ಮಧುರ ಆ ದಿನಗಳು...!
೧೯೮೦ರ ಇಸವಿಯಲ್ಲಿ ಹುಟ್ಟಿದ 'ಮಹಾಪುರುಷರ' ಪ್ರೇಮ ಜೀವನದ ಕುರಿತು ಮಾತಾಡ ಹೊರಟರೆ ಅತ್ಯಂತ ರೊಮಾಂಚಕ ಕಥನಗಳು ಮತ್ತು ಅನುಭವಗಳು ಬಯಲಾಗುತ್ತವೆ. ಪ್ರೇಮ ನಿವೇದನೆ ಮತ್ತು ಹುಡುಗಿಯೊಬ್ಬಳನ್ನು ತೀರ 'ಉಸಿರು ತಾಕುವಷ್ಟು' ಹತ್ತಿರ ತಂದುಕೊಳ್ಳಬೇಕಾದ ಮಹತ್ತರ ಆ ಕ್ಷಣ,ಐತಿಹಾಸಿಕ ಘಟನೆ ಸಂಭವಿಸುವ ರೋಚಕ ಕ್ಷಣದಂತಿರುತ್ತಿತ್ತು. ಮತ್ತು ಅದರ ಮಾಹಾ ಪರ್ವದ ಆರಂಭ ಬಲು ಆಸಕ್ತಿದಾಯಕ ಕಥೆ ಅನ್ನಿಸುತ್ತದೆ. Technology improve ಆಗದ ಆ ದಿನಗಳ ಪ್ರೇಮ ಕಥೆಗಳು ನಿಜಕ್ಕೂ interesting ಆಗಿರುವಂತಹವು.ಪ್ರೇಮ ನಿವೇದನೆ ಎನ್ನುವುದು ಅಣು ಬಾಂಬು ಸ್ಪೋಟದ ಭಯಾನಕತೆಗಿಂತ ಘೋರವಾಗಿತ್ತು ಎನ್ನುವುದು ನೆನೆಸಿಕೊಂಡರೆ ಬಲು ವಿಚಿತ್ರ ಅನ್ನಿಸುತ್ತದೆ. ಅವಳನ್ನು ಕಾಣುವ ಘಳಿಗೆಯ ರೋಮಾಂಚನೆಯನ್ನು ನೆನಪು ಮಾಡಿಕೊಂಡರೆ ಎಂತಹ golden ದಿನಗಳು ಅವು ಎನ್ನಿಸುತ್ತವೆ.ಮಧುರ ನೆನಪುಗಳಿಗೆ ನಿಜಕ್ಕೂ ಉತ್ಸಾಹವನ್ನು ಪುಟಿದೇಳಿಸುವ ಶಕ್ತಿ ಇದೆ ಎನ್ನುವುದು ಪ್ರಜ್ಞೆಗೆ ಬರುತ್ತದೆ.ಪ್ರೀತಿಯ ಆ ದಿನಗಳ ಮಧುರ ನೆನಪುಗಳ ಒಳಗಿನ ಕಹಿ ಕೂಡಾ ಈ ಸಂದರ್ಭದಲ್ಲಿ ಸಿಹಿ ಎನ್ನಿಸುತ್ತದೆ.ಅವಳ ಸಂಭ್ರಮಕ್ಕೆ ಕಾಯುವ,ಅವಳ ಹಿತವಾದ ನಗುವಿಗೆ ಕಾಯುವ,ಅವಳ ನೋಟಕ್ಕೆ ಹಪಾಹಪಿಸುವ ವಿರಹದ ಆ ನೋವು ಬಲು ಹಿತವೆನ್ನಿಸುತ್ತದೆ.ಅವಳು ಮೊಟ್ಟ ಮೊದಲ ಸಲ ಸೀರೆ ಉಟ್ಟು ನಮ್ಮೆಡೆಗೆ ನೋಡಿದ ಆ ನೋಟ ಒಂದಿಡೀ ಜೀವನದ ಮರೆಯದ ಕ್ಷಣವಾಗಿ ಮನಸ್ಸಿನಲ್ಲಿ ದಾಖಲೆಯಾದ ಸಂಗತಿಯನ್ನು ಮರೆಯುವುದೆಂತು?ದೇವರಲ್ಲಿ ಮತ್ತೆ ಆ ಕಾಲ ನೀಡೆಂದು ಬೇಡಿಕೊಳ್ಳುವ ತವಕ.ಕಾಲವನ್ನು ಮತ್ತೆ ಮರುಕಳಿಸುವ ಶಕ್ತಿ ಇದ್ದರೆ ಹೇಗೆ ಎನ್ನುವ ಒಂದು ವಿಲಕ್ಷಣ ಪ್ರಶ್ನೆ ಹುಟ್ಟುತ್ತದೆ.ಎಷ್ಟೊಂದು ಅವಿಷ್ಕಾರಗಳಾದವು ಭೂಮಿಯ ಮೇಲೆ?ಆದರೆ ಕಾಲವನ್ನು ಒಂದು ನಿಮಿಷ ಹಿಂದಕ್ಕೆ ಕೊಂಡೊಯ್ಯುವ ಶಕ್ತಿ ವಿಜ್ಞಾನಿ ಈ ಭೂಮಿಯ ಮೇಲೆ ಜನಿಸಲಿಲ್ಲ.ಜಗತ್ತನ್ನೆ ನಾಶ ಮಾಡುವ ಶಸ್ತ್ರಗಳನ್ನು ಕಂಡು ಹಿಡಿಯಲಾಯಿತು.ಆದರೆ ಮನುಷ್ಯನನ್ನು ತನ್ನ ಜೀವಿತ ಕಾಲದ ಅವದಿಯಿಂದ ಒಂದು ನಿಮಿಷ ಹಿಂದಕ್ಕೆ ಕೊಂಡುಯ್ಯುವ ಆ ಅದ್ಬುತ ಅವಿಷ್ಕಾರವಾಗಲಿಲ್ಲ.ಹಾಗೊಂದು ಆವಿಷ್ಕಾರವಾಗಿದ್ದರೆ ಎಷ್ಟೊಂದು ಚೆನ್ನ ಎಂದೆನಿಸುತ್ತದೆ. ಆದರೆ ಬಾಲ್ಯದ ಆ ಮಧುರ ನೆನಪುಗಳಿಗೆ ವೃದ್ಧಾಪ್ಯದಲ್ಲಿ ಯೌವನದ ಕಸಿ ಒದಗಿಸುವ ಶಕ್ತಿ ಇರುವುದು ಒಂದು ಇಂದ್ರಜಾಲದಂತಿದೆ.
ಲವ್ ಎನ್ನುವ ಪದವನ್ನು ಯಾರೂ ಗಟ್ಟಿಯಾಗಿ ಉಚ್ಚರಿಸುತ್ತಿರಲಿಲ್ಲ.ಲವ್ ಎನ್ನಲು ಏನೋ ಸಂಕೋಚ;ಎಂಥದ್ದೋ ನಾಚಿಕೆ.ಆ ಕಾಲದಲ್ಲಿ ಗಟ್ಟಿಯಾಗಿ ಐಲವ್ ಯೂ ಎಂದವನೆ ನಿಜವಾದ ಅಲೆಕ್ಸಾಂಡರ್!!
ನಿಜವೆ!
ಒಂದು ಸಲ ಮನೆಯ ಮುಂದಿನ ಹಜಾರಿನಲ್ಲಿ ಇಳಿಸಂಜೆ ಸೂರ್ಯ ಕಂದುವ ಹೊತ್ತಿನಲ್ಲಿ ಒಂದು ಬೆತ್ತದ ಖುರ್ಚಿ ಹಾಕಿಕೊಂಡು ನಿಡಿದಾಗಿ ಕಾಲು ಚಾಚಿಕೊಂಡು ಕುಳಿತುಕೊಳ್ಳಿ.ಹಾಗಷ್ಟೆ ಕರುವ ಹಂಬಲಿಸಿ ದನಗಾಹಿಯ ಜೊತೆಯಲ್ಲಿ ದೊಡ್ಡಿಗೆ ಮರಳುವ ಹಸುವಿನ "ಅಂಬಾ" ಎನ್ನುವ ಕೂಗು, ಮನೆಯ ಮುಂದಿನ ಮರದಲ್ಲಿ ಗೂಡಿಗೆ ಮರಳಿದ ಹಕ್ಕಿಗಳ ಕಲರವ ಇರುವ ಆ ಹೊತ್ತಿನಲ್ಲಿ ಒಂದು ಸಲ ಹೃದಯಾಂತರಾಳದಿಂದ ನಿಟ್ಟುಸಿರೊಂದನ್ನು ಹೊರ ಹಾಕಿ ಹಗುರವಾಗುತ್ತಾ ಕಣ್ಣು ಮುಚ್ಚಿಕೊಳ್ಳಿ.ಈಗ ಕಣ್ಣ ಪಾಪೆಗಳ ಮೇಲೆ ಬಾಲ್ಯದ ಆ ಕಾಲವನ್ನು ಹಂತ ಹಂತವಾಗಿ ಜ್ಞಾಪಿಸಿಕೊಳ್ಳತೊಡಗಿ.ಓಹ್!ನಿಜಕ್ಕೂ ಹೃದಯದಲ್ಲಿ ಸಂತೋಷದ ಕಂಪನಗಳು ಹುಟ್ಟತೊಡಗುತ್ತವೆ.ತಿಂದು ಹಾಕಿದ ಕಾಲರಿನ ಅಂಗಿ ಕುಂಡಿ ಸೀಳಿದ ಚಡ್ಡಿಯೊಂದಿಗೆ ಶಾಲೆಗೆ ಹೋಗುವ ಆ ಕಷ್ಟದಾಯಕ ಸಂಭ್ರಮ!ಎರಡು ಜಡೆಯ ಹುಡುಗಿಯರ ಹಿಂಡು.ಮುಗ್ದತೆ ಮೇಳೈಸಿದ ಆ ಕ್ಷಣಗಳು,ಸಡನ್ ಎದುರ್ಗೊಂಡ ಗುರುಗಳಿಗೆ ಕಂಪನದ ಧ್ವನಿಯೊಂದಿಗೆ "ನಮಸ್ತೆ ಗೂರೂಜಿ!" ಎಂದ ಆ ಹೊತ್ತು.ನೋಡ ನೋಡುತ್ತಿರುವಂತೆ ಕಳೆದು ಹೋದ ಆ ಮುಗ್ದ ಬಾಲ್ಯ!my god, ಹೇಗೆ ಸಾಗಿಬಂದೇವು ನಾವು?ಸಾಗಿದ ಪಯಣದ ಸುಂದರ ನೆನಪುಗಳಿಗೆ ಒಂದೊಂದು ಮೈಲುಗಲ್ಲು ಹಾಕದೆ ಅನ್ನಿಸುತ್ತದೆ.
ಆಕೆಯ ಓರೆ ನೋಟದ ತೀಕ್ಷ್ಣತೆಯನ್ನು ಬಹುಶಃ ಜನ್ಮ ಜನ್ಮಾಂತರಗಳವರೆಗೆ ಮರೆಯಲು ಸಾಧ್ಯವಿಲ್ಲವೇನೋ?ಇವತ್ತಿಗೂ ರಿಂಗಣಿಸುವ ಅವಳ ಕಾಲುಗೆಜ್ಜೆಯ ನಾದ.ಹೊಸತಾಗಿ ಉಟ್ಟ ಸೀರೆಯಲ್ಲಿ ಅವಳ ದೇಹ ಎನ್ನುವುದೊಂದು ಮಲ್ಲಿಗೆಯ ಬಳ್ಳಿಯಾಗಿ ಅವಳು ಹೂವಿನಂತೆ ಲಕಲಕ ಹಿಳೆಯುತ್ತಾ ಅವಳ ಚೆಲುವು ಸೆಳೆಯುತ್ತಿತ್ತು.ಲಯವಾಗಿ ಓಲಾಡುವ ಅವಳ ಲೋಲುಕಗಳು,ಅವಳಿಗಾಗಿ ನಾವು ಕಾದಿರುತ್ತಿದ್ದೇವೋ ಅವಳೇ ನಮಗಾಗಿ ಹಾದು ಬರುತ್ತಿದ್ದಳೋ?ನೆಪಕ್ಕೆ ಹಾಲು ತರುವ, ಮೊಸರು ತರುವ, ನೀರು ತರುವ ಕೆಲಸಗಳು...ಆದರೆ ಗುಡಿ ಕಟ್ಟೆಯ ಮೇಲೆ ಹಸಿವು ಮರೆತು, ನೀರು ಮರೆತು, ಊಟ ಮರೆತು ಭೈರಾಗಿಯ ಹಾಗೆ ಪ್ರೇಮ ತಪ್ಪಿಸಿನಲ್ಲಿ ಮಗ್ನರಾದ ನಮ್ಮಲ್ಲಿ ನಮ್ಮ ಹೃದಯದಲ್ಲಿ ಮಾತ್ರ ವಿಲಕ್ಷಣವಾದ ಕಂಪನ,ವಿಲಕ್ಷಣವಾದ ನೋವು,ವಿಲಕ್ಷಣವಾದ ಸುಖ!ಕಾಯುವಿಕೆ ಮತ್ತು ವಿರಹದ ನೋವೇ ಜನ್ಮದ ಸಾರ್ಥಕ ಕ್ಷಣ ಎಂದುಕೊಳ್ಳುತ್ತಿದ್ದೇವು.
ಇವತ್ತಿನ ದಿನಗಳಲ್ಲಿ ಪ್ರೀತಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ನಾಲ್ಕಾರು ಸಲ ಹುಟ್ಟಿ ನಾಲ್ಕಾರು ಸಲ ಸಾಯುತ್ತದೆ.ಪ್ರೀತಿಯ ದಿವ್ಯ ಸಾನಿಧ್ಯಕ್ಕೆ ಅರ್ಥವಿಲ್ಲವಾಗಿದೆ.ತೀರಾ ಹತ್ತಿರವಿದ್ದರೂ ಭಾವನೆಗಳನ್ನು ವಾಟ್ಸಪ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುವುದಾಗಿದೆ.ಮೊಬೈಲೇ ಜೀವ ಜೀವಗಳ ಸಂಪರ್ಕ ಕೊಂಡಿಯಾಗಿದೆ.ಸಿಮ್ ಕಳೆದುಕೊಂಡ ತಕ್ಷಣ ಎಷ್ಟೋ ಸಂಬಂಧಗಳೂ ಸತ್ತು ಹೋಗುತ್ತಿವೆ.ಪ್ರೀತಿ ಮತ್ತು ಸ್ನೇಹ ವ್ಯವಹಾರಿಕವಾಗಿ ಇಲ್ಲಿ ನಿಶ್ಕಲ್ಮಶ ಎನ್ನುವುದು ಅರ್ಥಹೀನವಾಗಿದೆ.
ಎಷ್ಟೊಂದು ಭಯಪಡುತ್ತಿದ್ದೇವು ನಾವಾಗ?ಹಿರಿಯರನ್ನು ತಲೆ ಎತ್ತಿ ನೋಡುತ್ತಿರಲಿಲ್ಲ ನಾವಾಗ!ಗುಡಿಯ ಗಂಟೆಯ ಸದ್ದು ಕೇಳಿದ ಕ್ಷಣ ಕೈಮುಗಿದು ನಿಂತುಬಿಡುತ್ತಿದ್ದೇವು.ಗುರುಗಳು ಎದುರಾದರೆ ದೀರ್ಘ ದಂಡ ನಮಸ್ಕಾರ!ಅಪ್ಪ ಅಮ್ಮನೆ ದೇವರು ಎಂದ ಗುರುಗಳ ಮಾತಿಗೆ ತಾಯಿ ತಂದೆಯರ ಪಾದ ನಮಸ್ಕಾರ ಮಾಡುತ್ತಿದ್ದೇವು.ಆಶಿರ್ವಾದ ಪಡೆಯುತ್ತಿದ್ದೇವು.ಹಿರಿಯರಿಂದ ನೀತಿ ಪಾಠಗಳನ್ನು ಕೇಳುತ್ತಿದ್ದೇವು.ಅಜ್ಜಿಯ ಕಥೆಗಳಲ್ಲಿ ಅಭೂತಪೂರ್ವ ವೈಭವದ ರಾಜನಿರುತ್ತಿದ್ದ.ಆತ ದಯಾಮಯನಾಗಿರುತ್ತಿದ್ದ.ಆತ ಶರಣಾಗತ ರಕ್ಷಕನಾಗಿರುತ್ತಿದ್ದ.ಸದ್ಯ ಶರಣಾಗತಿ ವಂಚನೆಯ ಒಂದು ತಂತ್ರವಾಗಿದೆ.
ಅವಳಿಗೆ ಅಗೌರವ ಉಂಟಾಗದಿರಲೆಂದೇ ಎಷ್ಟೋ ಪ್ರೀತಿಗಳು ಸತ್ತು ಹೋಗಿವೆ.ನಮ್ಮಿಂದ ಅವಳಿಗೆ ಕಷ್ಟ ಒದಗದಿರಲಿ ಎಂದು ಪ್ರೇಮ ನಿವೇದನೆ ಮಾಡದೆ ಉಳಿದಿದ್ದೂ ಉಂಟು!ಅವಳ ನಗುವೆ ಕೊನೆಯ ನೆನಪಾಗಿ ಶಾಸ್ವತ ಕಾಡುವ ನೋವಾಗಿ ಸಿಹಿಯಾಗಿ ಇವತ್ತಿಗೂ ಉಳಿದಿದ್ದು ಒಂದು ಸೋಜಿಗವೆ!
ವಯಸ್ಸು ನಲವತ್ತಾಗುತ್ತಿದೆ;ಪ್ರತಿಶತ ಐವತ್ತು ಭಾಗ ತಲೆ ಮೀಸೆ ಗಡ್ಡ ಬಿಳುಪಾಗಿದೆ.ಕಣ್ಣುಗಳು ಚುರುಕು ಕಳೆದುಕೊಂಡು ಕನ್ನಡಕ ಬಂದಿದೆ.ಅವಳೂ ನಾಲ್ಕು ಮಕ್ಕಳ ತಾಯಿ!ತುಸು ಬೇಗ ಮದುವೆದಾಕಿ ಈಗ ಅಜ್ಜಿ!ಎಲ್ಲೋ ಎದುರ್ಗೊಂಡಾಗ ಕಿರು ನಗುತ್ತಾ ತಮಾಷೆ ಮಾಡಲು ಪ್ರಯತ್ನಿಸುತ್ತೀರ:"ಛೀ ಹೋಗೋ ಮಾವ,ಮುದಿಯ ಆದ್ರೂನು ನಿಂಗೆ ನಾಚಿಕೆ ಇಲ್ಲ ಅಂತಾಳೆ!ನಾವು ಮುಸಿ ಮುಸಿ ನಗುತ್ತಾ:ಹುಣಸೆ ಗಿಡ ಮುಪ್ಪಾದರೆ ಹುಳಿ ಮುಪ್ಪೇನೆ ಹುಡುಗಿ!ಎನ್ನುತ್ತೇವೆ.ನಾವು ನಮ್ಮ ನಮ್ಮ ಜಂಜಡಗಳಲ್ಲಿ ಮುಳುಗಿ ಹೋಗುತ್ತೇವೆ.
ಮಧುರ ಸೃತಿಗಳ ನೆನಪು ನಮ್ಮಲ್ಲಿ ಮತ್ತೆ ಉತ್ಸಾಹವನ್ನು ತರುತ್ತದೆ.ಯೌವ್ವನ ಆಕ್ಷಣಗಳ ನೆನಪು ನಮ್ಮನ್ನು ಯುವಕರಾಗುವಂತೆ ಪ್ರೇರೇಪಿಸುತ್ತದೆ.ಎಷ್ಟೋ ಜನ ವ್ಯಕ್ತಿತ್ವ ವಿಕಾಸದ ಶಿಬಿರ ನಡೆಸುವ ಉಪನ್ಯಾದಕರು ಕೂಡಾ ಹಳೆಯ ಸುಂದರ ಮಧುರ ಕ್ಷಣಗಳನ್ನು ನೆನಪಿಸಿಕೊಳ್ಳುವಂತೆ ಹೇಳುತ್ತಾರೆ.ನಿಜಕ್ಕೂ ಹಾಗೆ ಸಿಹಿ ಮತ್ತು ಕಳೆದ ಚೇತೋಹಾರಿ ಜೀವನ ನಮ್ಮಲ್ಲಿ ಉತ್ಸಾಹವನ್ನು ಹೆಚ್ಚು ಮಾಡುತ್ತದೆ.ಮನೋವೈದ್ಯರ ಅಭಿಪ್ರಾಯ ಕೂಡಾ ಅದುವೆ ಆಗಿದೆ.ಸಕಾರಾತ್ಮಕ ಚಿಂತನೆಯೂ ನಮ್ಮಲ್ಲಿ ಮೈಗೂಡಲು ಯಾವತ್ತಿಗೂ ಸುಂದರ ಕಲ್ಪನೆಗಳಲ್ಲಿ ತೇಲಾಡುತ್ತಿರಬೇಕು.
ನೆನಪಿರಲಿ;ಚಿಂತೆ ಎಂದರೆ ಜೀವಂತ ದೇಹದ ಶವಕ್ಕೆ ಪೇರಿಸಲ್ಪಟ್ಟ ಚಿತೆ.ಚಿಂತೆಯಲ್ಲಿರುವ ವ್ಯಕ್ತಿ ವಯಸ್ಸಿರುವಂತೆ ವೃದ್ಧನಾಗಿ ಹೋಗುತ್ತಾನೆ.ದೇಹ ದಹಿಸಿ ಹೋಗುತ್ತದೆ.
ಹೌದಲ್ಲವೆ?
#ಲಕ್ಷ್ಮೀಕಾಂತ_ನಾಯಕ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ