲಿ ರಕ್ತ ಪ್ರಹರಿಸದೇ ದ್ವೇಷದ ಹಾಲಾಹಲ ಹರಿಯೊಡಗಿತ್ತು.ಕಂಡ ಪ್ರತಿಯೊಬ್ಬರೂ ತನ್ನ ವೈರಿಗಳು ಎಂದು ಭಾವಿಸುವ ಹಂತಕ್ಕೆ ತಲುಪಿದ್ದ ಗಿರಿಗಿಸ್ಸಮ್ಮನ ತಮ್ಮ ವಿನಾಕಾರಣ ಕಂಡ ಕಂಡವರ ಮೇಲೆ ಪರೋಕ್ಷ ವಿಷ ಕಾರತೊಡಗಿದ್ದ.

     ಹಾಗಾಗಿ ಗಿರಿಗಿಸ್ಸಮ್ಮನ ತಮ್ಮ ತನ್ನ ಅಂಡಿಗೆ ನಾಯಿ ಕಡಿಸಿಕೊಂಡವನಾಗಿದ್ದ ಮತ್ತು ಅಪ್ಪಟ ಹುಚ್ಚು ನಾಯಿಯ ರೀತಿಯಲ್ಲಿ ಅರಚುತ್ತಿದ್ದ.

     ನಾಯಿ ಬೊಗಳಿದರೆ ದೇವಲೋಕ ಹಾಳಾದೀತೆ?ಹಾಗಂತ ಜನ ಭಾವಿಸಿ ಸುಮ್ಮನಾಗುತ್ತಿದ್ದರು.ಅಕ್ರಮ ಪರಿವಾರದ ಅಪಾರ ಬಾಂಧವ್ಯ ಹೊಂದಿರುವ ಹೀನ ಪಾಯಖಾನೆಯ ಕುಂಡದಲ್ಲಿ ಯಾರು ತಾನೇ ಕೈ ಇಟ್ಟಾರು?

     “ಭಪ್ಪರೆ ಮಗ ಕರ್ಣ!ಊರಾಗ ನಮ್ದೇ ನಡಿತಾದ ಎನ್ನುವ ಸೂಳೇ ಮಕ್ಕಳ ಮನೆಯ ಹೆಣ್ಣುಗಳನ್ನು ಜಾಲಿಕಂಠಿಯಲ್ಲಿ ಕೆಡವಿ ಭೋಗಿಸುತ್ತಿರುವೆಯಲ್ಲ,ನೀನೇ ಶೂರ!”ಎಂದು ಅದೊಂದು ದಿನ ಚಾ ಹೋಟೆಲ್ಲಿನಲ್ಲಿ ಕುಳಿತು ಈರಗಪ್ಪ ಅಜ್ಜ ಬಹಿರಂಗವಾಗಿ ನುಡಿದು ಬಸವಸಾಗರನ ಬೆನ್ನು ತಟ್ಟಿದ್ದ.ಬಸವಸಾಗರ ಮೀಸೆಯ ಮರೆಯಲ್ಲಿ ಒಳ ಒಳಗೆ ಗರ್ವದಿಂದ ನಕ್ಕಿದ್ದ.ಈರಗಪ್ಪ ಶರಣ ಗಿರಿಗಿಸ್ಸಮ್ಮನ ಮತ್ತು ಬಸವ ಸಾಗರನ ಹಾದರದ ಹವಾ ಕಿವಿಗ್ಹಾಕಿಕೊಂಡು ಆ ಮಾತು ನುಡಿದಿದ್ದ.ತೀರಾ ಊರ ಪಕ್ಕ ಹರಿಯುವ ಹಳ್ಳದ ತೀರದ ಕುರುಚಲು ಜಾಲಿಕಂಠಿಗಳು ಭೋಗವಿಲಾಸದ ಮಾಹಾ ಸ್ಥಾನಗಳಾಗಿದ್ದು ಅಲ್ಲಿ ರತಿ ಮನ್ಮಥರ ರೀತಿಯಲ್ಲಿ ಜಗತ್ತಿನ ಪರಿವೇ ಮರೆತು ಸರ್ಪ ಸಂಗಮದಲ್ಲಿ ನಿರತರಾಗಿರುತ್ತಿದ್ದ ಮುದಿ ಜೋಡಿಗಳು ಜನಮನ ಪ್ರಚಾರವಾಗಿದ್ದವು.ಟೆಕ್ನಾಲಜಿ ಮುಂದುವರೆದ ಭಾಗವಾಗಿ ಕೆಲ ಕಿಡಿಗೇಡಿ ಹುಡುಗರು ತಮ್ಮ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಆ ಸರ್ಪ ಸಂಗಮದ ದೃಶ್ಯಗಳನ್ನು ಚಿತ್ರಿಕರಿಸಿಕೊಂಡು ಪೋರ್ನ್ ವಿಡಿಯೋದ ರಸಸ್ವಾದವನ್ನು ಅನುಭವಿಸುತ್ತಿದ್ದವು.

     ಈರಗಪ್ಪನ ಮಾತಿಗೆ ಪ್ರತಿಕ್ರಿಯಿಸುತ್ತಾ ಅವತ್ತು ಬಸವಸಾಗರ ಕೂಡಾ “ಯಾರು ಸೊಕ್ಕಿನ ಜನ ಇರುತ್ತಾರೋ ಅವರ ಹೆಂಗಸರ ಜೊತೆ ರಾಸಲೀಲೆಯಲ್ಲಿ ತೊಡಗುವುದು ಮತ್ತು ಅವರ ಗಂಡಸರನ್ನು ನಮ್ಮ ಕೈಚೀಲ ಹೊರುವ ಆಳುಗಳನ್ನಾಗಿ ಮಾಡಿಕೊಳ್ಳುವುದರಲ್ಲಿಯೇ ಜೀವನ ಸಾರ್ಥಕತೆ ಇರುತ್ತದೆ ಅಜ್ಜ!”ಎಂದು ಗಂಭೀರವಾಗಿ ಹೇಳಿದ್ದ.ವ್ಯಕ್ತಿಯೊಬ್ಬನನ್ನು ಮುರಿದು ಹಾಕಲು ಕುಟುಂಬವೊಂದರ ಗೌರವ ಹಾಳು ಮಾಡಲು ಇದುವೇ ಸರಿಯಾದ ಮಾರ್ಗ ಎನ್ನುವುದನ್ನು ಬಸವಸಾಗರ ಚೆನ್ನಾಗಿ ಅರಿತಿದ್ದ.ತದನಂತರದಲ್ಲಿ ಈ ಗಿರಿಗಿಸ್ಸಮ್ಮನ ತಮ್ಮಂದಿರ ಮುಖಗಳಲ್ಲಿ ಗಂಡಂದಿರ ಮುಖಗಳಲ್ಲಿ ಮೀಸೆಗಳಿದ್ದವು;ಅವು ಕೇವಲ ಗಂಡು ಜೋಗತಿಯರ ಮುಖದ ಮೇಲೆ ಬೆಳೆದ ಅನಗತ್ಯ ಕೂದಲುಗಳಂತೆ ಮಾತ್ರವೇ ಇದ್ದವು.ಪರಿಸ್ಥಿತಿ ಅಲ್ಲಿಗೆ ಬಂದು ನಿಂತಿತ್ತು.

     ಈ ಕಥೆ ಬರೆಯುವ ಮುನ್ನ ಒಂದು ವಿಷಯವನ್ನು ಸ್ಪಷ್ಟಪಡಿಸಬೇಕು:

     ಕೊಳಕೂರು ಎನ್ನುವುದು ಒಂದು ಪುಟ್ಟ ಗ್ರಾಮ.ಈ ಪುಟ್ಟ ಗ್ರಾಮದಲ್ಲಿ ಸದ್ಯ ಅನೈತಿಕ ಚಟುವಟಿಕೆ ಹಾದರಗಳು ತಮ್ಮ ವಸಾಹತು ಸ್ಥಾಪಿಸಿದ್ದವು.ಗಂಡಂದಿರು ತಮ್ಮ ಹೆಂಡತಿಯರ ಹಾದರಕ್ಕೆ ಪ್ರೋತ್ಸಾಹ ನೀಡದಂತಹ ಸಂದರ್ಭದಲ್ಲಿ ಆ ಗ್ರಾಮದಲ್ಲಿ ಸಂಸಾರಗಳು ಅವಿಶ್ರಾಂತವಾಗುತ್ತಿದ್ದವು.ಯಾರು ತಮ್ಮ ಹೆಂಡತಿಯನ್ನು ಅತಿ ಹೆಚ್ಚು ಭೋಗವಿಲಾಸಕ್ಕೆ ಬಯಲಿಗೆ ಬಿಡುತ್ತಾರೋ ಅವರೆ ಊರಿನ ಪ್ರಮುಖ ವ್ಯಕ್ತಿಯಾಗಿ ಮುಂಚೂಣಿಗೆ ಬರುವುದು ಪ್ರಸ್ತುತ ದಿನಗಳಲ್ಲಿ ಕೊಳಕೂರಿನ ಸಂಪ್ರದಾಯವಾಗಿ ಬದಲಾಗಿತ್ತು.ಊರಿನ ಪ್ರಮುಖ ರಸ್ತೆಯ ಚಾ ಹೋಟೆಲ್ಲುಗಳನ್ನು ವಿಧಾನಸೌಧ ಮತ್ತು ಸಂಸತ್ತುಗಳನ್ನಾಗಿ ಪುರುಷ ಬಳಸಿಕೊಂಡರೆ ಘನ ಮಹಿಳೆಯರು ಹಳ್ಳದ ದಂಡೆಯ ಜಾಲಿಕಂಠಿಯನ್ನು ಪಂಚತಾರಾ ಹೊಟೆಲ್ ಅನ್ನಾಗಿ ಪರಿವರ್ತಿಸಿಕೊಂಡಿದ್ದರು.ತಮಾಷೆ ಎಂದರೆ ಒಂದು ವಿಧವಾದ ಸಾಂಕೇತಿಕ ವಾಕ್ಯವು ಪಕ್ಕದ ವ್ಯಕ್ತಿಗೆ 'ಇನ್ನು ನನ್ನ ಹೆಂಡತಿ ಫ್ರೀ ಇನ್ನು ಹೊರಡು' ನೀನು ಎನ್ನುವಂತೆ “ಊಟ ಆಯ್ತೇನಪಾ ತಮ್ಮಾ!”ಅಂತ ಅವನು ಕೇಳಿದರೆ “ಆಯ್ತೆಣ್ಣಾ,ನಿಮ್ ಸೊಸಿ ಬಟ್ಟಿ ತಗೊಂಡು ಹಳ್ಳಕ್ಕ್ ಹೋದ್ಲು,ನಾ ಈ ಕಡೆ ಬಂದೆ!”ಎಂದು ಪರೋಕ್ಷವಾಗಿ ಸೂಚಿಸುವ ಉದಾರಿ ಮನಸ್ಥಿತಿ ಚಾಲನೆಯಲ್ಲಿರುವುದು.

     ಇಂತಿಪ್ಪ ಗ್ರಾಮದಲ್ಲಿ ಗಿರಿಗಿಸ್ಸಮ್ಮನ ಹವಾ ಹೇಗೆ ಸೃಷ್ಟಿಯಾಗಿದೆ ಎಂದರೆ...

     ಆಕೆಯು ತನ್ನ ಮನೆತನದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ್ದಳು;ಹೆತ್ತ ಮನೆಯ ಮತ್ತು ಗಂಡನ ಮನೆಯ ನಿರ್ವರ್ಯತೆಯನ್ನು ಜಗಜಾಹೀರು ಮಾಡುವ ಮೂಲಕ ಮನೆತನಗಳಿಗೆ ಗೌರವ ತಂದುಕೊಟ್ಟಿದ್ದಳು.ಇಡೀ ಕುಟುಂಬಕ್ಕೇ ಮಾದರಿ ಮಹಿಳೆಯಾದ ಆಕೆ ತನ್ನ ಓರಿಗೆಗಿತ್ತಿಯರಿಗೆ ಪಂಕ್ತಿಯನ್ನು ಹಾಕಿಕೊಟ್ಟಿದ್ದಳು.ಬಸವಸಾಗರನೆಂಬ ಮುದಿಯುವಕನ ತೆಕ್ಕೆ ಸೇರುವ ಮುನ್ನ ಆಕೆ ಅಸಂಖ್ಯಾತ ದೇಹಗಳನ್ನು ಬದಲಿಸಿದ್ದಳು.ಅನೇಕ ಜೀವಗಳು ಸ್ಪರ್ಧೆಗೆ ಬಿದ್ದು ಇಹಲೋಕ ತ್ಯಾಗ ಮಾಡಿದ್ದವು.ಆಕೆಯ ದೇಹ ಸಂಗಮಕ್ಕೆ ಒಳಗಾದ ಒಂದೊಂದು ಜೀವಿಯೂ ನಂತರದ ದಿನಗಳಲ್ಲಿ ಮತಿಭ್ರಮಣೆಗೆ ಒಳಗಾಗುವುದೊಂದು ಅಚ್ಚರಿಯ ಸಂಗತಿಯಾಗಿತ್ತು!

     ಸಿಂಬಾಲಿಕ್ಕಾಗಿ ಆಕೆ ಆ ಊರಿನ ಗುಡಿ ಅಂಗಳದಲ್ಲಿ ಸೆರೆಗು ಬೀಸಿದಳೆಂದರೆ ಗುಡಿಕಟ್ಟೆಗೆ ಕುಳಿತ ಕಾಮವಾಂಛೆಯ ಪ್ರೇತಗಳು ಚಿತ್ತಿಬೆದೆಯ ನಾಯಿಗಳಂತೆ ಜಾಗೃತವಾಗುತ್ತಿದ್ದವು ಎನ್ನುವ ಮಾತನ್ನು ಬಿಟ್ಟಾಕಿ ಮುಂದಿನ ಮಾತು ಹೇಳಲು ಹೊರಟರೆ ನದಿಕುಲ ಸಂಜಾತ ಗೊಲ್ಲಯ್ಯನೆಂಬ ವ್ಯಕ್ತಿ ಮನೆ ಮಠ ಬಿಟ್ಟು ಕೊನೆಗೊಂದು ದಿನ ಬುದ್ದಿಮಾಂದ್ಯತೆಗೊಳಗಾಗಿ ಹೃದಯಸ್ತಂಭನದಿಂದ ಗತಿಸಿಹೋದ.ಈ ಸಮಯದಲ್ಲಿ ಆಕೆಯ ಪತಿ ಗುರುನಾರಪ್ಪ ಮತ್ತು ಪರಿವಾರ ರಾಜಕೀಯದ ಉತ್ತುಂಗದ ಸ್ಥಿತಿಯಲ್ಲಿದ್ದರು.ಗಿರಿಗಿಸ್ಸಮ್ಮನ ಮಾಹಾ ಪತಿ ಗುರುನಾರಪ್ಪ ಗ್ರಾಮದ ಪ್ರಮುಖ ವ್ಯಕ್ತಿಯಾಗಿದ್ದನು.ಬಹು ಕೋಪದ ಪ್ರವೃತ್ತಿಯನ್ನು ಆತ ಬಹಿರಂಗವಾಗಿ ಪ್ರದರ್ಶಿಸುವುದರ ಹಿನ್ನಲೆಯಲ್ಲಿ ಬೆಳೆ ಬೆಳೆಯುತ್ತಾ ತನ್ನ ತಾಯಿಯದು ನಂತರದ ದಿನಗಳಲ್ಲಿ ತನ್ನ ಹೆಂಡತಿಯದು ಹಾದರ ರಾಜ್ಯ ಸ್ಥಾಪನೆಯ ಮಹತ್ವಾಕಾಂಕ್ಷೆಗೆ ಕೇವಲ ತಾನು ಸಾಕ್ಷಿಯಾಗುತ್ತಿದ್ದೇನಲ್ಲ ಎಂಬ ಅಸಹಾಯಕತೆ ಆತನನ್ನು ಕಾಡುತ್ತಿತ್ತು.ಈ ಭಾವವೂ ಆತನ ಸುಪ್ತ ಮನಸ್ಸಿನಲ್ಲಿ ಗೊಂದಲವನ್ನು ಸೃಷ್ಟಿಸಿ ಆತ ಸಾಮಾಜಿಕವಾಗಿ ಆಕ್ರೋಶಗೊಳ್ಳುವಂತೆ ಮಾಡುತ್ತಿತ್ತು.ಒಳ ಒಳಗೇ ಆತ ಕುದಿಯುತ್ತಾ ತನ್ನ ಕುದಿಯುವ ಮನಸ್ಸನ್ನು ಸಾರಾಯಿಯಿಂದ ತಣ್ಣಗೆ ಮಾಡಿಕೊಳ್ಳುತ್ತಿದ್ದ.

     ಗಿರಿಗಿಸ್ಸಮ್ಮನ ಮೂಲವೃತ್ತಿ ಕೂಲಿ.ಆಂದ್ರದ ರೈತರ ಜಮೀನುಗಳಿಗೆ ಕೂಲಿಗಳ ಒಂದು ಗುಂಪು ಮಾಡಿಕೊಂಡು ಅದರ ಮುಖ್ಯಸ್ಥೆಯಾಗಿ ತಾನು ಚಲಾವಣೆಗೊಳ್ಳುವಳು.ಈ ಕೂಲಿಗಳ ಗುಂಪಿನಲ್ಲಿ ಸಮಾಜ ಮಾರಕ ಗರತಿಯರಿದ್ದರೆ ಅವರನ್ನು ನಯವಾದ ಮಾತುಗಳಿಂದ ವಿವಿಧ ಆಮಿಷಗಳಿಂದ ಅವರ ಮನೋಬಲ‌ ಸಡಿಲವಾಗುವಂತೆ ಮಾಡುವಳು.ಯಾರ ಮನೋಬಲ ದೃಢವಾಗಿರುತ್ತದೋ ಅಂತವರನ್ನು ತಮ್ಮ ಗುಂಪಿನಿಂದ ಆಚೆ ಹಾಕಿ ಬಿಡುವಳು.ಹಾದರವೆಂಬ ಪವಿತ್ರ ವಿದ್ಯಯೂ ಎಂತಹ ಘನವೆತ್ತ ಲಾಭಗಳನ್ನು ವ್ಯಕ್ತಿಯೊಂದಕ್ಕೆ ನೀಡುತ್ತದೆ ಎನ್ನುವುದನ್ನು ಆಕೆ ಎಳೆ ಎಳೆಯಾಗಿ ವಿವರಿಸುವಳು.ಅನೇಕ ಕನ್ಯಯರ ಕನ್ಯತ್ವವನ್ನು ಛಿದ್ರಗೊಳಿಸಿದ ಪರಮ ಪುಣ್ಯಾತ್ಮೆಯಾದ ಗಿರಿಗಿಸ್ಸಮ್ಮ ಅವಿವಾಹಿತ ಹೆಂಗಸರಿಗೆ ಬಸುರಾಗುವ ವಿಧಾನದ ಅನುಭವವನ್ನು ಪ್ರಾಪ್ತ ಮಾಡುವುದು ಮತ್ತದನ್ನು ನಾನಾತರದ ವಿಧಾನಗಳಿಂದ ತೆಗೆದು ಹಾಕುವುದನ್ನು ನುರಿತ ಶಿಕ್ಷಕಿಯ ಹಾಗೆ ಬೋಧಿಸುವಳು!ತಲಾ ಒಬ್ಬೊಬ್ಬರಿಗೆ ಕಳ್ಳ ಪ್ರಿಯಕರನನ್ನು ಹೊಂದಿಸಿ ಕಳ್ಳ ಪ್ರಣಯದಲ್ಲಿರುವ ಸುಖದ ರೋಚಕ ಅನುಭವಕ್ಕೆ ಆಕೆ ಸ್ಪೂರ್ತಿಯಾಗುವಳು.ಗಂಡನಿಂದ ಮಕ್ಕಳು ಪಡೆಯಲಿಕ್ಕಾಗದ ಅನೇಕ ಮಹಿಳೆಯರು ಗಿರಿಗಿಸ್ಸಮ್ಮನ ಆಶಿರ್ವಾದದಿಂದ ಹಲವು ಮಕ್ಕಳನ್ನು ಪ್ರಾಪ್ತ ಮಾಡಿಕೊಂಡು ಮಾಹಾ ಮಕ್ಕಳ ತಾಯಿಯಂದಿರಾಗಿದ್ದಾರೆ.ಒಬ್ಬ ಮಹಾ ಮಹಿಳೆಯಂತೂ-“ನೀ ಹೆಂಗರ ಮಾಡು,ನಂಗಂತೂ ಗಂಡೇ ಹುಟ್ಟಬೇಕು ನೋಡು!”ಎಂದು ಜಾಲಿ ಕಂಠಿಯಲ್ಲಿ ಸುಖದ ಅಮಲಿನಲ್ಲಿ ಬಡಬಡಿಸಿದ ಮಾತು ಆಶ್ಚರ್ಯ ಎನ್ನುವಂತೆ ಆ ಗ್ರಾಮದಲ್ಲಿ ಜನಜನಿತವಾಯಿತು!

     ಇಂತಿರುವ ಗಿರಿಗಿಸ್ಸಮ್ಮನ ಒಂದೊಂದೇ ಅನುಭವ ಪ್ರಸಂಗಗಳನ್ನು ವಿವರಿಸ ಹೊರಟರೆ ವಿಚಿತ್ರ ಲೋಕವೊಂದು ಬೆತ್ತಲೆಯಾಗುವುದು.ಒಬ್ಬ ಕ್ರಿಯಾಶೀಲ ಲೇಖಕನು ಕೆಟ್ಟ ವ್ಯವಸ್ಥೆಯನ್ನು ಬೆತ್ತಲೆ ಮಾಡುವುದರಲ್ಲಿಯೇ ತನ್ನ ಸಾರ್ಥಕತೆಯನ್ನು ಹೊಂದಬಲ್ಲ ಎಂದು ಹೇಳುತ್ತಾ ಈ ಪ್ರವರವೂ ಮುಂದುವರೆಯುವುದು ಎಂದು ಹೇಳಬಯಸುತ್ತೇನೆ!

                 *ಕೊಳಕೂರಿನ ಪ್ರಣಯ ಪ್ರಸಂಗಗಳು ಭಾಗ-೨*

   “ಯಕ್ಕಾ!ನಿನ್ ಧೈರ್ಯ ಮೆಚ್ಚಲೆಬೇಕವ್ವಾ,ಅದೆಂಗೆ ಮನೆಯೊಳಗೆ ಎದೆ ಎತ್ತರ ಬೆಳೆದು ನಿಂತ ಮಕ್ಕಳು ಮಾಹಾ ರಾವಣನಂತಹ ಗಂಡ,ರಕ್ತ ಬಿಜಾಸುರರಂತಹ ಅಣ್ಣ ತಮ್ಮಂದಿರು ಇರುವಾಗ ಪರಪುರಷ ಸ್ನೇಹ ಮಾಡಲು ಸಾಧ್ಯವಾಯಿತು ನಿಂಗೆ?!”ಎಂದಳು ಮರೀನಾ.ಆಕೆಗೆ ಸದ್ಯ ಗದ್ದೆಯ ಕಳೆ ತೆಗೆದು ಮಧ್ಯಾಹ್ನದ ಊಟಕ್ಕೆಂದು ಬೇವಿನ ಮರದಡಿಯ ಕಹಿ ಇಲ್ಲದ ನೆರಳ ಕೆಳಗೆ ಕುಳಿತ ಗಿರಗಮ್ಮ ಒಂದು ವಿಶ್ಮಯದ ಜೀವಿಯಂತೆ ಸಕಲ ವಿದ್ಯಗಳ ಪಾರಂಗತೆಯಂತಯೂ ಕಾಣಿಸಿದ್ದಳು.ಹಾದರ ಜಗತ್ತಿನ ನುರಿತ ಪಟುವಾದ ಗಿರಗಮ್ಮ ಹಾದರದಲ್ಲಿ ಪಿ ಎಚ್‌ಡಿ ಪದವಿ ಪಡೆದ ಮಾಹಾ ಸಾಧಕಿಯ ಹಾಗೆ ಕಾಣಿಸಿದ್ದಳು.ಹಾದರ ಜಗತ್ತಿನ ಕುರಿತು ಅನೇಕ ರಹಸ್ಯ ತಂತ್ರಗಳನ್ನು ಹಸ್ತಗತ ಮಾಡಿಕೊಂಡಿದ್ದ ದುರ್ಬಲ ಮನಸ್ಸಿನ ಕನ್ಯೆಯರು ಮತ್ತು ಗರತಿಯರನ್ನು ಕೆಲವೇ ದಿನಗಳಲ್ಲಿ ಜಾಲಿಕಂಠಿಯ ಪೊದೆಗಳಲ್ಲಿ ಕೆಡವಬಹುದಾದ ಮಹಾನ್ ಚಾತುರ್ಯದ ಗಿರಗಮ್ಮ ಒಬ್ಬ ಯಕ್ಷಿಣಿ ತಂತ್ರಗಳನ್ನು ಬಲ್ಲ ಕ್ಷುದ್ರ ಸಾಧಕಿಯ ಹಾಗೆ ಕಂಡಿದ್ದಳು.

     ಮಳೆಯಿಲ್ಲದೆ ಬರಗೆಟ್ಟು ಹೋದ ನೆಲ ಕಡು ಘೋರ ಧಗೆಯನ್ನು ಮೈನ ಬೆವರು ಕಿತ್ತು ಬರುವಂತೆ ಸೂಸುತ್ತಿತ್ತು.ಗದ್ದೆಯ ಕೆಸರಿನಿಂದ ಮಲೀನವಾದ ವಸ್ತ್ರಗಳು ದೇಹದ ಬೆವರಿನ ದುರ್ಗಂಧದಿಂದ ಆ ಬೇವಿನ ಮರದಡಿಯ ಕಹಿಯಲ್ಲದ ನೆರಳನ್ನು ವಿಚಿತ್ರ ವಾಸನೆಯಿಂದ ನಾರುವಂತೆ ಮಾಡಿದ್ದವು.ತಂಬಾಕು ತಿಕ್ಕುವವರು ತಂಬಾಕು ತಿಕ್ಕುತ್ತಿದ್ದರು;ನೆಶೆ ಪುಡಿ ತಿಕ್ಕುವವರು ನೆಶೆ ಪುಡಿ ತಿಕ್ಕುತ್ತಿದ್ದರು.ಕೆಲವರು ನುರಿತ ಪಿಚಕಾರಿಗಳಂತೆ ಸೀಳು ತುಟಿಗಳಿಂದ ವಿಲಕ್ಷಣ ನಾದ ಹೊರಡಿಸುತ್ತಾ ತಮ್ಮ ತಾಂಬೂಲ ರಸವನ್ನು ಬಹು ದೂರಕ್ಕೆ ಚಿಮ್ಮುತ್ತಿದ್ದರು.ಗರತಿಯರು ಆತ್ಮಹತ್ಯೆ ಮಾಡಿಕೊಳ್ಳಬಹುದಾದ ಕೊಳಕು ಮಾತುಗಳು,ಪರಪುರುಷ ಸಂಗಮದ ರಸವತ್ತಾದ ಪ್ರಸಂಗಗಳು ಯಥಾಶಕ್ತಿ ಅಲ್ಲಿನ ಮಹಿಳೆಯರು ತಮ್ಮ ತಮ್ಮಲ್ಲೇ ನಿರ್ಬಿಡೆಯಿಂದ ಹಂಚಿಕೊಳ್ಳುತ್ತಿದ್ದರು.ಅನುಭವಸ್ತರು ಗೊಳ್ಳೆಂದು ನಕ್ಕರೆ ಹೊಸತಾಗಿ ಹಾದರ ಪ್ರಪಂಚಕ್ಕೆ ಕಾಲಿಟ್ಟವರು ಒಳ ಒಳಗೇ ನಾಚುತ್ತಿದ್ದರು.ಕೆಲವರು ಈ ತಿಂಗಳೇಕೆ ಮುಟ್ಟಾಗಿಲ್ಲ ಎನ್ನುವ ಆತಂಕದಲ್ಲಿ ಚಿಂತಾಕ್ರಾಂತರಾಗಿದ್ದರು.ಸೂರ್ಯ ನಡು ನೆತ್ತಿಯಲ್ಲಿ ಕೆಂಡ ಕಾರುತ್ತಿದ್ದ.ಪಾಪಿಗಳು ಸೂರ್ಯನ ಕೆಂಡಕ್ಕೆ ಸುಟ್ಟಾರೆಯೇ?ವರ್ಷಕ್ಕೊಂದು ಸಲ ಶ್ರೀಶೈಲ ಯಾತ್ರೆ ಮಾಡಿದರೆ ತಮ್ಮೆಲ್ಲಾ ಪಾಪಗಳು ಸುಟ್ಟು ಹೋಗುತ್ತವೆ ಎಂಬುದಾಗಿ ಕಳ್ಳ ಸ್ವಾಮಿಯೊಬ್ಬ ಹೇಳಿದ ಮಾತನ್ನು ಅವರು ಮನಸಾ ಪಾಲಿಸುತ್ತಿದ್ದರು!

     ಗಿರಗಮ್ಮ ಆಶ್ಚರ್ಯಗೊಳ್ಳಲಿಲ್ಲ!ಬದಲಾಗಿ ಆಕೆ ಮಾಹಾ ಗುರುವಿನಂತೆ ಹೀಗೆಂದು ನುಡಿದಳು:

     “ನೋಡಿ ತಂಗೀ,ನಾನು ನನ್ನ ಅನುಭವದ ಮಾತುಗಳನ್ನು ಹೇಳುತ್ತೇನೆ ಮನಸಿಟ್ಟು ಕೇಳು:ಒಬ್ಬ ಗಂಡಸು ಮೂವತ್ತೈದರ ಒಳಗೆ ಉತ್ಸಾಹಿಯಾಗಿರುತ್ತಾನೆ,ನಲವತ್ತರ ಮೇಲೆ ನಿರುತ್ಸಾಹಿಯಾಗುತ್ತಾನೆ.ನಲವತ್ತರ ಮೇಲೆ ಹೇಗೋ ಬದುಕಿದರೆ ಸಾಕು ಎನ್ನುವ ಭಾವ ಮೂಡಿ ಬಿಡುತ್ತದೆ! ಜೀವನವನ್ನು ಉದಾಸೀನವಾಗಿ ಕಳೆದ ವ್ಯಕ್ತಿ ನಲವತ್ತರ ಮೇಲೆ ಬದುಕುವ ಅನಿವಾರ್ಯತೆಗೆ ಒಳಗಾಗುತ್ತಾನೆ.ಕುಡಿತ,ಧೂಮಪಾನ ಮತ್ತು ವಂಶಪಾರಂಪರ್ಯದ ದೌರ್ಬಲ್ಯಗಳು ಆತನನ್ನು ಆಕ್ರಮಿಸಿಕೊಳ್ಳತೊಡಗುತ್ತವೆ.ಹಣದ ಬಿಕ್ಕಟ್ಟು ತಲೆದೋರುತ್ತದೆ;ಬೆಳದ ಮಕ್ಕಳು ಯಾವ ದಡಕ್ಕೂ ಸೇರಲಿಲ್ಲವೆಂಬ ವ್ಯಸನ ಶುರುವಾಗುತ್ತದೆ.ಮಾಡಿಕೊಂಡ ಸಾಲಗಳು ಶೂಲಗಳ ಹಾಗೆ ತಿವಿಯುತ್ತಿರುತ್ತವೆ.ಆತ ಸಂಪೂರ್ಣವಾಗಿ ಪತ್ನಿಯ ಮೇಲೆ ಅವಲಂಬಿತನಾಗುತ್ತಾನೆ.ನಾನು ಹೇಳುತ್ತಿರುವುದು ಉದಾಸೀನ ಗಂಡಸಿನ ಬಗ್ಗೆ!ಆತ ಮೀಸೆ ಉರಿ ಮಾಡುತ್ತಾನೆ: ಪೌರುಷ ಮೆರೆಯಲು ಅಲ್ಲ;ತನ್ನೊಳಗೆ ಇನ್ನೂ ಇದೆ ಎನ್ನುವ ಭಾವ ತೋರ್ಪಡಿಸಲು!

ಆತ ಪ್ರತಿಯೊಂದಕ್ಕೂ ಹೆಂಡತಿಯ ಮೇಲೆ ಅವಲಂಬಿತನಾಗುತ್ತಾನೆ.ಲೈಂಗಿಕ ನಿರಾಸಕ್ತಿ ಆತನನ್ನು ಕಾಡತೊಡಗುತ್ತದೆ.ಈ ಹಂತದಲ್ಲಿ ಆತ 'ಅದರ' ಬಗ್ಗೆ ಯೋಚಿಸುವುದನ್ನು ಬಿಟ್ಟು ಬಿಡುತ್ತಾನೆ.ಹೇಗೊ ದಿನಗಳೆದರೆ ಸಾಕಪ್ಪಾ ಶಿವನೆ ಎಂದುಕೊಳ್ಳುತ್ತಾನೆ.

ಆಗಲೇ ಹೆಂಡತಿ ಪ್ರಯೋಗಕ್ಕೆ ಇಳಿಯುತ್ತಾಳೆ.ಇಳಿಯಬೇಕು ಕೂಡಾ!ಈ ಬದುಕುವ ಅನಿವಾರ್ಯತೆ ಇದೆಯಲ್ಲ ಇದು ಮನುಷ್ಯನನ್ನು ಜೀವಂತ ಹೆಣವಾಗಿಸುತ್ತದೆ.ತನ್ನ ದುಡಿಮೆಯ ಶಕ್ತಿ ಕಳೆದುಕೊಂಡ ಪುರುಷ ಮಣ್ಣು ತಿಂದ ಹಾವಾಗುತ್ತಾನೆ.ಆತ ತನಗೆ ಎಲ್ಲಾ ತಿಳಿದಿದ್ದರೂ ತಿಳಿಯದಂತೆ ನಟಿಸುತ್ತಾನೆ.ನಾವೊಂದಿಷ್ಟು ಪ್ರೀತಿಯನ್ನು ಹೆಚ್ಚು ಮಾಡಿದರೆ ಸಾಕು:ತನ್ನ ಹೆಂಡತಿ ದೇವತೆ ಎಂದು ಹೇಳಿಕೊಂಡು ತಿರುಗುತ್ತಾನೆ!

ನಿಜ,ಅಲ್ಲೊಂದು ಇಲ್ಲೊಂದು ಈ ಅನೈತಿಕ ಸಂಬಂಧಗಳ ವಿಷಯಕ್ಕೆ ಕೊಲೆಗಳು,ಜಗಳಗಳು ನಡೆಯುತ್ತಿರುತ್ತವೆ.ಅಲ್ಲಿ ಹೆಂಗಸು ಮೂರ್ಖಳಾಗಿರುತ್ತಾಳೆ.ತನ್ನ ಪುರುಷನನ್ನು ಕಡೆಗಣಿಸಿ ಪರ ಪುರುಷನ ಮೇಲೆ ಸಂಪೂರ್ಣ ಧ್ಯಾನವಿಟ್ಟಿರುತ್ತಾಳೆ.ಅದು ಅತಿಯಾದ ಕಾಮದಾಸೆಯ ಪ್ರಭಾವ,ಇಂತಹ ಮಹಿಳೆಯರು ವೆರೈಟಿ ಸಂಗಗಳಿಂದ ವಂಚಿತರಾಗುತ್ತಾರೆ.ಅಪರಾಧಗಳಿಗೆ ದಾರಿಯಾಗುತ್ತಾರೆ.ಇಡೀ ಊರ ತುಂಬಾ ಗಿರಗಮ್ಮನ ಹಾದರದ ಸುದ್ದಿ ಇದೆ,ಆದರೆ ನನ್ನ ಅಣ್ಣ ತಮ್ಮಂದಿರು,ನನ್ನ ಎದೆಯುದ್ದಕ್ಕೂ ಬೆಳೆದ ಮಕ್ಕಳು,ನನ್ನ ಅತ್ತೆ ಮಾವಂದಿರು,ಮೈದುನದವರು ಮತ್ತು ಗಂಡ;ಇವತ್ತಿಗೂ ದುಸರಾ ಮಾತಾಡಿಲ್ಲ.ಎಷ್ಟು ಜನರ ಸಹವಾಸ ನಿಂಗೆ ಎಂದರೆ ನಾನು ನನ್ನ ತಲೆಯ ಕೂದಲಿನಷ್ಟು ಸಂಖ್ಯೆಯ ಜನ ಎಂದು ಹೆಮ್ಮೆಯಿಂದ ಹೇಳಬಲ್ಲೆ.

ಇದೆಲ್ಲಾ ಹೇಗೆ ಸುಲಭವಾಗುತ್ತದೆ ಎಂದರೆ-ನನ್ನನ್ನೊಂದಿಗೆ ಸಂಬಂಧ ಬೆಳೆಸುವ ವ್ಯಕ್ತಿ ನನ್ನ ಒಟ್ಟಾರೆ ಕುಟುಂಬದಲ್ಲಿ ಯಾರೊಬ್ಬರೊಂದಿಗೂ ಒಂದು ವರಸೆಯ ಸಂಬಂಧ ಬೆಸುದುಕೊಂಡರೆ ಸಾಕು;ಉದಾಹರಣೆಗೆ ನನ್ನ ತಮ್ಮನಿಗೆ ಅಳಿಯನೆಂದು,ನನ್ನ ಅಣ್ಣನಿಗೆ ಮಾವನೆಂದು,ನನ್ನ ಗಂಡನಿಗೆ ಅಣ್ಣಾ ಅಥವಾ ತಮ್ಮನೆಂದು ವರಸೆ ಪ್ರಾರಂಭಿಸಿ ಮನೆಗೆ ಬಂದರೆ ಸಾಕು:ವಿಟ ಮನೆ ಹೊಕ್ಕಡೆ ಇವರು ರಾಜಕೀಯದೆಡೆ ಪಲಾಯನಗೈಯ್ಯುವುರು!ಅವರಿಗಿಂದು ವ್ಯಾಪಕ ಜನ ಬೆಂಬಲದ ಭ್ರಮೆ ಹುಟ್ಟುತ್ತದೆ.ಊರಿಗೆ ನನ್ನ ಗಂಡನೇ ನ್ಯಾಯಾಧೀಶ!

ನಿನಗೊಂದು ವಿಚಿತ್ರ ಸಂಗತಿ ಹೇಳುತ್ತೇನೆ ಕೇಳು:ತುಂಬಾ ಜನ ಅಕ್ಕಾ ಎಂದು ಕರೆಯುತ್ತಲೇ ಸ್ತನಗಳಿಗೆ ಕೈ ಹಾಕುತ್ತಾರೆ.ಅಸಲು ಈ ಕಳ್ಳ ಸಂಬಂಧಗಳು ಏರ್ಪಡುವುದೇ ಮೊದಲು ಯಣ್ಣಾ ಯಕ್ಕಾ ಅನ್ನುತ್ತಾ!ಸಣಮ ಸಣಮ ಅನಕೊಂತಾ ಹಾದರ ಮಾಡಿದವರನ್ನು ನೋಡಿದ್ದೇನೆ.ತಂಗಿ ಅಕ್ಕಾ ಅನಕೊಂತಾ ಹಾದರ ಮಾಡಿದವರನ್ನೂ ನೋಡಿದ್ದೇನೆ!

ನೋಡು ತಂಗಿ,ಮನುಷ್ಯನಿಗೂ ನಾಯಿ ದನಗಳಿಗೂ ಆ ವಿಷಯದಲ್ಲಿ ಅಂತಹ ವ್ಯತ್ಯಾಸವೇನೂ ಇಲ್ಲ.ನಾವು ವರಸೆಗಳನ್ನು ಮಾಡಿಕೊಂಡಿದ್ದೇವೆ,ಅವು ಮಾಡಿಲ್ಲ ಅಷ್ಟೆ!

ಮನುಷ್ಯನಲ್ಲಿ ನೈತಿಕತೆ ಎನ್ನುವುದು ಹಳೆಯ ಕಾಲದಲ್ಲಿ ಇತ್ತೇನೋ,ಅದೀಗ ಸತ್ತು ಹೋಗಿದೆ.ಇಲ್ಲಿ ಹಾದರಗಿತ್ತಿಯರ ರಾಜ್ಯಭಾರವು ಪ್ರಾರಂಭವಾಗಿದೆ.ಆದಷ್ಟು ಈ ಸಂಸ್ಕೃತಿಯನ್ನು ನಾವು ಬೆಳಸಬೇಕು!”ಮಾತು ನಿಲ್ಲಿಸಿದಳು ಗಿರಗಮ್ಮ.

ಬೀಸುವ ಗಾಳಿ ಒಂದು ಕ್ಷಣ ಸ್ತಬ್ಧವಾಯಿತು.ಓ ದೇವರೇ ಎಂಥಹ ಪಾಪಿಗಳಿಗೆ ನಾನು ಉಸಿರಾಗಬೇಕಲ್ಲಾ ಎಂದು ಗಾಳಿಯೂ ಚಡಪಡಿಸಿತು.ಅಷ್ಟ ದಿಕ್ಕುಗಳು ಗಿರಗಮ್ಮನ ಮಾತಿಗೆ ತಲ್ಲಣಿಸಿ ಹೋದವು.ಸೂರ್ಯ ನಡು ನೆತ್ತಿಗೆ ಏರಿ ಇನ್ನಷ್ಟು ಕೆಂಡ ಸುರಿಸುವ ಪ್ರಯತ್ನ ಮಾಡುತ್ತಾ ಆ ಪ್ರಯತ್ನದಲ್ಲಿ ವಿಫಲನಾಗಿ ಹತಾಶನಾದ.ಬೇವಿನ ಮರ ಕಹಿ ನೆರಳು ಒದಗಿಸದಾಗದ ತನ್ನ ಅಸಹಾಯಕತೆಗೆ ಒಳಗೊಳಗೇ ಕಣ್ಣೀರು ಹಾಕಿತು.

ಗಿರಗಮ್ಮ ಮಾತು ಪ್ರಾರಂಭಿಸಿದಳು:

“ಈ ದುಷ್ಟ ಪ್ರಪಂಚದಲ್ಲಿ ಅಗಾಧ ಸುಖ ಅನುಬವಿಸುತ್ತಿರುವ ಪುಣ್ಯಾತಗಿತ್ತಿಯರು ನಾವಾದರೂ ನಾವಷ್ಟೆ ಮೊದಲಿಗರಲ್ಲ.ಇದು ನನ್ನ ಅತ್ತೆ ನನ್ನ ತಾಯಿ ಹಾಕಿಕೊಟ್ಟ ಪಂಕ್ತಿ ಅಷ್ಟೆ, ಇ ಸಂದರ್ಭದಲ್ಲಿ ನಿನಗೊಂದು ಮೊನ್ನೆ ಮೊನ್ನೆ ನಡೆದ ಕಥೆಯೊಂದು ಹೇಳುತ್ತೇನೆ.ವ್ಯಕ್ತಿಯೊಬ್ಬ ಒಂದು ಹುಡುಗಿಯನ್ನು ಆ ಹುಡುಗಿ ತನ್ನ ಕಳ್ಳ ಪ್ರೇಮಿಯ ಜೊತೆ ಕಾಮಕ್ರೀಡೆಯಲ್ಲಿ ನಿರತನಾಗಿರುವಾಗ ರೆಡ್‌ಹ್ಯಾಂಡ್ ಆಗಿ ಹಿಡಿಯುತ್ತಾನೆ.ನಂತರ ದಿನಗಳಲ್ಲಿ ಏನಾಯಿತು ಎಂದರೆ........”ಆಕೆ ಉಸಿರು ಪಡೆಯಲು ಕ್ಷಣ ಹೊತ್ತು ತಡೆದಳು.


*ಕೊಳಕೂರಿನ ಪ್ರಣಯ ಪ್ರಸಂಗಗಳು ಭಾಗ-೩*

     ಜಾಂಬವತಿ!

     ‘ಜಾಂಬವತಿ’ ಕನ್ನಡ ಚಿತ್ರ ರಂಗಕ್ಕೆ ಉಪೇಂದ್ರರು ಪರಿಚಯಿಸಿದ ಪಾತ್ರ ಮಾರಿಮುತ್ತುವಿಗೆ ಅನ್ವರ್ಥಕ ನಾಮವಾಗಿದ್ದಳು.ತನ್ನ ದೃಢಕಾಯ ಮತ್ತು ಮೇರು ಪರ್ವತದಂತಹ ಹೊಟ್ಟೆಯಿಂದಾಗಿ ಆಕೆಯನ್ನು ಮಾರಿ ಮುತ್ತು ಎಂದು ಓಣಿಯ ಜನ ಕರೆಯುತ್ತಿದ್ದರು.ಮಹಾ ಗಯ್ಯಾಳಿಯಾದ ಆಕೆ ಹಿಂದೊಂದು ದಿನ ತಾನು ಕೂಲಿ ಎಂಬಂತೆ ಎಂಜಲಿ ತಟ್ಟೆಗಳನ್ನು ಶುಚಿರ್ಭೂತವಾಗಿ ತೊಳೆಯುವ ಮಾಹಾ ಪ್ರಾವಿಣ್ಯದ ಹೆಣ್ಣಾಗಿದ್ದಳು.ಗುತ್ತಿಗೆದಾರರ ತಂಡ ಆಕೆ ಶುಚಿತ್ವಕ್ಕೆ ಮೆಚ್ಚಿ ಭಲೇ ಜಾಂಬವತಿ ಎಂದು ಕೊಂಡಾಡುತ್ತಿದ್ದರು!ವಯಸ್ಸಿನಲ್ಲಿ ಇನ್ನೂ ಚಿಕ್ಕವಳಾಗಿದ್ದ ಜಾಂಬವತಿ ಅರಬ್ಬಿ ದೇಶದ ಕಪ್ಪು ಕುದುರೆಯಂತಿದ್ದಳು.ಕೃಷ್ಣಸುಂದರಿಯಾಗಿದ್ದ ಆಕೆ ದುಂಡು ಮುಖದ ಅಪರೂಪದ ಸೌಂದರ್ಯವತಿಯಾಗಿದ್ದಳು.ಆಕೆಯೂ ಗುತ್ತಿಗೆದಾರರ ಕೂಟಗಳು ನಡೆಸುವ ಗ್ರ್ಯಾಂಡ್ ಪಾರ್ಟಿಯಲ್ಲಿ ಎಷ್ಟೊಂದು ವಾಣಾಕ್ಷತನದಿಂದ ಭಾಗಿಯಾಗುತ್ತಿದ್ದಳೆಂದರೆ ಮೂಳೆಗಳು ಹದವಾಗಿ ಬೇಯುವಂತೆ ಜವಾರಿ ಕೋಳಿಯನ್ನು ಹಿತವಾಗಿ ಬೇಯುಸುತ್ತಿದ್ದಳು.ಊಟ ಮಾಡುವ ಉನ್ಮತ್ತ ಗುತ್ತಿಗೆದಾರರು ಆಹಾ ಜಾಂಬವತಿ ಎಂದು ಕನವರಿಸುತ್ತಿದ್ದರು.ಮುದಿ ಗಂಡನ ಹೆಂಡತಿಯಾದ ಜಾಂಬವತಿ ಪರ ಪುರುಷ ಸ್ನೇಹಿಯಾಗಿದ್ದಳು.ಗುತ್ತಿಗೆದಾರರ ಸಂತೋಷ ಕೂಟಗಳಲ್ಲಿ ಹಿತವಾಗಿ ನರ್ತಿಸುತ್ತಿದ್ದ ಆಕೆ ರಾಜಿವ್‌ನನ್ನು ಸೆಳೆದ ಸೋನಿಯಾಳಾಗಿರುತ್ತಿದ್ದಳು.ಪರಮ ಅಹಸ್ಯದ ಎಂಜಲು ಎತ್ತುವ ಹೆಣ್ಣಾಗಿದ್ದರಿಂದ ಸ್ವತಃ ಆಕೆಯ ಗಂಡನೂ ಆಕೆಯನ್ನು ಬಳಸಿಕೊಳ್ಳುತ್ತಿರಲಿಲ್ಲವಾದರೂ ಅದ್ಯಾವ ಪುರುಷ ಸಂಗಮಕ್ಕೋ ತನ್ನಂತಹದೇ ತದ್ರೂಪಿ ಹೆಣ್ಣೊಂದಕ್ಕೆ ಜನನ ಕೊಟ್ಟಿದ್ದಳು.ಆದರೆ ಪದೇ ಪದೇ ಸಂತೋಷ ಕೂಟಗಳಲ್ಲಿ ಭಾಗವಹಿಸಿ ರೂಢಿಯಾದ ಆಕೆ ಒಬ್ಬ ಗಂಡನೊಂದಿಗೆ ಬದುಕುವುದು ಪರಮ ಹೇಯ ಎಂದು ಭಾವಿಸಿದ್ದಳು.ಅವಳ ಈ ಅಂತರ್ಗತ ಮನಸ್ಸಿನ ಭಾವ ತಥಾಸ್ತಿಗೆ ಒಳಪಟ್ಟಂತೆ ಕೆಂಪು ಮುಖದ ಚೆಲುವ ಆಂತೋಣಿ...

     ಆಂತೋಣಿ:

     ಆಂತೋಣಿ ಅಪ್ಪಟ ರಸಿಕ.ಇಂಗ್ಲೀಷರ ಕೊನೆಯ ಪಳಿಯುಳಿಕೆಯಂತಿದ್ದ ಆಂತೋಣಿಯಲ್ಲಿ ಇಂಗ್ಲೀಷರ ವಂಶವಾಹಿನಿಗಳಿವೆ ಎನ್ನುವುದನ್ನು ಯಾರಾದರೂ ನಂಬುವಂತಿತ್ತು.ಆಂತೋಣಿಯನ್ನು ನೋಡಿದ ಯಾರಾದರೂ ಇವನೊಬ್ಬ ಫಿರಂಗಿಯವನು ಎನ್ನುವ ಭ್ರಮೆಗೆ ಒಳಗಾಗುತ್ತಿದ್ದರು.ಅಪ್ಪಟ ಚಿತ್ತಿ ಬೆದೆಯಲ್ಲಿ ಜನಸಿದವನಂತಿದ್ದ ಇವನು ಮಾಹಾ ರಸಿಕನಾಗಿದ್ದ.ನಾಯಿಗೂ ಇವನಿಗೂ ಯಾವುದೇ ವ್ಯತ್ಯಾಸವಿಲ್ಲವೆಂದು ಅವನ ಗೆಳೆಯರು ವ್ಯಂಗಿಸುತ್ತಿದ್ದರು.ಅವನಿಗೆ ವಿರುದ್ದ ಲಿಂಗಿ ಮಾತ್ರ ಬೇಕಿತ್ತು;ಆತ ದೇಹದ ಸೌಂದರ್ಯ ಚೆಲುವು ಮಣ್ಣು ಮುಸಿಗಳಿಗೆ ಬೆಲೆ ಕೊಡುತ್ತಿರಲಿಲ್ಲ.ಹೇಗೆಂದರೆ ಹಾಗೆ ಸಿಕ್ಕ ಹೆಂಗಸರ ದೇಹ ಮತ್ತು ಮನಸ್ಸು ಸೇರಿ ಬಿಡಬಹುದಾದ ಮಾಹಾ ಚಾಣಾಕ್ಷನವನು!ಅವನ ವಿಕೃತ ಕ್ರಿಯೆಗಳನ್ನು ಮನಗೊಂಡ ಅವನ ಗೆಳೆಯರು ಅವನನ್ನು ಗುದ್ದಪ್ಪನೆಂದು ಕರೆಯುತ್ತಿದ್ದರು.ಗುದ್ದಪ್ಪನೆಂಬ ಕ್ರಿಯಾಪದವು ನಾಮವಾಚಕವಾಗಿ ಬದಲಾಗಿತ್ತಲ್ಲದೆ ಆ ನಾಮವಾಚಕವು ಆಂತೋಣಿಗೆ ಅನ್ವರ್ಥಕ ನಾಮವಾಗಿತ್ತು.

     ಇಂತಿರುವ ಆಂತೋಣಿ ಅದೊಂದು ದಿನ ತಮ್ಮ ಗೆಳೆಯರೊಂದಿಗೆ ಕ್ಯಾಂಪಿನಲ್ಲಿ ಪಾರ್ಟಿ ಮಾಡುವ ಸಂದರ್ಭದಲ್ಲಿ ಅರಬ್ಬಿ ದೇಶದ ಕೊಬ್ಬಿಲ್ಲದ ಏಳು ಗೇಣಿನ ಕುದುರೆಯಂತಿರುವ ಕಪ್ಪು ಸುಂದರಿ ಜಾಂಬವತಿಯನ್ನು ಕಂಡಿದ್ದೇ ಹುಚ್ಚನಾಗಿಬಿಟ್ಟ.ಮೊದಲೇ ಕಂಠಪೂರ್ತಿ ಕುಡಿದದ್ದನಲ್ಲ?ಆತ ತನ್ನ ಮನಸ್ಸನ್ನು ನಿಯಂತ್ರಿಸದಾದ.ಜಾಂಬವಂತನ ತಂಗಿ ಸತ್ಯಭಾಮೆಯನ್ನು ಹೋಲುವ ಕೃಷ್ಣ ಸುಂದರಿಯನ್ನು ತಾನು ಸೇರದೆ ಹೋದರೆ ಈ ಜನ್ಮ ಅಪೂರ್ಣವಾಗಲಿದೆ ಎಂದು ಮನಸಾರೆ ಭಾವಿಸಿದ.ನಾಳೆ ಸ್ವರ್ಗ ನರಕಗಳ ವಿಚಾರಣಯ ಸಂದರ್ಬದಲ್ಲಿ ಭೂಮಿಯ ಮೇಲಿನ ಅತೃಪ್ತ ಕಾಮನೆಗಳ ಪ್ರಸ್ತಾಪವಾದಲ್ಲಿ ಜೀಸಸ್ ಕ್ರೈಸ್ಟ್ ತನ್ನನ್ನು ಹೀಯಾಳಿಸಿದರೆ ಹೇಗೆ?ಹಾಗಂತ ಯೋಚನೆ ಮಾಡಿ ಕತ್ತಲಲ್ಲಿ ಜಾಂಬವತಿಯನ್ನು ತಬ್ಬಿಕೊಂಡುಬಿಟ್ಟ!ನಂತರ ನಡೆದಿದ್ದು ಇತಿಹಾಸವಾದರೂ...

     ಆಂತೋಣಿ ಕೃಷ್ಣ ಸುಂದರಿಯನ್ನು ಬಿಟ್ಟಿರದಾದ!ಅಲ್ಲಿನ ಗುತ್ತಿಗೆ ಕಾಮಗಾರಿಗಳು ಮುಗಿದಾದ ನಂತರ ಅದೊಂದು ದಿನ ಅವನ ಗೆಳೆಯರು ಕೇಳಿದ್ದರು:“ಉಹುಂ,ಮುಗಿತಲ್ಲಪ್ಪ,ಇನ್ನೂ ಜಾಂಢ ಕಿತ್ತುವುದೇ!?”ಎಂದು.ಅಂದರೆ ಅರ್ಥ ಜಾಂಬವತಿಗೆ ಕೈಕೊಟ್ಟು ಇನ್ನು ಹೊರಟು ಹೋಗುವುದು ಎಂದು.ಆದರೆ ಆಂತೋಣಿಯೇನು ಕಡಿಮೆ ಅಂದಾಜಿನ ವ್ಯಕ್ತಿಯಾಗಿರಲಿಲ್ಲ.ಆತ ತನ್ನ ಗೆಳೆಯರನ್ನು ಉದ್ದೇಶಿಸಿ ಹೇಳಿದ ಮಾತೆಂದರೆ-

     “ನೋಡು ಗಂಡಸು ಎಂದರೆ ಗಂಡಸು ಮಾತ್ರ!ಆಂತೋಣಿ ಮನಸ್ಸಿನಲ್ಲಿ ಒಂದು ನಿರ್ಧಾರ ಮಾಡಿದರೆ ಮುಗಿದು ಹೋಯಿತು.ಜಾಂಬವತಿಯ ಸಂಸಾರವನ್ನು ಮುರಿದು ನನ್ನ ಹಿಂದೆ ಬರುವಂತೆ ಮಾಡುತ್ತೇನೆ,ನೋಡುತ್ತಾ ಇರಿ.ಸಿಂಹದ ಹೆಜ್ಜೆಗಳು ದೃಢವಾಗಿರುತ್ತವೆ.ಅವು ಅಳಿಸಲಾಗದು.ನಾನು ಕಿಂದರ ಜೋಗಿ!ಕಿನ್ನರಿಗೆ ಮನಸೋತ ಕನ್ಯೆಯ ಹಾಗೆ ಆಕೆ ನನ್ನ ಹಿಂದೆ ಬೆನ್ನತ್ತಿ ಬರುತ್ತಾಳೆ.ನೋಡುತ್ತಾ ಇರಿ!”ಎಂದಿದ್ದ.ಆತ ಅಂದಂತೆಯೇ ಜಾಂಬವತಿ ತನ್ನ ತುಂಬು ಸಂಸಾರದಿಂದ ವಿಮುಖಳಾಗಿ ಮುಗ್ದ ಗಂಡನಿಗೆ ಎಡಗಾಲಿನಿಂದ ಒದ್ದು ತನ್ನ ಕರುಳ ಕುಡಿಯನ್ನು ಹೊತ್ತು ತವರಿಗೆ ದೌಡಾಯಿಸಿದ್ದಳು.ಏಕೆಂದರೆ ಆಂತೋಣಿಯ ಮುಂದಿನ ಕಾಮಗಾರಿಗಳು ಆಕೆಯ ತವರಿನಲ್ಲಿ ಪ್ರಾರಂಭವಾಗಿದ್ದವು.ತವರಿನಲ್ಲಿ ಮತ್ತೆ ಹಾಲು ಜೇನಿನಂತೆ ಒಂದಾದ ಪ್ರೇಮ ಜೀವಿಗಳು ಆದುನಿಕ ಜಗತ್ತಿನ ನಿಯಮಕ್ಕೊಳಪಟ್ಟಂತೆ living together ಮಾದರಿಯಲ್ಲಿ ಜೀವನ ಸಾಗಿಸುತ್ತಿರುವಂತೆ...

ಆ ಊರಿನ ಹಿರಿಯರು ಆಂತೋಣಿಗೆ “ಭಪ್ಪರೆ ಮಗ ಕರ್ಣ!”ಎಂದು ಬಿರುದು ಕೊಟ್ಟಿದ್ದರು!ಎಷ್ಟು ಗುಂಡಿಗೆ ಇದ್ದರೆ ಒಂದೂರಿನ ಸೊಸೆಯನ್ನು ಗಂಡನನ್ನು ಅಗಲಿಸಿ ತನ್ನ ತವರಿಗೆ ಕರೆ ತಂದು ತವರಿನ ಮನೆತನದ ಎದುರಿನಲ್ಲಿ ಇನ್ನಾವುದೇ ಭಯವಿಲ್ಲದೆ ಸಾಕ್ಷಾತ್ ಗಂಡಸರ ಎದುರಿಗೆ ಅನಧಿಕೃತ ಸಂಸಾರ ಹೂಡಿದ್ದಾನೆ ಎಂದರೆ-ಆಂತೋಣಿ ನಿಜಕ್ಕೂ ಭಪ್ಪರೆ ಮಗ ಕರ್ಣನಾಗಿದ್ದನು!

     ಹಿಂಗರಿಬೇಕಾದರೆ ಜಾಂಬವತಿಯ ಗರ್ಭದಲ್ಲಿ ಅನಧಿಕೃತ ಸಂಸಾರಕ್ಕೆ ಸಾಕ್ಷಿಯಾಗಿ ಗರ್ಭವೊಂದು ಮೈತಳೆಯುವುದಕ್ಕೂ ಜಾಂಬವತಿಗೆ ವಿಕ್ಷಣ ರೀತಿಯ ತಳಮಳ ಶುರಯವಾಗುವುದಕ್ಕೂ ಸರಿ ಹೋಯಿತು.ಆಂತೋಣಿಯ ರಂಡಿ,ಆಂತೋಣಿಯ ರಂಡಿ ಎಂದು ಕರೆಸಿಕೊಳ್ಳುತ್ತಾ ಆಕೆ ಎಷ್ಟು ರೋಶಿ ಹೋದಳೆಂದರೆ ಹೊಟ್ಟೆಯಲ್ಲಿ ಆರು ತಿಂಗಳ ಮಗು ಇರುವಂತೆ ಆಕೆ ಆ ಊರಿನ ಇಗರ್ಜಿಯ ಬಾಗಿಲಲ್ಲಿ ನಿಂತು ಫಾದರ್ ಕ್ರಿಸ್ಟೋಫರ್ ಅವರನ್ನು ಕೋಗಿದ್ದಳು!(ಮುಂದುವರೆಯುವುದು)

                      *ಲಕ್ಷ್ಮೀಕಾಂತ ನಾಯಕ*


    *ಕೊಳಕೂರಿನ ಪ್ರಣಯ ಪ್ರಸಂಗಗಳು ಭಾಗ-*
     
          ಗಿರಗಮ್ಮ ತನ್ನ ಅನುಭವದ ಕಥೆಯನ್ನು ಹೇಳುತ್ತಾ ಆಯಾಸಗೊಂಡವಳಂತಾಗುವುದಕ್ಕೂ ಬೇವಿನ ಮರದಡಿಯ ಹಾದರಗಿತ್ತಿಯೊಬ್ಬಳ ರವಿಕೆಯೊಳಗಿನಿಂದ ಎಂಥಹ ಅಬ್ಬರದ ಚೀನಾ ಮೊಬೈಲ್ ರಿಂಗ್ಟೋನ್ ಕೇಳಿಬಂದಿತೆಂದರೆ my god! ಮಧ್ಯಾಹ್ನದ ಬಿಸಿಲಿನ ಹೊತ್ತು,ನಭೋ ಮಂಡಲವೇ ಅಲುಗಾಡಿದಂತೆ ಮರದಡಿಯ ನೆರಳಿನಲ್ಲಿ ವಿಶ್ರಾಂತ ಸ್ಥಿತಿಯಲ್ಲಿದ್ದ ಎಲ್ಲಾ ಪ್ರಾಯದ ಹಾದರಗಿತ್ತಿಯರು ತಮ್ಮ ಕಣ್ಣಿಗೆ ಆವರಿಸಿಕೊಂಡಿದ್ದ ಜಡತ್ವವನ್ನೆಲ್ಲಾ ತೊರೆದು ಬೆಚ್ಚಿ ಬಿದ್ದಿದ್ದರು.ಎಲ್ಲರೂ ಜಾಗ್ರತೆಗೊಳ್ಳುತ್ತಿರುವಂತೆ ಗಿರಗಮ್ಮನ ಕಥೆಯ ಸೊಂಪಿಗೆ ಮೈ ಮರೆತಿದ್ದ ತಾವುಗಳು ದಿಗ್ಗನೆ ಎದ್ದು ಕುಳಿತಿದ್ದರು.ಪೋನ್ ತನ್ನ ಅಬ್ಬರದ ಧ್ವನಿಯಲ್ಲಿ ಮೊಳಗಿದ್ದು ರೀಣಮ್ಮನ ಮೊಲೆಗಳ ಸಂದಿಯಿಂದ.ರಿಂಗ್ಟೋನ್ ಮತ್ತು ಅದರ ವೈಬ್ರೇಷನ್ ಮೋಡ್ ವಿಲಕ್ಷಣ ಕಂಪನಕ್ಕೆ ಹಿತವಾದ ಸುಖದ ಅನುಭೂತಿಯೊಂದಿಗೆ ರೀಣಮ್ಮ ಫೋನ್ ಹೊರತೆಗೆದಳು. ಹೊತ್ತಿಗೆ ವಿಟನಲ್ಲದೆ ಮತ್ತ್ಯಾರು ಫೋನ್ ಮಾಡುವುದಿಲ್ಲ ಎನ್ನುವುದು ಆಕೆಯ ನಿಜ ನಂಬಿಕೆಯಾಗಿತ್ತಾದರೂ ಫೋನ್ ಮಾಡಿದ್ದು ಆಕೆಯ ಅತ್ತೆಯಾಗಿದ್ದಳು.ಅತ್ತೆಯ ಸಹಕಾರದಿಂದಲೇ ಅಲ್ಲವೇ ತಾನಿಷ್ಟೆಲ್ಲ ಶಿಸ್ನಗಳ ಒಡತಿಯಾಗಿರುವುದು ಎಂಬೊಂದು ಭಾವ ಮನಸ್ಸಿನಲ್ಲಿ ಹಾದು ಹೋಗುತ್ತಲೆ ಆಕೆ ಹಲೋ ಎಂದಳು!

          ಕಡೆಯಿಂದ ಕೇಳಿದ ಮಾತಿನಿಂದ ನಂತರ ಏನು ನಡೆಯಿತು ಎಂದರೆ...

          ಒಂದು ವಿಲಕ್ಷಣವಾದ ನರ್ತನ ಅಷ್ಟ ದಿಕ್ಕುಗಳು ದಿಗ್ರಮೆಗೊಳಗಾಗುವಂತೆ ನಡೆಯಿತು.ಸಮಸ್ತ ಹಾದರಗಿತ್ತಿಯರೆಲ್ಲಾ ತಮ್ಮ ವಯಸ್ಸಿನ ತಾರತಮ್ಯ ಮರೆತು ಹೆಜ್ಜೆ ಹಾಕಿದರು.ಭೂಮಿ ಪಾಪಿಗಳನ್ನು ಹೊತ್ತ ಪಾಪಕ್ಕೆ ಲಜ್ಜೆಗೊಳಗಾಯಿತು;ಪರಿಸರದ ಮರಗಿಡಗಳೆಲ್ಲ ಸಂಕೋಚದಿಂದ ಮುದುರಿ ಹೋದವು. ಹಾದರಗಿತ್ತಿಯರ ನೃತ್ಯವೂ ಎಷ್ಟೊಂದು ಅಸಹ್ಯಕರವಾಗಿತ್ತೆಂದರೆ ಬೇವಿನ ಮರ ನಾಚಿ ಸ್ತಬ್ಧವಾಯಿತು.ಪಾಪಿಗಳ ನೃತ್ಯ ನೋಡದೆ ಸೂರ್ಯ ಒಂದು ಕ್ಷಣ ಮೋಡದಲ್ಲಿ ಮರೆಯಾದ. ರುದ್ರ ಭಯಂಕರ ನರ್ತನದ ನಂತರ ಹಾದರಗಿತ್ತಿಯರೆಲ್ಲಾ ಏನು ಮಾಡಿದರೆಂದರೆ,

          ತಮ್ಮ ತಮ್ಮ ಹಸ್ತಗಳನ್ನು ಜೋಡಿಸಿ ದಿಲ್ಲಿ ಇರಬಹುದಾದ ದಿಕ್ಕಿನ ಕಡೆಗೆ ಕೈ ಮುಗಿದು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಕುರಿತು ಭಗವಂತನಲ್ಲಿ ರೀತಿ ಬೇಡಿಕೊಂಡರು:

          ಕರುಣಾಮಯನಾದ ನ್ಯಾಯಾಧೀಶನೆ, ಕೊನಗೂ ಹಾದರಗಿತ್ತಿಯರ ಒಳ ಮನಸ್ಸಿನ ಶತಶತಮಾನದ ಬೇಡಿಕೆಗೆ ನ್ಯಾಯ ಒದಗಿಸಿದಿಯಲ್ಲ ತಂದೆ,ನೀನು ನೂರು ಕಾಲ ಸುಖವಾಗಿದ್ದು ಸಮೃದ್ಧ ಜೀವನ ನಡೆಸು ತಂದೆ.ಜಗತ್ತಿನ ಸಮಸ್ತ ಹಾದರಗಿತ್ತಿಯರ ಆಶಿರ್ವಾದ ನಿನಗಿರುತ್ತದೆ ನಮ್ಮಪ್ಪನೆ!”ಎಂದರು.

          ಅದೇ ದಿನ ಭಾರತ ಸರ್ವೋಚ್ಚ ಘನ ನ್ಯಾಯಾಲಯವೂ ಕಲಂ ನಂಬರ್ ನಾನೂರ ತೊಂಬತ್ತೇಳನ್ನು ಎತ್ತಿ ಹಿಡಿಯುತ್ತಾ ಅನೈತಿಕ ಮತ್ತು ಅಕ್ರಮ ಸಂಬಂಧವೂ ಕ್ರಿಮಿನಲ್ ಅಪರಾಧವಲ್ಲ ಎನ್ನುವ ತೀರ್ಪನ್ನು ನೀಡಿತು.ಹಾದರವೂ ಲೋಕಮಾನ್ಯ ಕ್ರಿಯೆಯಾಗಿ ಅಂದು ಅಧಿಕೃತವಾಗಿ ಘೋಷಿಸಲ್ಪಟ್ಟಿತು.

          ಸಂದರ್ಭದಲ್ಲಿ ಅರ್ಹನಿಸಿ ಸೊಸೆಯ ಹಾದರಕ್ಕೆ ಮುಕ್ತ ಅವಕಾಶ ಒದಗಿಸಿಕೊಟ್ಟ ಮಾಹಾತಾಯಿ ಟಿವಿ ನೋಡುತ್ತಾ ಘನ ನ್ಯಾಯಲಯದ ತೀರ್ಪನ್ನು ನೋಡಿದ್ದಳು.ಮಗಳನ್ನು ದಾರೆ ಎರದುಕೊಟ್ಟ ಮೇಲೆ ಅಳಿಯ ಮತ್ತು ಮಗಳು ತಮ್ಮೂರಿನಿಂದ ವಲಸೆ ಬಂದು ಅತ್ತೆಯ ಊರಿನಲ್ಲಿ ತಳ ಊರಿದ ಕುಟುಂಬ ಬಹು ಕಾಲದಿಂದ ಮಕ್ಕಳ ಭಾಗ್ಯವಿಲ್ಲದೆ ತತ್ತರಿಸಿ ಹೋಗಿತ್ತು.ಇದೇ ಸಂದರ್ಭದಲ್ಲಿ ಮಗನ ಬಹು ಇಷ್ಟದ ಮೇರೆಗೆ ಇದ್ದೂರಿನಲ್ಲಿಯೇ ತೆಗೆದು ಕವಲುದಾರು ಮನೆತನದ ಸೊಸೆ ಮಗನೊಟ್ಟಿಗೆ ಬಾಳ್ವೆ ಮಾಡದೆ ಚಂಡಿ ಹಿಡಿದಿದ್ದಳು.ಅಂತಹ ಷಂಢ ಗಂಡನಿಗೆ ನಾನು ಬಾಳ್ವೆ ಮಾಡಲಾರೆ ಎಂದು ಪಾತಾಳ ಲೋಕದ ಸಂಶೋಧನೆಗಾಗಿ ಆಕೆ ವಲಸೆ ಹೋಗಬಯಸಿದ್ದಳು.ಆಕೆಯ ಮೊದಲ ಪ್ರಯತ್ನದ ಅಂಗವಾಗಿ ಊರ ನೀರು ಸೇದುವ ಬಾವಿಯಲ್ಲಿ ಢುಮುಕಿ ಹೊಡೆದಿದ್ದಳು.ಪಾತಾಳ ಲೋಕದ ಪಲಾಯನಕ್ಕೆ ಅದುವೇ ಸೂಕ್ತ ಮಾರ್ಗವೆಂದು ಆಕೆ ಮನಸಾರೆ ಭಾವಿಸಿದ್ದಳು.ಇಂತಿಪ್ಪ ರೀಣಮ್ಮನ ಸಂಶೋಧನೆಗೆ ಆಕಯ ಷಂಡ ಗಂಡ ಅಡ್ಡ ಬಂದು ತಾನು ಬಾವಿಯ ಆಳಕ್ಕೆ ಡುಮುಕಿ ಹೊಡೆದು ಪಾತಾಳ ಲೋಕ ಪಲಾಯನಕ್ಕೆ ಅಡ್ಡಿ ಉಂಟು ಮಾಡಿದ್ದ.ಅದಾದ ನಂತರ ಅತ್ತೆ ಮಾರ್ಗದರ್ಶನದಲ್ಲಿ ಒಂದು ಅಂಡರ್ಸ್ಟ್ಯಾಂಡಿಗೆ ಬಂದ ಕುಟುಂಬ ರೀಣಮ್ಮನ ಮುಕ್ತ ಹಾದರಕ್ಕೆ ಅನುವು ಮಾಡಿಕೊಟ್ಟಿತ್ತು.ಇದಾದ ಮೇಲೆಯೇ ಸಂತಾನ ಭಾಗ್ಯ ಪ್ರಾಪ್ತವಾಗಿ ಕುಟುಂಬ ನೆಮ್ಮದಿಯಿಂದ ಇದ್ದಿತು.ಇಂತಿಪ್ಪ ರೀಣಮ್ಮಳ ಅತ್ತೆ ಸುಪ್ರಿಂ ಕೋರ್ಟಿನ ತೀರ್ಪು ಕೇಳಿದ್ದೇ ಭಾವೋದ್ವೇಗವನ್ನು ತಾಳದೆ ಹೋದಳು.ತಕ್ಷಣ ಫೋನ್ ಕೈಗೆ ತೆಗೆದುಕೊಂಡು ಸೊಸೆಗೆ ಸುದ್ದಿ ಮುಟ್ಟಿಸಿ ಹಾದರಗಿತ್ತಿಯರ ಸಾಂಕ್ರಾಮಿಕ ಹರ್ಷಕ್ಕೆ ಕಾರಣಳಾಗಿದ್ದಳು.ಆಕೆ ಮಾಹಾ ಅತ್ತೆ,ಮತ್ತು ಮಹಾ ತಾಯಿ ತಾನಾಗಿದ್ದಳು!ವಲಸೆ ಬಂದ ಅಳಿಯ ಸಂತಾನ ಭಾಗ್ಯದಿಂದ ವಂಚಿತನಾಗಿ ಬಹು ವರ್ಷಗಳ ಕಾಲ ನರಳುತ್ತಿರುವಂತೆ ಮನ್ವಂತರಾಯನೆಂಬ ಕೊಳಕೂರಿನ ಹುಲಿಯನ್ನು ಪಳಗಿಸಿ ಮಗಳಿಗೆ ಸಂತಾನ ಭಾಗ್ಯ ಪ್ರಾಪ್ತ ಮಾಡಲು ವಿನಂತಿಸಿಕೊಂಡಿದ್ದಳು.ಕರಿ ಹುಲಿ ಮನ್ವಂತರಾಯ ಬಿಯರಿನೊಂದಿಗೆ ಬೀಜ ನಾಟಿಸುವ ಶಪಥ ಮಾಡಿ ಸದಾ ಹಗಲಿರುಳು ಸ್ರಮಿಸುತ್ತಿರುವನು.

          ಕೆಲ ಹೊತ್ತು ತಮ್ಮ ಸಂತೋಷವನ್ನು ವಿಲಕ್ಷಣ ನೃತ್ಯದಲ್ಲಿ ಪ್ರಕಟಿಸಿದ ಹಾದರಗಿತ್ತಿಯರ ಸಂಕುಲ ಬೇವಿನ ಮರದಡಿ ವಿಶ್ರಾಂತರಾದರು.ಭಾರತೀಯ ನ್ಯಾಯ ವ್ಯವಸ್ಥೆಗೆ ಮನಸಾರೆ ಒಂದಿಸಿದ ಹೆಂಗೆಳೆಯರು ತಮ್ಮ ಜೀವನ ಬಹು ದೊಡ್ಡ ಕೋರಿಕೆಯೊಂದು ಈಡೇರಿದ್ದಕ್ಕೆ ಆನಂದವನ್ನು ತಡೆಯದಾಗಿದ್ದರು.ಅವರ ಎಲ್ಲಾ ಅಡೆತಡೆಗಳೂ ಸಂಪೂರ್ಣ ನಿರ್ನಾಮವಾಗಿ ಹೋಗಿದ್ದವು.ಆಗೊಮ್ಮೆ ಈಗೊಮ್ಮೆ ಮರ್ಯಾದೆ ಎನ್ನುವ ಪದ ಅಡ್ಡ ಬಂದು ಗಂಟಲಿನಲ್ಲಿ ಬಿಸಿ ತುಪ್ಪದ ರೀತಿಯಲ್ಲಿ ಬಾಧಿಸುತ್ತಿದ್ದ ಸಮಸ್ಯ ಸಂಪೂರ್ಣವಾಗಿ ಇನ್ನಿಲ್ಲವಾಗಿತ್ತು.ಭಾರತೀಯ ದಂಡ ಸಹಿಂತೆ ಹಾದರಗಿತ್ತಿಯರಿಗಿರುವ ಎಲ್ಲಾ ಅಡೆತಡೆಗಳನ್ನು ತೊಡೆದು ಹಾಕಿತ್ತು.ಮಾನ ಮರ್ಯಾದೆ ಮನೆತನ ಎನ್ನುವ ಕಡು ಘೋರ ಶಬ್ದಗಳು ಅರ್ಥ ಕಳೆದುಕೊಂಡಿದ್ದವು;ಅವು ಅರ್ಥ ಕಳೆದುಕೊಂಡಿರುವುದು ಎಲ್ಲರ ಸಂತೊಷಕ್ಕೆ ಕಾರಣವಾಗಿತ್ತು‌.

          ಹಳ್ಳಿಗಳ ಗದ್ದೆಗಳು,ಗದ್ದೆಯ ಬದುಗಳು,ಜಾಲಿಕಂಠಿಗಳು,ಹಳ್ಳದ ತೀರಗಳು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಸಂಭ್ರಮದ ತಾಣಗಳಾಗಿ ಬದಲಾಗಿದ್ದರೆ ಇನ್ನೂ ಸಿಟಿಗಳು ಬೇರೆಯದೇ ರೀತಿಯಲ್ಲಿ ಸಂಭ್ರಮ ಆಚರಿಸಿಕೊಂಡವು!ಕಲಂ ನಂಬರ್ ೪೯೭ಕ್ಕೆ ಇಡೀ ದೇಶವು ಅಭಿನಂದನೆ ಸಲ್ಲಿಸಿತು.

          ಸ್ವಲ್ಪ ಹೊತ್ತಿನ ವಿಶ್ರಾಮದ ನಂತರ ಗಿರಗಮ್ಮ ಜಾಂಬವತಿಯ ಕಥೆಯನ್ನು ಮುಂದುವರೆಸಿದಳು.(ಮುಂದುವರೆಯುವುದು)

                                     *ಕೊಳಕೂರಿನ ಪ್ರಣಯ ಪ್ರಸಂಗಗಳು ಭಾಗ-೫*

          ಮರೀನಾ ಸೇರಿದಂತೆ ಬೇವಿನ ಮರದಡಿಯ ನೆರಳಿಗೆ ಮಧ್ಯಾಹ್ನದ ಕೂಳು ತಿಂದು ವಿಶ್ರಾಂತರಾಗಿದ್ದ ಹಾದರಗಿತ್ತಿಯರು ಗಿರಗಮ್ಮ ತನ್ನ ಹಾದರ ಪ್ರಪಂಚಕ್ಕೆ ಸಾಮ್ರಾಜ್ಞಿಯಾದ ಅನುಭವದ ಸ್ಪೂರ್ತಿಯ ಕಥೆ ಹೇಳುತ್ತಿದ್ದರೆ ಎಲ್ಲರೂ ಕಿವಿ ನಿಮಿರಿಸಿ ಕೇಳುತ್ತಿದ್ದರಷ್ಟೆ!ಆಕೆಯ ಅನುಭವ ರೋಚಕವಾಗಿತ್ತು;ಮತ್ತು ಉಲ್ಲಾಸಭರಿತವಾಗಿತ್ತು.ಹಾದರಗಿತ್ತಿಯರಾಗಲು ಸ್ಪೂರ್ತಿಯಾಗಿತ್ತು,ಹೊಸದಾಗಿ ಹಾದರ ಪ್ರಪಂಚಕ್ಕೆ ಕಾಲಿಡಲು ಹೊರಟ ನವ ತರುಣಿಯರಿಗೆ ರೋಮಾಂಚಕವಾಗಿತ್ತು.ಆಕೆ ತನ್ನ ಹಾದರದ ಅನುಭವವನ್ನು ಓತಪ್ರೋತವಾಗಿ ನಿಶ್ಚಲ ಸ್ವರದಲ್ಲಿ ಹೇಳುತ್ತಿದ್ದಳಷ್ಟೆ.ಪ್ರತಿಯೊಬ್ಬರ ಅನುಭವವೂ ಇನ್ನೊಬ್ಬರ ಬದುಕಿಗೆ ಸ್ಪೂರ್ತಿಯಾಗುತ್ತದೆ ಎನ್ನುವುದು ಒಂದು ಪರಮ ಸತ್ಯವಾದರೂ ಬೆತ್ತಲಾಗುವ ಸತ್ಯ ಸಾಮಾಜಿಕ ಮೌಲ್ಯ ವರ್ಧನೆಗೆ ಸಹಕಾರಿ ಎನ್ನುವುದೂ ಕೂಡಾ ಅಷ್ಟೆ ಸತ್ಯವಾಗಿರುವುದು ಎನ್ನುವುದು ಒಂದು ನಂಬಿಕೆ ಎನ್ನುವುದೂ ನಿಜವೇ!(ಗಿರಗಿಸಮ್ಮ ಎನ್ನುವ ಪಾತ್ರವೂ ಈ ಕಥೆಗೆ ಸ್ಪೂರ್ತಿಯಾದ ನೈಜ ಪಾತ್ರಕ್ಕೆ ತೀರಾ ಹತ್ತಿರವಾಗಿ ಗಿರಗಿಸ್ಸಮ್ಮ ಎಂದರೆ ಆಕೆಯೇ ಎಂದು ವಾಚಕರ ಕೂತೂಹಲ ಕೆರಳಿದ ಪರಿಣಾಮ ಗಿರಗಿಸ್ಸಮ್ಮ ಎನ್ನುವ ಹೆಸರನ್ನು ಗಿರಗಮ್ಮ ಎಂದು ಲೇಖಕ ಬದಲಾಯಿಸಿದನು.ಈ ಕಥೆಯೊಳಗಿನ ಪಾತ್ರಗಳು ಈ ಲೇಖಕನ ಸುತ್ತಲಿನ ಸಮಾಜದ ನೈಜ ಚಿತ್ರಣವಾಗಿದ್ದರ ಪರಿಣಾಮ ಹಲವು ಸಾಮಾಜಿಕ ವ್ಯತಿರಿಕ್ತಗಳಿಗೆ ಕಾರಣವಾಗುವ ಅಪಾಯದಿಂದ ಮತ್ತು ಹಾದರಗಿತ್ತಿಯರ ಉರಿಗೆ ಕಾರಣವಾಗಬಹುದಾದ ಹೆದರಿಕೆಯಿಂದ ಪಾತ್ರಗಳ ಹೆಸರುಗಳು ಬದಲಾಗಿರುವವು)

          ಕಥೆ ಆರಂಭವಾಗಿರುವುದು ಗಿರಗಿಸ್ಸಮ್ಮನ ತಮ್ಮ ವಿಕಾರ ಸ್ವರದಲ್ಲಿ ಅಂಡಿಗೆ ಚೇಳು ಕಡಿಸಿಕೊಂಡಂತೆ ರೋಧಿಸುತ್ತಿರುವಲ್ಲಿಂದ.ಅಮಲೇರಿದ ಗಿರಗಿಸ್ಸಮ್ಮನ ತಮ್ಮ ಈ ಲೇಖಕನ ಹತ್ತಿರದ ಪಾತ್ರಕ್ಕೆ ಪರೋಕ್ಷವಾಗಿ ಕಾಲು ಕೆದರಿ ಜಗಳಕ್ಕೆ ಆಹ್ವಾನ ನೀಡಿದ್ದರ ಪರಿಣಾಮದಿಂದ.ಅಂಡಿಗೆ ಚೇಳು ಕಡಿಸಿಕೊಂಡಂತವನಾದ ಗಿರಗಿಸ್ಸಮ್ಮನ ತಮ್ಮನ ರೋಧನದಿಂದ ಆರಂಭಿಸಲಾದ ಕಥೆ ಇಡೀ ಕೊಳಕೂರಿನ ಕೊಳಕು ಕ್ರಿಯೆಗಳ ಬಯಲಿಗೆ ಕಾರಣವಾಗುತ್ತಿರುವುದು ಒಂದು ಸಾಮಾಜಿಕ ಕ್ರಾಂತಿಯೂ ಹೌದು!

          ಗಿರಗಿಸ್ಸಮ್ಮನ ತಮ್ಮ ರೋಧಿಸುತ್ತಿರುವಂತೆ,ಕಾಲಾನುಕ್ರಮದಲ್ಲಿ ಗಿರಗಿಸ್ಸಮ್ಮನ ಹೆಸರು ಗಿರಗಮ್ಮನೆಂದು ಬದಲಾಗುತ್ತಿರುವಂತೆ.....

          ಕೊಳಕೂರಿನ ಶ್ರಿನೀವಾಸ ಗಿರಿದುರ್ಗದ ಹೊಟೆಲ್ಲೊಂದರಲ್ಲಿ ಚಿಂತಾಕ್ರಾಂತನಾಗಿ ಕುಳಿತಿದ್ದನು.ಆಗಷ್ಟೆ ಕೋಳಿ ಪಂದ್ಯದಲ್ಲಿ ಕೋಳಿಗಳು ಆತನಿಗೆ ದಾರುಣ ಮೋಸ ಮಾಡಿದ್ದವು.ಆತನ ನಿರೀಕ್ಷೆಗೆ ಮೀರಿ ಆ ಕೋಳಿಗಳು ಆತನನ್ನು ಮೋಸಗೊಳಿಸಿದ್ದವು.ಉರಿಬಿಸಿಲಿನಲ್ಲಿ ಹಂದರ್ ಬಾಹರ್ ಆಟವಾಡುತ್ತಿರುವಾಗ ಒದೆಯುತ್ತದೆ ಎಂದುಕೊಂಡ ಕೋಳಿ ಒದಿಸಿಕೊಂಡು ಸತ್ತು ಬಿದ್ದು ಹರಿದ ಚಪ್ಪಲಿಯಿಂದ ಮುಖಕ್ಕೆ ಹೊಡೆದಂತೆ ಕೋಳಿಯ ಹೇಲು ಆತನ ಮುಖಕ್ಕೆ ಸಿಡಿದಿತ್ತು.ಕಿಸೆಯೊಳಗಿನ ಸಾಲದ ರೊಕ್ಕ ಕ್ಷಣಾರ್ಧದಲ್ಲಿ ಖಾಲಿಯಾಗಿ ಆತ ಬೈಕಿನ ಪೆಟ್ರೋಲಿಗೆ ತತ್ಸಾರಪಡುವಂತೆ ಮಾಡಿದ್ದವು.ಆದರೂ ಆತ ಕೋಳಿ ಪಂದ್ಯದ ಪ್ರಿಯ ಸಖನೆ ನಿಜ;ಇಂದಲ್ಲ ನಾಳೆ ಇವತ್ತು ಕಳೆದುಕೊಂಡ ಹಣ ದುಪ್ಪಟ್ಟಾಗಿ ಹಿಂತಿರುಗುವುದು ಎನ್ನುವ ಆಶಾಭಾವವನ್ನು ಹೊಂದಿದ್ದನು.ಆತನ ಈ ಆಶಾಭಾವವೂ ಆತನನ್ನು ಎಲ್ಲಿಯವರೆಗೆ ಕರೆದೊಯ್ದಿತ್ತು ಎಂದರೆ ಆತನ ಮನೆ ಮಠ ಮಾರಿದರೂ ನಿಲುಕದ ರೀತಿಯಲ್ಲಿ ಆತನನ್ನು ಸಾಲಗಾರನನ್ನಾಗಿ ಮಾಡಿಬಿಟ್ಟಿತ್ತು.ಆದರೂ ಆತ ಆಶಾಭಾವವನ್ನು ಬಿಟ್ಟಿರಲಿಲ್ಲ.ಇಂದಲ್ಲ ನಾಳೆ ಕಳೆದುಕೊಂಡ ಹಣ ಮಳೆಗಾಲದ ತಡೆದ ಮಳೆಯ ಆವೇಗದಲ್ಲಿ ಹಿಂತಿರುಗುವುದು ಎಂದು ಆತ ಬಲವಾಗಿ ನಂಬಿದ್ದ.ಆತನಿಗೆ ಒತ್ತಾಸೆಯಾಗಿ ಇಡೀ ಕುಟುಂಬವೂ ಆತನ ಬೆಂಬಲಕ್ಕಿತ್ತು.ಇಡೀ ಕುಟುಂಬ ಇಸ್ಪೀಟು ಮಟಕಾ ಮತ್ತಿತರ ಜೂಜುಗಳೊಂದಿಗೆ ಒಂದಿಲ್ಲ ಒಂದು ನಿಕಟ ಸಂಬಂಧವನ್ನು ಹೊಂದಿತ್ತು.ಇಡೀ ಕುಟುಂಬದ ಬೆನ್ನೆಲುಬಾಗಿ ಅವರ ಆಸರೆಗೆ ಇದ್ದದ್ದು ಕೋಳಿ ಪಂದ್ಯ ಮಟಕಾ ಇಸ್ಪೀಟು ಮತ್ತಿತರ ಜೂಜುಗಳೇ ನಿಂತಿದ್ದವು.ಒಂದನಿ ಬೆವರು ಈ ಪಾಪಿ ಭೂಮಿಗೆ ಸುರಿಯುವುದಾದರೆ ಅದು ಇಸ್ಪೀಟಿನ ಎಲೆಗಳನ್ನು ಒಳ ಹೊರಗೆ ಹಾಕುವಾಗ ಮಟಕಾ ಬರೆಯುವಾಗ ಮತ್ತು ಮಟಕಾ ಬರೆಸುವಾಗ ಸುರಿಯಬೇಕು ಎಂದು ತಾವು ಸಹಕುಟುಂಬ ಪರಿವಾರದಿಂದ ನಿಶ್ಚಯಿಸಿದ್ದರು.ಸದ್ಯ ಆ ಕಟು ಶಪಥ ಪಾಲನೆಯಲ್ಲಿ ತಾವೆಲ್ಲಾ ಮುಂದುವರೆದಿರುವರು!

          ಕೋಳಿ ಪಂದ್ಯವನ್ನೇ ಆರಾಧ್ಯ ದೈವ ಎಂದು ಭಾವಿಸಿದವನಾಗಿರುವ ಶ್ರೀನಿವಾಸನ ನಿತ್ಯ ಕಾಯಕವೂ ನದಿ ತೀರ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಕಳ್ಳತನದ ರೀತಿಯಲ್ಲಿ ನಡೆಯುವ ಕಳ್ಳ ಆಟಗಳಲ್ಲಿ ಪಾಲುಗೊಳ್ಳುವುದಾಗಿತ್ತು.ಆತನು ದಿನ ನಿತ್ಯವೂ ತಪ್ಪದ ರೀತಿಯಲ್ಲಿ ತನ್ನ ಕೈಂಕರ್ಯದಲ್ಲಿ ತೊಡಗುತ್ತಿದ್ದನು.ಮನೆ ಮಠಗಳು ಹೆಂಡತಿ ಮಕ್ಕಳು ‘ಹುಟ್ಟಿಸಿದ ದೇವರು ಹುಲ್ಲು ತಿನ್ನಿಸುತ್ತಾನೆಯೇ’ ಎನ್ನುವ ರೀತಿಯಲ್ಲಿ ಬದುಕುತ್ತಿದ್ದರು.ಶ್ರೀನಿವಾಸನ ಹಾದಿ ಶ್ರೀನಿವಾಸನಿಗಾದರೆ ಅವನ ಹೆಂಡತಿಯ ಹಾದಿ ಹೆಂಡತಿಯದಾಗಿತ್ತು.ಆತ ಹೆಂಡತಿ ಮಕ್ಕಳೊಂದಿಗೆ ಕಾಲ ಕಳೆದದ್ದೇ ಬಲು ವಿರಳ.ಹೆಂಡತಿ ಅನಾರೋಗ್ಯಕ್ಕೆ ಒಳಗಾದರೆ ಅದರ ಹೊಣೆ ಆಕೆಯ ಮಿಂಡನದಾಗಿರುತ್ತಿತ್ತು.ಹೆಂಡತಿ ಸಂಭ್ರಮಪಡಬಹುದಾದರೆ ಅದರ ಹೊಣೆಯೂ ಆ ಮಿಂಡನದೆ ಆಗಿರುತ್ತಿತ್ತು.ಹೆಂಡತಿ,ಮಿಂಡ, ಕುಟುಂಬದ ಇತರ ಹೆಂಗೆಳೆಯರ ಮಿಂಡಂದಿರು,ಮತ್ತು ಪುರುಷ ಸದಸ್ಯರು ಅನೋನ್ಯ ಸಂಬಂಧವನ್ನೂ ಹೊಂದಿದ್ದರು.ಗಳಸ್ಯ ಕಂಠಸ್ಯ ಎನ್ನುವ ಸ್ನೇಹವನ್ನು ಅವರು ಹೊಂದಿದ್ದರು.ಇಂತಿರಲು....

          ಶ್ರೀನಿವಾಸನಿಗೆ ಅಂದು ಕೋಳಿಗಳು ದಾರುಣ ಮೋಸ ಮಾಡಿರಲು ಆತ ಚಿಂತಾಕ್ರಾಂತನಾಗಿ ಗಿರಿದುರ್ಗದ ಹೋಟೆಲ್ಲಿನಲ್ಲಿ ಅರ್ಧ ಕಪ್ಪು ಚಾಹಾ ಹೇಳಿ ಕುಳಿತಿದ್ದ.ಆತನಿಗೆ ನಾಳಿನ ಚಿಂತೆ ಬಹುವಾಗಿ ಕಾಡುತ್ತಿತ್ತು.ನಾಳೆ ಇಸ್ಪೀಟು ಎಲೆಗಳನ್ನು ಕೈಯಲ್ಲಿ ಹಿಡಿಯದಾದರೆ ತನ್ನ ಕೈಗಳು ಮರಗಟ್ಟಿ ಹೋಗಿ ಲಕ್ವಾ ಹೊಡೆಯುವ ಸಾಧ್ಯತೆ ನೋರಕ್ಕೆ ತೊಂಬತ್ತೊಂಬತ್ತು ಪ್ರತಿಶತವಿತ್ತು.ಆ ಭೀತಿಯಲ್ಲಿ ಆತ ಕಂಗಾಲಾಗಿದ್ದ.ಶ್ರೀನಿವಾಸ ಊಟವಿಲ್ಲದೆ ಬದುಕಿರಬಲ್ಲ;ಇಸ್ಪೀಟಿನ ಎಲೆಗಳಿಲ್ಲದೆ ತಾನು ಬದುಕಿರಲಾರ ಎನ್ನುವ ಚಿಂತೆಯಲ್ಲಿರುವಂತೆ ತೊ‌ನ್ನೂರಿನ ಸಾಹುಕಾರ ಇದ್ದಕ್ಕಿದ್ದಂತೆ ಪ್ರತ್ಯಕ್ಷನಾಗಿಬಿಟ್ಟ.ಶ್ರೀನಿವಾಸ ಸಿಡಿಲೊಂದು ಪಕ್ಕದಲ್ಲೆ ಸಿಡಿದು ಹೋದಂತೆ ಸ್ತಂಭೀಭೂತನಾಗಿಬಿಟ್ಟ.ಆತನ ಕಣ್ಣುಗಳಿಗೆ ಕತ್ತಲಾವರಿಸಿಬಿಟ್ಟಿತು.ಭಯಂಕರವಾದ ಶಬ್ದದ ನಂತರದ ಸ್ಥಿತಿ ಆತನನ್ನು ಆವರಿಸಿಬಿಟ್ಟಿತು.ಮಾತು ಕಳೆದುಕೊಂಡವನಂತಾದ ಶ್ರೀನಿವಾಸ ಮೌನವೇ ಆಭರಣದಂತೆ ಒಮ್ಮಲೆ ತಾನು ಮೂಕನಾದಂತೆ ಸುಮ್ಮನೆ ಕುಳಿತುಬಿಟ್ಟ.ಸಾಹುಕಾರ ಆತನ ಪಾಲಿಗೆ ಯಮಲೋಕದ ಧೂತನಂತೆ ಕಾಣಿಸಿಕೊಂಡಿದ್ದ.ಕಿಸೆಯಲ್ಲಿ ಒಂದು ದಂಬಡಿಯೂ ಇಲ್ಲದ ಸಂದರ್ಭದಲ್ಲಿ ಕೋಳಿ ಪಂದ್ಯದ ಕೋಳಿಗಳಿಂದ ಮೋಸಗೊಂಡು ತಾನು ಕುಳಿತಂತಹ ಸಂದರ್ಭದಲ್ಲಿ ಈ ತೊನ್ನೂರಿನ ಸಾಹುಕಾರ ಪ್ರತ್ಯಕ್ಷನಾಗುವುದೆಂದರೇನು?ಸಾಹುಕಾರ ಮೌನ ಮುರಿಯಲೇಬೇಕಿತ್ತು;ಆತ ಮೌನ ಮುರಿದ:

          “ಏನಪಾ ಶ್ರೀನಿವಾಸ?ನಂಬಿ ಸಾಲ ಕೊಟ್ಟರೆ ಎಷ್ಟೂಂತ ಸುಳ್ಳು ಹೇಳತಿ?ನನಗಂತೂ ಕೇಳಿ ಕೇಳಿ ಸಾಕಾಗಿ ಹೋಗಿದೆ.ಇವತ್ತು ಎರಡರಲ್ಲಿ ಒಂದಾಗಬೇಕು,ಹೇಳು,ಏನ್ ಮಾಡ್ತೀ?”ಎಂದ.

          ನಿಜ,ಸಾಹುಕಾ ಸಾಲ ಕೇಳುವುದರಲ್ಲಿ ತಪ್ಪಿಲ್ಲ.ಆದರೆ ಸಾಲ ಹಿಂತಿರಿಗಿ ಕೊಡುವುದೆಂತು?ಈ ಕೋಳಿಗಳು ತನ್ನ ಪರವಾಗಿ ಒದೆಯದೆ?ಸಾಹುಕಾರನೆಂಬ ಕೋಡಂಗಿ ತಾನು ಅರ್ಥ ಮಾಡಿಕೊಳ್ಳಬೇಕು.ಅರ್ಥ ಮಾಡಿಕೊಳ್ಳುವಂತೆ ಹೇಳುವುದೆಂತು?ಯೋಚಿಸಿದ ಶ್ರೀನಿವಾಸ.ಸಾಹುಕಾರನ ಮುಖ ನೋಡಿದರೆ ಆತ ಎರಡರಲ್ಲಿ ಒಂದು ಮಾಡಲು ಸಿದ್ದನಾಗಿ ಬಂದಿರುವಂತೆ ಸ್ಪಷ್ಟವಾಗಿ ಕಾಣಿಸುತ್ತಿತ್ತು.

          “ಸಾಹುಕಾರ,ಕೊಟ್ಟಿದಿ ಖರೆ.ತಾಳಬೇಕು;ತಾಳೋದು ನಿನ್ನ ಧರ್ಮ.ತಾಳು ಅಂತ ಹೇಳುವುದು ನನ್ನ ಧರ್ಮ.ಈಗಿಂದ ಈಗ ಕೊಡು ಎಂದರೆ ಎಲ್ಲಿಂದ ಕೊಡುವುದು.ಅದೂ ಇಸ್ಪೀಟಿನಲ್ಲಿ ಬರೆ ಸೋಲೇ ಹೊಂಟಿರುವಾಗ!ನಾನೇನು ರೊಕ್ಕ ಮುಳುಗಿಸುತ್ತೇನೆಯೇ?ಇಂದಲ್ಲ ನಾಳೆ ಕೊಟ್ಟೇ ಕೊಡುತ್ತೇನೆ.ಇಷ್ಟರ ಮೇಲೆ ನಿನ್ನಿಷ್ಟ”ಎಂದು ಆತ ರೂಢಿಗತ ಮಾತನ್ನು ಸರಳವಾಗಿ ಹೇಳಿದ.

          ಸಾಹುಕಾರನಿಗೆ ರೊಕ್ಕ ಹಿಂತಿರಿಗಿ ಬರುವುದು ಅಸಾಧ್ಯ ಎಂದು ಬಹು ಜನರು ಹೇಳಿದ್ದರು.ಕೊಡಲಿಕ್ಕೆ ಅವನ ಹತ್ತಿರ ಏನೂ ಇಲ್ಲ.ಇರೋ ಪಿತ್ರಾರ್ಜಿತ ಎರಡೆಕೆರೆ ಹೊಲ ನಾಲ್ಕು ಜನ ಅಣ್ಣ ತಮ್ಮಂದಿರ ಹೆಸರಿನಲ್ಲಿ ಇರುವುದರಿಂದ ಅದನ್ನು ಮಾರುವಂತೆ ಇಲ್ಲ.ಅದೂ ತಂದೆ ತಾಯಿ ಬದುಕಿರುವಾಗ!ಊರ ದೈವ ಹೊಲ ಮಾರಲಿಕ್ಕೆ ಬೀಟ್ಟಾರೆಯೇ?ಅಂತ ಸಾವಿರ ಜನ ಹೇಳಿದ್ದರು.ಕೊಟ್ಟಿರುವ ನಲವತ್ತು ಸಾವಿರ ರೂಪಾಯಿ ಸಾಲಕ್ಕೆ ಅವನ ಹತ್ತಿರ ಕಬ್ಜ ಮಾಡಿಕೊಳ್ಳಬೇಕಿರುವ ಸ್ವತ್ತೆಂದರೆ ಅವನ ಬೈಕೊಂದೆ.ಅದು ಮೂವತ್ತು ನಲವತ್ತು ಸಾವಿರ ಬಾಳುತ್ತದೆ.ಬಡ್ಡಿ ನಷ್ಟವಾದರೂ ಅಸಲು ರಿಕವರ್ ಆಗುತ್ತದೆ.ಅದನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸೂಕ್ತವೆಂದು ಹಲವರು ಉಚಿತ ಸಲಹೆ ನೀಡಿದ್ದರು.ಸಾಹುಕಾರ ಆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಿಯೇ ಬಂದಿದ್ದ.ಅದೇ ಮಾತನ್ನು ಆತ ನೇರವಾಗಿ ಹೇಳಿದ.

          “ನೋಡಪಾ,ನಿನ್ನ ಸುಳ್ಳು ಕೇಳಿ ಕೇಳಿ ಸಾಕಾಗಿ ಹೋಯಿತು.ನನಗಿನ್ನೂ ಸಹನೆ ಉಳಿದಿಲ್ಲ.ನಿನ್ನ ಗಾಡಿ ಐಯ್ತಲ್ಲ ಅದನ್ನು ಬಿಟ್ಟು ಬಿಡು”ಎಂದ.ಶ್ರೀನಿವಾಸ ದುಸರಾ ಮಾತಾಡಲಿಲ್ಲ.ಚಕ್ಕಂತ ಕೀಲಿ ತೆಗೆದು ಸಾಹುಕಾರನ ಕೈಗಿಟ್ಟುಬಿಟ್ಟ.

          ‘ಕೊಟ್ಟವನು ಕೋಡಂಗಿ ಇಸಗೊಂಡವನು ಈರಭದ್ರ’ ಎನ್ನುವ ಮಾಹಾ ಮಂತ್ರಕ್ಕೆ ಅಂಟಿಕೊಂಡಿದ್ದ ಶ್ರೀನಿವಾಸ  ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಆ ಮಾಹಾ ಮಂತ್ರದ ಮಹತ್ವಕ್ಕೆ ಅಗೌರವ ತೋರಿದ್ದ.ರಾಜು ತಾಳಿಕೋಟಿ ಎನ್ನುವ ನಾಟಕಕಾರನ ‘ಸಾಲಗಾರರು ಬಂದು,ಮನೆಯ ಬಾಗಿಲ ಮುಂದೆ ನಿಂತು ಶ್ವಾನಗಳಂತೆ ಬೊಗಳುವಾಗ ಸ್ವಾಮಿಯಂತೆ ಆಶಿರ್ವಾದ ಮಾಡಬೇಕು’ಎನ್ನುವ ಮಹಾ ಮಂತ್ರವನ್ನೂ ಆತ ಮರೆತುಬಿಟ್ಟ.ಆಕ್ಷಣ ಏನು ಮಾಡಬೇಕು ಎಂದು ತೋಚದೆ ಆತ ಆ ನಿರ್ಧಾರ ಮಾಡಿಬಿಟ್ಟಿದ್ದ.ಅಂತೂ ಸಾಹುಕಾರನ ಮಾತು ಮುಟ್ಟಿತು ಎಂದು ಆತ ಅರ್ಧ ಚಹಾ ಕುಡಿದು ಪಾದಯಾತ್ರೆಯಲ್ಲಿ ಮನಗೆ ತೆರಳುವಾಗ....

          ಅದೇಗೆ ಸುದ್ದಿ ದಶ ದಿಕ್ಕುಗಳಿಗೆ ಹಬ್ಬಿತೋ?ಕ್ಷಣಾರ್ಧದಲ್ಲಿ ಕಲಿಯುಗದ ಮಹಾ ಕರ್ಣರಂತಹ ಕೆಲ ಜನ ಅಲ್ಲಿಗೆ ಧಾವಿಸಿ ಬಂದರು.ತನ್ನ ಪ್ರಿಯಸಖಿಯ ಗಂಡನ ಪಾದ ಆತನ ಮಾಹಾರಥದಿಂದ ವಂಚಿತ ಈ ಸಂದರ್ಭದಲ್ಲಿ ಪಾಪಿ ಭೂಮಿಗೆ ತಾಕಿದರೆ ಭೂಮಂಡಲದ ಗತಿ ಏನಾಗಬೇಕು ಎಂದು ಅವರು ತಮ್ಮ ತಮ್ಮೊಳಗೆ ಬಹು ಹೊತ್ತು ಚಿಂತಿಸಿದರು.ಸಿಗರೇಟು ಸೇದಿ ಕೆಲವರು ಚಿಂತಿಸಿದರೆ ಇನ್ನು ಕೆಲವರು ತಕ್ಕಷ್ಟು ಮದ್ಯ ಸೇವಿಸಿ ಚಿಂತಿಸಿದರು.ಮತ್ತು ಕೆಲವರು ತಮ್ಮಗಿಷ್ಟವಾದ ರೂಢಿಗತ ಪ್ರಕ್ರಿಯೆಯಲ್ಲಿ ಚಿಂತಿಸಿದರು.ಅವರ ಚಿಂತನೆಯ ಪರಿಣಾಮದಿಂದ ಕೆಲಕ್ಷಣದಲ್ಲಿ ಏನು ಜರುಗಿತೆಂದರೆ...

          “ಬರೀ ನಲವತ್ತು ಸಾವಿರದಲ್ಲಿ ನಿನ್ನ ಮಾಹಾರಥವನ್ನು ಯಕಾಚಿತ್ ಸಾಹುಕಾರನಿಗೆ ಬಿಡುವುದೆಂತು ಅದೂ ನಾವಿರುವಾಗ?ತಗೋ ಈ ರೊಕ್ಕ!ಸಾಹುಕಾರನ ಮುಖದ ಮೇಲೆ ಬಿಸಾಕಿ ನನ್ನ ಅಣ್ಣತಮ್ಮಂದಿರೇನು ಗತಿ ಇಲ್ಲದವರೇನು ಎಂದು ಹೇಳು!”ಎಂದ ಒಂದನೆ ಪ್ರಿಯಕರ.

          “ಅಲ್ಲಪಾ,ಅಲ್ಲಪಾ,ನೀನು ನಮಗೊಂದು ಫೋನ್ ಮಾಡಬಾರದಾ?ನಮ್ಮನ್ನು ಪ್ರಿಯಾಗಿ ಬಿಟ್ಟ ನಿನ್ನ ಋಣವನ್ನು ನಾವು ಮರಿಯುತ್ತೀವಿ ಎಂದು ನೀನು ಭಾವಿಸಲಿಕ್ಕೆ ನಾವು ಮಾಡಿದ ದ್ರೋಹವಾದರೂ ಏನು?ನಿನ್ನ ಪಾಲಿಗೆ ನಾವೆಲ್ಲಾ ಸತ್ತು ಹೋದೇವು ಎಂದು ತಿಳಿದೆಯಾ?ನಿನ್ನ ಕಣ್ಣಾರೆ ನಿನ್ನ ಮನೆಯೊಳಗೆ ಬಂದರೆ ಏನು ಕಾಣಿಸದಂತೆ ಮನೆ ಹೊರಗೆ ಹೋಗುವ ನಿನ್ನಂಥಹ ಮಾಹಾನುಭಾವನಿಗೆ ಇಂತಹ ಕಷ್ಟಕಾಲದಲ್ಲಿ ನೆರವಾಗದಿದ್ದರೆ ನಮ್ಮ ಜನ್ಮ ಇದ್ದರೆಷ್ಟು ಸತ್ತರೆಷ್ಟು?ಈ ವಿಷಯ ಮನೆಗೆ ಮುಟ್ಟಿದರೆ ನಮ್ಮ ಮಾನ ಮರ್ಯಾದೆ ಉಳಿದೀತೆ?ತಗೋ ರೊಕ್ಕ!”ಎಂದ ಎರಡನೆಯ ಪ್ರಿಯಕರ!ಈ ರೀತಿಯಲ್ಲಿ ಅಲ್ಲಿಗೆ ಬಂದು ಸೇರಿದ ಆತನ ತೊಗಲ ಸ್ವತ್ತಿನ ಮಹಾಪುರುಷರು ನೀಡಿದ ಸಹಾಯ ಹಸ್ತವು ಶ್ರೀನಿವಾಸನ ಕಣ್ಣು ತುಂಬಿ ಬರಲು ಕಾರಣವಾಯಿತು.ಆತ ಗದ್‌ಗದ ಕಂಠದಿಂದ ಏನು ನುಡಿದನೆಂದರೆ...

          “ನಿಮ್ಮ ಪ್ರೀತಿ ಅಭಿಮಾನಗಳಿಗೆ ನಾನು ಅಭಾರಿಯಾಗಿದ್ದೇನೆ ಅಣ್ಣತಮ್ಮಂದಿರೆ!ನನ್ನ ಕಣ್ಣುಗಳು ತುಂಬಿಬಂದಿವೆ.ಆದರೆ ಸಾಹುಕಾರನಿಗೆ ಕೊಟ್ಟ ಆ ಹಳೆಯ ರಥವನ್ನು ನಾನು ಹಿಂತಿರಿಗಿ ಪಡೆಯಲಾರೆ.ಈ ನಿಮ್ಮ ಪ್ರೀತಿಯ ಶ್ರಿನಿವಾಸ ಬಿಟ್ಟ ಚಪ್ಪಲಿಯನ್ನು ಮತ್ತೊಮ್ಮೆ ಧರಿಸನು.ನಿಮ್ಮಗಳ ಆಶಿರ್ವಾದಿಂದ...”ಆತ ಅರ್ಧೋಕ್ತಿಯಲ್ಲಿ ಮಾತು ನಿಲ್ಲಿಸುತ್ತಿರುವಂತೆ ಅಲ್ಲಿನ ಸಮಸ್ತ ತೊಗಲ ಸಂಪರ್ಕಿಗಳು ಕೊರಸ್ ಸ್ವರದಲ್ಲಿ “ನಿನಗೆ ತೋಚಿದಂತೆ ಮಾಡು,ಪಾದವನ್ನು ಮಾತ್ರ ನೆಲಕ್ಕೆ ತಾಕಿಸದಿರು!”ಎಂದರು.

          ಇದಾದ ಮೇಲೆ ಆತ ಹೊಸದೊಂದು ರಥ ಖರೀದಿಸಿ ಅದೇ ಹೋಟಲ್ಲಿಗೆ ಚಹಾ ಕುಡಿಯಲು ಬಂದಾಗ ಸೂರ್ಯ ನಾಚಿಕೆಯಿಂದ ಮುಳಿಗಿದ್ದ.ಕತ್ತಲು ನಿದನಿಧಾನವಾಗಿ ಆವರಿಸತೊಡಗಿತ್ತು.ಆತ ರಥವನ್ನು ಹೊಟೆಲ್ಲಿನ ಹೊರಗೆ ಬಿಟ್ಟು ತಾನು ಒಳ ಹೋದಾಗ ಇಡೀ ಪ್ರಕರಣವನ್ನು ಕಣ್ಣಾರೆ ಕಂಡ ಕೊಳಕೂರಿನ ಇನ್ನೊಂದು ವ್ಯಕ್ತಿ ಅದೇ ಹೋಟಲ್ಲಿನಲ್ಲಿ ಕುಳಿತಿತ್ತು.ನಿಧಾನವಾಗಿ ಹೊಟಲ್ಲಿನಿಂದ ಎದ್ದು ಬಂದ ಆ ವ್ಯಕ್ತಿ ಕತ್ತಲಿನಲ್ಲಿ ಇದ್ದಲಿಯ ಚೂರೊಂದನ್ನು ಕೈಗೆತ್ತಿಕೊಂಡು ಕತ್ತಲಿನಲ್ಲಿ ನಿಂತ ಹೊಸ ರಥದ ಹಿಂಬಾಗದಲ್ಲಿ ಹೀಗೆಂದು ಬರೆಯಿತು:

           “ಹೆಂಡತಿಯರ ಮಿಂಡಂದಿರ ಆಶಿರ್ವಾದ”

          ನಂತರ ಆ ವ್ಯಕ್ತಿ ಕತ್ತಲಿನಲ್ಲಿ ಕರಗಿ ಹೋಗುವುದರೊಂದಿಗೆ ಕೊಳಕೂರಿನ ಪ್ರಣಯ ಪ್ರಸಂಗದ ಐದನೇಯ ಭಾಗವು ಸಮಾಪ್ತಿಯಾಯಿತು!.

*ಕೊಳಕೂರಿನ ಪ್ರಣಯ ಪ್ರಸಂಗಗಳು ಭಾಗ-೬*

          (ನಾನು ಬರೆಯುವ ಕೆಲವೊಂದು ಬರಹಗಳು ಜೀವಂತ ಪಾತ್ರಗಳನ್ನು ಹೋಲುತ್ತವೆ.ತಪ್ಪು ನಂದಲ್ಲ.ನಾನು ಯಾರನ್ನೂ ಗುರಿ ಇಟ್ಟುಕೊಂಡು ನಂಜಿನಿಂದ ಬರೆಯಲಾರೆ.ವಸ್ತು ಯಾರಿಗಾದರೂ ತಗುಲಿದರೆ ಅದಕ್ಕೆ ನಾನು ಜವಬ್ದಾರನಲ್ಲ.ಅಂಡಿಗೆ ಖಾರ ಹತ್ತಿಸಿಕೊಂಡು ಎಗರಾಡಿದರೆ ಅದು ನಿಮ್ಮದೇ ತಪ್ಪು.ಮನುಷ್ಯನ ಮುಖ್ಯ ಗುರಿ ಮಾನವೀಯ ಮೌಲ್ಯಗಳನ್ನು ಉದ್ದೀಪನಗೊಲಿಸುವುದಾಗಿರಬೇಕು.ಸಮಾಜ ಅಧೋಗತಿಯೆಡೆಗೆ ಹೊರಟಿರುವುದು,ಸಂವಿಧಾನದ ಆಶಯಗಳು ಅನುಷ್ಠಾನಗೊಳ್ಳದಿರುವುದು ಸಾಮಾಜಿಕ ದುರಂತವಾಗಿದೆ.ಯಾರದೋ ಅನ್ನವನ್ನು ಇನ್ನ್ಯಾರೋ ಕಿತ್ತು ತಿನ್ನುತ್ತಾರೆ.ಆ ಕೆಲವು ಘಟನೆಗಲನ್ನು ಗಮನದಲ್ಲಿಟ್ಟುಕೊಂಡು ವಿಚಾರಧಾರೆ ಹರಿಯಬಿಟ್ಟಾಗ....)
          ಪ್ರಸ್ತುತ ಜೀವನ ಶೈಲಿ,ಒಬ್ಬ ವ್ಯಕ್ತಿ ಪ್ರವರ್ಧಮಾನಕ್ಕೆ ರಾಜಕೀಯವಾಗಿ ಸಾಮಾಜಿಕವಾಗಿ ಬರಬೇಕು ಎಂದರೆ ವ್ಯಕ್ತಿಯ ಸಾಮಾಜಿಕ ಸಂಪರ್ಕಗಳು ಹೇಗಿರಬೇಕು ಎಂದು ಮೊದಲು ತಿಳಿಸದೆ ಕೊಳಕೂರಿನ ಪ್ರಣಯ ಪ್ರಸಂಗಗಳ ಕಥೆ ಹೇಳಲು ಹೊರಟ ಹಾದರ ಪ್ರಪಂಚದ ಸಾಮ್ರಾಜ್ಞಿಯಾದ ತಾನು ಇಂಚು ಇಂಚೂ ವಿವರಿಸಿ ಹೇಳಬೇಕಾಗುತ್ತದೆ ಎಂದು ಗಿರಗಿಸ್ಸಮ್ಮ ಯೋಚಿಸಿದ್ದಳು.ಮರೀನಾ ತೆರೆದ ಬಾಯಿಯಲ್ಲಿ ಆಸಕ್ತಳಾಗಿ ಕುಳಿತಿದ್ದಳು.ತಾನು ಹಾದರ ಪ್ರಪಂಚದ ಸಾಮ್ರಾಜ್ಞಿಯಾಗಿ ಮೆರೆಯುತ್ತಿರುವುದರ ಹಿಂದಿನ ಸ್ಪೂರ್ತಿಯ ಕಥೆಗಳನ್ನು ಮರೀನಾಗೆ ವಿವರಿಸಿ ಹೇಳದಿದ್ದರೆ ತನ್ನನ್ನು ತಾನು ಗುರುವು ಎಂದುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಈ ಕಥೆಯಲ್ಲಿ ಆಕೆ ಉಪ ಕಥೆ ಎಂಬಂತೆ ಈ ಕೆಳಗಿನ ಕಥೆಯನ್ನು ಹೇಳತೊಡಗಿದಳು....
          ಹಾದರದಯ್ಯನಿಗೆ ಮತದಾನ ಹತ್ತಿರವಾಗುತ್ತಿರುವಂತೆ ತುಂಬಾ ದುಗುಡ ಉಂಟಾಗತೊಡಗಿತು.ಅದರ ಜೊತೆಗೆ ಕಳವಳವೂ ಸೇರಿ ರಾತ್ರಿಗಳು ನಿದ್ರಾಹೀನವಾಗತೊಡಗಿದವು.ಯುದ್ದವು ಭಯಂಕರ ಯಾತನಾದಾಯಕ ಕ್ರಿಯೆ ಎಂಬುದು ಅರಿವಿಗೆ ಬಂದಿದ್ದೆ ತಾನು ಈ ರಂಗಕ್ಕೆ ದುಮುಕಬಾರದಿತ್ತು ಅಂತ ಅನ್ನಿಸತೊಡಗಿತ್ತು.ಒಂದು ವೇಳೆ ತಾನು‌ ಸೋತು ಹೋದರೆ?ತನಗೆ ಈಗಿರುವ ಘನತೆ ಹೊರಟು ಹೋಗಿ ತಾನು ತಲೆ ಎತ್ತಿ ಬದುಕುವುದೆಂತು?ಅನ್ನುವ ಪ್ರಶ್ನೆಗಳು ಕಾಡತೊಡಗಿದವು.ಹೇಗೂ ತನ್ನ ಹೆಸರಿನ‌ ಅನ್ವರ್ಥಕ ವೃತ್ತಿಗಳು ತನಗೆ ಸಹಜ ಎಂಬಂತೆ ಇದ್ದು ಅವು ಅನ್ನಕ್ಕೂ ಹಣಕ್ಕೂ ಪೂರಕವಾಗಿದ್ದವು.ಬದುಕು ಸರಾಗವಾಗಿ ಸಾಗುತ್ತಿರಬೇಕಾದರೆ ಇದೇನು ರಾಜಕೀಯ?ಹಾದರದಯ್ಯ ಗ್ರಾಮಪಂಚಾಯತಿ ಚುನಾವಣೆಗೆ ಉಮೇದುದಾರನಾಗಿ ನಾಮಪತ್ರ ಸಲ್ಲಿಸದ ಮೇಲೆ ಸಾವಿರಾರು ಸಲ ಈ ಮೇಲಿನ ಪ್ರಶ್ನೆಗಳು ಸುಳಿದು ಹೋಗಿದ್ದವು.ಆ ಪ್ರಶ್ನೆಗಳು ದುಸ್ವಪ್ನದ ರೀತಿಯಲ್ಲಿ ಹೆದರಿಸತೊಡಗಿದ್ದವು.ಪ್ರಶ್ನೆಗಳು ವಿಷದ ಹಾವಿನಂತೆ ಭಯ ಹುಟ್ಟಿಸತೊಡಗಿದ್ದವು.ಆಗ ಆತನಿಗೆ…..
          ಮಿಂಡ್ರಯ್ಯನ ಮೇಲೆ ಕೋಪ ಉಕ್ಕಿ ಬರುತ್ತಿತ್ತು.ಮಿಂಡ್ರಯ್ಯ ಆ ಊರ ಪ್ರಮುಖ.ಹಾದರಗೇರಿ ಎನ್ನುವ ಆ ಗ್ರಾಮದ ಪ್ರತಿ ಕದಲಿಕೆಗಳು ಮಿಂಡ್ರಯ್ಯನ ಅಣತಿಯ ಮೇಲೆ ಜರುಗುತ್ತಿದ್ದವು.ಆತ ಯಾರನ್ನು ಯಾವ ವಾರ್ಡ‌ನಿಂದ ಚುನಾವಣೆಯ ಕಣಕ್ಕಿಳಿಸುತ್ತಿದ್ದನೋ ಆ ಅಭ್ಯರ್ಥಿಗಳೆ ಸೋಲೇ ಇರುತ್ತಿರಲಿಲ್ಲ.ರಾಜಕೀಯವೆಂಬ ಮಾಯಾಜಾಲದಲ್ಲಿ ಮಿಂಡ್ರಯ್ಯ ಪಳಗಿದ ಪಟುವಾಗಿದ್ದನು.ಒಂದರ್ಥದಲ್ಲಿ ರಾಜಕೀಯ ಎನ್ನುವುದು ಮಿಂಡ್ರಯ್ಯನ ಸ್ವತ್ತು ಎನ್ನುವಂತೆ ಜನ ಮಾನಸದಲ್ಲಿ ದಾಖಲಾಗಿತ್ತು.ಈಗಿರಲು ಅದೊಂದು ದಿನ ಮಿಂಡ್ರಯ್ಯ ಹಾದರದಯ್ಯನನ್ನು ತನ್ನ ಮನೆಗೆ ಕರೆಸಿಕೊಂಡು ಹಾದರದಯ್ಯನ ತಲೆಯಲ್ಲಿ ಗ್ರಾಮಪಂಚಾಯತಿಯನ್ನು ಸಾರಾ ಸಗಟು ತುಂಬಿಬಿಟ್ಟಿದ್ದ.ರಾಜಕೀಯ ಪ್ರವೇಶದಿಂದ ಹೇಗೆ ವ್ಯಕ್ತಿಯೊಬ್ಬನ ಪಾಪಗಳು ತೊಳೆಯಲ್ಪಡುತ್ತವೆ ಎಂಬುದನ್ನು ಆತ ಉದಾಹರಣೆಗಳ ಸಮೇತ ವಿವರಿಸಿದ್ದ.ರಾಜಕಾರಣಿಯೂ ರಾಜನ ಹಾಗೆ ಮೆರೆಯುತ್ತಾ ತನ್ನ ಪೂರ್ವಜನ್ಮದ ಪಾಪಗಳನ್ನು ಕೂಡಾ ತೊಳೆದುಕೊಳ್ಳಬಹುದು ಎಂಬುದನ್ನು ಹಾದರದಯ್ಯನ ಮನ ಮುಟ್ಟುವಂತೆ ವಿವರಿಸಿದ್ದ.ತಾನು ನಿನ್ನನ್ನು ಅಭ್ಯರ್ಥಿ ಎಂದು ಘೋಷಿಸಿದ ಮೇಲೆ ಮುಗಿಯಿತು,ಗೆಲುವು ಕಟ್ಟಿಟ್ಟ ಬುತ್ತಿ.ಯಾವುದೇ ಕಾರಣಕ್ಕೆ ಚಿಂತಿಸುವ ಅಗತ್ತವಿಲ್ಲ ಎನ್ನುವುದನ್ನು ಮನ ಮುಟ್ಟುವಂತೆ ಹೇಳಿ ಬೆನ್ನು ತಟ್ಟಿದ್ದ.ಹಾದರದಯ್ಯ ಆ ಕ್ಷಣವೇ ಚುನಾವಣೆ ಗೆದ್ದಂತೆಯೂ ತಾನು ಅಧ್ಯಕ್ಷನಾದಂತೆಯೂ ಗ್ರಾಮದ ಸಕಲ ಪರಿವಾರ ತನ್ನ ಮನೆಗೆ ದಟ್ಟಂಡಿ ದಾರಂಡಿ ಇಡುತ್ತಿರುವಂತೆಯೂ ಜನ “ಹಾದರಗೇರಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀ ಹಾದರದಯ್ಯನವರಿಗೆ ಜಯವಾಗಲಿ!”ಎಂದು ಜನ ಜಯ ಘೋಷ ಹಾಕಿದಂತೆ ಕಲ್ಪಿಸಿಕೊಂಡು‌ ರೋಮಾಂಚಿತನಾಗಿದ್ದ.ಸಂತಸ ತಡೆಯದೆ ಒಳಗೊಳಗೇ ನಗುತ್ತಾ ಹುಚ್ಚನಂತೆ ಮನೆಗೆ ಬಂದು ಹೆಂಡತಿ ಗಯ್ಯಾಳಮ್ಮನ ಕೆನ್ನೆ ಕಡಿದಿದ್ದ.ಹುಚ್ಚುಖೋಡಿ ಹಂಗ್ ಹಲ್ಲು ಮೂಡೋ ಹಂಗ ಕಡಿತಾರೇನು ಎಂದು ಗಯ್ಯಾಳಮ್ಮ ಬೈದಿದ್ದಳು.ಹೀಗೆ ತರಾವರಿ ಕಲ್ಪನೆಗಳ ತೇಲಿ ಹೋಗುತ್ತಿರುವ ಹಾದರದಯ್ಯನಿಗೆ ಹಲವು‌ ಜನ ಸೋಲಿನ ಕುರಿತು ವಿವರಿಸಿ ಹೇಳಿದ್ದರು. ಊರೇನು ಮಿಂಡ್ರಯ್ಯನ ಸ್ವತ್ತಾ,ಜನ ಈಗ ಯಾರ ಮಾತೂ ಕೇಳುವುದಿಲ್ಲ.ಮಿಂಡ್ರಯ್ಯ ನಿನ್ನ ಮರ್ಯಾದಿ ಮತ್ತು ಹಣ ನಾಶ ಮಾಡುವ ಸಂಚಾಕಿ ನಿನ್ನನ್ನು ಚುನಾವಣೆಗೆ ನಿಲ್ಲಿಸಿದ್ದಾನೆ.ಹುಚ್ಚ,ನಾಮಪತ್ರ ಸಲ್ಲಿಸುವ ಮುನ್ನ ಯೋಚಿಸಬೇಕಿತ್ತು ಎಂದು ತೀರಾ ಓರಿಗೆಯ ತನ್ನ ಗೆಳೆಯರು ಬೈಯುತ್ತಿರುವಂತೆ ನಿಜಕ್ಕೂ ದುಗುಡ ಭಯ ಆತಂಕಗಳು ಪ್ರಾರಂಭವಾಗಿದ್ದವು.ಹಿಂದಿನ ಕಾಲದಲ್ಲಿ ವೈರಿಯನ್ನು ಮುರಿಯಲು ಮುದಿ ಎತ್ತು ಕೊಡಿಸುತ್ತಿದ್ದರಂತೆ.ಈ ಕಾಲದಲ್ಲಿ ಗ್ರಾಮ‌ಪಂಚಾಯತುಗೆ ಎಲೆಕ್ಟ್ ಮಾಡಿದರೆ ಸಾಕು.ವೈರಿ ಸರ್ವ ನಾಶವಾಗಿ ಹೋಗುತ್ತಾನೆ.ಏನೆಂದರೆ ಗ್ರಾಮಪಂಚಾಯತಿಗೆ ಚುನಾಯಿತನಾಗುವ ವ್ಯಕ್ತಿ ಪಂಚಾಯತಿಯನ್ನು ತನ್ನ ಸ್ವಂತ ಜಾಹೀರು ಎಂದು ಭಾವಿಸಿ ರಾಜಕಾರಣಿಯ ಹಾಗೆ ವರ್ತಿಸುತ್ತಾ ತಮ್ಮ ತಮ್ಮ ಮೂಲ ವೃತ್ತಿಗಳನ್ನು ಮರೆತು ಮೈಗಳ್ಳರಾಗುತ್ತಾರೆ.ಒಂದು ಸಲ ಬಿಳಿ ಬಟ್ಟೆ ಧರಿಸಿ ವೈಭವ ಮೆರೆದ ಮೇಲೆ ಅವರನ್ನು ಕೂಲಿ ನಾಲಿಗೆ ಯಾರು ಕರೆಯುತ್ತಾರೆ?ಅಲ್ಲಿಗೆ ಅವರ ಆಸ್ತಿ ಮಾಡಿಕೊಂಡ ಸಾಲಗಳಿಗೆ ವಿಲೇವಾರಿಯಾಗುತ್ತಾ ಕೊನೆಗೆ ಹೇಕು ಕೂಡಾ ದೊರಯದ ದುರ್ಲಭ ದಿನಗಳು ಪ್ರಾಪ್ತವಾಗುತ್ತವೆ.ಹಾಗೆ ಆಸ್ತಿಗಳನ್ನು ಮಾರಿಕೊಳ್ಳುತ್ತಾ ಹೇಲಿಗಾಗು ಹಪಾಹಪಿಸುತ್ತಾ ತಾಲ್ಲೂಕು ಕೇಂದ್ರದ ಸುತ್ತಾ ನೊಣಗಳ‌ ಹಾಗೆ ತಿರುಗುವ ಎಷ್ಟೋ ಜನರನ್ನು ಸ್ವತಃ ಹಾದರದಯ್ಯನೇ ಕಂಡಿದ್ದನು.ಮಿಂಡ್ರಯ್ಯನ ಮನಸ್ಸಿನಲ್ಲಿ ಅಂತಹದ್ದೊಂದು ಸಂಚಿರಬಹುದೇ ಎಂದು ಅನುಮಾನ ಮೂಡಿದಾಗ ನಿಜಕ್ಕೂ ಹಾದರದಯ್ಯನಿಗೆ ಕೋಪ ಬಂದಿತ್ತು.ಯಾಕೋ ಒಂದು‌ ಸಾರಿ ಮಿಂಡ್ರಯ್ಯನ ಮನೆಗೆ ಹೋಗಿ ಬರುವುದು ಲೇಸು ಅಂತ ಅನ್ನಿಸಿತು.ಹಾದರದಯ್ಯನ ಮಿಂಡ್ರಯ್ಯನ ಮನೆಯ ಕಡೆ ದಾಪುಗಾಲು ಹಾಕಿದ.
**************
          ಹಾದರದಯ್ಯ ತರಾವರಿ ಯೋಚನೆಗಳಿಂದ ಹೆಜ್ಜೆ ಎತ್ತಿ ಇಡುತ್ತಿರುವಂತೆ ಮುಂದಿನ ಮನೆಯ ಹಿರಿಯ ವ್ಯಕ್ತಿಯೊಬ್ಬ “ಏನು ಹಾದರದಯ್ಯ ಎಲ್ಲಿ ಹೊರಟೆ?”ಎಂದು ಬಿದ್ದಿರುವ ಹಲ್ಲಿನ ಸಂದುಗಳನ್ನು ತೋರಿಸುತ್ತಾ ತುಸು ವಿಲಕ್ಷಣವೇ ಎನ್ನುವಂತಹ ನಗುವಿನೊಂದಿಗೆ ಕೇಳಿದ.ಇನ್ನೂ ಮುಂದೆ ನಡೆಯುತ್ತಿರುವಂತೆ ಒಬ್ಬ ಮಧ್ಯ ವಯಸ್ಕ “ಏನ್ ಅಳಿಯ ದೇಬರು,ಎಲ್ಲಿ ಹೊಂಟಿ!”ಎಂದು ಕೇಳಿದರೆ ಅವರ ವಾರ್ಡನ ಕೊನೆಯ ಮನೆಯ ಮುಂದೆ ನಿಂತ ಹುಡುಗನೊಬ್ಬ “ಮಾವರ,ಎಲ್ಲಿ ಹೊಂಟಿರಿ!”ಎಂದರೆ ಬಾಜು ವಾರ್ಡಿನ ಮೊದಲ ಮನೆಯ ಓರಿಗೆಯವನು “ಏನೋ ಎಕ್ಕಡಿಗೋ ಹೊರಟಂತಿದೆಯಲ್ಲ?”ಎಂದ.ಎಲ್ಲರ ಪ್ರಶ್ನೆಗಳ ಮೂಲ ತಮಗೆ ಯಾವುದೋ ಒಂದು “ರೀತಿಯಲ್ಲಿ”ಸಂಬಂಧಿಕನಾಗುವ ವ್ಯಕ್ತಿಯೊಬ್ಬನನ್ನು ಕಾಳಜಿಪೂರ್ವಕವಾಗಿ ಮಾತಾಡಿಸಿದಂತಿದ್ದರೆ ಆ ಪ್ರಶ್ನೆಯ ಹಿಂದೆ ಅವ್ಯಕ್ತ ವ್ಯಂಗವೂ ಇದ್ದಂತೆ ಇತ್ತು.ಹಾದರದಯ್ಯ ಪ್ರಶ್ನೆ ಕೇಳಿದವರ ಮನೋಭಾವಕ್ಕೆ ತಕ್ಕಂತೆ ಅವರದೆ ಶೈಲಿಯಲ್ಲಿ ಅವರ ಸಂಬಂಧದ ವಾಚಕದೊಂದಿಗೆ ಉತ್ತರ ಕೊಟ್ಟ.ಮೊದಲನೆಯ ವ್ಯಕ್ತಿಗೆ ಕಾಕ ಎಂದರೆ ಎರಡನೆಯ ವ್ಯಕ್ತಿಗೆ ಭಾವ‌ ಎಂದಿದ್ದನು,ಹಾಗೇನೆ ಉಳಿದವರಿಗೆ ಭಾವ ಅಳಿಯ ಮತ್ತು ಅಣ್ಣ ತಮ್ಮ ಸಂಬೋಧ ವಾಚಕಗಳಿಂದ ಅವರ ಪ್ರಶ್ನೆಗೆ ಉತ್ತರ ಕೊಟ್ಟಿದ್ದ.ಅವರು ಆ ಪ್ರಶ್ನೆಯನ್ನು ಕೇವಲ ಕುಶಲೋಪಚಾರಕ್ಕೆ ಕೇಳಿರದೆ ತುಂಬಾ ಗಂಬೀರವಾಗಿಯೇ ಕೇಳಿದ್ದರು.ಅವರಿಗೆ ಹಾದರದಯ್ಯನ ಅವಶ್ಯಕತೆ ಮತ್ತು ಅವನ ಕಾರ್ಯ ಚಟುವಟಿಕೆಗಳ ಕುರಿತು ನಿಗಾವಣೆ ವಹಿಸುವ ದರ್ದು ಇದ್ದೇ ಇತ್ತು.ಅವನ ಅನುಪಸ್ಥಿತಿಯನ್ನು ಅವರು ಅಮೂಲಾಗ್ರವಾಗಿ ಸ್ವಾಗತಿಸುತ್ತಿದ್ದರು.ಹಾಗೆ ಅವರ ಪ್ರೀತಿಯ ನಟನೆಯ ಹಿಂದೆ ಹಲವು ಮನಸ್ಸುಗಳ ಸಂತೋಷ ಅಡಗಿರುವುದೊಂದು‌ ರಹಸ್ಯದ ಮಹಾ ವಿಷಯವಾಗಿತ್ತು.ಇಂತಿರಲು ಹಾದರದಯ್ಯ ನಿಜಕ್ಕೂ ಸಂಭ್ರಮಪಡುತ್ತಾನೆ.ತನಗಿರುವ ಸಂಪರ್ಕ ಮತ್ತು ತನ್ನ ವಾರ್ಡ್‌ನ ಜನ ತನ್ನ ಮೇಲೆ ವ್ಯಕ್ತಪಡಿಸುವ ವಿಶೇಷ ಪ್ರೀತಿಗೆ ಆತ ಒಳಗೊಳಗೆ ಪುಳಕಗೊಳ್ಳುತ್ತಾನೆ.ಜನಗಳ ಪ್ರೀತಿಗಳಿಸುವುದೊಂದು ಪೂರ್ವಜನ್ಮದ ಸುಕೃತ ಪುಣ್ಯ ಎಂದು ಭಾವಿಸುವ ಹಾದರದಯ್ಯ   ಎಷ್ಟೋ ಸಲ”ಭಲಾ ಹಾದರ!ಭಲಾ!”ಎಂದು ನಿಲುಕದ ತನ್ನ ಬೆನನ್ನು ಚಪ್ಪರಿಸಿಕೊಳ್ಳಲು ಹಾತೊರೆದದ್ದೂ ಉಂಟು.ಹಾದರದಯ್ಯನ ವ್ಯಾಪಕ ಜನಪ್ರಿಯತೆಯನ್ನು ಗಮನಿಸಿಯೇ ಮಿಂಡ್ರಯ್ಯ ಈ ಸಲದ ಗ್ರಾಮಪಂಚಾಯತಿ ಚುನಾವಣೆಗೆ ಅಭ್ಯರ್ಥಿಯನ್ನಾಗಿ ನಿರ್ಧರಿಸಿದನಾ?ಅದು ಮಿಂಡ್ರಯ್ಯನಿಗೇ ಗೊತ್ತು.ಹಾದರದಯ್ಯ ಈ ಚುನಾವಣೆ ಗೆಲ್ಲದಿದ್ದರೆ ಈ ಹಾದರಗೇರಿ ಗ್ರಾಮವೂ ಹಾದರ ಮುಕ್ತ ಗ್ರಾಮವಾಗಿ ಜನಜೀವನದ ಬದುಕು ಹಾದರ ರಹಿತ ಸ್ಥಿತಿಯಿಂದ‌ ಭಾರೀ ದುರಂತಕ್ಕೀಡುವ ಸಂಭವವೂ ಇದೆ.ಹಲವು ಅತೃಪ್ತ ಮನಸ್ಸುಗಳ ನಿಟ್ಟುಸಿರಿನ ಬಿರುಗಾಳಿಗೆ ಗ್ರಾಮದ ಚಾವಣಿ ಮನೆ ಮಠಗಳು ಹಾರಿಹೋಗುವ ಸಂಭವವೂ ಹೆಚ್ಚು.ಹಾದರ ಮುಕ್ತ ಗ್ರಾಮವೆಂದರೆ ಸಮಾಜದ ಅವನತಿಯ ಒಂದು ಪ್ರಮುಖ ಸೂಚನೆ ಎಂದೇ ಅರ್ಥ.ಬದುಕಿನ‌ ಹಲವು‌ ಅನಿವಾರ್ಯತೆಗಳ ಪೈಕಿ ಈ ಹಾದರವು ಒಂದು ಪ್ರಮುಖ ಅವಶ್ಯಕತೆಯಾಗಿದ್ದು ಅದರ ಅಸ್ತಿತ್ವಕ್ಕೆ ಧಕ್ಕೆ ಉಂಟಾದರೆ ಆ ಗ್ರಾಮದ ಕುಲದೈವ ಹಾದರನಾಥೇಶ್ವರನು ಮುನಿಯುವ ಸಂಭವವಿದೆ.ತುಂಬಾ ಜನ ವೃದ್ಧರು‌ ಆ ಆತಂಕದಿಂದ ತಮ್ಮ ತಮ್ಮ ಕೇರಿಯ ರಾಜಕೀಯ ಮುಖಂಡರಿಗೆ ಎಚ್ಚರಿಸುತ್ತಲೇ ಇದ್ದಾರೆ.ಎಲ್ಲಿ ಸಮಾಜ ಹಿರಿಯರ ಅನುಭವದ ಮಾತುಗಳಿಗೆ ಗೌರವ ಕೊಡುವುದಿಲ್ಲವೋ ಆ ಸಮಾಜದ ಅವನತಿ ಕಟ್ಟಿಟ್ಟ ಬುತ್ತಿ ಎನ್ನುವುದು ಪಂಡಿತರ ವ್ಯಾಖ್ಯಾನವಾಗಿದೆ.ತುಂಬಾ ಜನ ಜೋತಿಷ್ಯಗಳು ಈ ಕುರಿತು ಭವಿಷ್ಯವನ್ನೂ ನುಡಿದಿದ್ದಾರೆ.ಮಾನವ ನಾಗರೀಕನಾಗುವ ಮೊದಲು ಬಟ್ಟೆ ರಹಿತ ಸ್ಥಿತಿಯಲ್ಲಿ ಇದ್ದಾಗ ಸಮಾಜದಲ್ಲಿ ಮೌಲ್ಯಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದು ಜನಜೀವನ ಆರೋಗ್ಯವಂತವಾಗಿತ್ತು.ಯಾವಾಗ ಮನುಷ್ಯ ಬಟ್ಟೆ ಧರಿಸಲು ಪ್ರಾರಂಭಿಸಿದನೋ ಅಲ್ಲಿಂದ ಸುಳ್ಳು ಮತ್ತು ಕಪಟ ನಾಟಕಗಳು ಆರಂಭವಾದವು.ಬಟ್ಟೆ ಧರಿಸಿದ ಮನುಷ್ಯ ಹಲವು ರಹಸ್ಯಗಳ ಗೂಡಾದ.ಆತ ವಂಚನೆ ಮಾಡುವ ವೃತ್ತಿಯನ್ನು ತನ್ನ ಜೀವನಕ್ಕೆ ಅಳವಡಿಸಿಕೊಳ್ಳುವ ಮೂಲಕ ಹಣದ ಸಂಪಾದನೆಗೆ ತೊಡಗಿದ.ರಹಸ್ಯ ಎನ್ನುವ ಪದ ಕೂತೂಹಲದ ಕೇಂದ್ರ ಬಿಂದುವಾಯಿತು.ಮುಚ್ಚಿರುವ ಭಾಗವನ್ನು ನೋಡಲೇಬೇಕು ಎನ್ನುವ ವಿಲಕ್ಷಣ ವಾಂಚೆ ಪ್ರಾರಂಬವಾಯಿತು.ಮನುಷ್ಯರ ಮನಸ್ಸುಗಳು ರಹಸ್ಯದ ಸುತ್ತಾ ಗಿರಕಿ ಹೊಡೆಯತೊಡಗಿದವು.ನಗ ನಾಣ್ಯಗಳ ಜೊತೆಯಲ್ಲಿ ರಹಸ್ಯ ಭಾಗದ ಮನುಷ್ಯನ ಅಂಗಾಂಗಳು ಹಾದರದ ಕೇಂದ್ರ ಬಿಂದುವಾದವು.ಸಂತಾನೋತ್ಪತ್ತಿಗಾಗಿ ನಡೆಯಬೇಕಿರುವ ಕ್ರೀಯೆ ಗಂಡನ ಹೆಸರಿನಲ್ಲಿ,ಪ್ರೇಮದ ಹೆಸರಿನಲ್ಲಿ ಗೆಳೆಯನ ಹೆಸರಿನಲ್ಲಿ ವ್ಯಾಪಾರಿಕರಣಗೊಂಡಿತು.ತಾನು ಖಂಡಿತವಾಗಿ ತನ್ನ ವಾರ್ಡಿನಿಂದ ಗೆದ್ದೇ ಗೆಲ್ಲುತ್ತೇನೆ ಎನ್ನುವ ಆತ್ಮವಿಶ್ವಾಸ ಹಾದರದಯ್ಯನ ಮನಸ್ಸಿನಲ್ಲಿ ವ್ಯಾಪಕವಾಗಿ ಬಂದಿತು.ಮಿಂಡ್ರಯ್ಯನೇನು ಕಡಿಮೆ ಅನುಭವಸ್ಥನೇ ರಾಜಕೀಯದಲ್ಲಿ?
          ಮಿಂಡ್ರಯ್ಯನೆಂಬ ವ್ಯಕ್ತಿಯೂ‌ ಊರ ಮುಖಂಡನಾಗಲಿಕ್ಕೆ ಮಾಡಿದ ಕೃಷಿಯೇನು‌ ಕಡಿಮೆಯದಲ್ಲ.ಪಿತ್ರಾರ್ಜಿತ ಆಸ್ತಿಯ ಮುಕ್ಕಾಲು ಭಾಗ ಆತ ತನ್ನ ಘನಂಧಾರಿ ಕಾಮಗಾರಿಗಳಾದ ಕಾಮಕೇಳಿ,ಕುತಂತ್ರ,ಸಂಚುಗಳಿಗಾಗಿ ವಿನಿಯೋಗಿಸಿದ್ದ.ಸಮಾಜದ ಬಹು ಉಪಯೋಗಿ ಸ್ವಸಹಾಯ ಗುಂಪುಗಳಾದ ಮಹಿಳಾ ಸಂಘಗಳನ್ನು ಆತ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದ.ಮತ್ತವರಿಗೆ ವಿಟ ಪುರುಷರ ನೆರವು ಒದಗಿಸುತ್ತಾ ಸಮಾಜಕ್ಕೆ ಸುಖದ ನೆರವನ್ನು ಕಲ್ಪಿಸುವಲ್ಲಿ ಅಹರ್ನಿಶಿ ಶ್ರಮಿಸುತ್ತಿದ್ದ.ಊರಿನ ಮಿಶ್ರ ವೀರ್ಯ ಸಂಜಾತರೆಲ್ಲಾ ಆತನ ಹೆಸರಿನಲ್ಲಿ ತಮ್ಮ ತಮ್ಮ ಮನೆಯ ದೀಪಗಳನ್ನು ಹಚ್ಚುತ್ತಿದ್ದರು.ಸಾರ್ವಜನಿಕವಾಗಿ ಆತ ಮಟಕಾ ಮತ್ತು ಇಸ್ಪೀಟು ಉದ್ಯಮಗಳನ್ನು ಅಭಿವೃದ್ಧಿಪಡಿದ್ದನು.
**************
          ಇಂತಿಪ್ಪ ಮಿಂಡ್ರಯ್ಯ ತನಗೊಂದು ಅಪ್ಟ್ರಾಲ್ ಗ್ರಾಮಪಂಚಾಯತಿ ಸದಸ್ಯತ್ವ ಗೆದ್ದು ಕೊಡಲಾರನೆ?ಹಾದರದಯ್ಯ ರೋಮಾಂಚಿತನಾದನು.
          ಊರಿನ ಮುಖ್ಯ ರಸ್ತೆಗೆ ತಲುಪಿದನು.ಮುಖ್ಯ ರಸ್ತೆ ತಲುಪುತ್ತಿರುವಂತೆ ರಸ್ತೆಯ ಆ ಬದಿ ಮತ್ತು ಈ ಬದಿಯಲ್ಲಿರುವ ಎರಡು ಅಕ್ರಮ ಸರಾಯಿ ಉದ್ಯಮದ ಕಟ್ಟಡಗಳು ವಿಧಾನಸೌಧ ಮತ್ತು ಹೈಕೋರ್ಟುಗಳ ರೀತಿಯಲ್ಲಿ ಕಾಣಿಸಿದವು.ಆ ಪೈಕಿ ಒಂದು ಊರಿನ ಮಾದರಿ ಮಹಿಳೆ ಸೂಳೆಮ್ಮನ ಅಂಗಡಿಯೂ ಒಂದು.ಸೂಳೆಮ್ಮನ ಅಂಗಡಿ ವಿಧಾನಸೌಧವೆಂದು ಪ್ರಚಲಿತವಾಗಿರುವುದರ ಹಿಂದೆ ಅಲ್ಲಿ ರಾಜಕೀಯ ಸಂಶೋಧಕರ ದಂಡು ಜಮಾಯಿರುವುದೇ ಕಾರಣವಾಗಿತ್ತು.ತರಾವರಿ ಮನೆ ಮುರುಕರ ದಂಡು ಅಲ್ಲಿಸೇರಿ ಹಾದರಗೇರಿ ಗ್ರಾಮದ ಅಭಿವೃದ್ದಿಗೆ ಸಂಬಂಧಿಸಿದಂತೆ ಗಂಭೀರ ಚಿಂತನೆಯಲ್ಲಿ ತೊಡಗುತ್ತಾರೆ.ಈ ಸಂಶೋಧಕರಿಗೆ ಅತ್ಯಂತ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿ ಸೂಳೆಮ್ಮನ ಹಾಳುಬಾವಿಯಂತಹ ಹೊಕ್ಕಳ ಮತ್ತು ಜೋತು ಬಿದ್ದ ಶುಸ್ಕ ಮೊಲೆಗಳು ಪ್ರಮುಖ ಆಕರ್ಷಣೆಗಳಾಗಿದ್ದವು.ತಮ್ಮ ತಮ್ಮ ಮನೆಗಳಲ್ಲಿ ಸುರಿಯದ ಜೊಲ್ಲು ಆ ಹಾಳುಬಾವಿ ಮತ್ತು ರಸಹೀನ ತೊಗಲಿನ ದರ್ಶನದಿಂದ ಸುರಿಯುತ್ತಿರುವುದು ಬಲು ಸಂತೋಷದ ವಿಷಯವಾಗಿದೆ.ಈ ಮಾತ್ರದ ಸೌಭಾಗ್ಯಕ್ಕೆ ಪಕ್ಕದ ಊರಿನ ವಿಧುರ ಬಿಳಿತಲೆ ಮಾನವರು ಕೂಡಾ ಆ ದರ್ಶನ ಸರ್ಕಾರಿ ನೌಕರಿ ಎನ್ನುವಂತೆ ಸೊಸೆಯರು ಬೈದು ಹಾಕಿದ ಋಣದ ಕೂಳು ತಿಂದು ಶಿಸ್ತಿನಿಂದ ಬಂದು ದಿನವಿಡೀ ಕುಳಿತು ಸಂತೋಷವನ್ನು ಅನುಭವಿಸುತ್ತಿದ್ದಾರೆ.ಇಂತಿರುವ ಸೂಳೆಮ್ಮನ ಅಕ್ರಮ ಸರಾಯಿ ಅಂಗಡಿಯೂ ನಿಜಕ್ಕೂ ವಿಧಾನಸೌಧವಾಗಿಯೇ ಪ್ರಚಲಿತವಾಗಿದೆ.ಈ ಸೂಳೆಮ್ಮ ಏಕೆ ಗ್ರಾಮದ ಆದರ್ಶ ಮಹಿಳೆ ಎನ್ನುವುದನ್ನು ಇಲ್ಲಿ ವಿವರಿಸದಿದ್ದರೆ ಆ ಪಾತ್ರಕ್ಕೆ ನಾವು ಅನ್ಯಾಯ ಮಾಡಿದಂತಾಗುತ್ತದೆ.ಗಂಡನಿಗೆ ಬದುಕು ಮಾಡದೆ ಮಿಂಡನೆಂಬ ಮಾಹಾಪುರುಷನಿಗೆ ದೇಹ ಒಪ್ಪಿಸಿ ತಂದೆ ಇಲ್ಲದೆ ಮಗು ಪಡೆಯುವುದು ಹೇಗೆ ಎನ್ನುವ ವಿಷಯದಲ್ಲಿ ಒಂದು ಸಂಶೋಧನಾ ಗ್ರಂಥ ರಚಿಸಬಹುದಾದ ಜ್ಞಾನ ಹೊಂದಿರುವ ಈಕೆ ತಾನು ಕೂಡಾ ಹಲವು ಪುರುಷರೊಂದಿಗೆ ಒಟ್ಟಿಗೆ ಬದುಕಿ ಮಗು ಸಾಕ್ಷಾತ್ಕರಿಸಿಕೊಂಡ ಮಹಾನ್ ಮಹಿಳೆ.ಹುಟ್ಟಿದ ಮಗು ಬಬ್ರುವಾಹನನ ರೀತಿಯಲ್ಲಿ ಹಲವು ಸಂವತ್ಸರಗಳ ಕಾಲ ತಂದೆಯ ಹೆಸರಿಗಾಗಿ ಪೀಡಿಸಿತ್ತು.ಧರ್ಮ ಸಂಕಟಕ್ಕೆ ಸಿಲುಕಿದ ಸೂಳೆಮ್ಮೆ ಅದೊಂದು ದಿನ”ನೋಡು ಮಗನೆ ಒಬ್ಬನೆ ತಂದೆಗೆ ಹುಟ್ಟುವುದರಲ್ಲಿ ಏನಿದೆ ಮಾಹಾ? ಅದು ಲೋಕಾರೂಢಿ!ಹಾಗೆ ಒಬ್ಬ ತಂದೆಗೆ ಹುಟ್ಟುದ ಜನ ಸಂಭಾವಿತತನ ಎನ್ನುವ ರೋಗದಿಂದ ಜನಿಸುತ್ತಾರಾದ್ದರಿಂದ ಅವರು ಜೀವನವಿಡೀ ಪಾಪ ಪುಣ್ಯ ನ್ಯಾಯ ಎನ್ನುವ ಸಂಕಟದಿಂದ ಬಳಲುತ್ತಾ ಬಡತನ ನೋವು ಸಂಕಟಗಳಿಂದ ಮರಣ ಹೊಂದುತ್ತಾರೆ.ಹಾಗಾಗಿ ನಾನು ನಿನ್ನನ್ನು ಒಂದೇ ವಿರ್ಯಕ್ಕೆ ಜನ್ಮ ನೀಡಿಲ್ಲ.ನಿನ್ನ ಹುಟ್ಟಿನ ವಿಷಯದಲ್ಲಿ ನನಗೇ ಇನ್ನೂ ಗೊಂದಲಗಳಿವೆಯಾದ್ದರಿಂದ ನಿರ್ದೀಷ್ಟವಾಗಿ ನಿನ್ನ ಜನ್ಮದಾತರ ಪಟ್ಟಿಯನ್ನು ಒದಗಿಸಲಾರೆ.ಆದರೆ ನನಗೆ ಹೆಮ್ಮೆ ಇದೆ.ನನಗೆ ಯಾವ ತರಹದ ಮಗು ಬೇಕು ಎಂದು ಅಪೇಕ್ಷಿಸಿದ್ದೆನೋ ಅದೇ ತರಹದಲ್ಲಿ ಜನಿಸಿರುವೆ!”ಎಂದು ಹೇಳಿದ್ದಳು.ಮಿಶ್ರನಾಥ ಎಂದು ಆತನಿಗೆ ಆಕೆ ಹೆಸರಿಟ್ಟಿದ್ದಳು.ಮಿಶ್ರನಾಥ ಕೂಡಾ ಅಂತ ತಾಯಿಯ ಉದರದಲ್ಲಿ ಜನ್ಮಿಸಿರುವುದಕ್ಕೆ ಹೆಮ್ಮೆ ಪಟ್ಟಿದ್ದ.ಅದೊಂದು ದಿನ ಆತನ ಶ್ವೇತವರ್ಣದ ಪತ್ನಿ ಬಾಜೂ ಮನೆಯ ಉದ್ಯಮಿ ತೂತಪ್ಪನ ಜೊತೆಯಲ್ಲಿ ಪ್ರವಾಸ ಕೈಗೊಂಡಾಗ ಆತ ಸಂಭ್ರಮಿಸಿದ್ದ.ಬಹಳ ದಿನಗಳಾದರೂ ಪ್ರವಾಸದಿಂದ ಹಿಂದಿರುಗದಿದ್ದಾಗ ವಿನಮ್ರವಾಗಿ ವಿನಂತಿಸಿದ್ದ.ಹಳ್ಳದ ದಂಡೆ,ಬಯಲು ಶೌಚಾಲಯ ಪ್ರದೇಶಗಳಲ್ಲಿ ಆಕೆ ಕ್ರೀಡಾಕೂಟಗಳಲ್ಲಿ ಭಾಗವಹಿಸಿದಾಗ ಆತ ಸಂತೋಷಗೊಳ್ಳುತ್ತಿದ್ದ.ತನ್ನ ದೇಹದ ದಂಡನೆಯನ್ನು ಕಡಿಮೆಗೊಳಿಸುತ್ತಿದ್ದ ಪತ್ನಿಯನ್ನು ಶ್ಲಾಘಿಸುತ್ತಿದ್ದ.ಇಂತಿರಲು ಸೂಳೆಮ್ಮನು ಮತ್ತು ಆಕೆಯ ಮಗ ಮಿಶ್ರನಾಥನು….
          ಮಿಶ್ರನಾಥ ಭೂಮಿಗೆ ಅವತರಿಸಿದ ಕ್ಷಣ ಮತ್ತು ಘಳಿಗೆಗಳನ್ನು ಬಹು ಜಾಗ್ರತೆಯಿಂದ ಬರೆದಿಟ್ಟುಕೊಂಡ ಸೂಳೆಮ್ಮ ಜೋತಿಷಿಗಳ ಮನೆಗೆ ಧಾವಿಸಿದ್ದಳು.ಜಾತಕವನ್ನು ಸವಿವರವಾಗಿ ಪರಿಶೀಲಿಸಿದ ಆಚಾರ್ಯರು:ನಿನ್ನ ಮಗ ಮಾಮೂಲಿ ನಕ್ಷತ್ರದಲ್ಲಿ ಜನಿಸಿಲ್ಲ,ಹೀಗೆ ಹುಟ್ಟಿದ ಜನ ದೇಶವನ್ನಾಳುವ ಮಾಹಾನ್ ನಾಯಕರಾಗುತ್ತಾರೆ.ನಿನ್ನ ಮಗನಲ್ಲಿ ಆ ಎಲ್ಲಾ ಲಕ್ಷಣಗಳಿವೆ!”ಎಂದು ಉದ್ಗರಿಸಿದ್ದರು.ಅವಳು ಬೆಳೆದಿದ್ದು ಕೂಡಾ ಅಷ್ಟೆ ಚಮತ್ಕಾರಿಕವಾಗಿತ್ತು.ಯಾಮಾರಿಸುವ ವಿದ್ಯಗಳನ್ನು ಬಹ ಜಾಗ್ರತೆಯಲ್ಲಿ ರೂಢಿಸಿಕೊಂಡ ಮಿಶ್ರನಾಥ ಸರ್ಕಾರದ ಬಹು ಮಹತ್ವಾಕಾಂಕ್ಷೆ ಯೋಜನೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಜಗತ್ತು ನಾಚುವಂತೆ ಉಪಯೋಗಿಸಿಕೊಂಡ.ಬಡ ಕೂಲಿಕಾರರು ಮಾಹಾನಗರಗಳಿಗೆ ಒಲಸೆ ಹೋಗದಿರಲಿ ಎಂದು ರೂಪಿಸಿದ ಆ ಯೋಜನೆಯನ್ನು ಯಾಮಾರಿಸಿ ಕೂಲಿಕಾರರ ಬ್ಯಾಂಕ್ ಪಾಸ್ ಬುಕ್ಕು ಮತ್ತು ಎಡಿಎಮ್ ಕಾರ್ಡುಗಳನ್ನು ತಮ್ಮ ವಶದಲ್ಲಿ ಇಟ್ಟುಕೊಳ್ಳುವ ಮೂಲಕ ಸರ್ಕಾರದ ಯೋಜನೆಯನ್ನು ಯಶಸ್ವಿಗೊಳಿಸಿದನು.
          ಅದೊಂದು ದಿನ ಆ ಊರಿನ ಬಡ ಕ್ರಾಂತಿಕಾರಿ ಶ್ರೀಕಾಂತನೆಂಬ ವ್ಯಕ್ತಿಯೂ ಆಕೆಯ ಅಕ್ರಮ ಸರಾಯಿ ಮಾರಾಟ ಉದ್ಯಮದ ಮುಂದೆ ವಿಶಾಲವಾಗಿರುವ ಖಾಲಿ ನಿವೇಶನದಲ್ಲಿ ತನ್ನದೊಂದು ಎಲೆಕ್ಟ್ರಿಕ್ ಉದ್ಯಮ ಸ್ಥಾಪಿಸುವ ಮಹತ್ಕಾಂಕ್ಷೆಯಿಂದ ನಿವೇಶನವನ್ನು ಬಾಡಿಗೆಗೆ ವಿನಂತಿಸಿದ್ದ.ಅದಕ್ಕೆ ಆಕೆ ‘ಐ ಇಲ್ಲಪ್ಪಾ,ಮುಂದೆ ನನ್ನ ಮಗ ಮಿಶ್ರನಾಥ ಎಮ್ ಎಲ್ ಎ ಆಗಲಿದ್ದಾನೆ.ಕಾರು ನಿಲ್ಲಿಸಲು ಜಾಗ ಬೇಕಲ್ಲವೆ?”ಎಂದು ಮರು ಪ್ರಶ್ನೆ ಹಾಕಿದ್ದಳು.ಅದು ಅಲ್ಲದೆ ತನ್ನ ಹಾಳು ಹೊಕ್ಕಳು ಮತ್ತು ರಸಹೀನ ಮೊಲೆಗಳಿಗೆ ಜೊಲ್ಲು ಸುರಿಸುವ ಗಿರಾಕಿಗಳ ವಾಹನ ನಿಲ್ಲಲು ಕೂಡಾ ಜಾಗದ ಅವಶ್ಯಕತೆ ಇದೆ ಎನ್ನುವುದನ್ನು ಆಕೆ ಮನಮುಟ್ಟುವಂತೆ ವಿವರಿಸಿದ್ದಳು.
          ಆದರೆ ವಿಚಿತ್ರ ರೀತಿಯಲ್ಲಿ ಬಟ್ಟೆ ತಯಾರಿಸುವ ಕಾರ್ಖಾನೆಗೆ ಆಕೆ ಸ್ಥಳ ಮಂಜೂರು ಮಾಡಿದ್ದು ಶ್ರೀಕಾಂತನಿಗೆ ಆಶ್ಚರ್ಯವುಂಟು ಮಾಡಿತ್ತು.ಹಾದರಗೇರಿಯಲ್ಲಿ ತನ್ನಂತವರಿಗೆ ಉಳಿಗಾಲವಿಲ್ಲ ಎಂದುಕೊಂಡನಾದರೂ ಎದೆಯಲ್ಲಿ ದ್ವೇಷದ ಬೆಂಕಿ ಹತ್ತಿಕೊಂಡಿತ್ತು.
           ಹಾದರದಯ್ಯ ಹಾಗೆ ವಿಧಾನಸೌಧ ಮತ್ತು ಅದರ ಎದುರಿನ ಕಿಂಕಯ್ಯನ ಹೈಕೋರ್ಟು ದಾಟುವಾಗ ಜನ ಸಾಮೂಹಿಕವಾಗಿ ನಮಸ್ಕಾರ ಹೇಳಿದರು.ತಲಾ ಒಂದೊಂದು ಬಾಟ್ಲಿ ಒರಿಜಿನಲ್ ಚಾಯಿಸ್ ಎನ್ನುವ ಅಮೃತವನ್ನು ಅಪೇಕ್ಷಿಸಿದರಾದರೂ ಹಾದರದಯ್ಯ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಲಾ ಅವರಿಗೆ ನೈಂಟಿ ನೈಂಟಿ ಬಾಟಲಿಯನ್ನು ಇತ್ತ ಕಿಂಕಯ್ಯನಿಗೂ ಅತ್ತ ಸೂಳೆಮ್ಮನಿಗೂ ಹೇಳಿ ಮುನ್ನಡೆದನು.
*************
          ಅದೊಂದು ತೆಂಗಿನ ಗರಿಗಳಿಂದ ನಿರ್ಮಿಸಿಕೊಂಡ ಗುಡಿಸಲು!ಗುಡಿಸಲು ಮುಕ್ತ ಭಾರತ ಎನ್ನುವ ಭಾರತ ಸರ್ಕಾರದ ಯೋಜನೆಯನ್ನು ಅಣಕಿಸುವಂತೆ ಅಂತ ಲಕ್ಷ ಲಕ್ಷ ಗುಡಿಸಲುಗಳು ಈ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಜೀವಂತವಾಗಿವೆ.ಬಡವರಿಗೆ ಪಾರದರ್ಶಕ ರೀತಿಯಲ್ಲಿ ಯೋಜನೆಗಳು ತಲುಪದ ಕಾರಣ ಇಂತಹ ಗುಡಿಸಲುಗಳು ಇನ್ನೂ ಹಾಗೆಯೇ ಉಳಿದುಕೊಂಡಿವೆ.ಗ್ರಾಮಸಭೆ ಎನ್ನುವ ಕಳ್ಳನಾಟಕ ಹೇಗೆ ಸರ್ಕಾರವನ್ನು ಯಾಮಾರಿಸಿ ಕೇವಲ ಗ್ರಾಮಪಂಚಾಯತಿ ಸದಸ್ಯ ಮತ್ತು ಅಧ್ಯಕ್ಷರುಗಳ ಪಾಲಾಗುತ್ತಿವೆ ಮತ್ತವು ತಮ್ಮ ತಮ್ಮ ಬಂಧು ಬಳಗ ಮಾತ್ರವಲ್ಲದೆ ತಮ್ಮ ರಖಾವುಗಳಿಗೆ ವಿತರಿಸಲ್ಪಡುತ್ತವೆ ಎನ್ನುವುದನ್ನು ಹೇಳಲು ಕುಳಿತರೆ ಅದೇ ಒಂದು ದೊಡ್ಡ ಕಥೆಯಾಗುತ್ತದೆ.
          ಆ ಗುಡಿಸಲ ತುಂಬಾ ದಾರಿದ್ರ್ಯ ತುಂಬಿದೆ ಎನ್ನುವ ಮಾತಿಗೆ ಪೂರಕವಾಗಿ ಅಲುಮಿನಿಯಮ್ ಪಾತ್ರೆಗಳ ಬಳಕೆ ಮತ್ತು ಮಣ್ಣಿನ ಕೊಡಗಳ ಉಪಯೋಗವೇ ಸಾಕ್ಷಿ.ಅದು ಸತ್ಯಪ್ಪನ ಗುಡಿಸಲು.ಸತ್ಯಪ್ಪ ಊರಿನ ದುರುಳರ ಕಿರುಕುಳ ಸಹಿಸದೆ ತನ್ನ ಪಿತ್ರಾರ್ಜಿತ ಎರಡೆಕೆರೆ ಜಮೀನಿನಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದನು.ಎರಡು ಮಕ್ಕಳು ಮತ್ತು ಹೆಂಡತಿ ಶೀಲಮ್ಮನ ಜೊತೆಯಲ್ಲಿ ಬಡತನವಿದ್ದರೂ ನೆಮ್ಮದಿಯಿಂದ ಜೀವಿಸುತ್ತಿದ್ದನು.ಹಣಕ್ಕೂ ಸಂತೋಷಕ್ಕೂ ಸಂಬಂಧವಿಲ್ಲ ಎನ್ನುವುದನ್ನು ಸತ್ಯಪ್ಪನ ಜೀವನ ವಿಧಾನ ನೋಡಿ ತಿಳಿದುಕೊಳ್ಳಬಹುದು.ಗಂಡ ಹೆಂಡತಿ ಮತ್ತು ಮಕ್ಕಳು ಎರಡೆಕೆರೆ ಜಮೀನಿನಿಂದ ಲಭ್ಯವಾಗುವ ಆದಾಯದಲ್ಲಿ ಸುಖವಾಗಿದ್ದರು.ಹೀಗಿರಲು…
          ನ್ಯಾಯರಾವ್,ಹೋರಾಟಪ್ಪ,ನೀತೆಣ್ಣ,ಕನಿಕರಮ್ಮ,ಮಮತೆಮ್ಮ,ದುಃಖಪ್ಪ ಇವರೆ ಮೊದಲಾದವರು ಅಲ್ಲಿಗೆ ಬಂದರು.ಊರಿನ ಪ್ರಮುಖರು ಹಾಗೆ ಜೊತೆಯಾಗಿ ತನ್ನ ಗುಡಿಸಿಲಿಗೆ ಬಂದಿದ್ದು ಸತ್ಯಪ್ಪನಿಗೆ ತುಂಬಾ ಸಂತೋಷವಾಯಿತು.ಗುಡಿಸಲ ಮುಂದೆ ತುಸು ದೂರದಲ್ಲಿ ದೇವರು ನಾಟಿಸಿದ ಹೆತ್ತಮ್ಮನ ಸಹನೆಯಲ್ಲಿ ಬಿಸಿಲ ನುಂಗಿ ನೆರಳಕೊಡುತ್ತಿರುವ ಮರದಡಿ ಬಂದು ಕುಳಿತುಕೊಂಡರು.ಹಾಗೆ ಮರದಡಿಕುಳಿತ ಮೇಲೆ ಸತ್ಯಪ್ಪ ತನ್ನ ಧರ್ಮಪತ್ನಿ ಶೀಲಮ್ಮಳಿಗೆ ತುಸು ಜೋರಾದ ಧ್ವನಿಯಲ್ಲಿ ಚಹಾ ಮಾಡುವಂತೆ ಕೂಗಿದನು.ಅದಾದ ಮೇಲೆ ನ್ಯಾಯರಾವ್ ನನ್ನು ಉದ್ದೇಶಿಸಿ ಏನು ಬಂದ ಕಾರಣ ಎಂದು ನಯವಾದ ಧ್ವನಿಯಲ್ಲಿ ಕೇಳಿದನು.ಪ್ರೀತಿ ಪ್ರೇಮವೇ ಜೀವನದ ಬಹು ಮುಖ್ಯ ಮೌಲ್ಯಗಳು ಎಂದು ಭಾವಿಸಿರುವ ಸತ್ಯಪ್ಪ ಬಹು ಜನರ ಪ್ರಿಯ ವ್ಯಕ್ತಿಯಾಗಿದ್ದನು.ಮೂರ್ಖರಿಗೆ ಮತ್ತು ಅವನೀತಿ ಪರರಿಗೆ ದುಸ್ವಪ್ನವಾಗಿದ್ದರೂ ಸದ್ಯದ ವರ್ತಮಾನದಲ್ಲಿ ಹಣ ಜೀವನದ ಬಹು ಮುಖ್ಯ ಅಂಶವಾಗಿ ಪರಿಣಮಿಸಿರುವುದರಿಂದ ಸತ್ಯ ನ್ಯಾಯ ನೀತಿಗಳಿಗೆ ಬೆಲೆ ಇಲ್ಲವಾಗಿ ಮೂರ್ಖರ ಕಿರುಕುಳ ಸಹಿಸದಾಗಿ ಆತ ಊರು ಬಿಟ್ಟಿದ್ದ.
          “ಏನಿಲ್ಲ ಸತ್ಯಪ್ಪಣ್ಣ ಎಲೆಕ್ಷನ್ ಬಂತಲ್ಲ?ಅದರ ಸಂಬಂಧ ಮಾತಾಡಲಿಕ್ಕೆ ಬಂದಿರುವೆವು.ಊರಿನಲ್ಲಿ ಸತ್ಯದ ಪರ ಸಂವಿಧಾನದ ಆಶಯದ ಪರ ಯಾರೂ ಇಲ್ಲ.ಊರ ತುಂಬಾ ರಕ್ಕಸರದೆ ಆರ್ಭಟ ಜಾಸ್ತಿಯಾಗಿದ್ದು ಬಡವರಿಗೆ ಉಳಿಗಾಲವಿಲ್ಲದಂತಾಗಿದೆ.ಸರ್ಕಾರದ ಯೋಜನೆಗಳು ಸಮರ್ಪಕ ರೀತಿಯಲ್ಲಿ ಜನತೆಗೆ ತಲುಪಬೇಕೆಂದರೆ ನಮ್ಮ ಗುಂಪುಗಳ ಪೈಕಿ ಯಾರೋ ಒಬ್ಬರು ಚುನಾವಣೆಗೆ ನಿಲ್ಲಲೇಬೇಕು.ಎಲ್ಲರೂ ವಿಚಾರ ಮಾಡಿ ನೋಡಿದರೆ ನಿಮ್ಮ ಹೊರತು ಬೇರೆ ಯಾರೂ ಕಾಣಿಸುತ್ತಿಲ್ಲ.ಹಿರಿಯ ಸಂವಿಧಾನಪ್ಪನ ಆಶಯ ಕೂಡಾ ಅದೇ ಆಗಿದ್ದು ಅಭ್ಯರ್ಥಿ ಅಂತ ನಿಲ್ಲುವ ಹಾಗಿದ್ದರೆ ಸತ್ಯಪ್ಪನ ಮನ ಒಲಿಸಿ ಎಂದು ಹೇಳಿದ್ದಾರೆ.ಸತ್ಯಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಹೇಳಿದ್ದಾರೆ.ದಯವಿಟ್ಟು ನೀವು ಮನಸ್ಸು ಮಾಡಲೇಬೇಕು”ಎಂದನು ನ್ಯಾಯರಾವ್ ಆತನ ಕಣ್ಣುಗಳಲ್ಲಿ ಕನಸುಗಳು ಮಾತ್ರವಿದ್ದು ಅವು ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತಿದ್ದವು.ಬರೀ ನಿರಾಶೆಯ ದಿನಗಳನ್ನು ಕಂಡಿದ್ದ ನ್ಯಾಯರಾವ್ ಸದ್ಯ ಈ ಚುನಾವಣೆಯಿಂದಾದರೂ ಕನಸುಗಳಿಗೆ ರೆಕ್ಕೆ ಮೂಡಲಿ ಎಂಬ ಆಶಯವನ್ನು ಹೊಂದಿದ್ದ.
          ಹೋರಾಟಪ್ಪ,ನೀತೆಣ್ಣ,ಕನಿಕರಮ್ಮ,ಮಮತೆಮ್ಮ,ದುಃಖಪ್ಪ ಒಕ್ಕೂರಲಿನಿಂದ ತಮ್ಮ ಸಹಮತವನ್ನು ವ್ಯಕ್ತಪಡಿಸಿದರು.ಅಷ್ಟರಲ್ಲಿ ಶೀಲಮ್ಮ ಚಹಾ ತೆಗೆದುಕೊಂಡು ಬಂದಳಲ್ಲದೆ ಗುಡಿಸಿಲಿನಿಂದಲೇ ಈ ಸಂಭಾಷಣೆಯನ್ನು ಕೇಳಿಸಿಕೊಂಡಿದ್ದಳು.ಎಲ್ಲರಿಗೂ ಚಹಾ ಕೊಡುತ್ತಾ ಆಕೆ ಹೀಗೆ ನುಡಿದಳು ”ಅಣ್ಣಾ ನಾವು ಬಡವರು,ಎಲೆಕ್ಷನ್ ಅಂದ್ರೆ ಉಳ್ಳವರು ಮಾಡುವ ಕೆಲಸ.ಒಟಾಕಲಿಕ್ಕೆ ದುಡ್ಡು ಅದೂ ಇದೂ ಕೊಡಬೇಕು.ಅದು ಅಲ್ಲದೆ ಒಂದನೆ ವಾರ್ಡಿನಿಂದ ಆ ಹಾದರದಯ್ಯ ಬೇರೆ ನಿಂತಿದ್ದಾನೆ.ಅವನಿಗೆ ಮಂದಿಮಕ್ಕಳು ಬಾಳ್ ಇದ್ದಾರೆ.ಅವನ ಹೆಂಡತಿ ಗಯ್ಯಾಳಿ ಸರಿ ಇಲ್ಲ.ಬಾಳ್ ಬೆರಿಕಿ ಮನಷ್ಯಳು.ನಮಗ್ಯಾಕಣ್ಣ ಈ ಕಿರಿಕಿರಿ?”ಎಂದಳು.ಈ ಸಾತ್ವೀಕ ಜನರ ಪ್ರತಿನಿಧಿ ಎನ್ನುವಂತೆ ಆಕೆ ಮಾತನಾಡಿದಳು.ಬಹುಶಃ ಸ್ವಾತಂತ್ರ್ಯಾ ನಂತರದ ಭಾರತದ ಅಧೋಗತಿಗೆ ಇಂತಹ ಮಹಿಳೆಯರೆ ಕಾರಣವೇನೋ?ತಾವಾಯಿತು ತಮ್ಮ ಸಂಸಾರವಾಯಿತು ಎಂದು ಸ್ವಾರ್ಥಪರ ನಿಲುವುಗಳಿಂದ ಗಂಡಂದಿರಲ್ಲಿ ಇರಬಹುದಾದ ಅಲ್ಪಮಟ್ಟಿಗಿನ ಧೈರ್ಯಕ್ಕೂ ಸಂಚಕಾರ ತಂದುಬಿಡುತ್ತಾರೆ.ಆದರೆ ಸಂವಿಧಾನಪ್ಪನಂತಹ ಹಿರಿಯ ಜೀವಿಗಳು ಮಾಡಿದ ನೇಮಕವನ್ನು ತಾನು ಗೌರವಿಸಲೇಬೇಕು.ಸ್ವಾರ್ಥಪರ ಶಕ್ತಿಗಳಿಂದ ಬಹು ಹೊಡೆತ ತಿಂದ ಸಂವಿಧಾನಪ್ಪ ಅತ್ಯಂತ ಕೃಶಗೊಂಡು ನಾಶವಾಗುವ ಸ್ಥಿತಿಯಲ್ಲಿದ್ದಾನೆ.ಊರಿನ ಪ್ರತಿಯೊಬ್ಬರೂ ಆತನ ಮಾತನ್ನು ಹೀಯಾಳಿಸುವವರೆ.ಆತನ ನಿಯಮಾಳಿಗಳನ್ನು ದಾಟುವುದು ಒಂದು ಫ್ಯಾಷನ್ ಆಗಿದ್ದು ಸಂವಿಧಾನಪ್ಪನ ತಂದೆ ಕೇವಲ ಗೋಡೆಯ ಮೇಲಿನ ಭಾವ ಚಿತ್ರವಾಗಿ ಹಲ್ಲಿಗಳೊಂದಿಗೆ ಸಹ ಜೀವನ ನಡೆಸುತ್ತಾ ದುಷ್ಟಶಕ್ತಿಗೊಳೊಂದಿಗೆ ತನ್ನ ತ್ಯಾಗಕ್ಕೆ ಮರ್ಯಾದೆ ಎಂಬಂತೆ ಆಗೊಮ್ಮೆ ಹೀಗೊಮ್ಮೆ ಅವಮಾನಕ್ಕೆ ಈಡಾಗುವುದು ಒಂದು ಕೋಮಿನ ಜನಗಳು ಪ್ರತಿಭಟಿಸುವುದು ಮಾಮೂಲಿನ ಸಂಗತಿಯಾಗಿದೆ.ಜೀವನ ಎಡ ಬಲ ಹಾದಿಗಳಲ್ಲಿ ಒಣ ಪ್ರತಿಷ್ಠೆಗಳಿಂದ ಸಾಗಿರುವುದು ಒಂದು ಚೋದ್ಯವಾಗಿದೆ.“ಸರಿ,ಸಂವಿಧಾನಪ್ಪ ಹೇಳಿದ್ದಾರೆ ಎಂದರೆ ಆತನ ಮಾತು ಮೀರುವುದುಂಟೆ?ನಿಮ್ಮ ಇಚ್ಚೆಯಂತಾಗಲಿ!”ಎಂದಾಗ ಅಲ್ಲಿ ಜಮಾವಣೆಗೊಂಡ ಊರಿನ ಸತ್ಪ್ರಜೆಗಳು ಹರ್ಷ ವ್ಯಕ್ತಪಡಿಸಿದರು.ಆ ಹರ್ಷದಲ್ಲಿಯೇ ಹೋರಾಟಪ್ಪ ಈ ರೀತಿಯಲ್ಲಿ ನುಡಿದನು “ಅಣ್ಣಾ ನೀವೇನು ಚಿಂತೆ ಮಾಡದಿರಿ,ಆ ಮಿಂಡ್ರಯ್ಯನ ಕಾರುಬಾರಿಗೊಂದು ಗತಿ ಕಾಣಿಸಲೇ ಕಾಣಿಸುತ್ತೇವೆ.ಕ್ರಾಂತಿಕಾರಿ ಶ್ರೀಕಾಂತನು ಯಾವುದೋ ವಿಷಯದಲ್ಲಿ ಆ ಜನಗಳ ಕುರಿತು ವ್ಯಗ್ರನಾಗಿದ್ದಾನೆ.ನಾವೆಲ್ಲಾ ಒಟ್ಟಿಗೆ ಹೋರಾಡಿ ಈ ಚುನಾವಣೆಯಲ್ಲಿ ನಿಮ್ಮನ್ನು ಗೆದ್ದೇ ಗೆಲ್ಲುಸುತ್ತೇವೆ!”ಎಂದನು.
          ಕೊನೆಗೆ ಸತ್ಯಪ್ಪ ಚುನಾವಣೆಗೆ ಉಮೇದುದಾರ ಎಂದು ನಿರ್ಧಾರವಾದ ಮೇಲೆ ಅವರು ಆ ಬೇವಿನ ಮರದ ನೆರಳಿನಿಂದ ಕದಲಿದರು.
…………………………………………………………………………………………………
          ನಾಲ್ಕೈದು ಬಡ ಫಲಾನುಭವಿಗಳ ಆಶ್ರಯ ಯೋಜನೆಯ ಮನೆಗಳನ್ನು ಚಾಣಾಕ್ಷತನದಿಂದ ದೋಚಿಕೊಂಡು ಕಟ್ಟಿಸಿಕೊಂಡ ರಾಜಾದಿ ರಾಜ ರಾಜ ಮಾರ್ತಾಂಢ ಸನ್ಮಾನ್ಯ ಹಾದರಗೇರಿಯ ಪ್ರಮುಖ ಗ್ರಾಮ ಮುಖಂಡ ಹಲವು ಅನೀತಿಗಳ ಬಿರುದಾಂಕಿತ ಬಹು ಕಾಮಗಾರಿ ಸ್ಥಾಪಿತ ಶ್ರೀಶ್ರೀಶ್ರೀ ಲಕ್ಷ ಶ್ರೀಗಳ ಒಡೆಯ ಮಿಂಡ್ರಯ್ಯನೆಂಬ ನಾಮದಾರಿ ಘನ ಸರ್ದಾರ ಜ್ಞಾನದ ತುಂಡು ಎಂದು ಭಾವಿಸುವ ಗಣೇಶ ಬೀಡಿಯನ್ನು ಬಲು ಹಿತವಾಗಿ ಆಘ್ರಾಣಿಸುತ್ತಾ ಪ್ಲಾಸ್ಟಿಕ್ ಕುರ್ಚಿಯನ್ನೇ ವಜ್ರ ಖಚಿತ ರತ್ನದ ಸಿಂಹಾಸನವನ್ನಾಗಿ ಮಾಡಿಕೊಂಡು ಗಂಭೀರ ಬಂಗಿಯಲ್ಲಿ ಕುಳಿತಿದ್ದಾರೆ.ಗಣೇಶ ಬೀಡಿಯನ್ನು ಜ್ಞಾನದ ತುಂಡು ಎಂದು ಭಾವಿಸಿರುವ ಅವರು ಆ ಜ್ಞಾನದ ತುಂಡುಗಳನ್ನು ತಾವು ಅಸೀನರಾಗಿರುವ ಸ್ಥಳದಲ್ಲಿ ಬಹು ಸಂಖ್ಯಯಲ್ಲಿ ಹರಡಿರುವರು.ಹಾಗೆ ಪ್ರೀತಿಯಿಂದ ಜ್ಞಾನದ ತುಂಡುಗಳಿಂದ ಪಡೆದ ವರ ಪ್ರಸಾದದಿಂದ ಪ್ರಾಪ್ತವಾದ ಕೆಮ್ಮು ಎನ್ನುವ ಲೋಕ ಜಾಗೃತ ಕ್ರಿಯೆಯನ್ನು ಕ್ಷಣಕ್ಕೊಮ್ಮೆ ಪ್ರದರ್ಶಿಸುತ್ತಾ ಕುಳಿತರಲು ಆತನ ಪತ್ನಿ ಕುಂಟಲಗಿತ್ತೆಮ್ಮ ಆತನಿಗೆ ಹಲವು ರೀತಿಯ ಪ್ರಶ್ನೆಗಳನ್ನು ಹಾಕುತ್ತಾ ಶಿವ ಪಾರ್ವತಿಯ ಹಾಗೆ ಕುಳಿತಿರಲು ಏನಾಯ್ತು ಎಂದರೆ….
          ತನ್ನ ಸೋಲು ಗೆಲುವಿನ ಬಗ್ಗೆ,ತನ್ನ ಎದುರಾಳಿ ಸತ್ಯಪ್ಪನ ಬಗ್ಗೆ,ತರಾವರಿ ಚಿಂತೆಯ ದುಗುಡದಲ್ಲಿ ಹಾದಿಯುದ್ದಕ್ಕೂ ಯೋಚಿಸಿತ್ತಾ ಬಂದ ಹಾದರದಯ್ಯನು ಮಿಂಡ್ರಯ್ಯನ ಮನೆಗೆ ಬಂದು ತಲುಪಿದನು.ಕುಳಿತಲ್ಲಿಂದಲೇ ನಖಾಶಿಖಾಂತ ನೋಡಿದ ದಂಪತಿಗಳಿಬ್ಬರು ವಿಲಕ್ಷಣ ಬಾಯಿತೆರೆತದಿಂದ ಸ್ವಾಗತಿಸಿದರು.ಹಾದರದಯ್ಯ ಮಿಂಡ್ರಯ್ಯನ ಮನೆ ತಲುಪಿದಾಗ ಗೋಧೋಳಿ ಸಮಯವಾಗಿದೆ.ಮೊನ್ನೆ ಮೂರು ದಿನದ ಹಿಂದೆ ಸತ್ತ ನಾದಿರ ಗೋವಿಂದನಿಗೆ ಈ ಹಾದರದಯ್ಯ ಬರುತ್ತಿರುವಾಗ ಬೋಳಿಸಿಕೊಂಡ ತಲೆಯಿಂದ ಚಾದರ ಹೊದ್ದ ಗೋವಿಂದನ ಸಂಬಂಧಿ ಮೂರು ಕೂಳು ಸರಬರಾಜು ಮಾಡಿದ್ದೊಂದು ಶುಭ ಮೂಹೂರ್ತವೆಂದು ಭಾವಿಸಿದ್ದನು ಹಾದರದಯ್ಯ.ಮೇಯಲಿಕ್ಕೆ ಹೋಗಿದ್ದ ದನಗಳು ಮನೆಗೆ ಹಿಂದಿರುಗುವ ಹೊತ್ತು.ತನ್ನ ಗಂಡ ಮಿಂಡ್ರಯ್ಯನ ಹತ್ತಿರ ಯಾರಾದರೂ ಬಂದರೆ ಕುಂಟಲಗಿತ್ತೆಮ್ಮಾ ಚಹಾ ಮಾಡಿಕೊಡುವ ಸಾತ್ವೀಕ ಅತಿಥಿ ಸತ್ಕಾರವನ್ನು ಬಲು ಕಷ್ಟದಿಂದ ರೂಢಿಯಲ್ಲಿಟ್ಟುಕೊಂಡಿರುವಳು.”ಬಾರಯ್ಯ ಬಾ!ಮುಂದಿನ ಹಾದರಗೇರಿ ಗ್ರಾಮಪಂಚಾಯತಿಯ ಅಧ್ಯಕ್ಷರಾದ ಹಾದರದಯ್ಯನಿಗೆ ಸ್ವಾಗತ!”ಎಂದು ಮಿಂಡ್ರಯ್ಯ ನುಡಿಯುತ್ತಿರುವಂತೆ ಒಂದು ವಿಚಿತ್ರ ತರಹದ ನಾಚಿಕೆಯಲ್ಲಿ ಹಾದರದಯ್ಯ ಕಟ್ಟೆಯ ಮೇಲೆ ಮಿಂಡ್ರಯ್ಯನ ಖುರ್ಚಿಗೆ ಎದುರಾಗಿ ಕುಳಿತನು.ಕುಂಟಲಗಿತ್ತೆಮ್ಮ ಅದಾಗಲೇ ಎದ್ದು ಮನೆಯೊಳಕ್ಕೆ ಚಹಾ ತಯಾರಿಸಲೆಂದು ಹೋದಳು.ಮೊದಲ ಬಾರಿಗೆ ಇಬ್ಬರ ಗಂಡಸರ ಮಧ್ಯೆ ತಲೆ ತೂರಿಸುವುದನ್ನು ಆಕೆ ತ್ಯಜಿಸಿದ್ದು ಒಂದು ವಿಚಿತ್ರ ಸಂಗತಿಯಾಗಿತ್ತು.ಕುಂಟಲಗಿತ್ತೆಮ್ಮನ ಈ ಅಸಹಜ ವರ್ತನೆಯನ್ನು ತುಸು ಆಶ್ಚರ್ಯ ಎನ್ನುವಂತೆ ಗಮನಿಸಿದ ಮಿಂಡ್ರಯ್ಯ ತುಂಬಾ ಆಶ್ಚರ್ಯಗೊಂಡನು!ಇತ್ತೀಚೆಗೆ ಕುಂಟಲಗಿತ್ತೆಮ್ಮ ಸಭ್ಯ ಸಮಾಜದ ಹೀನ ನಡವಳಿಕೆಗಳಂತೆ ವರ್ತಿಸುತ್ತಿರುವುದು ಆತನ ಗಮನಕ್ಕೆ ಬಂದಿತ್ತು.ಸತ್ಯಪ್ಪನ ಚಾಳಿ ಇವಳಿಗೇನಾದರೂ ಹರಿಯಿತೆ ಎನ್ನುವುದೊಂದು ಅನುಮಾನ ಕಾಡಿತಾದರೂ ಕುಂಟಲಗಿತ್ತೆಮ್ಮನವರಂತವರ ಮನಸ್ಥಿತಿ ಅರ್ಥ ಮಾಡಿಕೊಳ್ಳುವುದು ಅಸಾಧ್ಯ ಅಂತನ್ನಿಸಿತು.ಗಂಡನಾದ ತನಗೆ ಅರ್ಥವಾಗದಿರುವುದು ಬಲು ವಿಚಿತ್ರ ಎನ್ನಿಸಿದರೂ ಅದೊಂದು ಸತ್ಯವಾಗಿತ್ತು.ಸಭ್ಯ ಸಮಾಜದ ರೀತಿಯಲ್ಲಿ ತಾವು ವರ್ತಿಸುವುದೆಂದರೆ ಕೂಳಿಲ್ಲದೆ ಸಾಯುವುದೇಂದೆ ಅರ್ಥ ಎಂದು ಈ ಹಿಂದೆ ಯಾರದೋ ಮಾತಿಗೆ ಉತ್ತರಿಸುತ್ತಾ ಮಿಂಡ್ರಯ್ಯ ಹೇಳಿದ್ದ.ನಿಯಮಗಳನ್ನು ಮೀರುವುದೆಂದರೆ ತಮ್ಮ ಸಮಾಜದ ಅವನತಿ ಗಂಡಾಂತರ ಎನ್ನುವುದು ಆತನ ಪ್ರಬಲ ನಂಬಿಕೆಯಾಗಿತ್ತು.
          ತುಸು ಹೊತ್ತು ಮೌನದ ನಂತರ ಹಾದರದಯ್ಯ ಈ ರೀತಿಯಲ್ಲಿ ಮಾತು ಆರಂಭಿಸಿದನು “ದೊಡ್ಡಪ್ಪ,ನಿಮ್ಮ ಮಾತು ಕೇಳಿ ನಾನು ಎಲೆಕ್ಷನ್ಗೆ ನಿಂತು ಬಿಟ್ಟೆ.ನನ್ನ ವಿರುದ್ದ ಆ ಸತ್ಯಪ್ಪ ನಿಂತಿರುವುದು ನೋಡಿ ಭಯವಾಗುತ್ತಿದೆ.ಸಂವಿಧಾನಪ್ಪ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವಂತಿದೆ.ಹೋರಾಟಪ್ಪ,ನ್ಯಾಯರಾವ್ ಮತ್ತು ಕ್ರಾಂತಿಕಾರಿಯ ಗುಂಪು ಬಹಳ ಓಡಾಡುತ್ತಿದೆ.ಒಂದು ವೇಳೆ ನಾನು ಸೋತರೆ ನಮ್ಮ ಅಸ್ತಿತ್ವವೇ ನಾಶವಾಗಿ ಹೋಗುತ್ತದೆ.ನನಗೆ ಭಯವಾಗತೊಡಗಿದೆ!”ಎಂದನು.
          ಈ ಹಾದರದಯ್ಯನ ಈ ಮಾತು ಕೇಳಿದ ಮೇಲೆ ಮಿಂಡ್ರಯ್ಯ ತುಂಬಾ ಕೆಟ್ಟ ಸ್ವರದಲ್ಲಿ ನಗಲು ಪ್ರಾರಂಭಿಸಿದ,ನಗು ಹೇಗಿತ್ತು ಎಂದರೆ ಅದು ಅಲೆ ಅಲೆಯಾಗಿ ಇಡೀ ಕೇರಿಯನ್ನೇ ವ್ಯಾಪಿಸತೊಡಗಿತು.ಭೂಮಿ ಲಘುವಾಗಿ ಕಂಪಿಸಿದಂತಾಗಿ ಚಹಾ ಮಾಡಲು ಕುಳಿತ ಕುಂಟಲಗಿತ್ತೆಮ್ಮ ಚಹಾ ತುಳಿಕಿದ ಪರಿಣಾಮ್ಮಕ್ಕೆ ಒಂದು ಕ್ಷಣ ಗಾಭರಿಗೊಂಡಳು.ಬಡ ಫಲಾನುಭವಿಗಳಿಂದ   ದೋಚಿ ಕಟ್ಟಿದ ಶಾಪಗ್ರಸ್ತ ಆ ಕೇರಿಯೊಳಗಿನ ಹಲವು ಮನೆಗಳು ಆ ಅಟ್ಟಹಾಸದ ನಗುವಿಗೆ ಭೂಕಂಪನಕ್ಕೆ ಒಳಗಾದಂತೆ ಅಲ್ಲಲ್ಲಿ ಬಿರುಕುಗೊಂಡವು!ಬಿಲಗಳಲ್ಲಿ ಅಟಗಿದ ಕೆಟ್ಟ ಹುಳುಗಳು ಮಳೆ ಬರುತ್ತಿರುವಂತೆ ಹೊರಬರುವಂತೆ ಮನೆಯಿಂದ ಹೊರಬಂದವು.ಅವೆಲ್ಲಾ ಹೇಸಿಗೆಯ ದುಡ್ಡು ತಿಂದು ಬಲಿತ ಕಾರಣ ಮನೆಯ ಬಾಗಿಲಿನಿಂದ ಹೊರಬರುವುದು ತುಸು ಕಷ್ಟವಾದರೂ ತಾವೊಂದು ದಿನ ಪಾಪದ ಮಹಾ ಪ್ರಸಾದದಿಂದ ಹೊಂದಿದ ಸಕಲ ಭೋಗಗಳಲ್ಲಿ ಸಮಾಧಿಯಾಗುವುದನ್ನು ಆ ಕ್ಷಣಕ್ಕೆ ಅನುಭವಿಸಿದರು.ಇಡೀ ಕೇರಿಯ ಜನ ಮಿಂಡ್ರಯ್ಯನ ಮನೆಯ ಮುಂದೆ ಜಮಾಯಿಸಿದ ನಂತರ ಮಿಂಡ್ರಯ್ಯ ತಾರಕ ಸ್ವರದಲ್ಲಿ ಈ ರೀತಿಯಲ್ಲಿ ನುಡಿದನು:“ನೋಡು ಹಾದರದಯ್ಯ,ನನ್ನ ಇಡೀ ಜೀವನ ರಾಜಕೀಯ ಕುತಂತ್ರಗಳಲ್ಲಿ ಕಳೆದು ಹೋಯಿತು.ನನ್ನ ದೇಹದ ಪ್ರತೀ ಬಿಳಿ ಕೂದಲಿಗೂ ಒಂದು ಸಂಚಿನ ಅನುಭವವಿದೆ.ನನ್ನ ಮೆದುಳಿನ ಮೋಸದ ಜಾಲದಲ್ಲಿ ಒಬ್ಬ ಸತ್ಯಪ್ಪ,ಒಬ್ಬ ಸಂವಿಧಾನಪ್ಪ,ಒಬ್ಬ ನ್ಯಾಯರಾವ್ ಅಲ್ಲ ಅವರಂತಹ ಲಕ್ಷ ಲಕ್ಷ ಜನ ಬಿದ್ದು ಸೋತು ಸುಣ್ಣವಾಗಿ ಸತ್ತು ಹೋಗದ್ದಾರೆ.ನನ್ನ ವಿಚಾರಗಳು ಈ ಹಾದರಗೇರಿ ಗ್ರಾಮಪಂಚಾಯತಿ ಮಾತ್ರವಲ್ಲ ಜಾಗತಿಕ ರಾಜಕಾರಣವನ್ನೇ ಶಾಸಿಸುತ್ತವೆ.ನೀನು ಚುನಾವಣೆ ಗೆಲ್ಲಲಿಕ್ಕೆ ಅರ್ಹನೆಂದೆ ನಿನ್ನನ್ನು ಆಯ್ಕೆ ಮಾಡಿಕೊಂಡಿದ್ದೇನೆ.ನಿಮ್ಮ ವಾರ್ಡಿನಲ್ಲಿ ಇರುವ ಮತಗಳ ಸಂಖ್ಯೆಯಾದರೂ ಎಷ್ಟು?ಇನ್ನೂರು.ಈ ಇನ್ನೂರು ಮತಗಳ ಪೈಕಿ ನೂರು ಮತಗಳು ನಿನ್ನ ಖಾಸಾ ಮತಗಳೇ ಆಗಿವೆ,ನಿನ್ನ ತಾಯಿಯ ಪ್ರಿಯಕರ ಅಂದರೆ ನಿನ್ನನ್ನು ತುಂಬಾ ಪ್ರೀತಿಸುವ ಬಾಜು ಮನೆಯ ಕಾಕ ಮತ್ತು ಆತನ ಫ್ಯಾಮಿಲಿ ಎಲ್ಲಾ ಸೇರಿ ಇಪ್ಪತ್ತು ಓಟುಗಳಿವೆ,ನಿನ್ನ ಅಕ್ಕನ ಕಡೆಯ ಸಂಪರ್ಕ ನಿನ್ನ ಒರಸೆಯ ಮಾವಂದಿರ ಓಟುಗಳು ಐವತ್ತು ಪಕ್ಕಾ ಇವೆ.ಎಪ್ಪತ್ತು ಓಟುಗಳಾದವು.ಹಾಗೇ ನಿನ್ನ ತಂಗಿಯ ಕಡೆ ಮೂವತ್ತು ಓಟು ಖಚಿತ ರುವುದು ಬಲ್ಲ ಮೂಲಗಳಿಂದ ನನಗೆ ಖಚಿತವಾಗಿದೆ.ಹಾಗೆ ನೂರು ಓಟುಗಳಾದವು.ನಿನ್ನ ಹೆಂಡತಿ ಗಯ್ಯಾಳೆಮ್ಮನೇನು ಕಡಿಮೆ ಮನುಷ್ಯಳಲ್ಲ,ಆಕೆಯ ವತಿಯಿಂದ ಒಂದು ಹತ್ತು ಮತಗಳು ಗಟ್ಟಿ.ಭೋಳಿಮಗನೆ ನೀನೇನು ಹಿಜಡಾನೇ?ನೀನೂ ಅಲ್ಲಿ ಇಲ್ಲಿ ಕೈಯಾಡಿಸಿರುವುದು ನನಗೆ ಗೊತ್ತಿದೆ.ಆಯ್ತಲ್ಲ?ನೋಡು ನಾನು ಯಾರನ್ನಾದರೂ ಚುನಾವಣೆಗೆ ಆಯ್ಕೆ ಮಾಡಬೇಕಾಗಿ ಬಂದಾಗ ನಿಮ್ಮ ಆಂಟಿ ಕುಂಟಲಗಿತ್ತೆಮ್ಮನ ಸಲಹೆ ಕೇಳುತ್ತೇನೆ.ಆಕೆಯ ಬಾಯಿಯೊಳಗೆ ಕರಿ ನಾಲಗೆ ಇರುವಂತಿದೆ.ನನ್ನ ಹತ್ರ ಮೊನ್ನೆ ನೀನು ಕೈಯಾಡಿಸಿದ ಹೆಂಗಸೊಬ್ಬಳು ಮನೆಗೆ ಬಂದಿದ್ದಳು.ಏನವ್ವಾ ನಿನ್ನ ಓಟು ಯಾರಿಗೆ ಅಂದ್ರೆ “ಅಂವನ ಬಿಟ್ಟು ಬ್ಯಾರೆ ಯಾರಿಗೆ ಹಾಕಲಿ ಮಾವಾ,ನಾನಷ್ಟೆ ಅಲ್ಲ ನಮ್ಮ ಓಣಿಯ ಎಲ್ಲಾ ಓಟುಗಳು ಅವನಿಗೆ!”ಎಂದು ಹೇಳಿದಳು.ಮತ್ತಿನ್ನೇಗೆ ಸೋಲುತ್ತೀಯ ಮಗನೆ?ಊರ ತುಂಬಾ ನಿಂದೆ ಕರುಳ ಸಂಪರ್ಕವಿದೆ.ಹೋಗು ಹೋಗು,ಊರು ಆಳುವ ಯೋಗ ನಿನಗಿದೆ!”ಎಂದನು.
          ಹಾದರಗೇರಿಯ ಹಾದರದಯ್ಯನ ಎಲ್ಲಾ ಅನುಮಾನಗಳು ಮಂಜಿನಂತೆ ಕರಗುತ್ತಿರುವಂತೆ ಅವನಗೆ ಎಂಥಹಾ ಸಂತೋಷ ಉಂಟಾಯಿತು ಎಂದರೆ ನಾಯಿಯ ಬಾಲಕ್ಕೆ ಪಟಾಕಿ ಹಚ್ಚಿ ಸ್ಪೋಟಿಸಿದಾಗ ಅದು ಕೈಗೊಳ್ಳುತ್ತದಲ್ಲಾ ನೃತ್ಯ?ಅಂತಹದೊಂದು ನೃತ್ಯ ಆ ಕೇರಿಯ ಸಮಸ್ತರ ಮುಂದೆ ಕೈಗೊಂಡಿತು.
          ಈ ಕಥೆ ಇಲ್ಲಿಗೆ ಮುಗಿಯುತ್ತಿರುವಂತೆ ಅದೇ ಊರಿನ ತಿಪ್ಪಯ್ಯ ನೆಂಬ ನಿದ್ದೆ ಬಡಕ ಎಡ ಮನೆಯ ಕಾಗೆಗಳ ಕರ್ಕಶ ಅರಚಾಟಕ್ಕೆ ಎಚ್ಚರಗೊಂಡು ಬಾಯಿಯಲ್ಲಿ ಬೇವಿನ ಕಡ್ಡಿ ಹಾಕಿ ಹಲ್ಲುಜ್ಜುತ್ತಾ ತಿಪ್ಪೆಯ ಮೇಲೆ ಬಹಿರ್ದೆಸೆಗೆ ಕುಳಿತು ತನ್ನ ತಿಪ್ಪೆಕೆದರುವ ಸಮಾಜವಾದದ ಪಾರಂಪರಿಕ ಚಟಕ್ಕೊಳಗಾಗಿ ತಿಪ್ಪೆಯನ್ನು ಕೆದರುತ್ತಿರುವಾಗ ಮೇ ನಾಲ್ಕು ಹದಿನೇಳು ನೂರ ತೊಂಬತ್ತೊಂತ್ತರಲ್ಲಿ ಆ ತಿಪ್ಪೆಯಲ್ಲಿ ಊಳಿದ ಕ್ರಿಮಿಯೊಂದು ಕೈಗೆ ತಗುಲಿ ವಿಕಟ ಅಟ್ಟಹಾಸದಿಂದ ನಗಬೇಕೆ?
          ಈ ಮೂಲಕ ಬೇರೊಂದು ಕಥೆ ಆಕಳಿಸಿತು!

                          *ಕೊಳಕೂರಿನ ಪ್ರಣಯ ಪ್ರಸಂಗಗಳು ಭಾಗ-೭*

     ಫಾದರ್ ಕ್ರಿಸ್ಟೋಫರ್ ಬಂದಿದ್ದು ಜಾಂಬವತಿ ಎಂದು ಆಕೆಯ ಧ್ವನಿಯಿಂದ ಊಹಿಸಿದನು.ಆಂತೋಣಿಯಿಂದ ಪರಿತ್ಯೇಜನೆಗೆ ಒಳಗಾಗಬಹುದಾದ ಭೀತಿಯಿಂದ ಆಕೆ ಹುಚ್ಚಿಯಾಗಿ ಗುಡಿ ಗುಂಡಾರ ಅಲೆಯುವ ಸುದ್ದಿ ಊರಿನಲ್ಲಿ ಮನೆ ಮಾತಾಗಿತ್ತು.ಕೊಳಕೂರು ಎಂದರೆ ಕಂಚಿನ ತಗಡಿನಂತಹ ಊರಾಗಿತ್ತು.ಈ ಬದಿ ಸಣ್ಣಗೆ ಮೀಟಿದರೆ ಆ ಬದಿ ಡಣ್ ಎನ್ನುವ ಸದ್ದು ಬರುವಂತಹದ್ದು!ಊರ ತುಂಬಾ ಜಾಂಬವತಿ ಆಂತೋಣಿಯ ಪ್ರೇಮಪಾಶದ ಮೋಹ ಕಳಚಿ ಹೋಗುವ ಭೀತಿಯಿಂದ ಹುಚ್ಚಳಾದ ಸುದ್ದಿ ಹರಡಿತ್ತು.ಆಂತೋಣಿ ಜಾಂಬವತಿಗೆ ಮೋಸ ಮಾಡುವ ಎಲ್ಲಾ ಸೂಚನೆಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು.ನಾಯಿಗಳಿಗೆ ಚಿತ್ತಿ ಬೆದೆ ಎನ್ನುವುದೊಂದು ಇದ್ದರೆ ಆಂತೋಣಿಗೆ ವರ್ಷವಿಡೀ ಚಿತ್ತಿ ಬೆದೆ ಇದ್ದು ಆತ ಎಲ್ಲಂದರಲ್ಲಿ ಕಾಲು ಎತ್ತುತ್ತಿದ್ದನು.ಆ ಸುದ್ದಿ ಜಾಂಬವತಿಗೇ ಸ್ಪಷ್ಟವಾಗಿತ್ತು.ಗುತ್ತಿಗೆದಾರರ ಕ್ಯಾಂಪಿನ ಎಂಜಲು ತಟ್ಟೆಗಳ ತೊಳೆಯುವ ತನ್ನಂತಹ ಕೃಷ್ಣ ಸುಂದರಿ ಜಾಂಬವತಿಗೆ ಪರಂಗಿಯವರ ಕೊನೆಯ ಸಂತತಿಯಂತಿದ್ದ ಆಂತೋಣಿಯು ಒಲಿದು ಕಾಮದ ಸಂಕೋಲೆ ಹಾಕಿದ್ದದ್ದು ಬಲು ಸೋಜಿಗವಾಗಿತ್ತು.ಕಟ್ಟಿಕೊಂಡ ಗಂಡನಿಗೆ ಒಲ್ಲದ ದೇಹ ಆಂತೋಣಿಯ ಬಿಳಿ ತೊಗಲಿಗೆ ಬೇಕಾಗಿತ್ತು.ಆತ ಹಗಲು ರಾತ್ರಿಯ ವ್ಯತ್ಯಾಸವಿಲ್ಲದಂತೆ ದೇಹವನ್ನು ಕಬ್ಬಿನಲ್ಲಿ ರಸ ತೆಗೆಯುವ ಗಾಣದಂತೆ ಹಿಂಡುವುದು ತನಗೆ ಸ್ವರ್ಗವಾಗಿತ್ತು!ನರ ಜನ್ಮ ಸಾರ್ಥಕ ಎನ್ನುವುದಾದರೆ ಅದು ಆಂತೋಣಿಯ ತೋಳ ಸೆರೆಯ ಆ ದಿನಗಳೇ ಎನ್ನುವಂತೆ ಆಕೆ ಮನಸಾರೆ ಭಾವಿಸಿದ್ದಳು.ಆಂತೋಣಿಗಾಗಿ ತಾನು ಯಾವ ತ್ಯಾಗಕ್ಕೂ ಸಿದ್ದಳಾಗಿದ್ದಳು.ಆಂತೋಣಿಗಾಗಿ ಜೀವವನ್ನೇ ತ್ಯಾಗ ಮಾಡಲು ಸಿದ್ದಳಾದ ತಾನು ಅಫ್ಟ್ರಾಲ್ ಲೈಂಗಿಕ ನಿರಾಸಕ್ತಿಗೆ ಒಳಗಾಗಿ ಗಳೆ ಹೊಡೆದು ಬಂದು ಮೂಲೆ ಸೇರಿ ನಾಯಿಯಂತೆ ಮಲಗುವ ಗಂಡನನ್ನು ತ್ಯಾಗ ಮಾಡದೆ ಇರುತ್ತಾಳೆಯೇ?ಜಾಂಬವತಿ ಆಂತೋಣಿ ತನ್ನ ತವರು ಮನೆ ಕೊಳಕೂರಿನ ಕ್ಯಾಂಪಿನಲ್ಲಿ ಬಿಡಾರ ಊರಿದ್ದಾನೆ ಎಂದಾಗ,ಆ ಹಳ್ಳಿ,ಆ ಬಡ ರೈತನನ್ನು ಬಿಟ್ಟು ಬೆಳೆದ ಹೆಣ್ಣು ಮಗುವನ್ನು ಬೆನ್ನಿಗೇರಿಸಿಕೊಂಡು ಹೊರಟು ಬಂದಿದ್ದಳು.ಈಗ ಹೊಟ್ಟೆಯಲ್ಲಿ ಕಳ್ಳ ಸಂಬಂಧಕ್ಕೆ ಮೊಳೆತ ಏಳು ತಿಂಗಳ ಬಸಿರು!ಈ ಹಂತದಲ್ಲಿಯೇ ಗ್ರಾಮದ ಮಹಿಳೆಯರು ಒಂದು ಒಳ್ಳೆಯ ಉಚಿತ ಸಲಹೆಯನ್ನು ನೀಡಿದ್ದರು.ಅದೇನಂದರೆ....

     ಆಂತೋಣಿಯ ಧರ್ಮ ಕ್ರೈಸ್ತ ಮತ.ತಾನೂ ಕ್ರೈಸ್ತ ಮತಕ್ಕೆ ಮತಾಂತರವಾದರೆ ಆಂತೋಣಿ ಕೈ ಹಿಡಿದಾನು,ಕ್ರೈಸ್ತ ಮತದಲ್ಲಿ ಹಿಂದೂ ಧರ್ಮದಲ್ಲಿರುವಂತೆ ಕಟ್ಟಳೆಯ ನೀತಿ ನಿಯಮಗಳು ಇಲ್ಲ.ಅದು ಸ್ವೇಚ್ಛೆಯನ್ನು ಬೆಂಬಲಿಸುವ ಧರ್ಮ.ಮನುಷ್ಯನು ತನಗಿಷ್ಟ ಬಂದಂತೆ ಬದುಕಲು ಆ ಧರ್ಮದಲ್ಲಿ ಎಲ್ಲಾ ಮುಕ್ತ ಅವಕಾಶಗಳು ಇರುವವಂತೆ.ಯಾವ ತಪ್ಪು ಮಾಡಿದರೂ ಫಾದರ್ ಕ್ರಿಸ್ಟೋಫರ್ ಮುಂದೆ ನಿಂತು ಹೇಳಿಕೊಂಡರೆ ಪಾಪಗಳನ್ನು ಕ್ಷಮಿಸು ದೇವರೆ ಎಂದು ದೇವದೂತನ ಮುಖಾಂತರ ದೇವರಿಗೆ ಮನವಿ ಮಾಡಲಾಗುತ್ತದೆಯಂತೆ!ಅಲ್ಲಿಗೆ ಪಾಪಗಳಿಂದ ಮುಕ್ತಿ;ತಾನು ಗಂಡನಿಗೆ ಮಾಡಿದ ದ್ರೋಹವನ್ನು ದೇವದೂತನಿಗೆ ಹರಕೆ ಮಾಡಿಕೊಂಡರೆ ಆ ಪಾಪದಿಂದ ವಿಮುಕ್ತಿ ದೊರೆತರೂ ದೊರೆತೀತು.ಅದಲ್ಲೆದಕ್ಕಿಂತ ಮೊದಲು ತನಗೆ ಆಂತೋಣಿ ಬೇಕು;ಆಂತೋಣಿ ಈ ಜನ್ಮಕ್ಕೆ ಬೇಕೇಬೇಕು;ಹೊಟ್ಟೆಯಲ್ಲಿ ಬೆಳೆದ ಮಗು ಹೊರ ಬಂದ ಮೇಲೆ ತಂದೆಯನ್ನು ತೋರಿಸಲಿಕ್ಕೆ ಒಬ್ಬ ಗಂಡಸು ಬೇಕಲ್ಲ?ಅದಕ್ಕಾಗಿ ಆಂತೋಣಿ ಬೇಕು!ಆಂತೋಣಿ ಎಂದರೆ ಮಾಹಾ ರಸಿಕ;ಆತ ಊಟ ಮಾಡುತ್ತಾನೆ:ರುಚಿ ನೋಡುವುದಿಲ್ಲ!ಜಾಂಬವತಿ ರೋಮಾಂಚನಗೊಂಡಳು!ಜನ ಕ್ರೈಸ್ತ ಮತಕ್ಕೆ ಮತಾಂತರವಾದರೆ ತಾಳಿಯ ಯಾವ ಹಂಗೂ ಇಲ್ಲದೆ ಕೊರಳಲ್ಲೊಂದು ಶಿಲುಬೆ  ನೇತು ಹಾಕಿಕೊಂಡು ಕೊನೆಗೆ ತಾನು ಆಂತೋಣಿಯ ಪತ್ನಿ ಎಂದಾದರೂ ಹೇಳಬಹುದಲ್ಲ?ಹಿಂದೂ ಸಂಪ್ರದಾಯಸ್ಥ ಮಹಿಳೆಯರ ಕೊರಳಿನ ಗುದುಗೆಯಂತೆ ತನಗೆ ತಾಳಿ ಇರುವುದಿಲ್ಲ.ತಾಳಿ ಎಂದರೆ ಬಸ್ಸೊಂದಕ್ಕೆ ಬೋರ್ಡ್ ಇದ್ದಂತೆ.ತಾನೀಗ ಬೋರ್ಡ್ ಇಲ್ಲದ ಬಸ್ಸು.ಬಸ್ಸು ಲೋಡ್ ಆಗಿದೆ.ಅದಕ್ಕೆ ಡ್ರೈವರ್ ಇಲ್ಲ.ಡ್ರೈವರ್‌ನ ಮರ್ಜಿ ಕಾಯಬೇಕಿರುವ ದುಸ್ತಿತಿ ತನಗೆ ಒದಗಿದೆ.ಆಂತೋಣಿ ಕೈಬಿಟ್ಟರೆ,ಓಹ್!ತನಗೆ ಮರಣವೇ ಗತಿ.ಅತ್ತ ಗಂಡನ ಮನೆಯೂ ಇಲ್ಲವಾಯಿತು;ಇತ್ತ ಮಿಂಡನೂ ಇಲ್ಲವೆಂದರೆ ತನಗುಳಿಯುವ ಕೊನೆಯ ಗತಿ:ನಿಜಕ್ಕೂ ಮರಣವೆ!ಜಾಂಬವತಿ ಬೆವರಿದಳು.

     ಕ್ರೈಸ್ತ ಪಾದ್ರಿಗಳ ಧ್ವನಿಯಲ್ಲಿ ಮಾಂತ್ರೀಕ ಸೌಮ್ಯತೆ ಇರುತ್ತದೆ.ಆ ಧ್ವನಿ ಸೂಜಿಗಲ್ಲಿನಂತೆ ಸೆಳೆಯುತ್ತದೆ.ಮೂರ್ಖ ಭಾರತೀಯ ಪ್ರಜೆ ಕೋಟ್ಯಾಂತರ ದೇವರುಗಳನ್ನೂ ಹೊಂದಿದ್ದರೂ ದೆವ್ವ ಭೂತಗಳ ನಿವಾರಣೆಗೆ ಮುಲ್ಲಾ ಪಾದ್ರಿಗಳ ಹತ್ತಿರಕ್ಕೆ ಬರುತ್ತಾರೆ.ಹಾಗೆ ನೊಂದು ತಮ್ಮ ಮಾನಸಿಕ ನೋವುಗಳಿಂದ ನೊಂದು ಬರುವ ಮುಗ್ಧ ಜನಗಳಿಗೆ ಸೌಮ್ಯ ಮತ್ತು ಮೃದುವಾದ ಧ್ವನಿಯೇ ಔಷಧಿಯಾಗಿ ಕೆಲಸ ಮಾಡುತ್ತದೆ.ಭಾರತದಲ್ಲಿ ಕ್ರೈಸ್ತ ಮತ ಹರಡುವ ತಂತ್ರಗಳ ಪೈಕಿ ಅತಿ ಹೆಚ್ಚು ಜನಪ್ರಿಯ ತಂತ್ರ ಈ ಮುಗ್ಧತೆಯ ಮೇಲೆ ಆಟವಾಡುವುದು.“ಬಾರಮ್ಮಾ ಬಾ,ಜಾಂಬವತಿ!ಬಾ ತಾಯಿ,ಏಸು ಪ್ರಭುವು ನಿನಗೆ ಒಳ್ಳೆಯದನ್ನು ಮಾಡುತ್ತಾನೆ”ಎಂದ ತಣ್ಣನೆಯ ಧ್ವನಿಯಲ್ಲಿ.(ಮುಂದುವರೆಯುವುದು)

                                          *ವಿಶ್ಮಯನಾಥ*

*ಕೊಳಕೂರಿನ ಪ್ರಣಯ ಪ್ರಸಂಗಗಳು ಭಾಗ-೮*

“ನೋಡ್ ತಂಗೀ ಆ ಆಂತೋಣಿ ಕಾಲಿಗೆ ಚಕ್ರ ಕಟ್ಟಿಕೊಂಡ ಮನುಷ್ಯ,ಅವನನ್ನು ಗೂಟಕ್ಕೆ ಕಟ್ಟುವುದು ಅಸಾಧ್ಯ.ಅಂವ ಗುತ್ತಿಗೆ ಹಿಡಿದ ಕೆಲಸಗಳ ಪ್ರತೀ ಹಳ್ಳಿಯಲ್ಲೂ ತನ್ನದೊಂದು ಗುರುತು,ಹೆಜ್ಜೆ ಮೂಡಿಸಿ ಬಂದಿದ್ದಾನೆ.ಊರಿಗೊಂದು ಮನೆ ಇರಬೇಕು ಎನ್ನುವುದು ಅವನ ಸಿದ್ದಾಂತ!ಅಂವ ಊರಿಗೊಂದು ಹೆಂಗಸನ್ನು ಇಟ್ಟಿದ್ದಾನೆ.ರಸಿಕನವನು;ಒಂದು ಸಲ ಉಂಡ ಊಟ ಇನ್ನೊಂದು ಸಲ ಉಣ್ಣದಿರುವುದು ಅವನ ರೂಢಿ.ನಾವು ಸಾಕಷ್ಟು ಸಲ ಬುದ್ದಿ ಹೇಳಿದ್ದೇವೆ;ಅಂವ ಕೇಳುವವನಲ್ಲ.ಚಿತ್ತಿ ಬೆದೆಯೊಳಗಿನ ನಾಯಿಯವನು!ಅದು ತಪ್ಪೇನು ಅಲ್ಲ.ಏಸು ಪ್ರಭು ಅದನ್ನು ತಪ್ಪೆಂದು ಹೇಳುವುದೂ ಇಲ್ಲ.ಕ್ರೈಸ್ತ ಧರ್ಮದಲ್ಲಿ ಬಹು ಹೆಂಗಸಿನ ಸಂಘ ಅಪರಾಧವಲ್ಲ.ಪರಸ್ಪರ ಒಪ್ಪಿಗೆ ಇರಬೇಕಷ್ಟೆ.

ನೀನು ನ್ಯಾಯ ಕೇಳಿಕೊಂಡು ಬಂದಿರುವೆ.ನನ್ನ ಮಾತು ಹೇಳಬೇಕು ಎಂದರೆ ನೀನು ಅನ್ಯಾಯಕ್ಕೆ ಒಳಗಾಗಿಲ್ಲ.ಪತಿಯನ್ನು ಸಂಸಾರವನ್ನೂ ತೊರೆದು ತನ್ನ ಹಿಂದೆ ಹೊರಡು ಎಂದು ಆಂತೋಣಿ ಹೇಳಿರಲಾರ.ಅವನು ನಾಯಿ;ಮಾತಿನ ಮೇಲೆ ನಿಲ್ಲುವುದಿಲ್ಲ.ಪ್ರತೀ ಕಲ್ಲಿಗೂ ಕಾಲೆತ್ತುವ ನಾಯಿಯಂತವನು!ನೀನು ಅವನನ್ನು ನಂಬಿ ನಿನ್ನ ಸಂಸಾರವನ್ನು ತ್ಯಾಗ ಮಾಡಿ ಗಂಡನ ಮನೆ ಬಿಟ್ಟು ಹೊರಡಬಾರದಿತ್ತು.ನಾವು ದೇವದೂತನಾದ ಏಸು ಪ್ರಭುವಿನ ಅಪ್ಪಣೆಯ ಮೇರೆಗೆ ಆಂತೋಣಿಯ ಮನಸ್ಸಿಗೆ ಮುಟ್ಟುವಂತೆ ನಿನ್ನ ಕೈ ಹಿಡಿಯಲು ಹೇಳಲು ಪ್ರಯತ್ನಿಸುತ್ತೇವೆ.ಆಂತೋಣಿಯ ವರ ಪ್ರಸಾದ ನಿನ್ನ ಗರ್ಭದಲ್ಲಿ ಮೊಳಕೆ ಹೊಡದಂತಿದೆ.ಆ ಮಗುವನ್ನು ಇಗರ್ಜಿಯ ಮೆಟ್ಟಿಲಿಗೆ ಸಮರ್ಪಿಸು,ನೀ‌ನೂ ಏಸುವಿನ ಪಾದಚರಣಗಳ ದಾಸಿಯಾಗು.ಇವತ್ತಿನಿಂದ ಏಸುವೇ ದೇವರೆಂದು ನಂಬು.

ನಿನ್ನ ಪಾಪಗಳನ್ನು ಮನ್ನಿಸೆಂದು ನಾನು ದೇವದೂತನಲ್ಲಿ ಕೇಳಿಕೊಳ್ಳುತ್ತೇನೆ.ಏಸುವು ಕ್ಷಮಾಪುರುಷನು.ಆತನು ತನ್ನ ಮಕ್ಕಲ ಪಾಪಗಳನ್ನು ಕ್ಷಮಿಸುತ್ತಾನೆ.ಆಮೀನ್!”ಎಂದರು ಫಾದರ್ ಕ್ರಿಸ್ಟೋಫರ್. ಜಾಂಬವತಿಯ ಪರಿಸ್ಥಿತಿಯನ್ನು ಅವರು ಸಾಧ್ಯಾಂತವಾಗಿ ಈ ಮೊದಲೇ ಅರಿತಿದ್ದರು.ಗಂಡನ ಜೊತೆ ಸಂಸಾರ ತ್ಯಾಗ ಮಾಡಿದ ಮೇಲೆ ಮಿಂಡ ಗುತ್ತಿಗೆದಾರನೊಂದಿಗೆ ಲಲ್ಲೆ ಹೊಡೆದು ಮಗುವೊಂದರ ಭ್ರೂಣ ಹೊತ್ತು ತಿರುಗುತ್ತಿರುವ ಅವಳ ವದಂತಿ ಊರ ತುಂಬಾ ಹಬ್ಬಿತ್ತು.ಆಕೆಯ ಸುದ್ದಿ ಕೊಳಕೂರಿನ ಮಟ್ಟಿಗೆ ಹಳತಾಗಿತ್ತು.ಮಕ್ಕಳು ಮೊದಲಾಗಿ ಎಲ್ಲರೂ ದೈತ್ಯ ಜೀವಿ ಜಾಂಬವತಿಯ ಕಥೆಯನ್ನು ಕೇಳಿದ್ದರು.ನಿಜ ಹೇಳಬೇಕು ಎಂದರೆ ಆಕೆಯ ತವರಿನ ಗಂಡಸರೂ ಅದೊಂದು ಗಂಭೀರ ವಿಷಯವೇ ಅಲ್ಲವೆಂದು ಪರಿಗಣಿಸಿದ್ದರು.ವಿಜಾತಿ ಆಂತೋಣಿಯ ಕೆಂಪು ಮುಖ ಆತನ ಪ್ಯಾಂಟಿನ ಕಿಸೆಯೊಳಗೆ ಗಟ್ಟಗಟ್ಟದ ರೀತಿಯಲ್ಲಿರುವ ನೋಟುಗಳು ಎಲ್ಲಾ ಪಾಪವನ್ನೂ ಮುಚ್ಚಿ ಹಾಕಿದ್ದವು.ಜಾಂಬವತಿಯ ತಮ್ಮಂದಿರು ಸಂಬಂಧಿಕರು ಆಂತೋಣಿಯನ್ನು ಮಾವ ಎನ್ನತೊಡಗಿದ್ದರು.ಆಂತೋಣಿ ತನ್ನ ಸೂಳೆಯ ಮನೆಗೆ ಹಗಲು ಹೊತ್ತಿನಲ್ಲೇ ಬಂದರು ಅವರೆಲ್ಲಾ ಸಹಿಸ ಬಲ್ಲವರಾಗಿದ್ದರು!ಜಾಂಬವತಿಯ ತಾಯಿ ಆಂತೋಣಿಯನ್ನು ತನ್ನ ಪ್ರಮುಖ ಅಳಿಯನೆಂದು ಭಾವಿಸಿಯಾಗಿತ್ತು.ಮನೆ ತುಂಬಾ ಹೆಂಗಸರಿರುವ ಇನ್ನೂ ಮದುವೆಯಾಗಿರದ ಅನೇಕ ಕನ್ಯೆಯರಿರುವ ಆ ಮನೆಗೆ ಆಂತೋಣಿಯಂತಹ ಚೆಲುವ ಅಳಿಯ ಅವಶ್ಯಕನಾಗಿದ್ದ.ಜಾಂಬವತಿಯ ತಾಯಿಯ ಪಾಲಿಗೆ ಆಂತೋಣಿ ಹದಿನಾರು ಸಾವಿರ ಹೆಂಡಂದಿರ ಭಗವಾನ ಶ್ರೀಕೃಷ್ಣನೆಂಬಂತೆ ಗೋಚರಿಸುತ್ತಿದ್ದ.ಬರೀ ಜಾಂಬವತಿ ಮಾತ್ರವಲ್ಲ,ಮನೆಯೊಳಗೆ ಅವಧಿ ಮುಗಿದ ಮುದಿ ಕನ್ಯೆಯರ ಪೈಕಿ ಯಾರೊಬ್ಬರಿಗೂ ಆತ ಗಂಡನಾದರೆ ತನ್ನ ಅಭ್ಯಂತರವಿಲ್ಲವೆಂದು ಆಕೆ ಘೋಷಿಸಿದ್ದಳು.ಆತ ಮದುವೆಯಾದರೂ ಸೈ;ಮದುವೆಯಾಗದಿದ್ದರೂ ಸೈ!

ಆದರೆ ಮಾಹಾ ಸ್ವಾಭಿಮಾನಿ ಜಾಂಬವತಿ.ತಾನು ಅನಧಿಕೃತ ಸೂಳೆಯಾಗಿ ಇರಲಾರೆ ಎಂದು ಪ್ರತಿಜ್ಞೆ ಗೈದಿದ್ದಳು.ಅನಧಿಕೃತವಾಗಿರುವುದಕ್ಕಿಂತ ಅಧಿಕೃತ ಸೂಳೆಯಾಗಿರುವುದೇ ಮೇಲೆಂದು ಆಕೆ ಮನಸಾರೆ ಭಾವಿಸಿದ್ದಳು.ಆಂತೋಣಿ ತನಗೊಂದು ತಾಳಿ ಕಟ್ಟಿದರೆ ಸಾಕೆಂದು ಆಕೆ ಹುಚ್ಚಿಯಾಗಿದ್ದಳು.ಆಂತೋಣಿ ಎಂಬ ಪರಜಾತಿ ಮನುಷ್ಯ ತನ್ನನ್ನು ಮದುವೆಯಾಗಬೇಕೆಂದರೆ ತಾನು ಆತನ ಜಾತಿಗೆ ಮತಾಂತರವಾಗುವುದೇ ಉತ್ತಮವೆನ್ನುವ ಸುವಾರ್ತೆ ಆಕೆಯ ಕಿವಿಗೆ ಬಿದ್ದಿತ್ತು.ಅಂತೆಯೇ ಆಕೆ ಕ್ರಿಸ್ಟೋಫರ್ ಹತ್ತಿರ ಬಂದಿದ್ದಳು.ಫಾದರ್ ಕೂಡಾ ಅದನ್ನೇ ಹೇಳಿದ್ದ‌.ಗಿಣಿಗೆ ಹೇಳಿದಂತೆ.ಆತನ ಮಾತುಗಳು ಆಕರ್ಷಕವಾಗಿದ್ದವು.ಆಂತೋಣಿಯ ಹಲವು ಉಪಕಥೆಗಳನ್ನು ಜಾಂಬವತಿಗೆ ವಿವರಿಸಿದನು.

ಗೊಟ್ಟಿ ಡೇವಿಡ್‌ನ ಹೆಂಡತಿಯ ಜೊತೆಗಿನ ಆಂತೋಣಿಯ ರಾಸಲೀಲೆಯನ್ನು ಆತ ರಸವತ್ತಾಗಿ ಹೇಳಿದನು.ಆತ ಹೇಳಿದ ಯಾವ ಮಾತುಗಳೂ ಸುಳ್ಳಾಗಿರಲಿಲ್ಲ.ಕೊಳಕೂರೆನ್ನುವ ಹಾದರಗೇರಿಯ ಕಥೆಗಳನ್ನು ಆತ ವಿವರಿಸಿ ವಿವರಿಸಿ ಹೇಳುತ್ತಿದ್ದರೆ ಆಕೆ ಸುಮ್ಮನೆ ಕೇಳುತ್ತಿದ್ದಳು.ಕೇಳುವುದರ ಹೊರತು ಆಕೆ ಮಾಡುವುದಾದರೂ ಏನು?

ಹಾದರದ ಜಗತ್ತು ಬಲು ವಿಶ್ಮಯವಾದದ್ದು!ಗಂಡ ಹೊಲಕ್ಕೆ ಹೋದ ತಕ್ಷಣ ಹೆಂಡತಿ ಮಿಂಡನನ್ನು ಹಾಸಿಗೆಗೆ ಎಳೆಯುವ ಕೌತುಕ.ಗಂಡ ಆಫೀಸ್‌ಗೆ ಹೋದ ತಕ್ಷಣ ಮಿಂಡನನ್ನು ಬೆಡ್‌ರೂಮಿಗೆ ಕರೆಯುವ ಸೌಭಾಗ್ಯವತಿಯರು ಎನ್ನುವು ಶ್ರೀಮಂತ ಸೂಳೆಯರು!ಕಾಲ ಎಲ್ಲಿಗೆ ಬಂದು ನಿಂತಿದೆ ಎಂದರೆ ‘ಭೋಳೀಮಗನೆ,ನನಗೆ ಮಿಂಡಂದಿರೊಂದಿಗೆ ಮಲಗುವ ಅವಕಾಶ ಒದಗಿಸಿದರೆ ಮಾತ್ರ ನಾನು ನಿನಗೆ ಬದುಕು ಮಾಡುತ್ತೇನೆ!’ಎನ್ನುವುದರ ವರೆಗೆ ಬಂದಯ ನಿಂತಿದೆ.ಗಂಡ ಆದುನಿಕ ಹೆಂಗಸಿನ ಅನಧಿಕೃತ ಷರತ್ತನ್ನು ಒಪ್ಪಲೇಬೇಕಾಗಿದೆ.ಒಪ್ಪದಿದ್ದರೆ ಸಂಸಾರಿಕ ಜೀವನವೆನ್ನುವುದು ಗಂಡಸಿನ ಪಾಲಿಗೆ ನರಕವಾಗಿ ಬದಲಾಗುತ್ತದೆ.ಅನ್ನ ಸಾಂಬಾರು,ರಾತ್ರಿಯ ಆಟ;ಎಲ್ಲವೂ ಬಂದ್!ಪದೆ ಪದೆ ತವರಿನ ಕಡೆಗೆ ಸಾಗುವ ಹೆಂಡತಿ!ಉಪವಾಸ ವನವಾಸ ಜೀವನ ಪದ್ಧತಿಯಾಗಿ ಬದಲಾಗುತ್ತದೆ.ಒಂದು ವೇಳೆ ಆಕೆಯ ಎಲ್ಲಾ ಅಗೋಚರ ಷರತ್ತುಗಳನ್ನು ಒಪ್ಪಿದಿರೋ..‘ನನ್ ಗಂಡ ದೇವರಂಥಹ ಮನುಷ್ಯ!’ಎನ್ನುವ ಪದವಿ ಸಮಾಜದಲ್ಲಿ ನಿಷ್ಕ್ರಿಯ ಗಂಡಸಿಗೆ ಒಲಿಸುಬಿಡುತ್ತದೆ.ಇದನ್ನು ಎಳೆ ಎಳೆಯಾಗಿ ಹೇಳಿದರು ಫಾದರ್ ಕ್ರಿಸ್ಟೋಫರ್. ಜಾಂಬವತಿ ಕೇಳಿಸಿಕೊಳ್ಲುತ್ತಿದ್ದಳಷ್ಟೆ!
ಕೊಳಕೂರಿನ ಪ್ರಣಯ ಪ್ರಸಂಗಗಳು-೯

ಫಾದರ್ ಕ್ರಿಸ್ಟೋಫರ್ ಸದ್ಯದ ಜಾಗತಿಕ ವಿದ್ಯಾಮಾನಗಳನ್ನು ಕಣ್ಣಿಗೆ ಕಟ್ಟಿದಂತೆ ಹೇಳತೊಡಗಿದಂತೆ ಜಾಂವತಿ ನಿರಾಶಳಾಗತೊಡಗಿದಳು.ಅಪ್ಪಟ ಹುಚ್ಚಿಯಂತಾಗಿದ್ದ ಅವಳು ಅದಾಗಲೇ ಆಂತೋಣಿಯ ಬೀಜಕ್ಕೆ ಭೂಮಿ ಒದಗಿಸಿದ್ದಳು.ಬೀಜ ಸಸಿಯಾಗಿ ಬೆಳೆಯೊಡಗಿದಂತೆ ಆಕೆಯ ಹೊಟ್ಟೆ ಗುಡಾಣವಾಗಿ ಕಾಣಿಸತೊಡಗಿತ್ತು.ಫಾದರ್ ಹೇಳುವ ಮಾತಿನಲ್ಲಿ ಆಂತೋಣಿಯ ಕುರಿತಾಗಿ ತಾನು ಇಟ್ಟಿರುವ ನಂಬಿಕೆಯನ್ನು ಬಿಟ್ಟು ಬಿಡುವುದೊಳ್ಳೆಯದು ಎನ್ನುವ ಅಂಶ ವ್ಯಕ್ತವಾಗುತ್ತಿತ್ತು.ಇದೇ ಇಗರ್ಜಿಗೆ ಇಂಥಹವೆ ಸಮಸ್ಯೆ ಇಟ್ಟುಕೊಂಡು ಅದೆಷ್ಟು ಹೆಂಗಸರು ಬಂದಿಲ್ಲ?ನೀನು ಹೊಸಬಳಲ್ಲ.ಹೊಂದಿಕೊಂಡು ಹೋಗುವುದು ಅನಿವಾರ್ಯ. ಕ್ರೈಸ್ತ ಧರ್ಮದಲ್ಲಿ ತಾಳಿ ಎಲ್ಲಿರುತ್ತದೆ?ರಿಂಗಿನ ಹೊರತು?ಕೆಲವು ಪ್ರಮಾಣದ ಹೊರತು?ಜೀಸಸ್ ಎಲ್ಲರನ್ನೂ ಕಾಪಾಡುತ್ತಾನೆ;ಕೆಟ್ಟವರನ್ನು,ಒಳ್ಳೆಯವರನ್ನು!ಇಷ್ಟಕ್ಕೂ ಸಮಾಜದಿಂದ ನಿನಗಾಗಬಹುದಾದರೂ ಏನು?ಎಲ್ಲರೂ ನಿನ್ನ ಕಳ್ಳ ಸಂಬಂಧವನ್ನು ಒಪ್ಪಿರುವಾಗ ನಿನಗೆ ಭಯಪಡುವಂತಹ ಅಗತ್ಯವೇನು?ವಿದ್ಯುಕ್ತವಾಗಿ ಮದುವೆಯಾದ ಗಂಡನ ಮನೆಯನ್ನು ಒದ್ದು ಬಂದ ಛಲಗಾತಿಗೆ ಮತ್ತೊಂದು ಮದುವೆಯೇನು ಅನಿವಾರ್ಯವೇ?ತಂಗಿ,ಅಂವ ನಿನ್ನ ಸಾಯುವ ತನಕ ಕೈ ಬಿಡಲಾರ ಎಂದು ತಲೆ ಸವರಿದ್ದರು.ಇಷ್ಟಾದ ಮೇಲೆ ಇಗರ್ಜಿಯ ಮೆಟ್ಟಿಲುಗಳ ಮೇಲೆ ಆಕೆ ಕುಂಡಿ ಊರಲಿಲ್ಲ.ಫಾದರ್ ಆಕೆಯು ಮಾಡಿದ ಪಾಪಗಳನ್ನು ಕ್ಷಮಿಸೆಂದು ಪ್ರಭುವಿನಲ್ಲಿ ಕೇಳಿಕೊಳ್ಳುತ್ತೇನೆ ಎಂದಾಗ ಆಕೆ ಅಲ್ಲಿರಲಿಲ್ಲ.

ಇಷ್ಟಾದ ಮೇಲೆ ಆಕೆ ಮದುವೆಯ ಬಗ್ಗೆ ತಲೆ ಕೆಡಸಿಕೊಳ್ಳಲಿಲ್ಲ.ಎಲ್ಲರ ಸಹಕಾರವೂ ಇದ್ದ ಮೇಲೆ ಆಕೆಗೆ ಭಯ ಕಾಡಲಿಲ್ಲ.ಆಂತೋಣಿ ಹಾಕಿಕೊಟ್ಟ ಗುಡಿಸಿಲಿನಲ್ಲಿ ಪ್ರತ್ಯೇಕ ಸಂಸಾರ ಹೂಡಿ ಆಂತೋಣಿಯ ಸಸಿ ಬೆಳಸತೊಡಗಿದಳು.ಆಕೆ ನೆಮ್ಮದಿಯಾಗಿ ಇದ್ದಳು.ಆಂತೋಣಿಯಂತಹುದೇ ಚಲುವಾನ್ನ ಚನ್ನಿಗರಾಯನಂತಹ ಗಂಡು ಮಗು ಹುಟ್ಟುತ್ತದೇನೋ ಎನ್ನುವ ಭ್ರಮೆಯಲ್ಲಿದ್ದ ಆಕೆಗೆ ಅಮಾವಾಸ್ಯೆ ಮುಖದ ಹೆಣ್ಣು ಪ್ರಾಪ್ತವಾಗಿತ್ತು.ಆಕೆ ಆಕ್ಷೇಪಣೆ ವ್ಯಕ್ತಪಡಿಸಲಿಲ್ಲ.ಗುಡಿಸಿಲಿನಲ್ಲಿ ಹುಣ್ಣಿಮೆ ಚಂದಿರನಂತಹ ಆಂತೋಣಿಯ ಮುಖದ ಬೆಳಕಿತ್ತು.ಸಾಕಷ್ಟು ಹಣವಿತ್ತು.ಉಣ್ಣಲಿಕ್ಕೆ ತಿನ್ನಲಿಕ್ಕೆ ಕಡಿಮೆ ಇರಲಿಲ್ಲ.ರಸಿಕ ಆಂತೋಣಿ ಗುಡಿಸಿಲಿನ ಪ್ರತಿ ಇಂಚು ನೆಲದ ಹಾಸಿನಲ್ಲಿ ಸುಖ ತುಂಬಿದ್ದ.ಅದಕ್ಕೆ ಹಗಲು ರಾತ್ರಿಗಳ ಮಿತಿ ಇರಲಿಲ್ಲ.ಸಮಾಜದಲ್ಲಿ ಹಾಲಿನಂತೆ ಬೆರತು ಹೋದ ಆಕೆ ನೆಮ್ಮದಿಯ ಜೀವನ ಕಳೆದದ್ದೊಂದು ನನಗೆ ಆದರ್ಶ,ಇಂತಹ ದಿಟ್ಟಗಾತಿಯರ ಕಥೆ ಪ್ರೇರಣೆಯಾಗಿರುವಾಗ ನನಗೆ ಹಾದರ ಜಗತ್ತಿನ ಸಾಮ್ರಾಜ್ಞಿಯಾಗಲು ಯಾವ ಧೈರ್ಯ ಬೇಕು ಹೇಳು?ಎಂದು ಗಿರಗಮ್ಮ ಕಥೆ ಮುಗಿಸಿದಾಗ ಮರೀನಾಳ ಬಾಯಿ ನೊಣಗಳಿಗೆ ಆಶ್ರಯವಾದ ಪರಿವೇ ಇಲ್ಲದೆ ತೆರದಿತ್ತು.ನವ ಹಾದರಗಿತ್ತಿಯರು,ನುರಿತ ಹಾದರಗಿತ್ತಿಯರ ಬಾಯಿಗಳು ಕೂಡಾ ತೆರೆದೇ ಇದ್ದವು.

ಗಿರಗಮ್ಮ ಸುದೀರ್ಘವಾಗಿ ತನಗೆ ಪ್ರೇರಣೆಯಾದ ಕಥೆಯೊಂದನ್ನು ಹೇಳಿ ಮುಗಿಸುವಷ್ಟರಲ್ಲಿ ಸಮಯ ನಾಲ್ಕು ಗಂಟೆಯಾಗತೊಡಗಿತ್ತು.ಬೇಸಿಗೆಯ ಬಿಸಿಲು ಇಳಿ ಸಂಜೆಗೆ ಹಗುರವಾಗತೊಡಗಿತ್ತು.ದನಕರುಗಳು ಮನೆಯ ಹಾದಿ ಹಿಡಿದ ಆ ಸಮಯ ಸೂರ್ಯನೂ ಪಶ್ಚಿಮದ ಇಳಿವುನಲ್ಲಿ ಸಾಗತೊಡಗಿದ್ದ.

“ಅಂದ್ರ ಈ ಗಂಡ,ಮನೆತನ,ಅತ್ತಿ ಮಾವ,ನೆರೆಹೊರೆ,ಮಾನ ಮರ್ಯಾದೆಗಳಿಗೆ ಅಂಜಲೇ ಬಾರದೇ?ಇವರೆಲ್ಲಾ ಏನೂ ಮಾಡುವುದಿಲ್ಲವೇ?!”ಎಂದೊಂದು ಬೆರಗಿನ ಪ್ರಶ್ನೆ ಹಾಕಿದಳು ಮರೀನಾ.ಆ ಮಾತಿಗೆ ನುರಿತ ಹಾದರಗಿತ್ತಿಯರೆಲ್ಲಾ ಉರುಳಾಡಿ ನಕ್ಕರು.ಅವರ ನಗುವಿನ ಆರ್ಭಟಕ್ಕೆ ಬದುವಿನ ಮೇಲಿದ್ದ ಮರ ನಡುಗಿ ಹೋಗಿ ಗಾಳಿ ಬೀಸತೊಡಗಿತು.

“ಹೌದಲ್ಲಾ?ನಿನಗಿನ್ನೂ ಭಯ ಹೋಗಿಲ್ಲಲ್ಲ?ಹಂಗಾದರೆ ನಂದೊಂದು ಕಥೆ ಕೇಳು!”ಅಂದಿತು ಮುದುಕಿ ಬೂಬವ್ವಾ!

ಇಲ್ಲಿಂದ ಮತ್ತೊಂದು ಹೊಸ ಕಥೆ ಬಾಯಿ ತೆರೆದುಕೊಂಡಿತು...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹೋರಾಟವೂ ಉದ್ದಿಮೆಯಾಗಿ ಹೋದ ಈ ಸಂಕೀರ್ಣ ಕಾಲಘಟ್ಟದ ಕುರಿತು

 ನೀವು ಪರೀಕ್ಷಿಸಿ ನೋಡಿ:ಲಕ್ಷಾಂತರ,ಕೋಟ್ಯಾಂತರ ಸಂಘಟನೆಗಳು ಹೋರಾಟಗಾರರು ಜನ್ಮತಳೆದಿದ್ದಾರೆ;ಅಷ್ಟೇ ಸಮಸ್ಯೆಗಳು ಹೆಚ್ಚಾಗುತ್ತಿವೆ.ಇವೆಲ್ಲವನ್ನೂ ವಿಶ್ಲೇಷಿಸಿ ನೋಡಿದಾಗ ಎ...