ಪುರಾತನ ಭಾರತ ಕೆಲವು ಚೌಕಟ್ಟುಗಳಲ್ಲಿ ಸಮಾಜವನ್ನು ರೂಪಿಸಿಕೊಂಡಿತ್ತು.ಅದೆಂದರೆ ಭೂ ಒಡೆತನದ ಕೇಂದ್ರೀಕೃತ ವ್ಯವಸ್ಥೆ.ಭೂ ಮಾಲೀಕ ಸಾರ್ವಭೌಮನಂತಿರುತ್ತಿದ್ದ.ಈ ಭೂಮಾಲೀಕ ರೈತನಲ್ಲ.ಗಳೆ ಹೊಡೆಯುವವನು ರೈತನಾದರೂ ಭೂಮಾಲೀಕ ರೈತನೋ,ಭೂಮಿ ಊಳುವವನು ರೈತನೋ ಎನ್ನುವ ಒಂದು ಸಂದಿಗ್ಧತೆ ಹಾಗೆಯೇ ಇದೆ.ರೈತಾಪಿ ಕೆಲಸಗಳನ್ನು ಮಾಡುವವರನ್ನು ಕೃಷಿ ಕಾರ್ಮಿಕರು ಎಂದು ಕರೆಯಲಾಗುತ್ತದೆ. ಯಾರು ರೈತರು ಎನ್ನುವ ಪ್ರಶ್ನೆ ಹುಟ್ಟುತ್ತದೆ.
ಈ ಭೂಮಾಲೀಕ ಅಥವಾ ರೈತನನ್ನು ಅವಲಂಬಿಸಿ ಗ್ರಾಮೀಣ ಪ್ರದೇಶಗಳು ಮತ್ತು ಹಳ್ಳಿಗಳಲ್ಲಿ ಅನೇಕ ಕುಟುಂಬಗಳು ಜೀವಿಸುತ್ತಿದ್ದವು;ಆ ಪೈಕಿ ಗುಡಿ ಪೂಜೆ ಮಾಡಲಿಕ್ಕೆ ಪೂಜಾರಿ,ಸಭೆ ಸಮಾರಂಭಗಳ ಪೂಜೆ ಮಾಡಲಿಕ್ಕೆ ಜಂಗಮರು,ಕೃಷಿ ಪರಿಕರಗಳ ರಿಪೇರಿಗೆ ಬಡಿಗರು,ಕಬ್ಬಿಣದ ಕೆಲಸಗಳನ್ನು ಮಾಡಲಿಕ್ಕೆ ಕಮ್ಮಾರರು,ಮಡಿವಾಳರು,ಚಮ್ಮಾರರು,ನಾರಂದಿಗರು,ಹೆಣ ಹೂಳಲಿಕ್ಕೊಬ್ಬರು,ತಮಟೆ ಭಾರಿಸಲಿಕ್ಕೊಬ್ಬರು-ಹೀಗೆ ಹಲವಾರು ಕುಶಲ ಕರ್ಮಿಗಳು ಅವರನ್ನು ಆಶ್ರಯಿಸಿ ಜೀವಿಸುತ್ತಿದ್ದರು.
ಸುಗ್ಗಿಯ ಕಾಲದಲ್ಲಿ ದವಸ ಧಾನ್ಯಗಳನ್ನು ಯಥೇಚ್ಛವಾಗಿ ನೀಡುತ್ತಾ ಇವರ ವಾರ್ಷಿಕ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡುತ್ತಿದ್ದರು.ಕಣದಲ್ಲಿಯೇ ಯಾರ ಯಾರ ಪಾಲಿನ ಧಾನ್ಯಗಳು ಇತ್ಯಾದಿಗಳನ್ನು ನೀಡಲಾಗುತ್ತಿತ್ತು.ಈ ಅವಲಂಬಿತ ಸಮುದಾಯಗಳಿಗೆ ಆರ್ಥಿಕ ಸಂಕಷ್ಟಗಳು ಕಾಡುತ್ತಿರಲಿಲ್ಲ.ಅವರೊಂದು ನೆಮ್ಮದಿಯ ಬದುಕನ್ನು ಬದುಕುತ್ತಿದ್ದರು.ಇದನ್ನು ಬಾಬಾ ಸಾಹೇಬರು ಚೆನ್ನಾಗಿ ಅರಿತಿದ್ದ ಕಾರಣಕ್ಕೆ ತುಳಿತಕ್ಕೊಳಗಾಗಿರುವ ಜನಾಂಗಗಳಿಗೆ ಮೀಸಲಾತಿ ತಂದರು,ಅದಕ್ಕಾಗಿ ಜೀವನವನ್ನೇ ತ್ಯಾಗ ಮಾಡಿದರು.ತನ್ನವರ ಸುಖವೇ ತಮ್ಮ ಸುಖವೆಂದು ಭಾವಿಸಿ ನಿರಂತರವಾಗಿ ಅದಕ್ಕಾಗಿ ಹೋರಾಡುತ್ತಾ ಜೀವನ ಶ್ರವಿಸಿದರು,ಅವರ ಸಾವೂ ಇತಿಹಾಸದಲ್ಲಿ ಅನುಮಾನಸ್ಪದವಾಗಿ ಉಳಿದು ಹೋಯಿತು;ಆ ವಿಷಯ ಬೇರೆ.
ಎಕ್ಕಡದಯ್ಯನ ನಗ್ನ ಸತ್ಯಗಳು ವಾಲಿನಿಂದ ಎತ್ತಿಕೊಂಡು ಬಂದಿರುವ ಈ ಬರಹ ವಿಶ್ಮಯನಾಥ ಎನ್ನುವವರು ಬರೆದಿದ್ದು,ಏನ್ನನ್ನು ಇದು ಧ್ವನಿಸುತ್ತದೋ ಅದು ಗೊಂದಲವಾಗಿದೆಯಾದರೂ ಅವಲಂಬಿತ ಸಮುದಾಯಗಳು ಪುರಾತನ ಕಾಲದಲ್ಲಿ ಕಣ್ಣು ಕಾಲು ಕೈಗಳಿಲ್ಲದಿದ್ದರೂ ಬದುಕಬಹುದಿತ್ತು ಎಂದು ಅಂತಿಮವಾಗಿ ಹೇಳುತ್ತದೆ.ಓದಿ ನೋಡಿ,ಆಸಕ್ತಿಕರವಾಗಿದೆ:
*ಊರ ಉಸಾಬರಿಯಲ್ಲಿ ಮುಲ್ಲಾನ ಪರಿಸ್ಥಿತಿ*
"ಭವತಿ ಭಿಕ್ಷಾಂ ಧೇ" ಅಂತ ಮನೆಯ ಒರಗೆ ಘಂಟೆಯ ಸದ್ದಿನೊಂದಿಗೆ ಧ್ವನಿ ಬಂದಾಗ ಭಾಗಮ್ಮ ಒಲೆಯ ಮೇಲೆ ಹಂಚಿಟ್ಟಿದ್ದಳು,ಗಂಡನ ಭಕಾಸುರನಂಥಹ ಹೊಟ್ಟೆಗೆ ಬಿಸಿ ಬಿಸಿ ರೊಟ್ಟಿ ಸುಟ್ಟು ಕೊಡುವುದೊಂದು ಆಕೆಯ ಖುಷಿ.ಆ ಅವಸರದಲ್ಲಿ ಹಿಟ್ಟು ನಾದುತ್ತಿದ್ದಳು.ಭಾಗಮ್ಮನ ಪತಿ ರಾಮಣ್ಣನೂ ಹಾಗೆ,ಮೈ ಮೇಲೆ ಬಿಸಿ ನೀರು ಬಿದ್ದ ತಕ್ಷಣ ಆತ ಹಸಿವನ್ನು ತಡೆದುಕೊಳ್ಳಲಾರ;ಬಚ್ಚಲ ಮನೆಯ ಕದ ಹಾಕಿಕೊಂಡಿದ್ದ ರಾಮಣ್ಣನ ಸ್ನಾನ ಮುಗಿಯುವ ಹಂತದಲ್ಲಿತ್ತು,ಅದಕ್ಕೆ ಪೂರಕವೆಂಬತೆ,"ಏನಾ,ಟವೆಲ್ಲು ಮರ್ತೀನಿ ನೋಡು!"ಅಂತ ಕೂಗಿದ್ದ.ಬಂದೆ ತಡಿ ಎನ್ನುತ್ತಾ ಭಾಗಮ್ಮ ಅಡುಗೆ ಮನೆಯಿಂದ ಕೂಗಿದಳು.
ಸರಿಯಾಗಿ ಅದೇ ಹೊತ್ತಿಗೆ ಮನೆಯ ಮುಂದೆ ಭವತಿ ಭಿಕ್ಷಾಂ ಧೇ ಎನ್ನುವ ಸದ್ದು ಕೇಳಿತ್ತು.ಈ ಬೆಳಗಿನ ಸಮಯ ಆರರಿಂದ ಒಂಬತ್ತು ಗಂಟೆಯವರೆಗೆ ಗೃಹಿಣಿಯರಿಗೆ ತುಂಬಾ ಅವಸರ ಮತ್ತು ಟೆನ್ಸನ್ ಉಂಟು ಮಾಡುವ ಕಾಲ.ಮಕ್ಕಳನ್ನು ಶಾಲೆಗೆ ಸಿದ್ದಗೊಳಿಸಬೇಕು,ಅಡವಿಗೆ ಹೋದವರಿಗೆ ಬುತ್ತಿ ರೆಡಿ ಮಾಡಬೇಕು,ಅತ್ತೆ ಮಾವಂದಿರ ಸೇವೆ ಮಾಡಬೇಕು,ಗಂಡನಿಗೆ ಬಿಸಿ ರೊಟ್ಟಿ ಮಾಡಬೇಕು.ಪುಣ್ಯಕ್ಕೆ ಹಳ್ಳಿಗಾಡಿನ ರೈತಾಪಿ ಮನೆಗಳಿಗೆ ಬೆಳಗಿನ ತುಂಡಿಯ ಸಂಸ್ಕೃತಿ ಬಂದಿಲ್ಲ.ಬೆಳಗೆದ್ದು ಗಳೆ ಗಾಡಿಗೆ ಹೋಗಬೇಕಿರುವ ಜನಕ್ಕೆ ನಾಲ್ಕು ನಾಲ್ಕು ಬಿಸಿ ರೊಟ್ಟಿಯೇಬೇಕು;ಪಲ್ಯ ಇಂಥದ್ದೆ ಇರಬೇಕು ಎನ್ನುವ ನಿಯಮವಿಲ್ಲ.ರಾತ್ರಿ ಹೆಪ್ಪಿಟ್ಟ ಕೆನೆ ಮೊಸರು ಬೊಳ್ಳಳ್ಳಿ ಕಾರ,ಹಸಿ ಮೆಣಸಿನ ಕಾರವಿದ್ದರೂ ನಡೆಯುತ್ತದೆ.ಅದಕ್ಕೆಂದೇ ಪೂರ್ವ ಸಿದ್ದತೆ ಎಂಬಂತೆ ಹಳ್ಳಿಯ ರೈತಾಪಿ ಕುಟುಂಬಗಳ ಗೃಹಿಣಿಯರು ಶೇಂಗಾದ ಹಿಂಡಿ,ಬೊಳ್ಳಳ್ಳಿ ಕಾರ,ಹುಣಸೆಕಾರ,ನಿಂಬೆಕಾರಗಳನ್ನು ತಯಾರಿಸಿಟ್ಟುಕೊಂಡಿರುತ್ತಾರೆ.ಆ ಉಪ ಪದಾರ್ಥಗಳು ಗೃಹಿಣಿಯರ ಕೊಂಚ ಮಟ್ಟಿಗಿನ ಒತ್ತಡವನ್ನು ಕಡಿಮೆ ಮಾಡುತ್ತವೆ.
ಸಮಯ ಎಂಟಾಗಿತ್ತು,ಮಕ್ಕಳು ತಮ್ಮ ಪಾಡಿಗೆ ತಾವು ಶಾಲೆಗೆ ಹೋಗುವ ಸಿದ್ದತೆಯಲ್ಲಿದ್ದರು.ಹೈಸ್ಕೂಲಿನಲ್ಲಿ ಓದುವ ಮಕ್ಕಳಿಗೆ ಸದ್ಯ ತಾಯಿಯ ಯಾವ ಸೇವೆಯೂ ಬೇಕಿಲ್ಲ.ಒಂಬತ್ತು ಗಂಟೆಯ ಹೊತ್ತಿಗೆ ಹೊಲಕ್ಕೆ ಹೊರಡಬೇಕಿರುವ ಗಂಡನಿಗಿಷ್ಟು ಬಿಸಿ ರೊಟ್ಟಿ ಮಾಡಿದರೆ ಆಕೆಯ ಬೆಳಗಿನ ಒತ್ತಡ ಮುಗಿದಂತೆಯೇ!
"ಯಪ್ಪಾ ಅಯ್ಯನೇರಾ,ನಿನಗ ಹೊತ್ತು ಗೊತ್ತು ಗೊತ್ತಿಲ್ಲ ನೋಡು,ಸ್ವಲ್ಪ ತಡಾ ಮಾಡಿ ಬರಬಾರದಾ" ಎಂದು ಭಿಕ್ಷೆಗೆ ಬಂದಾತನ ಕೂಗಿಗೆ ಪ್ರತಿಕ್ರಿಯಿಸಿದಳು ಭಾಗಮ್ಮ,ಭಿಕ್ಷೆಗೆ ಬಂದಾತ "ಹೀ ಹೀ ಹೀ" ಅಂತ ಹಲ್ಲು ಕಿಸಿದ.ಹಣೆಯ ತುಂಬಾ ವಿಭೂತಿ ಬರೆದುಕೊಂಡಿದ್ದ ಆತ ಒಂದು ವಿಕೃತ ಹೊಟ್ಟೆ ಬೆನ್ನಿಗತ್ತಿದ ಹಸಿದ ಬೆಕ್ಕಿನಂತಿದ್ದ.ತಮಾಷೆಯಂತಿದ್ದ.
ರಾಮಣ್ಣ ಬಚ್ಚಲು ಮನೆಯಿಂದ ಹೊರ ಬರುತ್ತಾ, "ಹತ್ತು ಮನೆ ಊಟ ಮಾಡಿ ಹನ್ನೊಂದು ಮನೆ ಊಟ ಮಾಡುವ ನಿಮ್ಮಂಥವರಿಗೆ ದೇವರು ಇನ್ನೆಂಥಾ ಹೊಟ್ಟೆ ಕೊಟ್ಟಿರಬೇಕು,ಅಯ್ನೇರು,ಯಾಕಿಂಗ್ ಹಲ್ಲಿ ಒಣಗಿದಂಗ ಒಣಗಿದಿ!" ಎಂದ.ಅದಕ್ಕೆ ಹಿಟ್ಟಿಗೆ ಭಿಕ್ಷೆಗೆ ಬಂದಾತ "ಯಪ್ಪಾ ಕಾಲ ಬದಲಾಗೇತಿ,ಈಗ ಒಕ್ಕಲುತನದ ಮನಿಗಳು ಉಳಿದಿಲ್ಲ.ಜ್ವಾಳ ಜಂಪಿ ಬಿತ್ತೋದೆ ಕಡಿಮೆ ಆಗೇತಿ,ಒಂದು ಕಾಳು ಕಡಿ ಮನಿಗಿ ಬರವಲ್ಲದು.ನಾವು ಊರ ರೈತರ ಮನೆಗಳನ್ನು ಅವರ ಕಣಗಳನ್ನು ನಂಬಿ ಬದುಕವವರು,ಹೊಲಗಳೆಲ್ಲಾ ಆಂದ್ರದವರ ಪಾಲಾಗಿ ಬರೀ ಭತ್ತದ ಗದ್ದೆಗಳಾಗಿ ಬದಲಾದ ಮೇಲೆ ನಮಗ ಬರೋ ದವಸ ಧಾನ್ಯಗಳು ನಿಂತು ಹೋಗ್ಯಾವ,ಈ ಹಿಟ್ಟೊಂದೆ ನಮ್ಮ ಹೊಟ್ಟೆಯ ದಾರಿ!" ಎಂದು ಆತ ಸದ್ಯದ ವಾಸ್ತವ ಚಿತ್ರಣ ಬಿಚ್ಚಿಟ್ಟ.ರಾಮಣ್ಣ "ಅದೂನು ಖರೇ ಆದ!" ಎನ್ನುವಲ್ಲಿಗೆ ಎರಡೂ ಬೊಗಸೆಗಳ ತುಂಬಾ ಹಿಟ್ಟು ತುಂಬಿಕೊಂಡು ಬಂದು ಭಿಕ್ಷೆಗೆ ಬಂದಾತನ ಜೋಳಿಗೆಗೆ ಹಾಕಿ ಕಾಲಿಗೆ ಬಿದ್ದಳು.
"ನೀ ಯಾರ ಮಗ ಅಯ್ನೇರು?" ಎಂದು ರಾಮಣ್ಣ ಕೇಳಿದಾಗ,
"ಹಿಟ್ಟಯ್ಯ ಅಂತ ನನ್ನ ಹೆಸರರಿ,ಬೊಟ್ಟಯ್ಯನ ಮಗ,ನಮ್ಮ ಅಡ್ಡ ಹೆಸರು ಗಿರಿಮಟ್ಟ ಅಂತಾರಿ!" ಎಂದ.
ಅಲ್ಲಿಗೆ ಬೆಳಗು ಮುಗಿಯುತ್ತಾ ಬಂದಿತ್ತು!
*****
"ನೋಡ್ತಾ ಇರಿ,ಈ ವರ್ಷ ಕಪ್ ನಮ್ದೆ.ನಮ್ಮ ಕಬ್ಬಡ್ಡಿ ಟೀಂನ್ನು ಹೇಗೆ ಕಟ್ತೀನಿ ಎಂದರೆ ನಮ್ ಟೀಂ ಹೆಸರು ಕೇಳಿದರೆ ಇಡೀ ಕರ್ನಾಟಕ ಗಡಗಡ ನಡುಗಿರಬೇಕು!ಇನ್ನಾ ಆರು ತಿಂಗಳು ಟೈಂ ಸಾಕುರಿ ನಂಗೆ,ಇಡೀ ರಾಜ್ಯದಲ್ಲಿ ಒಂದು ಘನತೆ,ಹೆಸರು ಬಂದಿರಬೇಕು ನಮ್ ಟೀಂಗೆ,ಹಂಗ್ ಮಾಡ್ತೀನಿ" ಎಂದ ಹಿಟ್ಟಯ್ಯ ಗಿರಿಮಟ್ಟ.ಆ ಕಡೆ ಫೋನಿನಲ್ಲಿ ಯಾರು ಲೈನಿನಲ್ಲಿ ಇದ್ದರೋ ಗೊತ್ತಿಲ್ಲ,ಬಹುಶಃ ಅವರು ಹೌದೌದು ಎಂದಿರಬೇಕು;ಭೇಷ್ ಹಿಟ್ಟಯ್ಯ ಗಿರಿಮಟ್ಟ,ನೀನಂದ್ರೆ ನೀನೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡ.
ಮಧ್ಯಾಹ್ನದ ಹೊತ್ತು,ಬಿಸಿಲು ರಣಗುಟ್ಟುತ್ತಿತ್ತು.ವ್ಯಾಪಾರ ವಹಿವಾಟುಗಳೆಲ್ಲಾ ಬಂದಾಗಿ ಆ ಬೀದಿ ಬಿಕೋ ಅನ್ನುತ್ತಿತ್ತು.ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಡಿಜಿಟಲ್ ಇಂಡಿಯಾ ಎನ್ನುವ ಅರ್ಥಹೀನ ಯೋಜನೆಗೆ ಬೆನ್ನು ಹತ್ತಿದ ಪರಿಣಾಮ ಸಣ್ಣ ಸಣ್ಣ ವ್ಯಾಪಾರಗಳು ಮುಚ್ಚಿ ಹೋಗಿದ್ದವು.ಆನ್ಲೈನ್ ಮಾರುಕಟ್ಟೆ ಈ ಮುಕ್ತ ಮಾರುಕಟ್ಟೆ ನಿಯಮಕ್ಕೆ ಒಳಪಟ್ಟು ವ್ಯಾಪಾರ ವಹಿವಾಟುಗಳಿಗೆ ಸೀಮೆ ಇಲ್ಲದಂತಾದ ಮೇಲೆ ಪ್ರತಿಯೊಬ್ಬರು ಪ್ರತಿಯೊಂದು ವಸ್ತುಗಳನ್ನು ಮನೆಯಿಂದಲೇ ಬುಕ್ ಮಾಡಿ ತರಿಸಿಕೊಳ್ಳತೊಡಗಿದ್ದರು,ಇದರ ಪರಿಣಾಮ ಸಣ್ಣ ಪುಟ್ಟ ಅಂಗಡಿ ಮತ್ತು ವ್ಯಾಪಾರಿಗಳ ಬದುಕು ಬೀದಿ ಪಾಲಾಗಿತ್ತು.ತನ್ನ ಬದುಕೂ ಬೀದಿ ಪಾಲಾಯ್ತಲ್ಲಾ ಎಂದು ಆರು ತಿಂಗಳಿನಿಂದ ಮನೆ ಬಾಡಿಗೆ ಕಟ್ಟದ ತನ್ನ ಅಸಹಾಕತೆಯನ್ನು ನೆನೆದು ನಿಟ್ಟುಸಿರಿಟ್ಟ ಗಿರಿಮಟ್ಟ!
ಹೌದು,ಬದುಕು ಬೀದಿ ಪಾಲಾಗಿದ್ದದ್ದು ನಿಜ.ದೇಶದ ಆರ್ಥಿಕ ಸ್ಥಿತಿ ಅಧೋಗತಿಗಿಳಿದು ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಉದ್ದೋಗಗಳು ನಾಶವಾದದ್ದು ದಿನಂಪ್ರತಿ ವರ್ತಮಾನ ಪತ್ರಿಕೆಗಳಲ್ಲಿ ಬರುತ್ತಿತ್ತು.ಆರ್ಥಿಕ ನೀತಿಗಳ,ಭಾವನಾತ್ಮಕ ಸಂಗತಿಗಳಿಗೆ ಅತಿ ಮಹತ್ವ ನೀಡುವಿಕೆ,ಯುದ್ಧದ ಹಪಾಹಪಿ,ನೋಟು ಅಮಾನ್ಯೀಕರಣ ಇವೆಲ್ಲವೂ ಈ ದೇಶವನ್ನು ನಾಶದ ಅಂಚಿಗೆ ತಂದು ನಿಲ್ಲಿಸಿದ್ದವು;ಇದರೊಂದಿಗೆ ತನ್ನದೂ ಬದುಕು ನಾಶವಾಗಿ ಹೋಯಿತಲ್ಲ ಎಂದು ಬೀಡಿಗೆ ಬೆಂಕಿ ಹಚ್ಚಿದ ಗಿರಮಟ್ಟ.ಬೀಡಿ ನಿಧಾನವಾಗಿ ಸುಡತೊಡಗಿತು.
ಹೌದು,ರಾಜ್ಯಾದ್ಯಂತ ತಾನು ಕಬ್ಬಡ್ಡಿ ತಂಡದ ಕಟ್ಟುವಿಕೆ ಮತ್ತದರ ಯಶಸ್ಸಿನ ಬಗ್ಗೆ ಮಾತಾಡುತ್ತಿದ್ದೇನೆ,ತಾನೀಗ ತನ್ನದೇ ಊರಿನಲ್ಲಿ,ತನ್ನದೇ ಜಿಲ್ಲೆಯಲ್ಲಿ ಎಷ್ಟೆ ಸಂಖ್ಯೆಯಲ್ಲಿ ಯುವಕರನ್ನು ಸಂಘಟಿಸಿದ್ದೇನೆ?ತನ್ನದು ಒಣ ಬೊಗಳೆಯೇ?ಇಷ್ಟಕ್ಕೂ ಈ ಕಬಡ್ಡಿ ತಂಡದ ಪರಿಕಲ್ಪನೆ ಮೂಡಿದ ಮೇಲೆ ತನ್ನಿಂದಾದ ಸಾಧನೆ ಏನು?ತಾನು ಒಂದೇ ಒಂದು ಕಪ್ ಗೆದ್ದಿದ್ದೇನಾ?ಕಬ್ಬಡ್ಡಿಯ ಬೆನ್ನು ಹತ್ತಿ ತನ್ನ ಬದುಕು ಮೂರು ಪಾಲು ಮಾಡಿಕೊಂಡೆನೆ?ಯೋಚಿಸತೊಡಗಿದ ಹಿಟ್ಟಯ್ಯ.ಬೀಡಿ ನಿಧಾನವಾಗಿ ಸುಡತೊಡಗಿತ್ತು.
ಒಂದಿಷ್ಟು ದಿನಗಳಿಂದ ಹಿಟ್ಟಯ್ಯನನ್ನು ಕೆಲವು ಜನ ಗಮನಿಸತೊಡಗಿದ್ದರು.ಹಿಟ್ಟಯ್ಯನಿಗೆ ತಲೆ ಸರಿ ಇಲ್ಲ ಎನ್ನುವ ಸುದ್ಧಿ ಸದ್ಯಕ್ಕೆ ಆ ಗಲ್ಲಿಯಲ್ಲಿ ಪ್ರಚುರ ಪಡೆದಿತ್ತು.ತಿಕ್ಕಲು ತಿಕ್ಕಲು ಬಡಬಡಿಸುವುದು,ಮೊಬೈಲು ಫೋನಿನ ಸ್ಕ್ರೀನಿನ ಮೇಲೆ ಮಲ ವಿಸರ್ಜನೆ ಮಾಡುವುದು,ಮೂತ್ರ ವಿಸರ್ಜನೆ ಮಾಡುವುದು ಇತ್ಯಾದಿಗಳನ್ನು ಮಾಡುತ್ತಾ ತಿಕ್ಕಲುತನಗಳನ್ನು ತೋರಿಸತೊಡಗಿದ್ದ.ಸರ್ವೇ ಜನೋ ಸುಖಿನೋ ಭವತಿ ಎಂದೇನೋ ಹೇಳುತ್ತಾ ಅಳುತ್ತಿದ್ದ.ಎಸ್ಸಿ ಎಸ್ಟಿಗಳು ತನ್ನ ವೈರಿಗಳು ಎಂದು ಹೂಸಿನ ವಾಸನೆಯೋಪಾದಿಯಲ್ಲಿ ಪರಿಮಳ ಬೀರುತ್ತಿದ್ದ.ಮೋದಿ ಎಂಬಾತನೆ ತನ್ನ ಮನೆ ದೇವರಾಗಿ ತಾನು ಆತನ ಉದರ ಸಂಜಾತ ಎಂದು ಬಡಬಡಿಸುತ್ತಿದ್ದ.ಇಂತಿಪ್ಪ ಹಿಟ್ಟಯ್ಯನಿಗೆ ವಿಚಿತ್ರ ರೋಗ ಪ್ರಾರಂಭವಾಗಿತ್ತು;ಆ ರೋಗವೆಂದರೆ,
ಗುದನಾಳದಿಂದ ಮಲ ವಿಸರ್ಜನೆಯಾಗದೆ ಬಾಯಿಯಿಂದ ಆಗತೊಡಗಿತ್ತು!
ಒಕ್ಕಲು ಮನೆಗಳ ದವಸ ಧಾನ್ಯಗಳ ದಕ್ಷಿಣೆ ಇತ್ಯಾದಿ ಸಂಭಾವನೆಗಳು ಕೈ ತಪ್ಪಿದ ಪರಿಣಾಮ ಆತ ಸಂವಿಧಾನಕ್ಕೆ ಇಡಿ ಶಾಪ ಹಾಕುತ್ತಿದ್ದ!ಆತನ ವರ್ತನೆ ವಿಚಿತ್ರವಾಗಿತ್ತು,ಆತ ಬೇದಿಯನ್ನು ನಿಗ್ರಹಿಸದ ಸ್ಥಿತಿಗೆ ತಲುಪಿದ್ದ!
ಇಂತಿರುವ ಹಿಟ್ಟಯ್ಯನಿಗೆ ಜೀವನವೊಂದು ದೊಡ್ಡ ಸಮಸ್ಯೆಯಾಗಿರುವಂತೆ....
*****
"ಈ ಜನ್ಮದ ನನ್ನ ಪರಮಗುರಿ ಮತ್ತು ಧ್ಯೇಯ ಎಂದರೆ ಆ ಸೂಳಿಮಗನ್ನ ಸಣ್ಣ ಕಡಿಯುವುದು,ಅವನನ್ನು ಹೇಗೆ ಕಡಿಯಬೇಕು ಎಂದರೆ ಮೊದಲು ಉಗುರುಗಳು,ನಂತರ ಕೈಗಳು,ಕಾಲು ಬೆರಳುಗಳು,ನಂತರ ಕಾಲುಗಳು,ಕಣ್ಣುಗಳನ್ನು ಜೀವಂತವಾಗಿರುವಂತೆ ಕಿತ್ತಬೇಕು,ಮೂಗನ್ನು ಕತ್ತರಿಸಬೇಕು,ಕಿವಿಗಳನ್ನು ಕೈಯಿಂದ ಕಿತ್ತಬೇಕು,ಜೀವಂತ ಇರುವಂತೆ ಹೃದಯ ಹೊರಗೆ ತೆಗೆಯಬೇಕು!ನಮ್ಮ ಜೀವನವನ್ನು ನರಕ ಮಾಡಿರುವ,ನಮ್ಮನ್ನು ಕ್ಷಣ ಕ್ಷಣವೂ ಕಾಡಿದ ಆ ಭೋಸಿಡಿಕೆಯನ್ನು ಸುಮ್ಮನೆ ಬಿಡಬಾರದು!" ಎಂದ ಪಟ್ಟಭದ್ರಯ್ಯ.ಅದೊಂದು ಸಂಜೆ ಬಾರೊಂದರ ಮೂಲೆಯಲ್ಲಿ ಮಬ್ಬುಗತ್ತಲಿನ ಟೇಬಲ್ಲಿನ ಹತ್ತಿರ ಹಾಕಿದ ಕುರ್ಚಿಗಳ ಮೇಲೆ ಮದ್ಯದ ಬಾಟಲಿಗಳನ್ನು ಮುಂದಿಟ್ಟುಕೊಂಡು ಎದುರಾಬದರು ಕುಳಿತು ರುದ್ರಯ್ಯನಿಗೆ ಹೇಳತೊಡಗಿದ್ದ.ನಿಜಕ್ಕೂ ಸಮಸ್ಯೆಯನ್ನು ದಾರುವಾಗುವಂತೆ ಮಾಡಿದ್ದ ಒಬ್ಬ ವ್ಯಕ್ತಿ.ಕಬಡ್ಡಿ ಪಂದ್ಯವನ್ನೇ ತನ್ನ ಪ್ರಬಲ ಅಸ್ತ್ರ ಎಂದು ಭಾವಿಸಿ ಅದರಿಂದ ಇಲ್ಲಸಲ್ಲದ ಸಮಸ್ಯೆಗಳನ್ನು ಸೃಷ್ಟಿಸಿದ್ದ.ಹಾಗೆ ಸಮಸ್ಯೆ ಸೃಷ್ಟಿಸಿ ತುಂಬಾ ತೊಂದರೆಯನ್ನು ಉಂಟು ಮಾಡಿದ್ದ ಆ ಕಬಡ್ಡಿ ಆಟಗಾರನನ್ನು ಏನು ಮಾಡಬೇಕು ಎನ್ನುವುದರ ಚರ್ಚೆ ಅವರಿಬ್ಬರೂ ಮಾಡತೊಡಗಿದ್ದರು.ಇಬ್ಬರೂ ಕಟಕಟನೆ ಹಲ್ಲು ಕಡೆಯೊಡಗಿದ್ದರು.ಅವರ ಆಕ್ರೋಶಕ್ಕೆ ಮದ್ಯದ ಬಾಟಲಿಗಳು ಪದೇಪದೇ ಖಾಲಿಯಾಗುತ್ತಿದ್ದವು.ಜನ್ಮಾಂತರಗಳ ಸೇಡಿಗೆ ಗುರಿಯಾಗಿರುವಂತೆ ಸಿಗರೇಟುಗಳು ಸುಡುತ್ತಿದ್ದವು,ಟೇಬಲ್ಲಿಗೆ ತಿಕ್ಕಲ್ಪಡುತ್ತಿದ್ದವು,ಆಷ್ ಟ್ರೇ ಎನ್ನುವ ಸಮಾಧಿಯೊಳಗೆ ಲೀನವಾಗಲ್ಪಡುತ್ತಿದ್ದವು!
ಏನ್ ಮಾಡಬೇಕು ಆ ಕಬ್ಬಡ್ಡಿ ಆಟಗಾರನನ್ನು?
ಅವರ ಮುಂದೆ ಪದೇಪದೇ ಅದೇ ಪ್ರಶ್ನೆ ಕೆಟ್ಟ ಹುಳುವಾದ ನಾಗರ ಹಾವಿನ ಸೆಡೆತದ ರೀತಿಯಲ್ಲಿ ಉದ್ಭವವಾಗುತ್ತಿತ್ತು.
"ಏನೋ ಒಂದು ಮಾಡಬೇಕು ನಿಜ,ಏನೋ ಒಂದು ಮಾಡಲಿಕ್ಕೆ ಇದು ಸೂಕ್ತ ಸಮಯವಲ್ಲ.ಅದೇನು ನಮ್ಮ ಮಟ್ಟಿಗೆ ದೊಡ್ಡ ಪ್ರಾಣಿಯೂ ಅಲ್ಲ.ಅದೊಂದು ಕೆಟ್ಟ ಹುಳು,ಎಡಗಾಕ ಎಕ್ಕಡದಿಂದ ಹೊಸಕಿ ಹಾಕಬಹುದಾದ ಕೆಟ್ಟ ಹುಳು!ಅದನ್ನೀಗ ಏನಾದರೂ ಮಾಡಿದರೆ ನಮ್ಮ ತಲೆಗೇ ಸುತ್ತುತ್ತದೆ.ಕೊಂಚ ಸಮಯ ಕಾಯೋಣ.ಅದೀಗ ನರಕಮಯ ಜೀವನ ಸಾಗಿಸುತ್ತಿದೆಯಂತೆ;ಕಬಡ್ಡಿ ಆಟ ಎನ್ನುವುದು ಅದರ ಬಾಯಿ ಚಪಲವಂತೆ.ಅದರ ಹಿಂದೆ ಯಾರೂ ಇಲ್ಲ.ಎಲ್ಲೋ ಬೆಂಗಳೂರು,ಬೊಂಬಾಯಿಯಲ್ಲಿರುವವರು ತಮ್ಮದೆ ಸಂಸಾರದ ಹೈರಾಣನ್ನು ಬಿಟ್ಟು ಇದರ ನೆರವಿಗೆ ಬರುತ್ತಾರೆಯೇ?ಅದರ ಬಗ್ಗೆ ಯೋಚಿಸಿದಿರು,ಇವೆಲ್ಲಾ ಮುಗಿಯಲಿ.ನಂತರ ನೋಡೋಣ!" ಎಂದ ರುದ್ರಯ್ಯ.ಅವರಿಬ್ಬರ ಮದ್ಯ ಸೇವನಾ ಸಮಾರಾಧನೆ ಮುಗಿಯುವ ಹೊತ್ತಿಗೆ ನೆಶೆ ಅವರಿಬ್ಬರನ್ನೂ ಆಕ್ರಮಿಸಿಕೊಂಡು ಮೆದುಳಿನ ನ್ಯೂರಾನುಗಳನ್ನು ದಾರಿ ತಪ್ಪಿಸಿ ಬಿಟ್ಟಿತ್ತು!
****
ಇದಾಗಿ ಎರಡು ವರ್ಷಗಳ ನಂತರ...
"ಭವತಿ ಭಿಕ್ಷಾಂ ಧೇ!"
ಎನ್ನುವ ಘಂಟೆಯ ಶಬ್ದ ಮಿಶ್ರಿತ ವಾಕ್ಯ ಕೇಳಿಸಿತು.ಈ ಸಲ ರಾಮಣ್ಣ ಮನೆಯ ಅಂಗಳದಲ್ಲಿ ಕುಳಿತಿದ್ದ.ದಿವ್ಯಾಂಗರ ಮೂರು ಚಕ್ರದ ವಾಹನದ ಮೇಲೆ ಬಂದಿದ್ದ ಹಿಟ್ಟಿಗೆ ಬರುವಾತ.
"ಯಾಕೋ ತಮ್ಮಾ,ಅದೆಲ್ಲಾ ಯಾಕೆ ಬೇಕಾಗಿತ್ತು?ನೀನಾಯ್ತು,ನಿನ್ನ ಭಿಕ್ಷಾಟನೆಯಾಯಿತು,ನಿನ್ನ ಹಿಟ್ಟಾಯ್ತು ಎನ್ನುವಂತೆ ಇದ್ದು ಬಿಡೋದಲ್ವಾ?ದೊಡ್ಡವರ ತಂಟೆ ಯಾಕೆ?ಈಗ ಕಬ್ಬಡ್ಡಿ ಆಡಬಲ್ಲೆಯಾ?ಕಬಡ್ಡಿ ಆಟ ಒಂದು ಸೊಕ್ಕಿನ ಆಟವಲ್ಲ.ನೋಡೀಗ,ಕಾಲು,ಕಣ್ಣು ಕಳೆದುಕೊಂಡಿದ್ದೀಯ.ಹೆಂಡ್ತಿ ಮಕ್ಕಳಿಗೆ ಹೊರೆಯಾಗಿದ್ದೀಯ.ಬಡವ ನೀ ಮಡಗಿದಂಗಿರು ಎನ್ನುವುದನ್ನು ಬಿಟ್ಟು ಇಲ್ಲದ ಉಸಾಬರಿಗೆ ಹೋಗಿ ಏನಾಯಿತು?ಕಣ್ಣು ಹೋದವು,ಕಾಲು ಹೋದವು,ತಿಕಾ ತೊಳೆಯಲು ಕೈ ಇಲ್ಲ.ಊರ ಉಸಾಬರಿ ಮಾಡಿ ಮುಲ್ಲಾ ಬಡವಾಗಿದ್ದನಂತೆ!" ಎಂದು ಅನ್ನುವಷ್ಟರಲ್ಲಿ ಭಾಗಮ್ಮ ಈ ಸಲ ಹಿಟ್ಟನ್ನು ಮೊರದಲ್ಲಿ ತುಂಬಿಕೊಂಡು ಬಂದಿದ್ದಳು.ಜೋಳಿಗೆಗೆ ಹಿಟ್ಟು ಸುರಿದು ಜಂಗಮನ ಪಾದ ಮುಟ್ಟಬೇಕು ಎಂದರೆ ಪಾದವೇ ಇರಲಿಲ್ಲ!
ಪಾದ,ಕೈ,ಕಣ್ಣು ಇರದಿದ್ದರೂ ಕೆಲವು ಜನಾಂಗಗಳು ಬದುಕಬಹುದು ಎಂದೇ ಮೀಸಲಾತಿಯಿಂದ ವಂಚಿತವಾದವು,ಕೈ ಇದ್ದು,ಕಾಲಿದ್ದೂ,ಕಣ್ಣುಗಳಿದ್ದು,ಸದೃಡ ದೇಹವಿದ್ದು ದಲಿತ ಶೂದ್ರ ವರ್ಗಗಳು ಸಂವಿಧಾನದ ಸವಲತ್ತುಗಳಿದ್ದೂ ಬದಲಿಕ್ಕೆ ದುಸ್ತರವಾದ ಸನ್ನಿವೇಶದ ಅರಿವಾಗಿ ಭಾಗಮ್ಮ...
"ಪಾಪ,ಹಿಂಗಾಗಬಾರದಿತ್ತು!" ಎಂದಳು.
*ವಿಶ್ಮಯನಾಥ*

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ