ಶನಿವಾರ, ಡಿಸೆಂಬರ್ 4, 2021

ಹೋರಾಟವೂ ಉದ್ದಿಮೆಯಾಗಿ ಹೋದ ಈ ಸಂಕೀರ್ಣ ಕಾಲಘಟ್ಟದ ಕುರಿತು

 ನೀವು ಪರೀಕ್ಷಿಸಿ ನೋಡಿ:ಲಕ್ಷಾಂತರ,ಕೋಟ್ಯಾಂತರ ಸಂಘಟನೆಗಳು ಹೋರಾಟಗಾರರು ಜನ್ಮತಳೆದಿದ್ದಾರೆ;ಅಷ್ಟೇ ಸಮಸ್ಯೆಗಳು ಹೆಚ್ಚಾಗುತ್ತಿವೆ.ಇವೆಲ್ಲವನ್ನೂ ವಿಶ್ಲೇಷಿಸಿ ನೋಡಿದಾಗ ಎರಡು ಅಂಶಗಳು ಸ್ಪಷ್ಟವಾಗುತ್ತವೆ.೧)ಆತ್ಮರತಿ ೨)ಅಜೀರ್ಣದ ಸಮಸ್ಯೆ! ತುಂಬಾ ಸಂಪಾದಿಸಿದವರು ಅಜೀರ್ಣವೆನ್ನುವ ರೋಗಕ್ಕೆ ಗುರಿಯಾಗಿ ಸಮಾಜ ಸೇವೆಯ ವೇಷ ಹಾಕುತ್ತಾರೆ,ಅದೊಂದು ಚಟ ಅಥವಾ ವ್ಯಸನ.ತುಂಬಾ ಹಣವಿರುವವರಿಗೆ ಆತ್ಮರತಿಯ ದುರಭ್ಯಾಸವಿರುತ್ತದೆ,ಇದು ತಮ್ಮನ್ನು ತಾವು ಹೊಗಳಿಕೊಳ್ಳುವ,ಹೊಗಳಿಸಿಕೊಳ್ಳುವ ಚಟ.ಬಲು ಅಪಾಯಕಾರಿ.ಇದೆಲ್ಲದರ ಆಚೆ ಇನ್ನೊಂದು ವರ್ಗವಿರುತ್ತದೆ: black hole ಮುಚ್ಚಿಕೊಳ್ಳಲು ವೇಷ ಹಾಕುವವರ ವರ್ಗ!ತುಂಬಾ ತುಂಬಾ ಅಪಾಯವಿರುವುದು ಇವರಿಂದ.ದುರಂತ ಎಂದರೆ ಇಡೀ ಪ್ರಪಂಚವೇ ಇವರ ನಿಯಂತ್ರಣದಲ್ಲಿದೆ.ಇವರನ್ನು white collar criminals ಅಂತ ಕರೆಯುತ್ತಾರೆ,ಅಪರಾಧ ಮಾಡುತ್ತಿರುವುದು,ಪಾಪದ ಹಣದಿಂದ ಜೀವಿಸುತ್ತಿರುವುದು ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತದೆ,ಇವರನ್ನು ಯಾರೂ ಟಚ್ ಮಾಡುವುದಿಲ್ಲ.ಇವರು ಏನನ್ನು ಬೇಕಾದರೂ ಮಾಡಬಹುದು.ಕೊಲೆಯಿಂದ ಹಿಡಿದು ೩೦೭ವರೆಗೆ,ಅಂದರೆ ೩೦೨ ಮತ್ತು ೩೦೭ ಇವರ ಆಯುಧಗಳು.


ಹೇಳಿ ಮತ್ತೆ?ಮತ್ತೇಕೆ ಸಮಸ್ಯೆಗಳು ತಗ್ಗುತ್ತಿಲ್ಲ?ಮತ್ತೇಕೆ ಮೌಢ್ಯ ವಿಜೃಂಭಿಸುತ್ತಿದೆ,ಮತ್ತೇಕೆ ಲಂಚಗುಳಿತನ,ಭ್ರಷ್ಟಾಚಾರ,ಸರ್ಕಾರಿ ನೌಕರರ ಸೋಮಾರಿತನ,ತೆರಿಗೆಗಾರರ ದಾರುಣ ಮೋಸ... ಏಕೆ ಕಡಿಮೆಯಾಗುತ್ತಿಲ್ಲ?ಕೆಲವೇ ಕೆಲವರು ಮಾತ್ರ ಏಕೆ ವಿಜೃಂಭಣೆಯ ಜೀವನ ಮಾಡುತ್ತಿದ್ದಾರೆ?


ಈ ಪ್ರಶ್ನೆಗಳು ಜಟಿಲವಾಗಿಯೇನೂ ಇಲ್ಲ,ತುಂಬಾ ಸರ ಇವೆ.ನೀವು ಯೋಚಿಸಬೇಕಷ್ಟೇ.


ಈ ಬಗ್ಗೆ ನಿಮಗೆ ಕೊಂಚ ಅರ್ಥವಾಗಬೇಕು ಎಂದರೆ ನಂದಮೂರಿ ಬಾಲಕೃಷ್ಣ ನಟಿಸಿದ ನಿನ್ನೆಯಷ್ಟೇ ಬಿಡುಗಡೆಯಾದ "ಅಖಂಡ" ಎನ್ನುವ ಸಿನೆಮಾ ನೋಡಬೇಕು ನೀವು,ನಾನು ನಿನ್ನೆ ನೋಡಿದೆ.


ಅದರ inspire ಮೇಲೆ ಈ ಸಾಲುಗಳನ್ನು ಬರೆದೆ.ಅತಿಯಾದ ಅಭಿಮಾನವೂ ನಮ್ಮ ಮೂರ್ಖತೆಯನ್ನು ಬಿಂಬಿಸುತ್ತದೆ.


ನಂಬಿ ಎನ್ನುವ ಪದವನ್ನು ಕಾಪಾಡಿಕೊಳ್ಳುವ ಅಗತ್ಯದ ಕುರಿತು ಒಂದು ಚಿಂತನೆ


£ÀA©PÉ J£ÀÄߪÀ ¥ÀzÀªÀ£ÀÄß PÁ¥ÀrPÉƼÀÄîªÀ CUÀvÀåzÀ PÀÄjvÀÄ MAzÀÄ aAvÀ£É

 

“£ÀA©PÉ” dUÀwÛ£À §ºÀÄzÉÆqÀØ ªÀÄvÀÄÛ ªÀĺÀvÀé¥ÀÆtð ¥ÀzÀ.¨sÁUÀ±ÀB dUÀvÀÄÛ F ¥ÀzÀzÀ DzsÁgÀzÀ ªÉÄÃ¯É fë¸ÀÄwÛzÉ.ªÀÄ£ÀĵÀå£À ¥Àæw ±Áé¸À ªÀÄvÀÄÛ ¤±Áé¸À F ¥ÀzÀªÀ£Éßà CªÀ®A©¹zÉ.ªÀÄ£ÀĵÀå£À MmÁÖgÉ §zÀÄQ£À zsÉåÃAiÀĪÉà £ÀA©PÉ.gÁwæ Hl ªÀÄÄV¹ ºÁ¹UÉUÉ ªÉÄÊ ZÉ®ÄèªÀ ªÀÄÄ£Àß ¥Àæw ªÀåQÛ.¥Àæw £ÀgÀfë £Á½£À ¨É¼ÀV£À £ÀA©PÉAiÉÆA¢UÉà PÀtÄäZÀÄÑvÀÛzÉ.D £ÀA©PÉAiÀÄAvÉ ¨É¼ÀUÀÄ ªÀÄÆqÀÄvÀÛzÉ,ºÉƸÀ ¸ÀÆAiÉÆÃðzÀAiÀĪÁUÀÄvÀÛzÉ,ªÀÄvÉÛ §zÀÄQ£À DgÀA¨sÀ.§zÀÄPÀÄ ºÉƸÀzÁzÀgÉãÀÄ ºÀ¼ÉAiÀÄzÁzÀgÉãÀÄ,¤vÀåzÀ ¨É¼ÀV£ÉÆA¢UÉ DgÀA¨sÀªÁUÀĪÀ fêÀ£À ¤vÀå £ÀÆvÀ£À.F ¤vÀå£ÀÆvÀ£À fêÀ£À CªÀ®A©¹gÀĪÀÅzÉà £ÀA©PÉAiÀÄ ªÉÄïÉ.¸ÀÄTAiÀiÁV §zÀÄPÀÄvÉÛÃªÉ J£ÀÄߪÀ £ÀA©PÉ £ÀªÀÄä ªÀÄ£À¹ìUÉ MzÀV¸ÀĪÀ EAzsÀ£À,ªÀÄÄA¢£À ªÀµÀð ¤jÃQëvÀ UÀÄj vÀ®Ä¥ÀÄvÉÛÃªÉ J£ÀÄߪÀ £ÀA©PÉ fêÀ£ÉÆÃvÁìºÀ.ªÀÄÄjzÀ ªÀÄ£À¸ÀÄìUÀ¼ÀÄ ªÀÄvÉÛ PÀlÖ®àqÀÄvÀÛªÉ J£ÀÄߪÀ £ÀA©PÉ fêÀ£À ¨sÀgÀªÀ¸ÉAiÀiÁUÀÄvÀÛzÉ.ªÀÄ£ÀĵÀå£À MmÁÖgÉ §zÀÄPÀÄ £ÀA©PÉAiÀÄ£ÀÄß CªÀ®A©¹zÉ.£ÀA©PÉ ªÀÄÄjzÀÄ ºÉÆÃzÀ ªÉÄÃ¯É ªÀÄ£ÀĵÀå£À zÉúÀzÉƼÀUÉ ZÉÊvÀ£ÀåªÀÇ G½AiÀįÁgÀzÉãÉÆÃ?£ÀA©PÉ wÃj ºÉÆÃzÀ ªÉÄÃ¯É ªÀÄ£ÀĵÀå fêÀAvÀ ±ÀªÀªÉãÉÆÃ?±ÀªÀzÀ PÉƼÉvÀ £ÁvÀªÀ£ÀÄß(ªÁ¸À£É) ¤ÃªÀÅ ¸À»¸À§ºÀÄzÀÄ,fêÀAvÀªÁV ¸ÀvÀÛ ªÀÄ£ÀĵÀå£À ªÁ¸À£ÉAiÀÄ£ÀÄß AiÀiÁjAzÀ®Æ ¸À»¸À®Ä ¸ÁzsÀå«®è!

£Á£ÀÄ vÀÄA¨Á d£ÀgÀ£ÀÄß ¥Àæ²ß¹zÉÞãÉ,KPÉ PÀÄrAiÀÄÄwÛ¢ÝÃj,PÀÄrvÀ ¤ªÀÄä §zÀÄPÀ£ÀÄß,¤ªÀÄä fêÀ£ÀªÀ£ÀÄß £Á±À ªÀiÁqÀÄvÀÛzÀ®èªÉà JAzÀÄ,PÀÄrvÀ §jà fêÀ£ÀªÀ£ÀÄß ªÀiÁvÀæªÀ®è fêÀªÀ£ÀÆß £Á±À ªÀiÁqÀÄvÀÛzÉ,F ¸ÀAUÀwAiÀÄ£ÀÄß «ªÀj¹AiÉÄà £Á£ÀÄ ¥Àæ±Éß PÉýgÀÄvÉÛãÉ,CªÀjAzÀ «µÁzÀzÀ, ¤gÁ±ÉAiÀÄ GvÀÛgÀ §gÀÄvÀÛzÉ;E£ÉßãÀÄ ¸Àgï G½¢zÉ fêÀ£À,DAiÀÄÛ®è JAzÀÄ!DV£ÀÆß ªÀAiÀĸÀÄì £À®ªÀvÀÄÛ £À®ªÀvÉÛöÊzÀgÀ°ègÀÄvÀÛzÉ. “CgÉ ¸Àgï,J°è¢ÝÃj,£ÁªÉ°è £ÀÆgÀÄ ªÀµÀð §zÀÄPÀÄvÉÛêÉ?LªÀvÀÄÛ CgÀªÀvÀÛPÉÌ ZÀlÖ gÉr £ÀªÀÄäzÀÄ!”J£ÀÄßvÁÛgÉ.CªÀgÀÄ ¤gÁ±ÉAiÀÄ ¨sÀAiÀiÁ£ÀPÀ PÀAzÀPÀzÉƼÀUÉ eÁj ºÉÆÃVgÀÄvÁÛgÉ.CªÀgÀ Erà §zÀÄPÀÄ ¤gÁ±É¬ÄAzÀ PÀÆrgÀÄvÀÛzÉ.ªÀÄzÀĪÉ,ªÀÄzÀĪÉAiÀiÁzÀ ªÉÄÃ¯É ªÀÄPÀ̼ÀÄ,AiÀiÁAwæPÀªÁV ¸ÁUÀĪÀ GzÉÆåÃUÀ-ªÁå¥ÁgÀ,ºÀÄlÖzÀ ºÉƸÀ PÀ£À¸ÀÄUÀ¼ÀÄ...GºÀÄA,EªÉ®èªÀÇ ¤gÁ±ÉAiÀÄ PÀqÉUÉ PÉÆAqÉÆAiÀÄÄåªÀ ªÁºÀ£ÀUÀ¼ÀÄ;§zÀÄPÀÄ CxÀð PÀ¼ÉzÀÄPÉÆAqÀ ¹ÜwAiÀÄ°è G®ãtUÉÆAqÀ gÉÆÃUÀUÀ¼ÀÄ.EAvÀºÀ ªÀåQÛUÀ¼Éà PÀÄrvÀ zsÀƪÀÄ¥Á£À ªÀÄvÀÄÛ zsÁ«ÄðPÀ ¨sÁªÀ£ÉUÀ¼À zÁ¸ÀgÁUÀÄvÁÛgÉ.PÁtzÀ ¨sÀ«µÀåzÀ ªÉÄÃ¯É ¨sÀgÀªÀ¸É EqÀÄvÁÛgÉ.PÁtzÀ zÉêÀgÀÄ EªÀjUÉ zsÉÊAiÀÄð;vÀªÉÄä¯Áè ¨sÀAiÀÄUÀ¼À£ÀÄß zÉêÀgÀ ªÉÄïÉAiÉÆÃ,zɪÀé CªÀzsÀÆvÀgÀ ªÉÄÃ¯É ºÁQ PÀÄrzÀÄ £É£À¥ÀÄUÀ½AzÀ zÉÊ£ÀA¢£À §zÀÄQ¤AzÀ zÀÆgÀªÁUÀĪÀ ¥ÀæAiÀÄvÀß ªÀiÁqÀÄvÁÛgÉ,EªÀgÀÄ £ÀA©PÉAiÀÄ£ÀÄß CzsÀðA§zsÀð PÀ¼ÉzÀÄPÉÆAqÀªÀgÀÄ.§zÀÄQ£À MAzÀÄ ºÀAvÀªÀ£ÀÄß ¥ÉÆÃgÉʹgÀĪÀ EªÀjUÉ £ÀA©PÉAiÀÄ,¨sÀgÀªÀ¸ÉAiÀÄ CUÀvÀå ©Ã¼ÀĪÀÅ¢®è.

DyðPÀ ¨sÀzÀævÉ EgÀĪÀ ªÀåQÛUÀ¼À §zÀÄPÀÄ £ÉªÀÄ䢬ÄAzÀ EgÀÄvÀÛzÉ.J°è £ÉªÀÄä¢ EgÀÄvÀÛzÉÆà C°è £ÀA©PÉUÀ¼ÀÄ UÁqsÀªÁVgÀÄvÀÛªÉ.£ÀA©PÉ J£ÀÄߪÀÅzÀÄ ¥ÀgÀ¸ÀàgÀgÀ ªÀÄzsÉå EgÀĪÀ ¨sÀgÀªÀ¸ÉAiÀÄÆ DVvÀÛzÉ.ªÀÄ£ÉAiÀÄ°è ºÉAqÀwAiÀÄ£ÀÄß ©lÄÖ D¦üøï CxÀªÁ ªÁå¥ÁgÀPÉÌ ºÉÆÃUÀĪÀ ¥ÀwUÉ ºÉAqÀwAiÀÄ ªÉÄÃ¯É £ÀA©PÉ EgÀÄvÀÛzÉ,CzÉà jÃw ¥ÀwßUÀÆ ¸ÀºÀ.¨É½UÉÎ n¥sÀ£ï ªÀiÁr ªÀÄ£É ©lÄÖ ºÉÆgÀqÀĪÀ ¥Àw §gÀĪÀÅzÀÄ ¸ÁAiÀÄAPÁ® DgÀPÉÌ,ªÁå¥ÁgÀ¸ÀÜgÁzÀgÉ CªÀjUÉ ¸ÀªÀÄAiÀÄzÀ «Äw EgÀĪÀÅ¢®è.»ÃUÉ ªÀģɬÄAzÀ DZÉ EgÀĪÀ UÀAqÀ£À ¤jÃPÉëAiÀÄ°è PÁAiÀÄĪÀ ¥ÀwßUÉ EgÀĪÀÅzÀÄ £ÀA©PÉAiÉÄÃ!ªÀÄPÀ̽UÉ vÀAzÉAiÀÄ vÁ¬ÄAiÀÄ ªÉÄÃ¯É £ÀA©PÉ,vÁ¬Ä vÀAzÉUÉ ªÀÄPÀ̼À ªÉÄÃ¯É £ÀA©PÉ.AiÀiÁªÁUÀ ¥ÀgÀ¸ÀàgÀgÀ £ÀA©PÉUÀ¼ÀÄ ªÀÄÄjzÀÄ ºÉÆÃUÀÄvÀÛªÉ £ÉÆÃr,DUÀ ºÀÈzÀAiÀÄ WÁvÀÄPÀvÉUÉ M¼ÀUÁUÀÄvÀÛzÉ.ªÀÄ£À¸ÀÄ MqÉzÀ PÀ£ÀßrAiÀÄAvÉ ¥ÀÄr¥ÀÄrAiÀiÁUÀÄvÀÛzÉ.MªÉÄä ªÀÄÄjzÀ ªÀÄ£À¸ÀÄì ªÀÄvÉÛ PÀÆrgÀĪÀÅzÀÄ EwºÁ¸ÀzÀ°èAiÉÄà E®è.PÀ¥ÀnUÀ¼ÀÄ DvÀäªÀAZÀ£É¬ÄAzÀ fë¸ÀÄvÁÛgÉ,CªÀjUÉ ªÀÄ£À¸ÉìA§ÄzÀÄ EgÀĪÀÅ¢®è.ªÀÄ£À¸ÀÄì ªÀÄvÀÄÛ DvÀäªÀAZÀ£ÉAiÀÄ ¥ÀjPÀ®à£É EgÀzÀªÀjUÉ £ÀA©PÉ «±Áé¸ÀUÀ¼À CUÀvÀå«®è.CªÀgÀÄ ¥À±ÀÄ«£ÀAvÉ d¤ä¹ ¥À±ÀÄ«£ÀAvÉ ªÀÄgÀt¹ ºÉÆÃUÀÄvÁÛgÉ.CªÀgÀ fêÀ£ÀªÀÇ ¥ÀÆuÁðªÀ¢ü zÀÄUÀðAzsÀ¢AzÀ PÀÆrgÀÄvÀÛzÉ.CAvÀºÀ d£ÀgÀ£ÀÄß ¤ÃªÀÇ £ÉÆÃrgÀÄwÛÃj.F £ÀA©PÉ,«±Áé¸À,¨sÀgÀªÀ¸É,¦æÃw ¸ÉßúÀUÀ¼ÀÄ ¸ÀÆPÀëöäUÁ» ªÀÄ£À¸ÀÄìUÀ¼À ¸ÀAªÉÃzÀ£ÉUÀ¼ÀÄ.¸ÀÆPÀëöä ªÀÄ£À¹ìUÀ  E£ÉÆߧâgÀ£ÀÄß £ÉÆìĸÀĪÀ,«±Áé¸ÀWÁvÀÄPÀ PÉ®¸À ªÀiÁqÀĪÀ PÀÈvÀåPÉÌ AiÀiÁªÀwÛUÀÆ ªÀÄÄAzÁUÀĪÀÅ¢®è.DvÀ £ÀA©PÉAiÀÄ£ÀÄß DzsÀj¹ fë¸ÀÄvÁÛ£É.

¨sÁgÀwÃAiÀÄ ªÀÄ£À¸ÀÄìUÀ¼À°è zsÁ«ÄðPÀ ¨sÁªÀ£ÉUÀ¼À£ÀÄß vÀÄA§®ànÖgÀĪÀÅzÀÄ ªÀÄ£ÀĵÀå ¸ÀAªÉÃzÀ£Á²Ã® ªÀÄ£À¹ì¤AzÀ fë¸À° JAzÀÄ.CAzÀgÉ ¸ÀÆPÀëöä ªÀÄ£À¸ÀÄì,¨sÁªÀÅPÀvÉ EgÀĪÀ ªÀÄ£À¸Àì£ÀÄß ¸ÀȶָÀĪÀÅzÀÄ £ÀªÀÄä ¥ÀÆ«ðPÀgÀ GzÉÝñÀªÁVgÀ¨ÉÃPÀÄ.zÉêÀgÀ£ÀÄß ¸ÀÄPÉÆêÀÄÄ®,¸ÀªÀðUÀÄt ¸ÀA¥À£Àß,¥ÉæêÀĪÀÄÆwð,zÀAiÉÄ,PÀgÀÄuÉ,±ÀgÀuÁUÀvÀ gÀPÀëPÀ,¨sÀPÀÛgÀ PÀ®àªÀÈPÀë JA©vÁå¢ ¨sÁªÀ£ÉUÀ½AzÀ awæ¹zÀÄÝ D UÀÄtUÀ¼À£ÀÄß ªÀÄ£ÀĵÀå£ÀÆ C¼ÀªÀr¹PÉƼÀî° JAzÀÄ.zÉêÀgÀ£ÀÄß ¸ÀȶֹgÀĪÀÅzÀgÀ »£É߯ÉAiÀÄ°è MAzÀÄ GvÀÛªÀÄ ¸ÀªÀiÁdzÀ PÀ£À¹£À ¤ªÀiÁðtzÀ GzÉÝñÀ«gÀĪÀÅzÀÄ CvÀåAvÀ ¸ÀàµÀÖ.F zÉêÀgÀÄ ªÀÄvÀÄÛ zÉʪÀvÀéªÀ£ÀÄß UÁqsÀªÁzÀ £ÀA©PɬÄAzÀ ªÀiÁvÀæ PÁt§ºÀÄzÀÄ JAzÀÄ ºÉüÀ¯ÁVzÉ.£ÀA©zÀªÀjUÉ zÉêÀgÀÄ PÁt¸ÀÄvÁÛ£ÀAvÉ,ªÀÄÄAzÀĪÀgÉzÀÄ £ÀA©PÉAiÉÄà zÉêÀgÀÄ J£ÀÄߪÀÅzÀÄ £À£Àß ¥Àæw¥ÁzÀ£É.PÀ°è£À°è zÉêÀgÀ£ÀÄß PÁtÄvÀÛzÉ ¨sÁgÀvÀzÀ »AzÀÆ zsÁ«ÄðPÀ ªÀÄ£À¸ÀÄì.PÀ°è£À ªÉÄÃ¯É UÁqsÀªÁzÀ £ÀA©PÉ EqÀĪÀÅzÀjAzÀ PÀ®Æè zÉêÀgÁUÀÄvÀÛzÉ.£ÀA©PÉ EqÀĪÀÅzÀÄ JAzÀgÉ ¸ÀA§A¢ü¹zÀ «µÀAiÀÄzÀ ªÉÄÃ¯É KPÁUÀæ£ÁUÀĪÀÅzÀÄ JAzÀxÀð.zÀÄgÁzÀȵÀÖªÉãÉAzÀgÉ AiÀiÁªÀ ¸ÀzÀÄÝzÉÝñÀ¢AzÀ zÉêÀgÀ£ÀÄß zÉʪÀvÀéªÀ£ÀÄß ¸ÀȶָÀ¯Á¬ÄvÉÆà C¢ªÀvÀÄÛ ªÀiËqsÀªÁV,ªÁå¥ÁgÀªÁV §zÀ¯ÁVzÉ.dUÀwÛ£À §ºÀÄzÉÆqÀØ DyðPÀvÉ zÉêÀgÀ ªÉÄÃ¯É ¤AwzÉ.¨sÁgÀvÀzÀ SÁåvÀ zÉêÀ¸ÁÜ£ÀUÀ¼ÀĪÀÄvÀÄÛ zÉêÀgÀÄUÀ¼ÀÄ MAzÀÄ gÁdåªÀ£ÀÄß ªÀÄÄ£ÉßqɸÀĪÀ DyðPÀvÉAiÀÄ£ÀÄß ºÉÆA¢ªÉ.ªÀÄÄUÀÞgÀÄ,C£ÉÃPÀ ªÀiÁ£À¹PÀ ¸ÀªÀĸÉåUÀ½AzÀ £ÀgÀ¼ÀÄwÛgÀĪÀ ªÀÄ£À¸ÀÄìUÀ½UÉ zÉêÀgÉà zÉÆqÀØ OµÀ¢ü.F PÁgÀtPÉÌ zÉêÀgÀ CUÀvÀå dUÀwÛUÉ EzÉ.DzÀgÉ zÉêÀjAzÀ ªÀÄ£ÀĵÀå¤UÉ G¥ÀAiÉÆÃUÀUÀ¼ÁUÀ¨ÉÃPÀÄ JAzÀgÉ UÁqsÀªÁzÀ £ÀA©PÉ ¨ÉÃPÀÄ.¨sÀQÛ JAzÀgÉ £ÀA©PÉAiÀÄ£ÀÄß gÀÆrü¹PÉƼÀÄîªÀ vÁ°ÃªÀÄÄ!

£Á£ÀÄ DUÁUÀ £À£Àß UɼÉAiÀÄjUÉ ºÉüÀÄwÛgÀÄvÉÛãÉ,£ÀA©PÉAiÉÄà JnJA JAzÀÄ!ºËzÀÄ,£ÁªÀÅ £ÀA§§ºÀÄzÁzÀ ªÀåQÛUÀ¼ÁVzÀÝgÉ,£ÁªÀÅ £ÀA©PÉAiÀÄ£ÀÄß PÁ¥ÁqÀĪÀ ªÀåQÛUÀ¼ÁVzÀÝ°è dUÀwÛ£À J®ègÀ ¨ÁåAPï SÁvÉUÀ¼ÀÆ £ÀªÀÄä ¥Á°UÉ JnJA ªÉĶ£ïUÀ¼ÀÄ.£ÁªÀÅ §zÀÄPÀĪÀÅzÀ£ÀÄß £ÀA©PÉ J£ÀÄߪÀ ¥ÀzÀzÀ CxÀð PÀAqÀÄPÉƼÀÄîªÀÅzÀgÉÆA¢UÉ ªÀÄvÀÛzÀ£ÀÄß gÀÆrü¹PÉƼÀÄîªÀÅzÀgÉÆA¢UÉ DgÀA©ü¸À¨ÉÃPÀÄ.

M§â PÀqÀĪÀÄÆRð d£ÀgÀ£ÀÄß £ÀA©¸ÀĪÀ ªÀÄÆ®PÀ gÁdQÃAiÀÄ ZÀÄPÁÌt »rAiÀÄÄvÁÛ£É,DvÀ gÁdPÁgÀtÂAiÀiÁUÀÄvÁÛ£É.gÁd£ÀÆ DUÀÄvÁÛ£É.M§â ªÁå¥Áj vÀ£Àß ¸ÀgÀQ£À §UÉÎ UÁæºÀPÀ¤UÉ £ÀA©PÉ ºÀÄnÖ¸ÀÄvÁÛ£É,DvÀ ¸ÀA¥ÀwÛ£À MqÀAiÀÄ£ÁUÀÄvÁÛ£É.M§â ¨Á¨Á zÉêÀgÀ°è £ÀA©PÉAiÀÄ£ÀÄß ªÀÄÆr¸ÀĪÀ ªÀÄÆ®PÀ vÀ£Àß C£ÀÄAiÀiÁ¬ÄUÀ¼À£ÀÄß ¸ÀȶֹPÉƼÀÄîvÁÛ£É.JgÀqÀÄ ªÀÄ£À¸ÀÄìUÀ¼ÀÄ £Á®ÄÌ UÉÆÃqÉUÀ¼À ªÀÄzsÉå PÀÆr ¨Á¼ÀÄvÀÛªÉ JAzÀgÉ D JgÀqÀÄ ªÀÄ£À¸ÀÄìUÀ¼À ªÀÄzsÉå £ÀA©PÉ EgÀÄvÀÛzÉ.ªÀÄUÀ¼À£ÀÄß M§â vÀAzÉ zÀÆgÀzÀ Hj£À°è ªÀ¸ÀwUÀȺÀzÀ°è N¢¸ÀÄwÛzÁÝ£É JAzÀgÉ DvÀ ªÀÄUÀ¼À ªÉÄÃ¯É UÁqsÀªÁzÀ £ÀA©PÉ EnÖgÀÄvÁÛ£É.fêÀªÀiÁ£ÀzÀ zÀÄrªÉÄAiÀÄ£ÀÄß ªÀÄPÀ̼À ªÉÄÃ¯É ºÀÆqÀĪÀ ¥Á®PÀgÀÄ E½UÁ®zÀ°è CªÀgÀ D¸ÀgÉAiÀÄ £ÀA©PÉAiÀÄ£ÀÄß ºÉÆA¢gÀÄvÁÛgÉ.

£ÀA©PÉ J¯Áè PÁ®zÀ®Æè ¹ÜgÀªÁV EgÀzÀÄ,£ÀA©PÉUÀ¼ÀÄ ¹ÜgÀªÁV EgÀĪÀÅzÉà ¤dªÁVzÀÝgÉ ªÀÄ£À¸ÀÄìUÀ¼ÀÄ ¸Àä±Á£ÀªÁUÀÄwÛgÀ°®è.UÉÆÃqÉUÀ¼ÀÄ ©gÀÄPÀÄ ©qÀÄwÛgÀ°®è.ªÀÄPÀ̼À £ÀA©PÉ zÉÆæúÀ vÀAzÉAiÀÄ fêÀ£À,fêÀªÀ£ÀÄß §° ¥ÀqÉAiÀÄÄvÀÛzÉ.CwAiÀiÁV ¦æÃw¹zÀªÀ£ÀÄ PÉÊ©mÁÖUÀ ¦æÃwAiÀÄ PÀÄjvÀÄ EgÀĪÀ £ÀA©PÉ ¸ÀvÀÄÛ ºÉÆÃUÀÄvÀÛzÉ.£ÀA©PÉ ¸ÀvÀÄÛ ºÉÆÃzÀ ªÉÄÃ¯É fêÀ EzÀÝgɵÀÄÖ ©lÖgɵÀÄÖ?

£ÀA©PÉ ¤dPÀÆÌ §ºÀÄzÉÆqÀØ ¥ÀzÀ!

 

                                                ®QëöäÃPÁAvÀ £ÁAiÀÄPÀ


ಶನಿವಾರ, ಆಗಸ್ಟ್ 1, 2020

ಹಜರತ್ ಟಿಪ್ಪು ಅವರವರು ಕಂಡಂತೆ!

ಕಳೆದ ವರ್ಷ ಬರೆದಿದ್ದು,ತೆಲುಗು ಲೇಖನವೊಂದು ಕುತೂಹಲಕಾರಿ ಅನ್ನಿಸಿ ಅನುವಾದಿಸಿದೆ.ಓದಿಕೊಳ್ಳಿ:

ಟಿಪ್ಪುವಿನ ಕುರಿತು ನನ್ನ ಬೆಳಗಿನ ಅನುವಾದದ ಸ್ಪಷ್ಟೀಕರಣ

ಬೆಳಿಗ್ಗೆ ಏನೋ ಬರೆಯಬೇಕು ಅಂದಕೊಂಡೆ.ಸ್ಪೂರ್ತಿ ಹುಟ್ಟಲಿಲ್ಲ.ಮನೆಯಲಿದ್ದರೆ ಎದೆ ಭಾರದ ಹೊರತು ಅಕ್ಷರಗಳು ಮೂಡುವುದಿಲ್ಲ.ಲಹರಿ ಬಾರದೆ ನಾನು ಏನನ್ನೂ ಬರೆಯಲಾರೆ.ಹಾಗೆ ಏನನ್ನಾದರು ಬರೆಯಬೇಕು ಎಂದರೆ ನಾನು ಮನೆ ಆಚೆ ಬರಲೇಬೇಕು.ಏನು ಬರೆಯಬೇಕು?ಬೆರಳ ತುರಿತ ಅಧಿಕವಾಯಿತು.ಆಗ ಕಂಡಿದ್ದೆ ವಿಶ್ವನಾದುಲಾಚಾರ್ಯರ ಒಂದು ಲೇಖನ,ಅವರು ತೆಲಗು ಲೇಖಕರು. ಇತಿಹಾಸದ ಕುರಿತಂತೆ ಅವರ ಬರಹಗಳು ಸತ್ಯಕ್ಕೆ ಹತ್ತಿರ ಇರುತ್ತವೆ.ಇತಿಹಾಸಕ್ಕೆ ಸಂಬಂಧಿಸಿದಂತೆ ಅವರು ಹಲವು ಲೇಖನಗಳನ್ನು ಬರೆಯುತ್ತಿರುತ್ತಾರೆ.ಅದರಲ್ಲಿ ನನಗಿಷ್ಟವಾಗುವ ಲೇಖನಗಳನ್ನು ಆಗಾಗ ಕನ್ನಡಕ್ಕೆ ಅನುವಾದ ಮಾಡುತ್ತಲೇ ಬಂದಿದ್ದೇನೆ.ಈ ಅನುವಾದ ಎನ್ನುವುದು ನನ್ನದೊಂದು ಖಯಾಲಿ,ಅಥವಾ ಚಟ!ತಲೆ ಖಾಲಿ ಇದ್ದಾಗ ನಾನಾ ಕೆಲಸವನ್ನು ಮಾಡುತ್ತೇನೆ.

ಇಂದು ಬೆಳಿಗ್ಗೆ ಕಣ್ಣಿಗೆ ಬಿದ್ದಿದ್ದು ಟಿಪ್ಪುವಿನ ಕುರಿತು ಲೇಖನ.ಅರೆ,ಟಿಪ್ಪುವಿನ ಕುರಿತು ಆಂದ್ರದಲ್ಲೂ ಗಲಭೆ ಗೊಂದಲಗಳಿವೆಯಾ ಎಂದು ಕುತೂಹಲ ಮೂಡಿತು.ಇತ್ತ ಕೇರಳಿಗರು ಆತನೆಂದರೆ ಕೆರಳುತ್ತಾರೆ.ಇತ್ತೀಚಿನ ದಿನಗಳಲ್ಲಿ ಟಿಪ್ಪು ಒಂದು ನಕಾರಾತ್ಮಕ ಪಾತ್ರವಾಗಿ ಸಾಮಾಜಿಕ ಶಾಂತಿ ಕದಡುವ ಒಂದು ಘಟನೆಯಾಗಿ ನಾಡನ್ನು ಕಾಡಿತು.ಚುನಾವಣೆ ರಾಜಕೀಯಕ್ಕೋ ಮತ್ತಾವುದೋ ಸ್ವಾರ್ಥಕ್ಕೊ ಯಾವ ಪ್ರಸ್ತಾವನೆಯೂ ಇಲ್ಲದ ಇಸ್ಲಾಂ ಧರ್ಮ ಒಪ್ಪದ ಜಯಂತಿಯನ್ನು ನಮ್ಮ ಸಿದ್ದರಾಮಯ್ಯನವರು ತಂದು ಬಿಟ್ಟರು.ಅಲ್ಲಿಂದ ಟಿಪ್ಪುವಿನ ಸ್ವರೂಪವೇ ಬದಲಾಯಿತು.ಇತಿಹಾಸ ವಿಲಕ್ಷಣ ನರ್ತನಗೈಯಿತು.ಟಿಪ್ಪು ಹಲವು ಆರೋಪ,ಹಲವು ರೂಪಗಳಿಂದ ಪ್ರತ್ಯಕ್ಷನಾದ.ಟಿಪ್ಪುವಿನನ್ನು ದೇಶಪ್ರೇಮಿ ಎಂದರು;ರಾಕ್ಷಸ ಎಂದರು;ಮತೋನ್ಮಾದಿ ಎಂದರು;ಟಿಪ್ಪುವಿನ ಕುರಿತು ಪುಂಖಾನುಪುಂಖವಾಗಿ ಲೇಖನಗಳು,ಪುಸ್ತಕಗಳು ಬಂದವು.ಸ್ಪರ್ಧೆಗೆ ಬಿದ್ದಂತೆ ಎಡ ಬಲ ವಾದಗಳು ಮಂಡನೆಯಾದವು.ಕೆಲವು ಕಡೆ ರಕ್ತಪಾತಗಳೂ ನಡೆದವು.ಟಿಪ್ಪು ವಿವಿಧ ರೀತಿಯಲ್ಲಿ ತನ್ನ ಜಯಂತಿಯನ್ನು ಆಚರಿಸಿಕೊಂಡ!fine!ಅನುವಾದ ಮಾಡತೊಡಗಿದೆ.

ಆ ತೆಲುಗು ಲೇಖನವೂ ಟಿಪ್ಪುವಿನನ್ನು ಕ್ರೂರಿಯನ್ನಾಗಿ ಬಿಂಬಿಸಿತು.unfortunately ನಾನದನ್ನು ಶೇರ್ ಮಾಡಿದೆ.ಕೆಲವು ಮುಸ್ಲಿಂ ಸ್ನೇಹಿತರು ನೊಂದುಕೊಂಡರು,ನಾನು ಜಾತಿವಾದಿ ಧರ್ಮವಾದಿ,ಇಸ್ಲಾಂ ವಿರೋಧಿ ಎನ್ನುವಂತೆ ಕೆಲವು ಟೀಕೆ ಟಿಪ್ಪಣಿಗಳು ಬಂದವು.ನಾನು ಯಾವುದೂ ಅಲ್ಲ.ಟಿಪ್ಪುವಿನ ಬಗ್ಗೆ ನನಗೇನು ಗೊತ್ತಿಲ್ಲ.ಟಿಪ್ಪುವಿನ ಕುರಿತು ಓದಿಲ್ಲ.ಯಾವಾಗಲೋ ಬಾಲ್ಯ ಕಾಲದಲ್ಲಿ ಒಂದು ಪಾಠ ಇದ್ದದ್ದು ನೆನಪು.ಟಿಪ್ಪುವಿನನ್ನು ಮೇಷ್ಟ್ರು ಮೈಸೂರು ಹುಲಿ ಎಂದು ಹೇಳಿದ್ದು ನೆನಪು,ಹುಲಿಯನ್ನು ಸೀಳುತ್ತಿರುವ ಫೋಟದ ನೆನಪು.ಅಷ್ಟು ಬಿಟ್ಟರೆ ನನಗೇನು ಗೊತ್ತಿಲ್ಲ.

ಇನ್ನು ಸ್ವಾತಂತ್ರ್ಯದ ವಿಷಯಕ್ಕೆ ಬರುವುದಾದರೆ ಅದರ ಕಾವು ಏರಿದ್ದು ಹತ್ತೊಂಬತ್ತನೆಯ ಶತಮಾನದಲ್ಲಿ. ೧೮೫೭ರಲ್ಲಿ ಸ್ವಾತಂತ್ರ್ಯದ ಮೊದಲ ಕಿಡಿ ಹತ್ತಿತಾದರೂ ಅದು ಸ್ವಾತಂತ್ರ್ಯದ ಸ್ವರೂಪವನ್ನು ಹೊಂದಿರಲಿಲ್ಲ.ದನದ ಕೊಬ್ಬಿನಿಂದ ಮತ ಕಲಹ ಸೃಷ್ಟಿಸುವ ಇಂಗ್ಲಿಷ್ ಕುತಂತ್ರದಿಂದ ಹುಟ್ಟಿದ ಸಿಪಾಯಿ ದಂಗೆ ಅದು.ಭಾರತವನ್ನು ಇಡಿ ಇಡಿಯಾಗಿ ಬ್ರಿಟೀಷರು ಆಕ್ರಮಿಸಿಕೊಂಡ ಮೇಲೆ ಬದುಕಲಿಕ್ಕೆ ತೀರಾ ಕಷ್ಟ ಅನ್ನಿಸಿದಾಗಲೇ ಇಲ್ಲಿನ ಸಂಸ್ಥಾನಗಳ ರಾಜರ ಅಂಡು ಉರಿದಿದ್ದು.ಇದಕ್ಕೂ ಮುನ್ನ ಬ್ರಿಟಿಷರ ವಿರುದ್ಧ ಯಾರೂ ಧ್ವನಿ ಎತ್ತಿರಲಿಲ್ಲ;ಬ್ರಿಟಿಷರ ಆಮಿಷಕ್ಕೆ ನೆರೆಯ ದೊರೆಗಳನ್ನು ಬ್ರಿಟಿಷರೊಂದಿಗೆ ಕೈಗೂಡಿಸಿ ಷಡ್ಯಂತ್ರ ಮಾಡಿ ನಾಶ ಮಾಡಿದ್ದೆ ಹೆಚ್ಚು.ಬ್ರಿಟಿಷರು ಭಾರತದ ಮುಗ್ದ ನಾಗರಿಕರಿಗೆ ಏನನ್ನೂ ಮಾಡಲಿಲ್ಲ.ಸಂಸ್ಥಾನಗಳನ್ನು ವಶ ಮಾಡಿಕೊಳ್ಳುತ್ತಾ,ತಮ್ಮ ವ್ಯಾಪಾರವನ್ನು ವೃದ್ಧಿಸುತ್ತಾ ಹೋದರು.ಅದರ ಜೊತೆಗೆ ಸಾರಿಗೆ ವ್ಯವಸ್ಥೆ ಮತ್ತು ಶಿಕ್ಷಣವನ್ನೂ ತಂದರು.ಆಳುವವನು ಮಾಡಬೇಕಾದ ಕೆಲಸವನ್ನು ಮಾಡಲೇಬೇಕಿತ್ತು.ಅದು ಬ್ರಿಟೀಷರಾದರೇನು,ಈ ದೇಶದ ರಾಜರಾದರೇನು?ಭಾರತವೆನ್ನುವ ಭೌಗೋಳಿಕ ಚೌಕಟ್ಟಿನ ಒಳಗಿನ ಹಲವು ದೇಶಗಳು ಬ್ರಿಟಿಷರ ಪಾಲಾದ ಮೇಲೆಯೇ ಬ್ರಿಟಿಷರ ವಿರುದ್ಧ ದಂಗೆಗಳು,ಹೋರಾಟಗಳು,ಸ್ವಾತಂತ್ರ್ಯದ ಹೆಸರಿನಲ್ಲಿ ಕಗ್ಗೊಲೆಗಳು ಮೊದಲಾದವು.ಅವುಗಳ ಪೈಕಿ ಮುಂಚೂಣಿಯ ಹೆಸರುಗಳೆ ರಾಜಾ ವೆಂಕಟಪ್ಪ ನಾಯಕ,ಶಿವಾಜಿ,ಝಾನ್ಸಿ ರಾಣಿ ಲಕ್ಷ್ಮೀಬಾಯಿ,ಇದಕ್ಕೂ ಮುನ್ನ ಟಿಪ್ಪುಸುಲ್ತಾನ...ಹೀಗೆ.

ನನ್ನ ಕಟ್ಟ ಕಡೆಯ ಪ್ರಶ್ನೆ ಎಂದರೆ ಇವರೆಲ್ಲಾ ಹೇಗೆ ದೇಶಪ್ರೇಮಿ ಹೋರಾಟಗಾರರಾಗುತ್ತಾರೆ,ದೇಶ ಎನ್ನುವ ಪರಿಕಲ್ಪನೆ ಇಲ್ಲದ ಹೊತ್ತಿನಲ್ಲಿ?

ಆಗಿನ ಯುದ್ಧಗಳ ಉದ್ದೇಶ ಲೂಟಿ,ಲೂಟಿ,ಲೂಟಿ!ಹಣವನ್ನು ಲೂಟಿ ಮಾಡುವುದು,ದವಸ ಧಾನ್ಯಗಳನ್ನು ಲೂಟಿ ಮಾಡುವುದು,ಸುಂದರವಾದ ಹೆಂಗಸರನ್ನು ಲೂಟಿ ಮಾಡುವುದು;ಅಂತಿಮವಾಗಿ ಲೂಟಿ ಮಾಡುವುದು.ಆಗಿನ ಅಲ್ಪಸ್ವಲ್ಪ ಜನ ಸಂಖ್ಯೆಯ ಗುಡ್ಡ ಗಾಡಿನ ಮೇಲೆ ಕೋಟೆ ಕಟ್ಟಿಕೊಂಡು ರಾಜರೆಂದುಕೊಂಡ ಜನ ಲೂಟಿಕೋರರೆ!

ಯಾರು ದೇಶಭಕ್ತರು,ಯಾರು ಹೋರಾಟಗಾರರು,ಯಾರು ಸ್ವಾತಂತ್ರ್ಯ ಆಕಾಂಕ್ಷೆಗಳು?

ಮೈಡಿಯರ್ ಫ್ರೆಂಡ್ಸ್,ಬೆಳಗಿನ ನನ್ನ ಅನುವಾದ ನನ್ನ curiosityಗೆ ಬರೆದಿದ್ದು.ಅದರ ಹಿಂದೆ ದ್ವೇಷವಿಲ್ಲ.ನನಗೆ ಹಿಂದೂ ಬೇಕಿಲ್ಲ.ಮುಸ್ಲಿಂ ಬೇಕಿಲ್ಲ.

ಬೇಕಿರುವುದು ಸ್ವಸ್ಥ ಸಮಾಜ,ಸ್ನೇಹಮಯವಾದ ಸಮಾಜ,ಮಾನವೀಯ ಮೌಲ್ಯಗಳ ಒಂದು ಅದ್ಬುತ ಸಮಾಜ.

ಅಷ್ಟೇ..

ಇತಿಹಾಸಕ್ಕೆ ನಾನಾ ಮಗ್ಗಲುಗಳು ಇರುತ್ತವೆ,ಅದರ ಒಂದು ಭಾಗ ಇದು.ಇದನ್ನು ಸತ್ಯ ಎಂದು ದೃಢೀಕರಿಸಲಾರೆ.ಸುಮ್ಮನೆ ಓದಿ.ಇದು ತೆಲುಗು ಲೇಖಕರೊಬ್ಬರ ಬರಹ,ನಾನು ಯಥಾರೀತಿ ಅನುವಾದಿಸಿದ್ದೇನಷ್ಟೆ.ಟಿಪ್ಪುವಿನ ಕುರಿತು,ಭಾರತದ ನೈಜ ಇತಿಹಾಸದ ಕುರಿತು ನಾನಿನ್ನೂ ಓದಬೇಕಿದೆ.ವಾದ-ವಿವಾದ-ಟೀಕೆಗಳು ಬೇಡ.

ಟಿಪ್ಪು ಭಕ್ತರಿಗೊಂದು ಸಂದೇಶ

ಓಪ್ಪು ಸುಲ್ತಾನನ ಕಡು ಘೋರ ಕೃತ್ಯಗಳು...ಇಂಥಹ ನೀಚನಿಗೆ ಜಯಂತಿ ಮತ್ತು ಉತ್ಸವಗಳನ್ನು ನಡೆಸುವ ನಡೆಸುತ್ತಿರುವವರನ್ನು ದೇಶದ್ರೋಹಿಗಳು ಎನ್ನಬೇಕೋ ಏನನ್ನಬೇಕೋ?ಅವನು ನಡೆಸಿದ ಕ್ರೂರಕೃತ್ಯಗಳನ್ನು ಒಂದು ಸಾರಿ ನೋಡೋಣ:

1)ಕಿತ್ತೂರ ಚೆನ್ನಮ್ಮಾ ರಾಜ್ಯದಲ್ಲಿ ಮತಾಂತರಗೊಳ್ಳದ ನಲವತ್ತು ಸಾವಿರ ಜನರ ತಲೆಗಳನ್ನು ಕಡಿಸಿದ್ದಾನೆ.
2)ಕೇರಳದಲ್ಲಿ ಮತಾಂತರವಾಗದ ಹತ್ತು ಸಾವಿರ ಬ್ರಾಹ್ಮಣರಿಗೆ ಬಲವಂತವಾಗಿ ಸುನ್ನಿ ಮಾಡಿಸಿದ್ದಾನೆ.
3)ಹಿಂದೂ ಸ್ತ್ರೀಯರನ್ನು ಸಾಕಷ್ಟು ಅನುಭವಿಸಿ ನಂತರ ಸೈನಿಕರಿಗೆ ಅನುಭವಿಸಲು ಬಹುಮಾನವಾಗಿ ನೀಡುತ್ತಿದ್ದ.
4)ಇಪ್ಪತ್ತು ವರ್ಷಗಳ ಯುವಕರ ಬೀಜಗಳನ್ನು ತೆಗೆದು ನಪುಂಸಕರನ್ನಾಗಿಸುವ ವಿಲಕ್ಷಣ ಖಯಾಲಿ ಅವನಿಗಿತ್ತು.ಸಲಿಂಗಿ ಕಾಮಿ ಅವನು.
5)ಕರ್ನಾಟಕದ ಕೊಡುಗು ಹಿಂದುಗಳನ್ನು ಕತ್ತು ಕೊಯ್ದು ಕೊಂದಿದ್ದಾನೆ.
6)ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು ಟಿಪ್ಪುವಿನ ತಂದೆ ಹೈದರಾಲಿ ಲೂಟಿ ಮಾಡಿದ್ದಾನೆ.
7)ಕೊಡುಗು ಹಿಂದೂ ಸ್ತ್ರೀಯರ ಅಂಗಾಂಗಳನ್ನು ಕತ್ತರಿಸಿದನು ಟಿಪ್ಪು ಸುಲ್ತಾನ್
8)ಕೈಗಳನ್ನು ಮೇಲಕ್ಕೆತ್ತಿಸಿ ಕುಂಕಳ ಕೂದಲು ಕಾಣಿಸದ ಪ್ರತಿ ಹಿಂದೂ ಬಾಲಕರನ್ನು ಕೊಂದ ಪರಮ ದುರ್ಮಾಗಿ ಈ ಟಿಪ್ಪು.
9)ಕರ್ನಾಟಕ ರಾಜ್ಯದಲ್ಲಿ ಮೇಲುಕೋಟೆ ಪ್ರಾಂತ್ಯದಲ್ಲಿ ಪವಿತ್ರವಾದ ದೀಪಾವಳಿ ಹಬ್ಬದ ದಿನ 800 ಮಂದಿ ವೇದ ಪಂಡೀತರನ್ನು,ಚಿಕ್ಕ ಮಕ್ಕಳನ್ನು,ಮಹಿಳೆಯರನ್ನು,ಅತ್ಯಂತ ದಾರುಣವಾಗಿ ಕುತ್ತಿಗೆಯ ನಾಳ ಕತ್ತರಿಸಿ ಹತ್ಯ ಮಾಡಿದ್ದಾನೆ ಟಿಪ್ಪು ಸುಲ್ತಾನ,ಇದಕ್ಕೆ ನಿದರ್ಶನವಾಗಿ ಮೇಲುಕೋಟೆ ಪ್ರಾಂತ್ಯದಲ್ಲಿ ಹಿಂದುಗಳು ದೀಪಾವಳಿ ಹಬ್ಬವನ್ನು ಆಚರಿಸುವುದಿಲ್ಲ.ಅದೊಂದು ಕರಾಳ ನೆನಪಾಗಿ ಉಳಿದಿದೆ.ಕರ್ನಾಟಕ,ಕೇರಳ ಪ್ರಾಂತ್ಯಗಳಲ್ಲಿ ಸರಾಸರಿ ಲಕ್ಕಕ್ಕೂ ಮೇಲ್ಪಟ್ಟು ಅಮಾಯಕ ಹಿಂದುಗಳನ್ನು ಅತ್ಯಂತ ದಾರುಣವಾಗಿ ಕ್ರೂರವಾಗಿ ಹತ್ಯೆಗಳನ್ನು ಮಾಡಿದ್ದಾನೆ ಮುಸ್ಲಿಂ ಮತೋನ್ಮಾದಿ ಟಿಪ್ಪು ಸುಲ್ತಾನ್ ಸಾವಿರಾರು ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿ ದೇವಸ್ಥಾನಗಳಲ್ಲಿರುವ ಸಂಪತ್ತು ಮತ್ತು ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾನೆ. ಮತ್ತು ಅವುಗಳನ್ನು ಮಸೀದಿಯನ್ನಾಗಿ ಮಾರ್ಪಡಿಸಿದ್ದಾನೆ.
ಇತಿಹಾಸವನ್ನು ಹಿಂದೂ ವ್ಯತಿರೇಕವಾಗಿಬರೆದ ಕೆಲ ಸಂಘಟನೆಗಳಿಗೆ ಟಿಪ್ಪು ಚರಿತ್ರೆ ಬಹುದೊಡ್ಡ ಉದಾಹರಣೆಯಾಗಿದೆ.ಟಿವಿಯಲ್ಲಿ ಬರುವ ಧಾರಾವಾಹಿಯನ್ನು ನೋಡಿದ ಜನ ಟಿಪ್ಪು ಸುಲ್ತಾನನ್ನು ದೊಡ್ಡ ದೇಶಭಕ್ತನನ್ನಾಗಿ,ಕರುಣಾಳು ದೊರೆಯನ್ನಾಗಿ ಭಾವಿಸುತ್ತಾರೆ.ಜಾತ್ಯಾತೀತವಾದಿಗಳು ಜನರನ್ನು ಆ ಭ್ರಮೆಯೊಳಗೆ ಮುಳುಗಿಸಿದ್ದಾರೆ.ಟಿಪ್ಪುವಿನ ಕತ್ತಿಯ ಮೇಲೆ ಏನು ಬರೆಯಲಾಗಿದೆಯೋ ಒಂದು ಸಾರಿ ಓದಿರಿ: “ಕಾಫೀರರನ್ನು ಅಟ್ಟಾಡಿಸಿ ಕೊಂದ ಮುಸ್ಲಿಂ ವೀರ”ಅಂತ ಬರೆದಿದೆ!(ಕಾಫೀರರು ಎಂದರೆ ಇಸ್ಲಾಂ ಭಾಷೆಯಲ್ಲಿ ಹಿಂದುಗಳು ಅಂತ ಅರ್ಥ)

(ಟಿಪ್ಪುವಿನ ಹತ್ತಿರ ಹಿಂದೂ ಮಂತ್ರಿ ಹೇಗೆ ಕೆಲಸ ಮಾಡಿದ್ದಾರೋ ಎನ್ನುವುದನ್ನು ಕೇಳುವವರು ಒಂದು ಸಲ ಪಿ.ಚಿದಂಬರಂ,ಡಿಗ್ಗಿ ರಾಜಾನನ್ನು ಕೇಳಿರಿ,ಇಟಲಿ ಪರವಾರದಲ್ಲಿ ಅವರೇಗೆ ಕೆಲಸ ಮಾಡುತ್ತಾರೆ ಅವರಿಗೆ ಚೆನ್ನಾಗಿ ಗೊತ್ತು.ಕುತರ್ಕಿಗಳು ಎಲ್ಲಾ ಕಾಲಗಳಲ್ಲೂ ಇರುತ್ತಾರೆ)
       
                                 ಲಕ್ಷ್ಮೀಕಾಂತ ನಾಯಕ

ಗುರುವಾರ, ಜುಲೈ 23, 2020

ಪ್ರಜ್ಞಾಹೀನ ಯುವಶಕ್ತಿಯೂ ಕಳಪೆ ಮತದಾರನು!

ಪ್ರಜ್ಞಾಹೀನ ಯುವಶಕ್ತಿಯೂ ಕಳಪೆ ಮತದಾರನು!

 

ಅದು ಭವ್ಯ ಭಾರತದ ಒಂದು ಹಳ್ಳಿ,ತಟ್ಟಿಯಿಂದ ಮಾಡಿಕೊಂಡ ಒಂದು ಹೋಟಲ.,ಚಹಾ,ಒಗ್ಗಾಣಿ,ಬಜಿ,ಖಾರ ಇತ್ಯಾದಿಗಳನ್ನು ಅಲ್ಲಿ ಮಾರುತ್ತಾರೆ,ಮನುಷ್ಯರಿಗಿಂತ ನೊಣ ಹೆಚ್ಚಿರುವ ಜಾಗವದು!ವಿಪರೀತವಾದ ಸಕ್ಕರೆಯನ್ನು ಅಲ್ಪ ಚಹಾಪುಡಿಯೊಂದಿಗೆ ಕೊಡ ನೀರಿನಲ್ಲಿ ಕುದಿಸಿದ ಚಹಾ ಎನ್ನುವ ದ್ರವ ಹೆಚ್ಚು ಮಾರಾಟವಾಗುವ ಸ್ಥಳ ಅದಾಗಿದ್ದರಿಂದ ಮತ್ತು ಆ ಪಾನಕ ಯಥೇಚ್ಛವಾಗಿ ಎಲ್ಲೆಂದರಲ್ಲಿ ಚೆಲ್ಲಾಡಿದ್ದರಿಂದ ನೊಣಗಳು ಗಂವ್ ಅಂತಿರುತ್ತವೆ!ನೀರು ಕುಡಿಯಲಿಕ್ಕೆಂದು ಪ್ಲಾಸ್ಟಿಕ್ ಜಗ್ಗುಗಳನ್ನು ಇಡಲಾಗಿರುತ್ತವೆ,ಅವೂ ನೊಣಗಳಿಂದ ಮುಕ್ಕರಿರುತ್ತವೆ,ಜನ ಏನೂ ಭಾವಿಸುವುದಿಲ್ಲ.ಏಕೆಂದರೆ ಇದರಕ್ಕಿಂತಲೂ ದಾರುಣವಾಗಿ ಅವರ ಮನೆ ಇರುತ್ತದೆ;ಕೆಲ ಜಾತಿಗಳಿಗೆ ಮನೆಯ ಸ್ವಚ್ಚತೆಯ ಕಾಳಜಿ ಇರುತ್ತದೆಯೇ ಹೊರತು ಈ ಕಾಟಿಗರಿಗೆ ಅಥವಾ ನಿಮ್ನ ವರ್ಗಗಳಿಗೆ ಅದರ ಕಾಳಜಿ ಇರುವುದಿಲ್ಲ.ಮನೆಯಲ್ಲಿ ನೊಣಗಳು ಗಂವ್ ಎನ್ನದಿದ್ದರೆ ಯಾವುದೋ ಇಷ್ಟದ ಸ್ವರ ಮಿಸ್ ಮಾಡಿಕೊಂಡ ಫೀಲ್ ಉಂಟಾಗುತ್ತದೆ.ನೊಣಗಳು,ಸೊಳ್ಳೆಗಳು,ಕೋಳಿ ಹೇಲು,ದನದ ಸೆಗಣಿ ಮತ್ತು ಮನೆಯ ಮುಂದೆ ತೆರೆದ ಚರಂಡಿ ಹರಿಯುತ್ತಿದ್ದರೆ ಸ್ವರ್ಗದ ಭಾವನೆ ಮತ್ತು ಸ್ವರ್ಗ ಸುಖದ ಭಾವನೆ ಉಂಟಾಗುತ್ತದೆ;ಅದೇ ಸ್ವರ್ಗ ಸುಖ ಕೂಡಾ!ಅದಾಗಲೇ ಫ್ರೆಶ್ ಆಗಿ ಬಯಲಿನಲ್ಲಿ ಕುಳಿತು ಬಂದ ಸಂಡಾಸು ಭೋಜನೆ ಮಾಡಿಬಂದ ನೊಣ ಮರಳಿ ಮನೆಗೆ ಸಂಡಾಸಿನ ಕಣಗಳನ್ನು ತರದಿದ್ದರೆ ಏನಿದೆ ಜೀವನದಲ್ಲಿ ಉಲ್ಲಾಸ?ಕಾಲರ,ಮಲೇರಿಯಾ,ಕರೋನಾ ಮತ್ತು ಈ ಮೂರರ ಅಪ್ಪ ಬಂದರೂ ಅವರಿಗೆ ಯಾವ ಭಯವಿಲ್ಲ!ಇದು ರೂಢಿಗತ ಗ್ರಾಮೀಣ ಬದುಕು,ಯಾರಾದರೂ ಇಂಥಹ ಬದುಕನ್ನು ನೋಡಲಿಕ್ಕೆ ಇಚ್ಚೆಪಟ್ಟರೆ ನನ್ನ ನಂಬರಿಗೆ ಕರೆ ಮಾಡಿರಿ,ಭೂ ಸ್ವರ್ಗವೆಂದು ಹೇಳಲ್ಪಡುವ ಭಾರತದ ಬದುಕನನ್ನು ನಿಮ್ಮ ಕಣ್ಣಿಗೆ ಕಟ್ಟುವಂತೆ ತೋರಿಸುತ್ತೇನೆ ಮತ್ತು ಉತ್ತಮ ನಿರೂಪಣೆಯನ್ನೂ ಕೊಡುತ್ತೇನೆ.ಆಸಕ್ತರು ಬರಬಹುದು,ಮುಖ್ಯವಾಗಿ ಹವಾನಿಯಂತ್ರಿತ ಕೋಣೆ,ಹವಾನಿಯಂತ್ರಿತ ದುಬಾರಿ ಕಾರಿನಲ್ಲಿ ಕುಳಿತು ಭಾರತ ಭೂ ಸ್ವರ್ಗ ಎಂದು ತೌಡು ಕುಟ್ಟುವವರು ಭಾರತದ ಗ್ರಾಮೀಣ ಜೀವನವನ್ನು ನೋಡಲು ಬರಬಹುದು,ಅಲ್ಲಿ ನಾನಿರುತ್ತೇನೆ,ನನ್ನಂಥವರೆ ಊರಿಗೊಬ್ಬರು ಇರುತ್ತಾರೆ.

ನವದೆಹಲಿಯಿಂದ ಬಂದ ಸುದ್ದಿಯೊಂದನ್ನು ಓದಿದೆ,15ನೇ ಹಣಕಾಸು ಆಯೋಗದ ಶಿಫಾರಸ್ಸಿನ ವರದಿಯನ್ನು ಆಧರಿಸಿದ ಸುದ್ದಿಯದು,ರಾಜ್ಯಕ್ಕೆ ಇದೇ ಮೊದಲ ಬಾರಿ ಗ್ರಾಮ ನೈರ್ಮಲ್ಯಕ್ಕಾಗಿ ಮತ್ತು ನೈರ್ಮಲ್ಯದ ಕುರಿತಿರುವ ಯೋಜನೆಗಳಿಗಾಗಿ ಕೇಂದ್ರ ಸರ್ಕಾರ 804 ಕೋಟಿಗಳನ್ನು ಬಿಡುಗಡೆ ಮಾಡಿದೆ ಎನ್ನುವುದು ಸುದ್ದಿ ಸಾರ.ಇದು ಮೊದಲೇನು ಅಲ್ಲ.ಪ್ರತಿ ವರ್ಷ ಗ್ರಾಮ ನೈರ್ಮಲ್ಯದ ಕುರಿತಿರುವ ಅನೇಕ ಯೋಜನೆಗಳಿಗಾಗಿ ಸರ್ಕಾರಗಳು ಸಾಕಷ್ಟು ಹಣವನ್ನು ಮೀಸಲಿಡುತ್ತವೆ,ಗ್ರಾಮ ಪಂಚಾಯತಿಗಳು ಖರ್ಚು ಮಾಡುತ್ತಲೇ ಇರುತ್ತವೆ,ಕಾಗದಗಳಲ್ಲಿ ಗ್ರಾಮಗಳು ನಿರಮಲವಾಗುತ್ತವೆ,ಸ್ವಚ್ಛವಾಗುತ್ತವೆ,ದೇಶ ಭವ್ಯವಾಗುತ್ತಲೇ ಹೋಗುತ್ತದೆ!ಪಂಚಾಯತ್ ರಾಜ್ ಇಲಾಖೆ ಮತ್ತದರ ಅಂಗ ಸಂಸ್ಥೆಗಳು ನಡೆಸುವ ಭ್ರಷ್ಟಾಚಾರವೇ ರಾಜಕಾರಣಿಯ ಸಂಪತ್ತು ವೃದ್ಧಿಯ ಮೂಲ.ಆ ವಿಷಯದ ಕುರಿತು ಇನ್ನೊಮ್ಮೆ ಬರೆಯೋಣ.

ಚಹಾದ ಅಂಗಡಿಯಲ್ಲಿ ಭವ್ಯ ಭಾರತದ ಯುವಶಕ್ತಿ ಕುಳಿತಿತ್ತು,ಅದು ಘನವಾಗಿತ್ತು,ದೃಢವಾಗಿತ್ತು.ಅದರ ಬಾಯಿ ತುಂಬಾ ದೇಶ ಭಕ್ತಿ ಇತ್ತು,ಅದರ ಸರ್ವ ಅಂಗವನ್ನು ಕೇಸರಿಮಯವಾಗಿಸಿಕೊಂಡಿತ್ತು,ಮತ್ತದು ಪ್ರಾಣಿಯೊಂದರ ಕುರಿತು ಒಲವನ್ನುಹೊಂದಿತ್ತು;ಮಾತಿನ ಮಧ್ಯೆ ದನಕ್ಕಾಗಿ ಮನುಷ್ಯರು ಸತ್ತರೆ ಪಾಡೇನು ಎಂದು ನಾನು ಕೇಳಿದ ಪ್ರಶ್ನೆಗೆ ಅದು ಗಂಭೀರವಾಗಿ ದನಗಳ ಕುರಿತು ಯಾರಿಗೆ ಒಲವು ಇಲ್ಲವೋ ಅವರು ಭೂಮಿಯ ಮೇಲೆ ಬದುಕಲಿಕ್ಕೆ ಅರ್ಹರಲ್ಲ ಎಂದಿತು,ಅದು ಭೂಮಿಯ ಮೇಲಿನ ಎಲ್ಲಾ ಪ್ರಾಣಿಗಳು ಎಂದರೆ ಎತ್ತು,ಎಮ್ಮೆ,ಕರು,ಕುರಿ,ಕೋಳಿ,ನಾಯಿ,ನರಿ,ಪಕ್ಷಿಗಳು ಇತ್ಯಾದಿ ಏನನ್ನೂ ತಿಂದರೆ ಪರವಾಗಿಲ್ಲ,ಆಕಳು ತಿನ್ನಬಾರದು ಎಂದಿತು.ಅದು ಮರೆತಿರುವ ಒಂದು ವಿಷಯವೆಂದರೆ ಭಾರತದ ಜನ ಸಂಖ್ಯೆಯ ಪ್ರತಿಶತ ತೊಂಬತ್ತೆಂಟು ಜನರ ಆಹಾರ ಮಾಂಸಾಹರವೆಂದೂ ಈ ಮಾಂಸಾಹಾರ ಪದ್ಧತಿಯಲ್ಲಿ ಎಲ್ಲಾ ಪ್ರಾಣಿಗಳೂ ಸೇರುತ್ತವೆ ಎಂದೂ ಕೇವಲ ಜನಾಂಗೀಯ ಸಂಘರ್ಷವನ್ನು ಜೀವಂತವಿಡುವ ನಿಟ್ಟಿನಲ್ಲಿ ಕೆಲ ಮಾನಸಿಕ ಅಸ್ವಸ್ಥರು ರಾಜಕೀಯ ಮತ್ತು ಧಾರ್ಮಿಕ ತಮ್ಮ ಹಿತಾಸಕ್ತಿಯ ಕಾರಣಗಳಿಗೆ ಸೃಷ್ಟಿ ಮಾಡಿದ ವಾದ ಎನ್ನುವುದನ್ನು ಅದು ತಿಳಿಯದಾಗಿತ್ತು.ಅದರ ಮೆದುಳಿನಲ್ಲಿ ಸಮಸ್ತ ವೈರಾಣುಗಳನ್ನೂ ತುಂಬಿಕೊಂಡಿದ್ದ ಜೀವಿಯಾಗಿತ್ತು!ಇಂತಿಪ್ಪ ಆ ಯುವಶಕ್ತಿಯೊಂದಿಗೆ ಕೆಲ ಮಾತುಕತೆಯನ್ನು ನಡೆಸುತ್ತಾ ಸದ್ಯ ಕೋವಿಡ್ ಸಂಕಷ್ಟದ ಈ ಸಮಯದಲ್ಲಿ ಕರ್ನಾಟಕ ಆರೋಗ್ಯ ಸಚಿವಾಲಯದ ಭ್ರಷ್ಟಾಚಾರದ ಬಗ್ಗೆ ಮಾತು ಬಂದಿತು,ಸಣ್ಣದಲ್ಲ,ಜನರ ಸಾವಿನ ಭೀತಿಯ ಮೇಲೆ(ಭಯ ಸೃಷ್ಟಿ ಮಾಡಲಾಗಿದೆ) ಸುಮಾರು 2200 ಕೋಟಿ ಹಣವನ್ನು ದುಷ್ಟ ರಾಜಕಾರಣಿಗಳು ತಿಂದು ಹಾಕಿದ್ದಾರಲ್ಲ ಇದರ ಕುರಿತು ಭಾರತೀಯ ಪ್ರಜ್ಞಾವಂತ ಯುವಕನಾಗಿ ನೀನು ಏನು ಹೇಳಲು ಇಷ್ಟ ಪಡ್ತೀಯ ಎಂದೆ,ಆತ ಯಾರು ಭ್ರಷ್ಟಾಚಾರ ಮಾಡುತ್ತಿಲ್ಲ ಹೇಳಿ,ಅಧಿಕಾರಕ್ಕೆ ಬರುವ ಮುನ್ನ ಎಲ್ಲರೂ ಹಾಗೇ ಹೇಳುತ್ತಾರೆ,ರವಿಕೃಷ್ಣಾರೆಡ್ಡಿಯಾಗಿರಬಹುದು ಮತ್ತೊಬ್ಬನಿರಬಹುದು ಎಂದ.ಹೋಗಲಿ ಕಳೆದ ಆರೇಳು ವರ್ಷದಿಂದ ಭಾರತ ಏನಾದರೂ ಬದಲಾಗಿರುವಂತೆ ಕಾಣಿಸುತ್ತಿದೆಯಾ ಎಂದು ಕೇಳಿದೆ,ಈ ಮಧ್ಯೆ ಕಪ್ಪು ಹಣದ ವಾಪಸಾತಿ ಮತ್ತು ಅದರ ನಿಯಂತ್ರಣದ ಕುರಿತು ಪ್ರಾಸ್ತಾಪಿಸುತ್ತಾ.ಕಾಂಗ್ರೇಸ್ಸಿನವರು ಮಾಡಿದ್ದರಲ್ಲಿ(ಭ್ರಷ್ಟಾಚಾರ) ನಮ್ಮ ಸರ್ಕಾರ ಹತ್ತು ಪ್ರತಿಶತವೂ ಮಾಡಿಲ್ಲ ಎಂದ.ನಂತರ ಭ್ರಷ್ಟಾಚಾರ ಸಾಮಾನ್ಯ ಎಂದ,ನೀವು ಮಾಡೋದಿಲ್ಲವಾ ಎಂದು ನನ್ನನ್ನು ಪ್ರಶ್ನಿಸಿದ(ನಾನು ಹರಕು ಅಂಗಿ ಮತ್ತು ಲುಂಗಿಯ ಮೇಲೆ ಅಲ್ಲಿದ್ದೆ,ನನ್ನ ವಸ್ತ್ರಗಳಿಗೆ ಹಾಗಷ್ಟೆ ಮೋಟರ್ ಲಿಫ್ಟ್ ಮಾಡಿದ್ದೆನಲ್ಲಾ ಅದರ ಕಿಲುಮು,ಜಂಗು ಹತ್ತಿತ್ತು).ಕಳ್ಳ ಮಾರ್ಗದಿಂದ ಹಣ ಗಳಿಸುವ ಉದ್ದೇಶ ನನಗಿದ್ದರೆ ನಾನೂ ಕಿವಿಯಲ್ಲಿ ವೈರ್ ಲೆಸ್ ಇಯರ್ ಫೋನ್ ಹಾಕಿಕೊಂಡು,ಮನೆಯಲ್ಲಿ ಏನೂ ಇರದಿದ್ದರೂ ಒಳ್ಳೊಳ್ಳೆ ವಸ್ತ್ರಗಳನ್ನು ಹಾಕಿಕೊಂಡು ಜನರ ಮಧ್ಯೆ ಬಿಲ್ಡಪ್ ಕೊಡುವ ಡೆಮ್ಮಿ ಕಾಲ್ ಮಾಡಿಕೊಂಡು ಇರುತ್ತಿದ್ದೆ ತಮ್ಮಾ ಅಂದೆ,ಮಾತು ಅಲ್ಲಿಗೇ ನಿಂತು ಹೋದವು!ಇದು ಭಾರತದ ಯುವಶಕ್ತಿಯ ಮನಸ್ಥಿತಿ.

ಎಲ್ಲರೂ ಅಂತ ಹೇಳುವುದಿಲ್ಲ,ನೈಂಟಿ ನೈನ್ ಪರ್ಸೆಂಟು ಯುವಕರು ಯಾವುದೋ ಮೂಲದಿಂದ ದೊರೆಯಬಹುದಾದ ಹಣದ ನೀರೀಕ್ಷೆಯಲ್ಲಿದ್ದಾರೆ,ಯಾವುದೋ ಮೂಲ,ಅಂದರೆ ಕಳ್ಳ ಮಾರ್ಗದಿಂದ!ತಮ್ಮ ತಮ್ಮ ಕುಲದ ರಾಜಕೀಯ ನಾಯಕರ ಅಭಿಮಾನಿ ಸಂಘಗಳನ್ನು ಮಾಡಿಕೊಂಡಿರುತ್ತಾರೆ.ಇವತ್ತು ಅಣ್ಣನ ಹುಟ್ಟು ಹಬ್ಬ,ಅಕ್ಕನ wedding annivarsory  ಅಂತ ಅವುಗಳಿಗೆ ಶುಭಾಶಯಗಳ ಬ್ಯಾನರ್ ಸೃಷ್ಟಿ ಮಾಡುತ್ತಾ ವಾಟ್ಸಪ್ ಫೇಸ್ ಬುಕ್ಕುಗಳಲ್ಲಿ ಹಂಚಿಕೊಳ್ಳುತ್ತಾ ಕಾಲಹರಣ ಮಾಡುತ್ತಾರೆ,ಎಮ್ಮೆಲ್ಲೆ,ಜೆಡ್ಪಿ ಮೆಂಬರ್ ಕರೆದು ಒಂದು ಕೆಲಸ ಕೊಡುತ್ತಾನೆ ಇರಿ ಎಂದು ದಾರಿ ಕಾಯುತ್ತಿರುತ್ತಾರೆ.ಅವರೂ ಕರೆದು ಐದು ಲಕ್ಷದ್ದೋ ಹತ್ತು ಲಕ್ಷದ್ದೊ ಒಂದು ಚಿಲ್ಲರೆ ಕಾಮಗಾರಿಯನ್ನು ಕೊಡುತ್ತಾರೆ,ಕೊಡುವ ಮುನ್ನ ಒಂದು ಕೆಲಸ ಮಾಡುತ್ತಾರೆ:ಹತ್ತು ಜನರನ್ನು ತಂಟು ಇಡುತ್ತಾರೆ,ನಾಳೆ ಕಿತ್ತಾಡಿಕೊಂಡು ಸಾಯಲಿ ಎಂದು!ಇಂಥವುಗಳನ್ನು ಸಾಕಷ್ಟು ಉದಾಹರಣೆಗಳನ್ನು ನಾನು ಕಂಡಿದ್ದೇನೆ.

“ಅದೇನದು ನೀರೇ ಇಲ್ಲದ ಬೋರಿನಲ್ಲಿ ಮೋಟರ್ ಅಳವಡಿಸಲು ಕಾಮಗಾರಿ ರೂಪಿಸಿದ್ದೀರಲ್ಲ?”ಎಂದು ಒಬ್ಬ ಸಹಾಯಕ ಇಂಜಿನಿಯರ್ ನನ್ನು ಕೇಳಿದೆ,ಆತ “ಸುಮ್ನಿರಿರಿ,ಅವರು ಶಾಸಕರ ಬೆಂಬಲಿಗರು,ಶಾಸಕರು ಹೇಳಿದ್ದಾರೆ!”ಎಂದ. “ಅಣ್ಣಾ ಹೆಂಗಾನ ಇಪ್ಪತ್ತು ಮೂವತ್ತು ಸಾವಿರ ರೂಪಾಯಿಯಲ್ಲಿ ನೀರು ಎಗರಿಸಿ ಕೊಡಬೇಕು,ಅದು ನಾಲ್ಕೇ ದಿನ ನಡೆದರೆ ಸಾಕು,ಬಿಲ್ ಆಗುವವರೆಗೆ!”ಎಂದ ಒಬ್ಬ ಯುವಕ,ಆತ ಭವ್ಯ ಭಾರತವನ್ನು ಕಟ್ಟುತ್ತೇವೆ ಎನ್ನುವ ಈಗಿರುವ ಸರ್ಕಾರದ ಕಾರ್ಯಕರ್ತ,ಶಾಸಕರ ಅನುಯಾಯಿ,ಅನುಸರಿಸುವ ನಾಯಿ! “ಎಷ್ಟಿದೆ ನಿಗದಿತ ಹಣ?” ಎಂದು ಕೇಳಿದ ಪ್ರಶ್ನೆಗೆ  “ಐದು ಲಕ್ಷ!”ಎಂದು ಉತ್ತರಿಸಿದ, “ತಪ್ಪಲ್ಲವಾ ಇದು?” ಎಂದು ಕೇಳಿದ ಪ್ರಶ್ನೆಗೆ ಕೆಲವು ಹೆಸರುಗಳನ್ನು ಉದಾಹರಿಸುತ್ತಾ “ಅವರು ಕೋಟಿ ಕೋಟಿ ಹಣ ಲೂಟಿ ಮಾಡುತ್ತಿಲ್ಲವಾ?”ಎಂದು ಮರು ಪ್ರಶ್ನೆ ಹಾಕಿದ.ನನ್ನ ಹತ್ತಿರ ದಾಖಲೆಗಳಿಲ್ಲವಾದ್ದರಿಂದ ದೃಢೀಕೃತವಾಗಿ ಬರೆಯುತ್ತಿಲ್ಲವಾಗಲಿ ಕರ್ನಾಟಕ ರಾಜ್ಯದ ಇಲಾಖೆಯೊಂದರ ಸಚಿವ ಒಂದೊಂದು ಕಚೇರಿಯಿಂದ ಕೋಟಿ ರೂಪಾಯಿಯ ಹಣ ಆ ಕಚೇರಿಗಳಿಗೆ ಬೇಡಿಕೆ ಇಟ್ಟಿರುವುದರ ಸುದ್ದಿ ನನಗೆ ಕಿವಿಗೆ ಬಿದ್ದಿದೆ,ಬರೀ ಲೂಟಿ,ಲೂಟಿ,ಲೂಟಿ!

ಒಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲಾ ಅನುದಾನಗಳನ್ನು ಸೇರಿ ಗ್ರಾಮವೊಂದಕ್ಕೆ ಈ ಐದು ವರ್ಷಗಳಲ್ಲಿ ವಿನಿಯೋಗಿಸಲಾಗಿರುವ ಹಣವನ್ನು ಪರಿಶೀಲಿಸಿ ನೋಡಿ,ಪುಟ್ಟ ಹಳ್ಳಿಯೊಂದಕ್ಕೆ ಸುಮಾರು ಐದಾರು ಕೋಟಿ ರೂಪಾಯಿಗಳ ಖರ್ಚು ಹಾಕಿರಲಾಗುತ್ತದೆ.ಗ್ರಾಮಾಭಿವೃದ್ಧಿಗಾಗಿ!ಕುಡಿಯುವ ನೀರು,ಗ್ರಾಮ ನೈರ್ಮಲ್ಯ,ರಸ್ತೆ,ಆರೋಗ್ಯ ಇತ್ಯಾದಿಗಳಿಗಾಗಿ.ಪ್ರಜ್ಞಾವಂತ ಕಣ್ಣುಗಳ ಸಾಕ್ಷಿಯಾಗಿ!

ಈ ಲೇಖನದ ಒಟ್ಟು ಸಾರಂಶ ಏನೆಂದರೆ ಭಾರತದ ಪ್ರತಿಶತ 95 ಜನ ಭ್ರಷ್ಟಾಚರದ ಪರವಾಗಿದ್ದಾರೆ,ಅವಕಾಶಗಳಿಗಾಗಿ ದಾರಿ ಕಾಯುತ್ತಿದ್ದಾರೆ.ಕೆಲವೊಂದು ತಾಲ್ಲೂಕಿನಲ್ಲಿ ಶಾಸಕನೊಬ್ಬ ಚುನಾವಣೆಯಲ್ಲಿ ಗೆಲ್ಲಬೇಕು ಎಂದರೆ ಅಕ್ರಮ ಮರಳುಗಣಿಗಾರಿಕೆಗೆ ಮುಕ್ತ ಅವಕಾಶ ಒದಗಿಸಿಕೊಡುವ ಭರವಸೆ ನೀಡಬೇಕು,ಏಕೆಂದರೆ ಆತನ ಸುತ್ತಾ ಇರುವ ಕಾರ್ಯಕರ್ತರು ಮರಳು ಗಣಿಗಾರಿಕೆಗೆ ಸಂಬಂಧಿಸಿದವರು;ಇನ್ನೊಂದು ರೀತಿಯಲ್ಲಿ ಹೇಳಬೇಕು ಎಂದರೆ ಕಳ್ಳರು.

ಭಾರತವನ್ನು ಕಳ್ಳರ ಕೂಟವೊಂದು,ಕಳ್ಳರನ್ನು ಸೃಷ್ಟಿ ಮಾಡುವ ಕೂಟವೊಂದು ರೂಲ್ ಮಾಡುತ್ತಿದೆ,ಇದು ಎಲ್ಲಾ ಪಕ್ಷಗಳಿಗೆ ಅನ್ವಯಿಸುವ ಮಾತು.ಸಾಮಾಜಿಕ ನ್ಯಾಯ ಎನ್ನುವುದು ಬರೀ ಬುಟಾಟಿಕೆ.ನ ಖಾಯೇಂಗೇ,ಖಾನೆ ದೂಂಗಾ ಎಂದ ಪುಣ್ಯಾತ್ಮ ತಾನು ತಿನ್ನುತ್ತಿಲ್ಲವೇನೋ,ಆದರೆ ತಿನ್ನಲು ಮುಕ್ತವಾದ ಎಲ್ಲಾ ಅವಕಾಶಗಳನ್ನು ಒದಗಿಸಿಕೊಟ್ಟಿದ್ದಾನೆ,ಏಕೆಂದರೆ-

ಸದ್ಯ ಭಾರತದಲ್ಲಿ ಪ್ರಾಮಾಣಿಕವಾಗಿ ಭ್ರಷ್ಟಾಚಾರವನ್ನು ನಿಗ್ರಹಿಸಬಲ್ಲ,ಭ್ರಷ್ಟರನ್ನು ಜೈಲಿಗೆ ಕಳಿಸಬಲ್ಲ ಪ್ರಭಾವೀಶಾಲಿ ತನಿಖಾ ಸಂಸ್ಥೆ ಇಲ್ಲ.ಒಂದು ವೇಳೆ ಇದ್ದಾವೆ ಅಂತ ನಿಮಗನ್ನಿಸಿ ಅವುಗಳಿಗೆ ದೂರು ನೀಡಲು ಹೋದಿರೋ,ನೀವಿನ್ನೂ ಆ ಕಚೇರಿ ಆವರಣ ದಾಟಿರುವುದಿಲ್ಲ;ಸಂಬಂದಿಸಿದವರೊಂದಿಗೆ ಮಾತುಕತೆಗಳು ಆರಂಭವಾಗಿರುತ್ತವೆ!ಯಾವ ಯಾವ ಕಚೇರಿಗಳಿಂದ ಈ ತನಿಖಾ ಸಂಸ್ಥೆಗಳಿಗೆ ಎಷ್ಟೆಷ್ಟು ಪಾಲು ಹೋಗುತ್ತಿದೆ ಎನ್ನುವುದು ಬರೀ ಮೌಖಿಕವಾಗಿ ಕೇಳಿದ್ದೇನೆಯೇ ಹೊರತು ಸ್ಪಷ್ಟ ದಾಖಲೆಗಳಿಲ್ಲ,ಇದ್ದರೆ ಅವುಗಳ ಕತೆ ಗತಿಗಣಪ ಮಾಡುತ್ತಿದ್ದೆ.

ಹಾಗಿದ್ದರೆ ಏನು ಮಾಡಬೇಕು,ಅಂದರೆ ಎಲ್ಲವೂ,ಎಲ್ಲರೂ ಭ್ರಷ್ಟಾಚಾರಮಯವಾಗಿರುವ ಸಂದರ್ಭದಲ್ಲಿ ಯಾರಾದರೂ ಏನು ಮಾಡಬೇಕು ಎನ್ನುವುದು ಸದ್ಯಕ್ಕೆ ನಮ್ಮ ಮುಂದಿರುವ ಪ್ರಶ್ನೆ.ಒಂದು ಗ್ರಾಮ,ಸಾವಿರ ಕುಟುಂಬಗಳು ನೂರು ಜನ ಲೀಡರ್ಸ್,ಈ ನೂರು ಜನರಲ್ಲಿ ತೊಂಬತ್ತೈದು ಜನರು ಹೇಲು ತಿನ್ನುವವರಾಗಿರುವಾಗ ಈ ಐದು ಜನರು ಏನು ಮಾಡಬೇಕು,ದೂರು ಬರೆಯಬೇಕಾ?ಯಾರಿಗೆ?ದೂರು ಬರೆದರೆ ಆಗುವ ಹಲ್ಲೆ ವಧೆಗಳನ್ನು ಹೇಗೆ ತಡೆಯುವುದು?ಪೋಲಿಸ್ ವ್ಯವಸ್ಥೆಯಾ?ಅದು ಅಧಿಕಾರಸ್ಥರ ಪರವಾಗಿರುತ್ತದೆ,ಮತ್ತೆ ಹೇಗೆ?

ಹಣ ಕೊಡದೆ,ಹೆಂಡ ಕೊಡದೆ,ಸೀರೆ ಕುಪ್ಪಸಗಳು,ಮಾಂಸದ ಊಟ ಇತ್ಯಾದಿಗಳನ್ನು ಮಾಡದೆ ಈ ದೇಶದಲ್ಲಿ ಚುನಾವಣೆಯನ್ನು ಎದುರಿಸುವುದು ಕಷ್ಟ.ಈ ಐದು ಪರ್ಸೆಂಟು ಭ್ರಷ್ಟಾಚಾರಿ ವಿರೋಧಿ ಧೋರಣೆ ಇರುವವರಿಗೆ ಬಲ ಯಾವಾಗ ಬಂದೀತು?

ಯಾವಾಗ ಬರುತ್ತದೆ ಎಂದರೆ ತಮ್ಮನ್ನು ಲೂಟಿ ಹೊಡೆಯುವ ದೃಷ್ಟರ ಬಗ್ಗೆ ಎಳೆ ಎಳೆಯಾಗಿ ಈ ದೇಶದ ಏನೂ ಅರಿಯದ ಹೆಂಡ ಮತ್ತು ಹಣ ಇತ್ಯಾದಿ ಆಮಿಷಗಳನ್ನು ಪಡೆಯದೆ ಮತ ನೀಡುತ್ತಾರಲ್ಲ ಆ ಜನಗಳಿಗೆ ತಿಳಿಸಬೇಕು,ಜನರಿಗೆ ಪ್ರಜಾಪ್ರಭುತ್ವ ಎಂದರೆ ಏನು ಎಂದು ಪ್ರಭಾವಿಶಾಲಿಯಾಗಿ ತಿಳಿಸಬೇಕು,ಯಾರು ಮಾಡಬೇಕು ಈ ಕೆಲಸವನ್ನು?ಆ ಐದು ಪರ್ಸೆಂಟು ಜನ,ಅವರು ಯಾವ ಅವಮಾನ ಟೀಕೆಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಮಾಡಬಲ್ಲವರಾದರೆ ಮುಂಬರುವ ದಿಗಳಲ್ಲಿ ಏನಾದರೂ ಬದಲಾವಣೆ ಕಾಣಬಹುದು.

ನಮಗಿರುವುದು ಜನತಾ ನ್ಯಾಯಲಯವೊಂದೆ,ಅದು ಶಕ್ತಿಶಾಲಿಯಾಗಬೇಕು.

 

                                                         ನಿಮ್ಮವನು-ಲಕ್ಷ್ಮೀಕಾಂತ ನಾಯಕ

ಶುಕ್ರವಾರ, ಜುಲೈ 17, 2020

ಸ್ವಾತಂತ್ರ್ಯದ ಸ್ವರ್ಗ ಸುಖದಲ್ಲಿ ತೇಲಾಡುತ್ತಿರುವ ಭಾರತೀಯರು!

ಈ ವಾರ ಬರೆದ ಅಂಕಣ ಬರಹ,ಸಮಚಿತ್ತದಿಂದ ಓದಿಕೊಳ್ಳಿ.ನಿನ್ನೆ SMJ NEWS YADGIR ದಲ್ಲಿ ಪ್ರಕಟಗೊಂಡಿದೆ.

ಸ್ವಾತಂತ್ರ್ಯದ ಸ್ವರ್ಗ ಸುಖದಲ್ಲಿ ತೇಲಾಡುತ್ತಿರುವ ಭಾರತೀಯರು!



“ಅಲಾ ಕಾದು ನಾಯಕ್ಗಾರು,ನೇನು ಚೆಪ್ಪೇದೆಂಟೆಂಟೆ ಭಾರತಾನಿಕಿ ಸ್ವಾಂತಂತ್ರ್ಯ ವಚ್ಚಿನಪ್ಪಡಿನಿಂಚಿ ಇಂತವರಿಕಿ ಆಂದ್ರ ಪ್ರದೇಶಾಲು ಕೊನ್ನಿ ಪ್ರಾಂತ್ಯಾಲು ಇಂತವರಿಕೂ ಕೊಂದರೂ ಎಲೆಕ್ಷನ್ ಸೆಂಟರಿಕಿ ವೆಳ್ಳಿ ಮತಂ ಎಯ್ಯಲೇದು ತೆಲುಸಾ?ಕಾವಾಲಂಟೆ ಡಬ್ಬಯ್ ಎನಬೈ ಸಂವತ್ಸರ ಉನ್ನ ಮುಸುಲೋಡನ್ನಿ ಅಡಿಗಿ ಸೂಡು,ಅಲಾ ಉಂದಿ ಪರಿಸ್ಥಿತಿ!”ಎಂದ ನನ್ನ ಒಬ್ಬ ಹಿರಿಯ ಸ್ನೇಹಿತ,ಆತನಿಗೂ ಸರಿ ಸುಮಾರು ಅರವತ್ತು ವರ್ಷಗಳು.ಇದು ಬರೀ ಆಂದ್ರದ ಕಥೆ ಮಾತ್ರವಲ್ಲ,ಕರ್ನಾಟಕದಲ್ಲೂ ಅನೇಕ ಪ್ರದೇಶಗಳಲ್ಲಿ ಇಂಥದ್ದೊಂದು ಪರಿಸ್ಥಿತಿ ಇದೆ.ದೇಶವ್ಯಾಪಿ ನೋಡುವುದಾದರೆ ವಿಹಾರ,ಓರಿಸ್ಸಾಗಳಲ್ಲಿ ಈ ತರಹದ ವಾತಾವರಣವಿದೆ;ಕಾಶ್ಮೀರವೂ ಇದಕ್ಕೆ ಹೊರತಲ್ಲ.ಪೋಲಿಸು,ಮಿಲಟರಿ ಇತ್ಯಾದಿಗಳವೆ,ಅವು ದುರ್ಬಲರ ಪಾಲಿಗೆ ಮಾತ್ರ.ಇಲ್ಲಿ ಬರೆದರುವ ಸತ್ಯವನ್ನು ಯಾವ ಸರ್ಕಾರಗಳೂ ಒಪ್ಪಿಕೊಳ್ಳುವುದಿಲ್ಲ.ಹಾಗೆ ಒಪ್ಪಿಕೊಂಡರೆ ಸಂವಿಧಾನಕ್ಕೂ ಕಾನೂನಿಗೂ ಮರ್ಯಾದೆ ಇರುವುದಲ್ಲ.ನನ್ನಗಿನ್ನೂ ಮತಾಧಿಕಾರ ಬಾರದ ದಿನಗಳಲ್ಲಿ ನಾನದನ್ನು ಕಣ್ಣಿನಿಂದ ನೋಡಿದ್ದೇನೆ.ಬ್ಯಾಲೆಟ್ ಪೇಪರ್ ಪದ್ಧತಿಯಲ್ಲಿ ಚುನಾವಣೆ ನಡೆಯುತ್ತಿದ್ದ ಕಳೆದ ಎರಡ್ಮೂರು ದಶಕಗಳ ಹಿಂದೆ ಮತ ಪೆಟ್ಟಿಗೆಗಳನ್ನು ನಾಶ ಮಾಡುವ,ನಾಪತ್ತೆ ಮಾಡುವ ಪ್ರಕರಣಗಳು ವರದಿಯಾಗುತ್ತಿದ್ದವು,ಮತ ಪೆಟ್ಟಿಗೆಗಳನ್ನು ಸಾರಾಸಗಟಾಗಿ ಬದಲಾಯಿಸಿದ ಉದಾಹರಣೆಗಳೂ ಉಂಟು!ಇದು ಬರೀ ಈ ದೇಶದ ಕಥೆಯಲ್ಲ;ಪ್ರಪಂಚದ ಅನೇಕದ ದೇಶಗಳಲ್ಲಿ ಇಂಥಹ ಘಟನೆಗಳು ಘಟಿಸುತ್ತವೆ.ಎಲ್ಲಿ ಆಯುದ್ಧಗಳಿಗೂ,ಹಣಕ್ಕೂ ಪ್ರಾಮುಖ್ಯತೆ ಇದೆಯೋ ಅಲ್ಲಿ ಇದೆಲ್ಲಾ ಸಹಜ.ಪಕ್ಕದ ಪಾಕಿಸ್ತಾನದಲ್ಲಿ ಬಂದೂಕು ರಾಜಕಾರಣವನ್ನು ನಿರ್ದೇಶಿಸುತ್ತದೆ.ಅಪಘಾನ ದೇಶದಲ್ಲಿ ತಾಲಿಬಾನ್ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದು ಹಾಗೇನೆ.ರಾಜ ಪ್ರಭುತ್ವ ಇರುವ ದೇಶಗಳಲ್ಲಿ ಬಂದೂಕು ಶಾಸನ ಬರೆಯುತ್ತದೆ!

ಈ ಲೇಖನ ಬರೆಯುವ ಮುನ್ನ ಮತ ಚಲಾವಣೆಯ ಕುರಿತು ಪ್ರಸ್ತಾವನೆ ಏಕೆಂದರೆ ಭಾರತದಲ್ಲಿ ನಿಜವಾದ ಪ್ರಜಾಪ್ರಭುತ್ವ ಅನುಷ್ಠಾನಗೊಂಡಿಲ್ಲ ಎಂದು ಹೇಳುವುದಕ್ಕೆ,ಮತದ ಘನತೆ ಪ್ರಜೆಗಳಿಗೆ ಅರ್ಥವಾಗಿಲ್ಲ ಎಂದು ಹೇಳುವುದಕ್ಕೆ,ಪ್ರಜಾ ಪ್ರಭುತ್ವದ ಹೆಸರಿನಲ್ಲಿ ಭಾರತದಲ್ಲಿ ನಡೆಯುತ್ತಿರುವ ಮತ್ತೊಂದು ಸುತ್ತಿನ ಸಾಮ್ರಾಜ್ಯಶಾಹಿ ಮಾದರಿಯ ರಾಜಕಾರಣವನ್ನು ವಿವರಿಸಲಿಕ್ಕೆ!ಇನ್ನೇನು ಮತ್ತೆ?ಭಾರತದ ಪ್ರಜೆ ಯಾವ ಅರ್ಥದಲ್ಲಿ ಪ್ರಭು?

ಹೆಂಡದ ಅಮಲಿನಲ್ಲಿ ಚುನಾವಣೆ ನಡೆಯುತ್ತದೆ,ಹಣದ ಆಮಿಷದಲ್ಲಿ ಚುನಾವಣೆ ನಡೆಯುತ್ತದೆ,ಜಾತಿಯ ಆಧಾರದಲ್ಲಿ ಚುನಾವಣೆ ನಡೆಯುತ್ತದೆ,ಧರ್ಮ ಸಂಘರ್ಷದ ಬೆಂಕಿಯ ಬಿಸಿಯಲ್ಲಿ ಚುನಾವಣೆ ನಡೆಯುತ್ತದೆ;ಜಾತ್ಯಾತೀತ ನಿಲುವು,ಅಭಿವೃದ್ಧಿಯ ಆಶಯದಲ್ಲಿ ಯಾವತ್ತು ಚುನಾವಣೆ ನಡೆದಿದೆ ಹೇಳಿ?ಒಬ್ಬ ಬೀದಿ ರೌಡಿ,ಒಂದು ಕಾಲದಲ್ಲಿ ಗಣೇಶ್ ಬೀಡಿಗೂ ಗತಿ ಇಲ್ಲದವನು ರಾಜಕೀಯ ಅಸ್ತಿತ್ವ ಪಡೆದ ಮೇಲೆ ಆತನ ವೈಭೋಗ ಜೀವನವನ್ನು ಗಮನಿಸಿ ನೋಡಿ;ಇವತ್ತು ಗ್ರಾಮ ಪಂಚಾಯತಿ ಚುನಾವಣೆಗೂ ಲಕ್ಷಾಂತರ ಹಣ ಸುರಿಯಬೇಕಾಗಿದೆ,ಸುರಿದಾದ ಮೇಲೆ?ಸ್ನೇಹಿತರೆ ನಿಮ್ಮ ನಿಮ್ಮ ಗ್ರಾಮಗಳಲ್ಲಿ ಗಮನಿಸಿ ನೋಡಿ;ಹದಿನಾಲ್ಕನೆಯ ಹಣಕಾಸಿನ ಬಳಕೆ ಮತ್ತದರ ದುರುಪಯೋಗ ಅರ್ಥವಾದೀತು!ಹಣ ಸುರಿದು ಚುನಾಯಿತನಾಗುವ ಸದಸ್ಯ ಹಣ ರಿಕವರಿಯಲ್ಲಿ ತೊಡಗುತ್ತಾನೆ,ಸಂಪೂರ್ಣ ರಾಜಕೀಯ ಈ ತಳಹದಿಯ ಮೇಲೆ ನಿಂತಿದೆ;ಹೀಗಾಗಿ ರಾಜಕೀಯ ಒಂದು ಉದ್ಯಮವಾಗಿ ಬದಲಾಗಿ ಹೋಗಿದೆ.ಒಬ್ಬ ಗ್ರಾಮ ಪಂಚಾಯತಿಯ ಅಧ್ಯಕ್ಷ ಏನಿಲ್ಲವೆಂದರೂ ಕೋಟಿಗಳ ಲೆಖ್ಖದಲ್ಲಿ ಲೂಟಿ ಹೊಡೆಯುತ್ತಾನೆ,ಲೆಖ್ಖ ಹುಡುಕುವುದು ಕಷ್ಟ.ಸರ್ಕಾರಿ ವ್ಯವಸ್ಥೆಯನ್ನು ಭ್ರಷ್ಟ ಕೂಟ ಆ ರೀತಿ ರೂಪಿಸಿಕೊಂಡಿದೆ.

ಬ್ರಿಟೀಷ್ ಭಾರತ ಚೆಂದಿತ್ತು!ಅವರು ಕ್ರೂರಿಗಳೇ ನಿಜ,ಕಟ್ಟುನಿಟ್ಟಿನ ಕಾನೂನುಗಳನ್ನು ಹೇರಿದ್ದರು,ಜನ ಪಾಲಿಸಬೇಕಿತ್ತು ಕೂಡಾ.ಆ ಕಾನೂನುಗಳಿಂದ ಇಕ್ಕಟ್ಟು ಉಂಟಾದಾಗ ಭಾರತದ ಕೆಲ ಪಟ್ಟಭದ್ರರು ಸ್ವಾತಂತ್ರ್ಯ ಚಳುವಳಿಯನ್ನು ಹುಟ್ಟು ಹಾಕಿರಬಹುದು.ಭಾರತದ ಇತಿಹಾಸದಲ್ಲಿ ಅಕ್ಷರ ಪರ್ವ ಆರಂಭವಾದದ್ದು ಬ್ರಿಟೀಷರಿಂದಲೇ,ಅವರು ಶಾಲೆಗಳನ್ನು,ವಿದ್ಯುತ್ ನ್ನು,ಸಂಚಾರಿ ವ್ಯವಸ್ಥೆಯನ್ನು ತಂದರು.ಇದಕ್ಕೂ ಮುನ್ನ ಭಾರತದಲ್ಲಿ ಏನಿತ್ತು?ಕತ್ತಿ ಕಠಾರಿಗಳಿಂದ ಸಂಸ್ಥಾನಗಳನ್ನು ಆಳುವುದು,ಗೆಲ್ಲುವುದು,ರಕ್ತ ಹರಿಸುವುದು ಇತ್ಯಾದಿ ಇತ್ತು.ಯುದ್ಧಗಳಾಗುತ್ತಿದ್ದವು;ಯುದ್ಧದ ಪರಿಣಾಮ ಜೀವ ಹಾನಿ,ಲೂಟಿ ಇತ್ಯಾದಿಯಾಗಿರುತ್ತಿತ್ತು.ಪ್ರತಿ ಯುದ್ಧದ ನಂತರದ ಪರಿಣಾಮಗಳನ್ನು ಗಮನಿಸಿ ನೋಡಿ:ಲೂಟಿ ಬಹು ಮುಖ್ಯ ಉದ್ದೇಶವಾಗಿ ಕಾಣಿಸುತ್ತದೆ.ಧನಕನಕಗಳ ಲೂಟಿ,ಸುಂದರ ಸ್ತ್ರೀಯರ ಒತ್ತುವರಿ,ಸೆರೆ ಸಿಕ್ಕವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವ ಪ್ರಕ್ರಿಯೆ!ಇದರಿಂದ ವ್ಯಕ್ತವಾಗುವುದೇನೆಂದರೆ ರಾಜನ ಉದ್ದೇಶ ದಾಹವಾಗಿರುತ್ತಿತ್ತು,ಬಹುತೇಕ ಅದು ರಕ್ತದಾಹವಾಗಿರುತ್ತಿತ್ತು.ಇದರ ಹೊರತು ಅಭಿವೃದ್ಧಿಯ ಉಲ್ಲೇಖಗಳು ನಮಗೆ ಇತಿಹಾಸದ ಉದ್ದಕ್ಕೂ ಬಹು ವಿರಳವಾಗಿ ಗೋಚರಿಸುತ್ತವೆ;ಭಾರತದಲ್ಲಿ ನಿರ್ಮಿಸಲಾಗಿರುವ ಕೆರೆ ಕಟ್ಟೆಗಳು,ಆಣೆಕಟ್ಟೆಗಳು ಮತ್ತು ಅಭಿವೃದ್ಧಿಪರ ಕಾರ್ಯಗಳು ಜರುಗಿದ್ದು ಬ್ರಿಟೀಷ್ ಭಾರತದಲ್ಲಿ!ಮತ್ತು ಸ್ವಾತಂತ್ರ್ಯಾನಂತರ.ರಾಜ ಮಹಾರಾಜರ ಕಾಲದ ಒಂದೇ ಒಂದು ಜನಾಭಿವೃದ್ಧಿ ಸ್ಮಾರಕವೊಂದನ್ನು ನಾವು ಕಾಣಲಾರೇವು,ಗುಡಿಗುಂಡಾರಗಳ ಹೊರತು!ಹೌದು,ಭಾರತದಲ್ಲಿ ಪುರಾತನ ಸಂಸ್ಕೃತಿ ಎಂದು ಬಲು ಹೆಮ್ಮೆಯಿಂದ ಹೇಳುವಂಥದ್ದು ಮೌಢ್ಯದಿಂದ ಕೂಡಿದೆ,ಗಮನಿಸಿ ನೋಡಿ.ದೇವರು ಕೊಡುತ್ತಾನೆ ಎಂದು ಆಕಾಶದ ಕಡೆಗೆ ಮುಖ ಮಾಡಲು ಹಚ್ಚಿದರು,ಜನರಲ್ಲಿ ಜ್ಞಾನದ ದೀವಿಗೆ ಹಚ್ಚಲಿಲ್ಲ.ಅರ್ಥ-ಪರಾಮರ್ಥವನ್ನು ಜ್ಞಾನ ಎಂದರು,ಆ ಜ್ಞಾನಿಗಳು ಬರೀ ಬೋಧನೆಗೆ ಮಾತ್ರ ಸೀಮಿತವಾದರು.ನೀವು ನೋಡಿ:ಜಗತ್ತಿಗೆ ಬುದ್ದಿ ಹೇಳಿದ ಯಾವ ದಾರ್ಶನಿಕನೂ ಸುಖ ಜೀವನ ಮಾಡಲಿಲ್ಲ.ಬುದ್ದ,ಬಸವ,ಅಂಬೇಡ್ಕರ್ ಯಾದಿಯಾಗಿ!ವಿಪರ್ಯಾಸವಲ್ಲವೇ?ಆತ್ಮ ಪರಮಾತ್ಮಗಳ ಪರಿಕಲ್ಪನೆ ಹುಟ್ಟು ಹಾಕಿದ ಸಾಕ್ರೆಟಿಸ್ ನೂ ಸುಖವಾದ ಸಾವನ್ನು ಕಾಣಲಿಲ್ಲ.ಜೀಸಸ್ ನ ಕೊನೆಯ ದಿನಗಳು ನಿಮಗೆ ಗೊತ್ತೇ ಇವೆ.

ಪುರಾತನ ಭಾರತದಲ್ಲಿ ಕ್ಷತ್ರೀಯರು,ಬ್ರಾಹ್ಮಣರು ಮಾತ್ರವಲ್ಲದೆ ದಲಿತ ವರ್ಗಗಳು ವಿದ್ಯೆ ಕಲಿತರೆ ನಾಲಿಗೆ ಕತ್ತರಿಸುವ ರೂಢಿ ಇತ್ತಂತೆ,ಎಂತಹ ದಾರುಣವಲ್ಲವೇ?ಭಾರತಕ್ಕೆ ಬ್ರಿಟೀಷರು ಬರುವ ಮುನ್ನ ಈ ದೇಶವನ್ನು ನಿರಕ್ಷರಿಗಳ ನಾಡು,ಹಾವಾಡಿಸುವವರ ನಾಡು,ಅನಾಗರಿಕರ ನಾಡು ಎಂದೇ ಕರೆಯಲಾಗುತ್ತಿತ್ತಂತೆ.ನಾಗರಿಕತೆ ಮೈಗೂಡಿದ್ದು ಭಾರತಕ್ಕೆ ಶಿಕ್ಷಣ ವ್ಯವಸ್ಥೆ ಪರಿಚಯವಾದ ಮೇಲೆ.ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ಭಾರತದಲ್ಲಿ ಮೊದಲು ಶಾಲೆಗಳನ್ನು ಪರಿಚಯಿಸಿದ್ದು ಬ್ರಿಟೀಷರು,ಈ ದೇಶದಲ್ಲಿ ಅಕ್ಷರದ ಬೀಜ ದಲಿತನ ಎದೆಯಲ್ಲಿ ಮೊಳಕೆ ಒಡೆದಿದ್ದು ಅಂದಿನಿಂದ.ಡಾ//ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಾಲ್ಯದ ಜೀವನದ ಶಿಕ್ಷಣದ ದಿನಗಳನ್ನು ನೀವು ಸ್ಮರಿಸಿಕೊಳ್ಳಿ,ಆತ ಅನೇಕ ಅವಮಾನ,ತಾತ್ಸಾರ,ತಿರಸ್ಕಾರಗಳನ್ನು ಭರಿಸಬೇಕಾಯಿತು.ಕಳೆದ ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ದಲಿತರನ್ನು ಮುಟ್ಟಬಾರದು ಎನ್ನುವ ನಿಲುವಿನ ಮಾಸ್ತರನ ಉದ್ದದ ಕೋಲಿನಿಂದಲೇ ನಾನು ಶಿಕ್ಷಣ ಕಲೆತಿದ್ದು.ಇವತ್ತಿನ ನಲವತ್ತು ನಲವತ್ತೈದು ವರ್ಷಗಳ ವಯೋಮಾನದ ವ್ಯಕ್ತಿಗಳು ತಮ್ಮ ಬಾಲ್ಯಕಾಲವನ್ನು ಸ್ಮರಿಸಿಕೊಳ್ಳಬಹುದು.

ನೀವೊಮ್ಮೆ ಅನಂತಮೂರ್ತಿಯವರ ಕಥೆಯೊಂದನ್ನು ಆಧರಿಸಿ ನಿರ್ಮಿಸಿದ ಚಲನಚಿತ್ರವೊಂದನ್ನು ನೋಡಿರಬಹುದು,ಅದು ತಬರನ ಕಥೆ ಎಂದು.ಬ್ರಿಟೀಷರು ಭಾರತವನ್ನು ಬಿಟ್ಟು ಹೋದ ಮೇಲೆ ಇಲ್ಲಿನ ದಲಿತ ವರ್ಗಗಳು ಅನುಭವಿಸಿದ ದಾರುಣ ಯಾತನೆಯನ್ನು ಆ ಕಥೆ ಸೂಕ್ಷ್ಮವಾಗಿ ವ್ಯಕ್ತಪಡಿಸುತ್ತದೆ.ಸ್ವಾತಂತ್ರ್ಯ ಹೋರಾಟಗಾರರು ಎಂದು ಹೇಳಿಕೊಳ್ಳುವ ಆಗಿನ ಪುಂಡ ಪೋಕರಿಗಳು 1947ರ ನಂತರದ ದಿಗಳನ್ನು ಬಹು ಕಠೋರ ಮಾಡುತ್ತವೆ.ಪಿಂಚನಿಗಾಗಿ ಸ್ವತಂತ್ರ ಭಾರತದ ಸರ್ಕಾರಿ ಕಛೇರಿಗಳಿಗೆ ಅಲೆಯುವ ತಬರ ಸಾವಿನ ಕೊನೆಯವರೆಗೆ ಅಲೆಯುತ್ತಲೇ ಇರುತ್ತಾನೆ,ಹೀಗೆ ಅಲೆಯುತ್ತಾ ಅಲೆಯುತ್ತಾ ಆತ ಹೆಂಡತಿಯನ್ನು,ತನ್ನ ಬದುಕನ್ನು ಕಳೆದುಕೊಳ್ಳುತ್ತಾನೆ.ಆತ ಕೊನೆಗೆ ನೊಂದು ಹೇಳುವ ಮಾತು ಬ್ರಿಟೀಷರೇ ಪಾಡಿದ್ದರು ಎನ್ನುವುದು!ಪ್ರಜಾಪ್ರಭುತ್ವವನ್ನು ಈ ನೆಲಕ್ಕೆ ಪರಿಚಯಿಸಿದವರೂ ಬ್ರಿಟೀಷರೆ!ಅವರ ನೀತಿಗಳು ಕಠೋರವಾಗಿದ್ದರೂ ದುಡಿದು ಉಣ್ಣುವವರಿಗೆ ತೊಂದರೆ ಇರಲಿಲ್ಲ ಎನ್ನುವುದನ್ನು ಆ ಕಥೆ ಹೇಳುತ್ತದೆ.ಸ್ವಾತಂತ್ರ್ಯಾನಂತರ ಈ ದೇಶದ ರಾಜಕೀಯ ಚುಕ್ಕಾಣಿ ಹಿಡಿದ ದೇಶದದೊಳಗಿನ ಬ್ರಿಟೀಷರು ದೇಶವನ್ನು ಸಮರ್ಥವಾಗಿ ಕಟ್ಟುವ ಕೆಲಸ ಮಾಡಲೇ ಇಲ್ಲ.

ವಿಚಾರ ಮಾಡಿ ನೋಡಿ:ಭಾರತದಲ್ಲಿ ಲೂಟಿ ಎಂಬ ಕರಕುಶಲ ವಿದ್ಯೆ ಬಲ್ಲವನು ಶ್ರೀಮಂತನಾಗಿದ್ದಾನೆ,ಉಳಿದಂತೆ ಅನೇಕ ವರ್ಗಗಳು ಪಾರಂಪಾರಿಕವಾಗಿ ಬಡತನವನ್ನು,ದಡ್ಡತನವನ್ನು ಹಾಗೇ ಹೊತ್ತುಕೊಂಡಿವೆ;ಅವಕ್ಕೆ ರಾಜಕೀಯವೆಂದರೆ ಏನು?ಸಂವಿಧಾನವೆಂದರೆ ಏನು?ತಮ್ಮ ಹಕ್ಕುಗಳು ಎಂದರೆ ಏನು?ಸರ್ಕಾರ ಯಾರದ್ದು,ಯಾರು ಈ ದೇಶದ ಪ್ರಭು ಎಂದು ಇಲ್ಲಿಯವರೆಗೆ ಅರ್ಥವೇ ಆಗಿಲ್ಲ.ಆತ ಸಾಕ್ಷರನಾಗದ ಹಾಗೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತಿದೆ.ಹೇಗೆ ಎಂದರೆ ಅದಕ್ಕೆ ಸ್ಪಷ್ಟ ಉದಾಹರಣೆಯನ್ನಾಗಿ ಆತ ತನ್ನ ಮತವನ್ನು ಕ್ಷುಲ್ಲಕ ಕಾರಣಗಳಿಗಾಗಿ ಮಾರಿಕೊಳ್ಳುತ್ತಿರುವುದನ್ನು ಹೇಳಬಹುದು.ಹೇಗಿದೆ ನೋಡಿ ಈ ದುಷ್ಟರ ಕೂಟ:ದೇಶದಲ್ಲಿ ಪ್ರಧಾನವಾಗಿ ಎರಡು ಪಕ್ಷಗಳು ಪ್ರಚಲಿತದಲ್ಲಿವೆ,ಒಂದು ಕಾಂಗ್ರೇಸ್ ಇನ್ನೊಂದು ಬಿಜೆಪಿ.ಒಂದು ಕನ್ನಡಿಯೊಳಗೆ ಬಂಗಾರ ತೋರಿಸುತ್ತಾ ತಾನು ಅಧಿಕಾರಕ್ಕೆ ಬಂದರೆ ಅದು ನಿಮಗೆ ದೊರೆಯಲಿದೆ ಎಂದು ಆಸೆ ತೋರಿಸುತ್ತಾ ಈ ದೇಶವನ್ನು ಆಳುತ್ತಾ ಬಂದಿದೆ.ಇನ್ನೊಂದು ರಾಮ ಮಂದಿರ ಮತ್ತು ಧರ್ಮಗಳ ಬೆಂಕಿ ಹಚ್ಚುತ್ತಾ ಅಧಿಕಾರಕ್ಕೆ ಬರುತ್ತಿದೆ.ಕನ್ನಡಿಯೊಳಗಿನ ಬಂಗಾರವೂ ಈ ಸ್ವಾತಂತ್ರ್ಯಾನಂತರದ ದಿನಗಳಿಂದ ದೊರೆಯಲಿಲ್ಲ.ಮತ್ತೊಂದರದ ಕಥೆ ನಿಮಗೆ ಗೊತ್ತೇ ಇದೆ:ಅದು ಮಾತಿನಲ್ಲೇ ಸಮಸ್ತ ದೇಶವಾಸಿಗಳ ಮನಸ್ತೃಪ್ತಿ ಪಡಿಸುತ್ತಿದೆ.

ಡಾ// ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದಿವ್ಯ ಜ್ಞಾನ ಮತ್ತು ಕಠಿಣ ಪರಿಶ್ರಮದಿಂದ ಈ ದೇಶಕ್ಕೆ ಜಗತ್ತಿನಲ್ಲಿ ಇನ್ನೆಲ್ಲೂ ಇಲ್ಲದಂತಹ ಸರ್ವಶ್ರೇಷ್ಠ ಸಂವಿಧಾನ ಲಭ್ಯವಾಯಿತು.ಅದು ಎಲ್ಲಾ ಮತ-ಧರ್ಮ-ಪಂಥಗಳಿಗೂ ಸಮಾನ ನ್ಯಾಯ ನೀಡುವ ಗ್ರಂಥ.ಭಾರತದಲ್ಲಿ ಒಂದು ವರ್ಗ ಅದನ್ನು ಸಂವಿಧಾನ ಲೋಕಾರ್ಪಣೆಯಾದ ದಿನದಿಂದಲೂ ದ್ವೇಷಿಸುತ್ತಲೇ ಬಂದಿದೆ.ಭಾರತದಲ್ಲಿ ಬಹು ಸಂಖ್ಯಾತ ದಲಿತ ವರ್ಗಗಳು ಇಲ್ಲದೇ ಹೋಗಿದ್ದರೆ,ದಲಿತ ವರ್ಗಗಳು ಸುಶಿಕ್ಷಿತವಾಗಿರದೇ ಹೋಗಿದ್ದರೆ ಸಂವಿಧಾನವನ್ನೂ ಬಾಬಾ ಸಾಹೇಬರನ್ನು ಒಳ ಒಳಗೇ ದ್ವೇಷಿಸುವ ಜನ ಯಾವತ್ತೋ ಸಮಾಧಿ ಮಾಡಿ ಬಿಡುತ್ತಿದ್ದರು.ಇಷ್ಟಾಗಿಯೂ ಸಂವಿಧಾನವನ್ನು ಸುಡುವಿಕೆ,ಸಂವಿಧಾನ ಶಿಲ್ಪಿಯ ತೇಜೋವಧೆಗೆ ಪ್ರಯತ್ನಿಸುತ್ತಲೇ ಇದ್ದಾರೆ.ಇತ್ತೀಚಿನ ಕೆಲ ವರ್ಷಗಳಲ್ಲಿ ದಲಿತ ಹುಡುಗರೇ ಮೀಸಲಾತಿ ಮತ್ತು ಸಂವಿಧಾನ ವಿರೋಧಿ ನಿಲುವು ತಾಳುತ್ತಿರುವ ಆಘಾತಕಾರಿ ಅಂಶಗಳು ಕಾಣತೊಡಗಿವೆ.ಅವು ಸಮ್ಮೋಹನಕ್ಕೆ ಒಳಗಾಗಿವೆ!

ಸರ್ಕಾರಿ ಕಛೇರಿಗಳು ಈ ದೇಶದ ಮುಗ್ಧ ಪ್ರಜೆಯ ಪಾಲಿಗೆ ಕಗ್ಗಂಟಾಗಿರುವ ಪ್ರಸ್ತುತ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಪ್ರಶ್ನಿಸಲ್ಪಡುತ್ತದೆ.ಎಲ್ಲಿ ನೋಡಿದರೂ ಹಣ,ಹಣ,ಹಣ.ಭ್ರಷ್ಟಾಚಾರ ತಾಂಡವವಾಡುತ್ತಿದೆ.ಕೋಟ್ಯಾಂತರ ತೆರಿಗೆ ಹಣದಲ್ಲಿ ರೂಪಿಸಲಾಗುತ್ತಿರುವ ಕಾಮಗಾರಿಗಳು ರಾಜಕೀಯ ಹಿಂಬಾಲಕ ಗುತ್ತಿಗೆದಾರರ ಮುಖೇನ ಮತ್ತೆ ರಾಜಕಾರಣಿಗಳ ಪಾಲಾಗುತ್ತಿದೆ,ಅಂದರೆ ಕಿಕ್ ಬ್ಯಾಕ್! ಮತವನ್ನು ಮಾರಿಕೊಂಡ ಜನ ಚಿಲ್ಲರೆ ಕನಸುಗಳಿಗಾಗಿ ದಾರಿ ಕಾಯುತ್ತಾರೆ,ಉದ್ಯೋಗಖಾತ್ರಿ ಕೂಲಿ,ಒಂದು ಶೌಚಾಲಯ ಹೆಚ್ಚೆಂದರೆ ಒಂದು ಆಶ್ರಯ ಯೋಜನೆ ಮನೆ;ಅವೂ ದುಡ್ಡುಕೊಟ್ಟು ಪಡೆದುಕೊಳ್ಳಲೇಬೇಕು.

ಈಗ ಹೇಳಿ?ನಾವು ಯಾವ ಅರ್ಥದ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ?

“ಲೇದು ನಾಯಕ್,ಎಲೆಕ್ಷನ್ ವಸ್ತುನ್ನಾಯ್ ಕದಾ,ಅಪ್ಪುಡು ಒಕ ಟೆಂಟ್ ಎಸ್ತುನ್ನಾರು,ಅಂದುಲು ಕೋಳಿ-ಕುರಿ ಮಾಂಸಂ ಕೋರ ಮರಿಯು ಬಿರ್ಯಾನಿ ಒಂಟಿಸ್ತಾರು.ಅಕ್ಕಡಿ ಜನಾಂದರೂ ಮಂದು ತಾಗೇಸಿ ಭೋಜನಂ ಚೇಸ್ತುನ್ನಪ್ಪಡು ಇಕ್ಕಡಿ ಓಟಿಂಗ್ ಆಯ್ ಪೋತುಂದಿ!”ಅಂದ ನನ್ನ ಗೆಳೆಯ,ಅಂದರೆ ಚುನಾವಣೆಯ ದಿನ ಗಲ್ಲಿಗಲ್ಲಿಗಳಲ್ಲಿ ಟೆಂಟು ಹಾಕಿ ಕೋಳಿ ಕುರಿ ಮಾಂಸದ ಏರ್ಪಾಡು ಮಾಡಲಾಗುತ್ತದೆ.ಜನ ಕುಡಿಯುತ್ತಾ ಊಟ ಮಾಡುವ ಸಂದರ್ಭದಲ್ಲಿ ಈ ಕಡೆ ಓಟಿಂಗ್ ಮುಗಿದಿರುತ್ತದೆ.ಭಾಗಶಃ ರಾಯಲಸೀಮಾ ಭಾಗದಲ್ಲಿ ಈ ಮಾದರಿಯ ಚುನಾವಣೆ ನಡೆಯುತ್ತದೆ ಎನ್ನುವುದು ಆತನ ಮಾತು.ಅದು ನಿಜವೂ ಹೌದು!

ಈ ಪುರುಷಾರ್ಥಕ್ಕಾಗಿ,ಈ ದುಷ್ಟರಿಗಾಗಿ ಸ್ವಾತಂತ್ರ್ಯ ಬೇಕಿತ್ತಾ ಅನ್ನಿಸುತ್ತದೆ.ಉಳಿದಿದ್ದು ಮುಂದಿನ ವಾರಕ್ಕೆ…



ನಿಮ್ಮವನು-ಲಕ್ಷ್ಮೀಕಾಂತ ನಾಯಕ

ಭಾನುವಾರ, ಏಪ್ರಿಲ್ 5, 2020

ಮೂಲಭೂತವಾದ ಎನ್ನುವ ರಣಹದ್ದು ರೆಕ್ಕೆ ಬಿಚ್ಚಲಿದೆಯಾ?

ಮೂಲಭೂತವಾದ ಎನ್ನುವ ರಣಹದ್ದು ರೆಕ್ಕೆ ಬಿಚ್ಚಲಿದೆಯಾ?

ಈಗ ದೇಶವ್ಯಾಪಿ  ತಬ್ಲಿಘ್ ಜಮಾತ್ಸ ಸುದ್ದಿ ಹರಿದಾಡುತ್ತಿದೆ.ಇದು ಎಷ್ಟೊಂದು ತೀವ್ರತೆ ಪಡೆದುಕೊಂಡಿದೆ ಎಂದರೆ ಭಾರತದ ಮುಸ್ಲಿಮರೆಲ್ಲರೂ ರಾಕ್ಷಸರು ಮತ್ತು ಆ ರಾಕ್ಷಸರು ಭಾರತದ ಇತರೆ ಸಮುದಾಯಗಳ ನಾಶಕ್ಕೆ ಸಂಕಲ್ಪ ತೊಟ್ಟಿದ್ದಾರೆ ಎನ್ನುವಂತೆ ಬಿಂಬಿಸಲಾಗುತ್ತಿದೆ.ಒಬ್ಬ ಮಾಹಾಶಯ ಮುಂದುವರೆದು ಟಿವಿ ಸಂದರ್ಶಕರೊಬ್ಬರು ಕೇಳಿದ ಪ್ರಶ್ನೆಗೆ ತಬ್ಲಿಘ್ ಜಮಾತನ ಸಮಾವೇಶದ ಹಿಂದೆ ಕರೋನಾ ವೈರಸ್ಸು ಹರಡುವ ತಂತ್ರವಿದೆ,ಇದು ವ್ಯವಸ್ಥಿತ ಸಂಚು,ಭಯೋತ್ಪಾದನೆಯ ಒಂದು ಭಾಗ ಎನ್ನುವಂತೆ ಅತಿ ಸುಂದರವಾಗಿ,ತಾರ್ಕಿಕ ಎನ್ನುವಂತೆ ವಿವರಣೆಯನ್ನು ಕೊಟ್ಟಿದ್ದಾನೆ.ಇದಾದ ನಂತರ ವಾಟ್ಸಪ್ಪು ಪೇಸುಬುಕ್ಕುಗಳಲ್ಲಿ ಮುಸ್ಲೀಮರೊಂದಿಗೆ ಯಾವುದೇ ವ್ಯವಹಾರಗಳನ್ನು ಮಾಡದಿರಿ ಎನ್ನುವಂತಹ ಸಂದೇಶಗಳು ಹರಿದಾಡತೊಡಗಿವೆ.ಯುವಕರು ಸೇರಿದಂತೆ ಭಾರತದ ಬಹುತೇಕ ಜನ ಮುಸ್ಲೀಮರ ವಿರುದ್ಧ ಕೆಂಡ ಕಾರತೊಡಗಿದ್ದಾರೆ.ಅನಾಹುತಗಳಿಗೆ ಮುಂದಾಗುವಂತಹ ವಾತಾವರಣ ಉಂಟಾಗಿದೆ.ಇದು ಮತ್ತೊಂದು ಸುತ್ತಿನ ಭಯಾನಕ ಧರ್ಮ ಸಂಘರ್ಷದ ಮುನ್ನುಡಿಯಾ ಎನ್ನುವ ಪ್ರಶ್ನೆ ಅನೇಕರನ್ನು ಕಾಡತೊಡಗಿದೆ.ಬಹುತೇಕ ಮುಸ್ಲಿಂ ಸಮುದಾಯಗಳು ಅವಮಾನಗಳಿಂದ ಮತ್ತು ಉದ್ರಿಕ್ತ ಜನರ ತುಛ್ಛ ನೋಟಗಳಿಂದ ಮನೆಯ ಹೊರಗೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ.ಇದು ನಿಜಕ್ಕೂ ಆತಂಕಕಾರಿ ವಿಷಯ.ಕೋಮು ದಳ್ಳುರಿಗೆ ಕಾದು ಕುಳಿತ ಕೋಮುವಾದಿ ರಾಕ್ಷಸರು ತಮ್ಮ ಉಗ್ರಸ್ವರೂಪದ ಮುಖವಾಡ ತೋರಿಸುವ ಆತುರದಲ್ಲಿದ್ದಾರೆ.ಬಹುಶಃ 144 ಜಾರಿಯಲ್ಲಿರದೇ ಹೋಗಿದ್ದರೆ ಹಿಂಸಾಚಾರಗಳು ಪ್ರಾರಂಭವಾಗುತ್ತಿದ್ದವೇನೋ,ಸಾಮಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳು ಆ ಸೂಚನೆಯನ್ನು ತೋರಿಸುತ್ತಿವೆ!

ಏನಿದು ತಬ್ಲಿಘ್ ಜಮಾತ್?

ಮುಸ್ಲಿಮ್ ಸಮುದಾಯದ ಸಂಪ್ರದಾಯ ನಡೆನುಡಿಗಳನ್ನು ಮರೆತ ಮತ್ತು ಹಿಂದೂಗಳೊಂದಿಗೆ ಸೇರಿ ರೈತಾಪಿ ಜೀವನ ನಡೆಸುತ್ತಾ ಹಿಂದೂಗಳ ಆಚರಣೆಯನ್ನು ರೂಢಿಸಿಕೊಂಡಿರುವ ಸಾಮಾನ್ಯ ಮುಸ್ಲೀಮರಿಗೆ ಮುಸ್ಲಿಂ ಧಾರ್ಮಿಕ ವಿಧಿವಿಧಾನಗಳನ್ನು ತಿಳಿಸುವ ಒಂದು ಆಂದೋಲನ.ಈ ಆಂದೋಲನ ಉದ್ದೇಶ ಶಾಂತಿಯನ್ನು ಸ್ಥಾಪಿಸುವುದನ್ನು ಹೊಂದಿದೆ.ಇದು ರಾಜಕೀಯೇತರವಾಗಿದ್ದು ಇದರ ಕಾರ್ಯಕರ್ತರು ಮೌಖಿಕವಾಗಿ ಸುನ್ನಿ ಸಮುದಾಯದ ಸಾಮಾನ್ಯ ಮುಸ್ಲೀಮರಿಗೆ ಧರ್ಮದ ಆಚಾರ ನಡೆ ನುಡಿಗಳನ್ನು ಕಲಿಸುವ ಉದ್ದೇಶವನ್ನು ಹೊಂದಿದೆ.1927ರಲ್ಲಿ ಮೌಲಾನಾ ಮಹ್ಮದ್ ಇಲ್ಯಾಸ್ ಖಾಂದಾಲಾ ಹುಟ್ಟು ಹಾಕಿದ  ಈ ಆಂದೋಲನ ಅತ್ಯಂತ ಶೀಘ್ರವಾಗಿ ಜಗತ್ತಿನ ನೂರೈವತ್ತಕ್ಕೂ ಹೆಚ್ಚು ರಾಷ್ಟ್ರಗಳನ್ನು ವ್ಯಾಪಿಸಿ ಸುಮಾರು ಎಂಟು ನೂರು ಅನುಯಾಯಿಗಳನ್ನು ಹೊಂದಿದೆ.ಹಿಂದೂ ಅಷ್ಟೇ ಅಲ್ಲ ಜಗತ್ತಿನಾದ್ಯಂತ ಇತರ ಧರ್ಮೀಯರೊಂದಿಗೆ ಬದುಕುತ್ತಾ ಅವರ ಆಚಾರ ಸಂಪ್ರದಾಯಗಳನ್ನು ರೂಢಿಸಿಕೊಂಡಿರುವ ಮುಸ್ಲಿಮರನ್ನು ಪುನಃ ಮರಳಿ ಇಸ್ಲಾಂ ಧರ್ಮದ ತೆಕ್ಕೆಗೆ ತರುವುದು ಈ ತಬ್ಲಿಘ್ ಜಮಾತ್ನ ಉದ್ದೇಶ.ಆದರೆ ಭಾರತದ ಕೋಮುವಾದಿ ರಾಕ್ಷಸರು ಇದೊಂದು ಉಗ್ರವಾದಿ ಸಂಘಟನೆ ಮರ್ಕಜ್ ನಿಜಾಮುದ್ದೀನನಲ್ಲಿ ಭಯೋತ್ಪಾದಕ ಕೃತ್ಯ ನಡೆಸುವ ಸಂಚನ್ನು ಹೊಂದಿತ್ತು ಎನ್ನುವಂತೆ ಪ್ರಚಾರ ಮಾಡಲೆತ್ನಿಸುತ್ತಿವೆ.ಜಾಗತಿಕವಾಗಿ ಮೂನ್ನೂರು ಜನ ಧರ್ಮ ಗುರುಗಳು ಸೇರಿ ಸುಮಾರು ನಾಲ್ಕು ಸಾವಿರ ಜನ ಸಮೂಹದ ಈ ಕಾರ್ಯಕ್ರಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಿಗಾವಣೆ ಇರುವ ದಕ್ಷಿಣ ದೆಹಲಿಯ ಮರ್ಕಾಜ್ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದಿತ್ತು.

ಚೀನಾ ಮತ್ತು ಇಟಲಿ ಸೇರಿದಂತೆ ಈ ಕರೋನಾ ವೈರಾಣಿನ ಭೀಭತ್ಸ್ಯ ಸುದ್ದಿಗಳು ಜಾಗತಿಕವಾಗಿ ಹರಡಿತ್ತಾದರೂ ಅದಿನ್ನೂ ಭಾರತದಲ್ಲಿ ಕಲ್ಲೋಲ ಸೃಷ್ಟಿಸಿರಲಿಲ್ಲ.ಈ ವೈರಾಣು ಮೊಟ್ಟ ಮೊದಲ ಬಾರಿಗೆ ಪತ್ತೆಯಾದದ್ದು ಚೀನಾದ ವುಹಾನ್ ನಗರದಲ್ಲಿ ನವಂಬರ್ ಹದಿನೇಳು 2019ರಂದು.ನಂತರ ಅದು ಇಡೀ ಚೀನಾವನ್ನು ಆಕ್ರಮಿಸಿದ್ದಲ್ಲದೆ ಇಡೀ ಜಗತ್ತನ್ನು ವ್ಯಾಪಿಸಿ ಬಿಟ್ಟಿತು.ಸಾವಿನ ಸುದ್ದಿಗಳು ಬಹು ವಿಜೃಂಭಣೆಯಿಂದ ಬರತೊಡಗಿದವು.ನಾವೂ ಅಂದರೆ ಭಾರತೀಯರು ಸಾವಿನ ಸುದ್ದಿ ಬರುತ್ತಿರುವ ದಿಕ್ಕಿನೆಡೆಗೆ ಕ್ಯಾಜುಯಲ್ ಆಗಿ ನೋಡತೊಡಗಿದೇವು;ಪ್ರಿಕಾಷನ್ ಬಗ್ಗೆ ಯೋಚಿಸಲಿಲ್ಲ.ಭಾರತಕ್ಕೆ ಅಮೇರಿಕಾ ಅಧ್ಯಕ್ಷ ಟ್ರಂಪ್ ಬರುವವನಿದ್ದನಲ್ಲಾ?ಅದಕ್ಕೆ ಗೋಡೆಯ ಸಿದ್ಧತೆ ಇತ್ಯಾದಿಗಳಲ್ಲಿ ಭಾರತ ಸರ್ಕಾರ ತನ್ನನ್ನು ತಾನು ತೊಡಗಿಸಿಕೊಂಡಿತು.ಟ್ರಂಪ್ ಬಂದ,ಕರೆದುಕೊಂಡು ಹೋಗಿ ತೋರಿಸಿದ ಸ್ಥಳಗಳನ್ನೆಲ್ಲಾ ನೋಡಿ ಆತ ಹೋದ.ಫೆಬ್ರವರಿ 25 2020.ಇದಾದ ನಂತರವೂ ಭಾರತ ಸರ್ಕಾರ ಆ ಸಮಸ್ಯೆಯ ಕುರಿತು ಗಂಭೀರವಾಗಿ ಯೋಚಿಸಲಿಲ್ಲ.ಈ ಮಧ್ಯೆ ಕರೋನಾ ಭಯಕ್ಕೆ ಜಗತ್ತಿನಾದ್ಯಂತ ಹಂಚಿ ಹೋದ ಭಾರತೀಯ ಪ್ರಜೆಗಳು ತಾಯಿ ನಾಡನ್ನು ಸೇರುವ ಧಾವಂತದಲ್ಲಿದ್ದರು.ಇತ್ತ ಸರ್ಕಾರದ ಗಮನಕ್ಕೆ ಬಾರದಂತೆ ಸುಮಾರು ಹದಿನೈದು ಲಕ್ಷಕ್ಕೂ ಹೆಚ್ಚು ಜನರು ಭಾರತವನ್ನು ಪ್ರವೇಶಿಸಿಬಿಟ್ಟರು.ಏರ್ಪೋರ್ಟುಗಳಲ್ಲಿ ಯಾವುದೇ ತಪಾಷಣೆಗಳು ನಡೆಯಲಿಲ್ಲ!ಮತ್ತು ವಿಮಾನ ಹಾರಾಟವನ್ನೂ ತಡೆಯಲಿಲ್ಲ.ಗಂಡಾಂತರ ಮನೆ ಹೊಕ್ಕ ಮೇಲೆ ಭಾರತ ಸರ್ಕಾರ ವಿಮಾನ ಹಾರಾಟವನ್ನು ನಿಷೇಧಿಸಿತು.ಊರು ಹಾಳಾದ ಮೇಲೆ ಕೋಟೆ ಬಾಗಿಲು ಹಾಕಿದಂತೆ!

ಮರ್ಕಜ್ ನಿಜಾಮುದ್ದೀನ್

ದಕ್ಷಿಣ ದೆಹಲಿಯಲ್ಲಿರುವ ಮರ್ಕಜ್ ನಿಜಾಮುದ್ದೀನ್ ತಬ್ಲಿಘ್ ಜಮಾತನ ಪ್ರಧಾನ ಕೇಂದ್ರವಾಗಿದೆ.ಈ ಮೇಲೆ ತಿಳಿಸಿದಂತೆ ಅಲ್ಲಿನ ಮೌಲ್ವಿಗಳು ಈ ಮೊದಲೇ ಸರ್ಕಾರಕ್ಕೆ ಸಮ್ಮೇಳನ ನಡೆಸುತ್ತಿರುವುದಾಗಿ ತಿಳಿಸಿತ್ತಲ್ಲದೆ ಅನುಮತಿಯನ್ನೂ ಕೋರಿತ್ತು.ಅಣ್ಣಾ ಹಜಾರೆಯನ್ನು ಬೀದಿಗಿಳಿಸಿ ಮುಸ್ಲೀಮರ ಒಲವು ಗಳಿಸಿ ಕಾಂಗ್ರೇಸ್ಸಿನೊಂದಿಗೆ ಒಪ್ಪಂದ ಮಾಡಿಕೊಂಡು ರಾಜಕೀಯಕ್ಕೆ ಪ್ರವೇಶಿಸಿ ಎರಡನೆ ಅವಧಿಗೆ ದಿಲ್ಲಲಲಿ ಗದ್ದುಗೆ ಏರಿರುವ ಅರವಿಂದ್ ಕೇಜ್ರಿವಾಲನಿಗೆ ಈ ಸಮ್ಮೇಳನದ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು.ಯಾವುದೇ ದೇಶದ್ರೋಹದ ಆಪಾದನೆಗಳಿರದ ಕೇವಲ ಶಾಂತಿ ಮತ್ತು ಧರ್ಮ ಪ್ರಚಾರದ ಆಶಯವನ್ನು ಹೊಂದಿದ್ದ ಈ ಧಾರ್ಮಿಕ ಸಂಸ್ಥೆ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವೆಲ್ ಅವರನ್ನು ಅತಿಥಿಯಾಗಿ ಆಹ್ವಾನಿಸಿತ್ತು.ಅಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅವಗಾಹನೆಯಲ್ಲಿಯೇ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು.ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಉಭಯ ಸರ್ಕಾರಗಳಿಗಿತ್ತು!ಇದಲ್ಲದೆ ದೇಶದಲ್ಲಿ ಗುಪ್ತಚರ ಇಲಾಖೆ,ಪೋಲಿಸ್ ಇಲಾಖೆ ಮತ್ತು ಇತರ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿ ಇಲಾಖೆಗಳೂ ಮಾಹಿತಿ ಸಂಗ್ರಹಿಸಿರುತ್ತವೆ;ಕಾರ್ಯಕ್ರಮ ಸಣ್ಣದಲ್ಲಲ,ಮಾರ್ಚ್ 10ರಿಂದ ಆರಂಭವಾಗಿರುವ ಆ ಕಾರ್ಯಕ್ರಮದ ಸಿದ್ಧತಗಳು ಮಾರ್ಚ್ 24ರ ವರೆಗೆ ನಡೆದಿವೆ.ಈ ಮಧ್ಯೆ ಆ ಕಾರ್ಯಕ್ರಮಕ್ಕೆ ಅಥವಾ ಮರ್ಕಜ್ ನಿಜಾಮುದ್ದೀನ ಕೇಂದ್ರಕ್ಕೆ ಸುಮಾರು 6500 ರಿಂದ ಏಳು ಸಾವಿರ ಜನ ಭೇಟಿ ನೀಡಿದ್ದಾರೆ.ನಿಮಗೆ ಗೊತ್ತಿರಲಿ:ಒಂದೇ ದಿನ ಸುಮಾರು ನಾಲ್ಕು ಸಾವಿರ ಜನ ಸೇರಿದ್ದಾರೆ!ಅದು ಆರು ಅಂತಸ್ತುಗಳ ಬಹು ಕೊಠಡಿಗಳ ಕಟ್ಟಡ,ಅದಿಷ್ಟೂ ಜನ ಆ ಇಕ್ಕಟ್ಟಿನಲ್ಲೇ ವಾಸಿಸಿದ್ದಾರೆ.ಸ್ಥಳ ಅಭಾವದಿಂದ ಒಂದಿಷ್ಟು ಜನ ದೆಹಲಿಯ ವಸತಿಗೃಹಗಳಲ್ಲೂ ನೆಲಸಿದ್ದಾರೆ.

ಸರಾಸರಿ ಈ ಕಾರ್ಯಕ್ರಮದಲ್ಲಿ ಭಾಗಿಯಾದ ಜನಗಳ ಸಂಖ್ಯೆ ಇಂತಿದೆ:ದೆಹಲಿಯ ಮುಖ್ಯಮಂತ್ರಿ ಕೊಟ್ಟ ಅಂಕಿ ಅಂಶಗಳ ಪ್ರಕಾರ 2346 ಜನರನ್ನು ಬುಧವಾರ ಮರ್ಕಜ್ ನಿಜಾಮುದ್ದೀನ್ ಕಟ್ಟಡದಿಂದ ತೆರವುಗೊಳಿಸಲಾಗಿದೆ.ಈ ಪೈಕಿ 536 ಜನರನ್ನು ಆಸ್ಪತ್ರೆಗೆ ದಾಖಲಿಸಿದರೆ 167 ಜನರನ್ನು ಅಂದು ಕ್ವಾರೆಂಟೈನ್ನಲ್ಲಿ ಇಡಲಾಗಿದೆ.ಆ ಕ್ವಾರೆಂಟೈನ್ ತುಘಲಕಬಾದನ ಹಂಗಾಮಿ ಕ್ವಾರಂಟೈನ್,1810 ಜನರನ್ನು ನಿರೀಕ್ಷಣೆಯಲ್ಲಿ ಇಟ್ಟುಕೊಳ್ಳಲಾಗಿದೆ.ಒಟ್ಟು ಮಾರ್ಚ್ 13ರಂದು ಸಮ್ಮೇಳನದಲ್ಲಿ ಸೇರಿದ ಜನ 3500.ಮರ್ಕಜ್ ಕೇಂದ್ರ ರಾಜ್ಯ ಸರ್ಕಾರಕ್ಕೆ ಸೇರಿದ ಜನಗಳ ಸಂಖ್ಯೆಯ ಕುರಿತು ಮತ್ತು ಪ್ರತಿನಿಧಿಗಳ ಕುರಿತು ತಪ್ಪು ಮಾಹಿತಿ ನೀಡಿದೆ ಎನ್ನುವುದೊಂದು ಆರೋಪವೂ ಇದೆ.

ಇದಾದ ಮೇಲೆ ಮಾರ್ಚ್ 24ರಂದು ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದೇಶವನ್ನು ಕುರಿತು ಭಾಷಣ ಮಾಡುತ್ತಾ ತರಾತುರಿಯಲ್ಲಿ ಲಾಕ್ ಡೌನ್ ಘೋಷಣೆ ಮಾಡಿಬಿಟ್ಟರು.ಇಷ್ಟೊತ್ತಿಗೆ ಆಗುವ ಅನಾಹುತಗಳು ಆಗಿ ಬಿಟ್ಟಿದ್ದವು!ಇದಾದ ಮೇಳೆ ಮೈಕೊಡವಿ ಆಕಳಿಸಿ ಎದ್ದರು ನೋಡಿ ಕೋಮುವಾದಿಗಳು?ತಬ್ಲಿಘ್ ಜಮಾತ್ ಒಂದು ಪೂರ್ವ ನಿಯೋಜಿತ ಸಂಚು,ಇದು ಕರೋನಾ ಭಯೋತ್ಪಾದನೆ ಎಂದರು;ಅದಕ್ಕೆ ಇಂಬು ಕೊಡುವಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇಂಡೋನೇಷಿಯಾದ ಒಂಬತ್ತು ಜನ ತೆಲಂಗಾಣದಲ್ಲಿ ಮರಣಿಸಿದರು;ಅವರು ಕರೋನಾ ಪಾಸಿಟಿವ್!ಈ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಮೊಟ್ಟಮೊದಲ ಸಾವಾದದ್ದು ಕರ್ನಾಟಕದ ತುಮಕೂರು ಜಿಲ್ಲೆಯ ಸಿರಾದ 60 ವರ್ಷ ವಯಸ್ಸಿನ ಮುಸ್ಲಿಂ ವೃದ್ಧನದು.ಸಾವಿನ ನಂತರ ಆತನ ಮಕ್ಕಳ ಮತ್ತು ಹೆಂಡತಿಯರ ಸಂಖ್ಯೆ ಬಹು ವಿಧದಲ್ಲಿ ಚರ್ಚಿತವಾಗಿದ್ದೊಂದು ಬೇರೆ ಕಥೆ.ಈತನ ಕರೋನಾ ಮೂಲ ಹುಡುಕಲು ಹೊರಟಾಗ ಆತನ ದೆಹಲಿ ಪ್ರವಾಸ ಬೆಳಕಿಗೆ ಬಂದಿತು.ನಂತರ ಈ ತಬ್ಲಿಘ್ ಜಮಾತ್!ಆಶ್ಚರ್ವೆಂದರೆ ಕರ್ನಾಟಕದಲ್ಲಿ ಮೊದಲ ಸಾವಾದದ್ದು ಕಲಬುರಗಿಯಲ್ಲಿ,ಆತನೂ ಮುಸ್ಲಿಂ!ಇವು ಕಾಕತಾಳೀಯವಾದರೂ ಹಿಂದೂ ಮೂಲಭೂತವಾದಿಗಳ ಅವ್ಯಕ್ತ ರಾಕ್ಷಸನ ಜಾಗೃತಿಗೆ ಕಾರಣವಾಯಿತು!

ಆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಒಟ್ಟು ಇದುವರೆಗೆ ಕರ್ನಾಟಕದಲ್ಲಿ ಗುರುತಿಸಲಾದ ಜನ 300 ಎಂದು ಹೇಳಲಾಗುತ್ತಿದೆ.ಈ ಪೈಕಿ 78 ಜನ ಕ್ವಾರಂಟೈನಿನಲ್ಲಿದ್ದಾರೆ.ಆಂದ್ರ ಪ್ರದೇಶದಲ್ಲಿ 711 ಜನರನ್ನು ಪತ್ತೆ ಮಾಡಲಾಗಿದೆ.ತಮಿಳುನಾಡಿನಿಂದ ಭಾಗವಹಿಸಿದವರ ಸಂಖ್ಯೆ 1031,ಇದರಲ್ಲಿ 300 ಜನರನ್ನು ಪತ್ತೆ ಹಚ್ಚಲಾಗಿದೆ,400 ಜನ ದೆಹಲಿಯಲ್ಲಿ ಸಿಕ್ಕಿ ಹಾಕಿಕೊಂಡಿರು ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ತೆಲಂಗಾಣದಿಂದ 400 ಜನ,ಇವರು ಸಮ್ಮೇಳನದಿಂದ ಬರುತ್ತಾ 10 ಜನ ಇಂಡೋನೆಷಿಯಾದ ಪ್ರಜೆಗಳನ್ನು ಕರೆತಂದಿದ್ದಾರೆ.ಆ ಪೈಕಿ ಒಂಬತ್ತು ಜನ ಮರಣಿಸಿದ್ದಾರೆ.ಉತ್ತರ ಪ್ರದೇಶದ ಹತ್ತು ಜಿಲ್ಲೆಗಳ ಸುಮಾರು 569,ಹರಿಯಾಣದ 480 ಜನ,ರಾಜಸ್ಥಾನದ 183 ಜನ,ಕಾಶ್ಮೀರದ ಪಟ್ಟಿ 800 ಜನ!ಕಾಶ್ಮೀರದಲ್ಲಿ 380 ಜನರನ್ನು ಪತ್ತೆ ಹಚ್ಚಿ ಕ್ವಾರಂಟೈನಿನಲ್ಲಿ ಇಡಲಾಗಿದೆ.ನಿಜಕ್ಕೂ ಈ ಸಮ್ಮೇಳನ ಆತಂಕಕಾರಿಯೇ,ಈ ಸಂದರ್ಭದಲ್ಲಿ ಇದು ನಡೆಯಬಾರದಿತ್ತು.ಇದರ ಅರಿವಿದ್ದು ಅಲ್ಲಿನ ಸರ್ಕಾರ,ಆ ಜಿಲ್ಲೆಯ ಡಿಸಿ,ಎಸ್ಪಿ ಏನು ಮಾಡುತ್ತಿದ್ದರು ಎನ್ನುವುದು ಬಹು ಮುಖ್ಯ ಪ್ರಶ್ನೆ!

ನಂತರದ ಬೆಳವಣಿಗೆಯಲ್ಲಿ ದೇಶದ ಇತರ ರಾಜ್ಯಗಳು ಎಚ್ಚೆತ್ತು ಸಮ್ಮೇಳನದಲ್ಲಿ ಭಾಗವಹಿಸಿವರಿಗೆ ಪರೀಕ್ಷೆಗೆ ಒಳಪಡುವ ಕರೆಯನ್ನು ಕೊಟ್ಟವು,ಜನ ಸ್ಪಂದಿಸಲಿಲ್ಲ.ಈ ಅನಾದರಣೆಯೇ ಕೋಮುವಾದಿಗಳಿಗೆ ಇದು ಷಡ್ಯಂತ್ರ ಎಂದು ಸುದ್ದಿ ಹಬ್ಬಿಸುವ ಸಂಚಿಗೆ ಇಂಬು ನೀಡಿತು.ಅದರ ಪರಿಣಾಮವೀಗ ನಾವು ಕಾಣುತ್ತಿದ್ದೇವೆ!ಏಕೆ ಇವರೆಲ್ಲರೂ ಅವಿತು ಕುಳಿತರು ಎನ್ನುವ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಎಲ್ಲಿ ತಮ್ಮನ್ನು ದೇಶದ್ರೋಹಿಗಳ ಪಟ್ಟಕ್ಕೆ ಸೇರಿಸುತ್ತಾರೇನೋ ಎನ್ನುವ ಆತಂಕ ಅವರನ್ನು ಕಾಡತೊಡಗಿತು.ಭಯಗೊಂಡ ತುಂಬಾ ಜನ ಮನೆಯಿಂದ ಹೊರಬರಲಿಲ್ಲ.

ಪ್ರವಾಸಿ ವೀಸಾ

ಮರ್ಕಜ್ ಜಮಾತ್ ಸಮ್ಮೇಳನಕ್ಕೆ ವಿದೇಶದಿಂದ ಭಾಗವಹಿಸಿ ಧರ್ಮ ಗುರುಗಳು ಇಲ್ಲೊಂದು ತಪ್ಪು ಮಾಡಿದ್ದಾರೆ.ಇದರಿಂದಾಗಿ ಸರ್ಕಾರ ದಾರಿ ತಪ್ಪಿತಾ ಎನ್ನುವ ಒಂದು ಸಂದೇಹ ಕಾಡುತ್ತದೆ.ಇದರ ಬೆನ್ನಲ್ಲೆ ಭಾರತದ ರಕ್ಷಣಾ ಇಲಾಖೆಯ ವೈಫಲ್ಯ ಎದ್ದು ಕಾಣಿಸುತ್ತದೆ.ಅಂದರೆ ಪ್ರವಾಸಿ ವೀಸಾ ಬಳಸಿಕೊಂಡು ಭಾರತದಲ್ಲಿ ಯಾವ ವಿದೇಶಿಗನೂ ಸುಲಭವಾಗಿ ಪ್ರವೇಶಿಸಿ ಏನು ಬೇಕಾದರೂ ಮಾಡಬಹುದು ಎಂದು.ಇಲ್ಲಿ ಏರ್ ಪೋರ್ಟಿನ ಸಿಬ್ಬಂದಿಗಳ ಕಾರ್ಯಕ್ಷಮತೆ ಮತ್ತು ಅವರ ನಿರ್ಲಕ್ಷ್ಯ ಧೋರಣೆ ಎದ್ದು ಕಾಣಿಸುತ್ತದೆ.ಪ್ರವಾಸದ ನೆಪದಲ್ಲಿ ಭಾರತವನ್ನು ಪ್ರವೇಶಿಸುವವರ ಸೂಕ್ತ ಮಾಹಿತಿ ಸಂಗ್ರಹಿಸುವ ನಿಯಾಮವಳಿಗಳನ್ನು ನಮ್ಮ ಸರ್ಕಾರದ ಅಧಿಕಾರಿಗಳು ಸೂಕ್ತವಾಗಿ ಪಾಲಿಸುತ್ತಿಲ್ಲವೆಂದು ಅರ್ಥ.ಈ ಸೋಮಾರಿತನ ಮತ್ತು ನಿರ್ಲಕ್ಷ್ಯ ಧೋರಣೆಯಿಂದ ಭಾರತ ಪದೇಪದೇ ಘಾಸಿಗೊಳಗಾಗುತ್ತಿದೆ.ಯಾವ ಸರ್ಕಾರವಿದ್ದರೇನು?ಒಬ್ಬ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿ ಸುಂದರವಾದ ಭಾಷಣಗಳನ್ನು ಮಾಡಬಹುದೇ ಹೊರತು ನಾಗರಿಕ ಸೇವಾ ವರ್ಗ ದಕ್ಷತೆಯ ಸೇವೆ ನಿರ್ವಹಿಸದಿದ್ದರೆ ಏನಿದ್ದು ಏನು ಪ್ರಯೋಜನೆ?

ಸಿಎಎ,ಎನ್ ಆರ್ ಸಿ ಯಿಂದ ಭಾರತ ಹೊತ್ತಿ ಉರಿಯುತ್ತಿತ್ತು.ಮುಸ್ಲಿಮರು ಮತ್ತು ಎಡಪಂಥೀಯರ ಆಕ್ರೋಶ ಮುಗಿಲು ಮುಟ್ಟಿತ್ತು.ದೇಹಲಿಯಲ್ಲಿ ನಡೆದ ಟ್ರಂಪ್ ಪ್ರವಾಸ ಕಾಲದ ಹಿಂಸಾಚಾರ 2002 ಗುಜರಾತ್ ಹಿಂಸಾಚಾರವನ್ನು ನೆನಪಿಸುವಂತಿತ್ತು.ಸದ್ಯಕ್ಕೆ ಕೇಂದ್ರ ಸರ್ಕಾರದ ಒಂದೊಂದೆ ವೈಫಲ್ಯಗಳು ಬೆಳಕಿಗೆ ಬರತೊಡಗಿದ್ದವು.ಜಿಡಿಪಿ,ಆರ್ಥಿಕತೆ,ಸುಳ್ಳು ಅಭಿವೃದ್ದಿ,ನಿರುದ್ಯೋಗ,ಉದ್ಯಮಗಳ ದಿವಾಳಿ,ಮುಚ್ಚಿ ಹೋಗುತ್ತಿರುವ ಸರ್ಕಾರದ ಕಂಪನಿಗಳು,ಖಾಸಗೀಕರಣ,ಬ್ಯಾಂಕುಗಳ ದಿವಾಳಿತನ...ಹೀಗೆ! ಈ ವೈಫಲ್ಯಗಳಿಂದ ಜನರ ಮನಸ್ಸನ್ನು ಬೇರೆಯ ಕಡೆಗೆ ತಿರುಗಿಸುವ ಜರೂರತ್ತು ಇತ್ತು.ಅದೃಷ್ಟವೆಂಬಂತೆ ಕರೋನಾ ಬಂದಿತು;ದೇಶ ಲಾಕ್ ಡೌನ್ ಆಯ್ತು.ಲಾಕ್ ಡೌನ್ ಯಶಸ್ವಿಯಾಯಿತಲ್ಲವೇ ಮುಂದೆ ಮಾಡುವುದಕ್ಕೆ ಬೇರೇನು ಗದ್ದಲವಿದೆ ಎಂದುಕೊಳ್ಳುವಷ್ಟರಲ್ಲಿ ಈ ತಬ್ಲಿಘ್ ಜಮಾತ್!ಆಯ್ತಲ್ಲಾ?ಇನ್ನು ಮುಸ್ಲಿಮರ ಗತಿ ಅದೋಗತಿ!

ಸಾಮಾಜಿಕ ಜಾಲತಾಣಗಳಲ್ಲಿ ಉದ್ರಿಕ್ತ ಹುಡುಗರು ಹಾಕುತ್ತಿರುವ ಪೋಸ್ಟುಗಳನ್ನು ನೋಡಿ ನಾನೊಂದಿಷ್ಟು ಸಣ್ಣ ಸಣ್ಣ ಬರಹಗಳನ್ನು ಬರೆದೆ,ದೇಶದ ಎಲ್ಲಾ ಮುಸ್ಲೀಮರು ಕೆಟ್ಟವರಲ್ಲ.ತಬ್ಲಿಕ್ ಜಮಾತನ ಉದ್ದೇಶ ಕೆಟ್ಟದ್ದಾಗಿರಲಿಲ್ಲ.ಅದಕ್ಕೇಕೆ ಭಯೋತ್ಪಾದನೆಯ ಲಿಂಕ್ ಹಾಕುತ್ತೀರಿ ಎಂದು ಬರೆದೆ.ನೂರಾರು ಕರೆಗಳು ಬಂದವು.ಒಬ್ಬ ಹುಡುಗ ನನ್ನನ್ನು ಕಮ್ಯುನಿಸ್ಟ್ ಗುಂಪಿಗೆ ಸೇರಿಸಿದ್ದಾನೆ.ಈ ತಬ್ಲಿಘ್ ಜಮಾತ್ ನಡೆಯುವ ಸಂದರ್ಭದಲ್ಲಿ ತಿರುಪತಿಯಲ್ಲಿ ಸುಮಾರು ನಾಲ್ಕು ಜನ ಸಿಕ್ಕಿಹಾಕಿಕೊಂಡಿದ್ದರು;ಸುದ್ದಿಯಾಗಲಿಲ್ಲ;ವೈಷ್ಣವಿದೇವಿ ದೇವಸ್ಥಾನದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು;ಸುದ್ದಿಯಾಗಲಿಲ್ಲ.ಖುದ್ದಾಗಿ ಮಂತ್ರಿ ಮಾಗಧರು,ಮುಖ್ಯಮಂತ್ರಿಗಳು ಲಾಕ್ ಡೌನ್ ಬ್ರೇಕ್ ಮಾಡಿ ಉಳ್ಳವರ ಮದುವೆಗಳಲ್ಲಿ ಭಾಗಿಯಾಗುತ್ತಿದ್ದಾರೆ;ಸುದ್ದಿಯಾಗುತ್ತಿಲ್ಲ.

ಅಸಲು ಜಾಗತಿಕವಾಗಿ ಈ ಕರೋನಾ ವ್ಯಾಪಿಸಿ ಜನ ತತ್ತರಿಸುತ್ತಿರುವ ಸುದ್ದಿಗಳು ವರದಿಯಾಗುತ್ತಿದ್ದರೂ ಕೋಟೆ ಬಾಗಿಲು ಹಾಕಲಿಲ್ಲ;ಇದು ಚರ್ಚೆಯಾಗಲಿಲ್ಲ.

ಮುಸ್ಲಿಮರ ಅನುಚಿತ ವರ್ತನೆ

ಈ ಲೇಖನದ ದ್ದೇಶ ಎಡಬಲಪಂಥಗಳ ವಾದ ಸರಣಿಯಲ್ಲ.ಮೋದಿಜಿಯನ್ನು ಟೀಕಿಸುವ ಉದ್ದೇಶವಲ್ಲ.ಇಡೀ ದೇಶವನ್ನು ಮುಸ್ಲಿಮ್ ಸಮುದಾಯದ ವಿರುದ್ಧ ಎತ್ತಿ ಕಟ್ಟುತ್ತಿರುವ ಕೆಲವರ ಬಗ್ಗೆ.ಮಾನ್ಯ ಚಕ್ರವರ್ತಿ ಸೂಲಿಬೆಲೆಯವರ ಟಿವಿಗೆ ನೀಡಿದ ಹೇಳಿಕೆಯನ್ನು ಗಮನಿಸಿ,ಆತನ ಹೇಳಿಕೆಯಿಂದ ಉದ್ರಿಕ್ತರಾಗಬಹುದಾದ ಆತನ ಅನುಯಾಯಿಗಳು ಮುಸ್ಲಿಂ ಶೇಷಕ್ಕೆ ಕೈ ಹಾಕಿದರೆ?ಹೆಣಗಳಿಗಾಗಿ ಕೆಲ ಪಟ್ಟಭದ್ರರು ಕಾದು ಕುಳಿತಿದ್ದಾರೆ,ಅದರಲಿ;ಈ ಮುಸ್ಲಿಂ ಸೋಂಕಿತರ ಅನುಚಿತ ವರ್ತನೆಯ ಬಗ್ಗೆ ಬರೆಯದಿದ್ದರೆ ಈ ಲೇಖನ ಪೂರ್ಣವಾಗದು.ನನಗೆ ಬಂದಿರುವ ಕೆಲವು ವಿಜಲ್ಸ್ ತುಂಬಾ ಅಸಹ್ಯವನ್ನು ಹುಟ್ಟಿಸುತ್ತಿವೆ.ನೋಟುಗಳಿಗೆ ಎಂಜಲು ಹಚ್ಚುವುದು,ವೈದ್ಯರಿಗೆ ಉಗುಳುವುದು,ತರಕಾರಿಗೆ ಎಂಜಲು ಹಚ್ಚುವುದು,ಸರ್ಕಾರದ ಆದೇಶವಿದ್ದರೂ ಸಾಮೂಹಿಕ ಪ್ರಾರ್ಥನೆಗೆ ಮೊಂಡು ಹಿಡಿಯುವುದು,ಪೋಲೀಸ್ ಮತ್ತು ಆಶಾ ಕಾರ್ಯಕರ್ತರ ಮೇಲೆ ಕಲ್ಲು ತೂರಿರುವುದು...ಹೀಗೆ!ಈ ಕೃತ್ಯಗಳನ್ನು ಮುಸ್ಲೀಮರ ಹೊರತು ದೇಶದಲ್ಲಿ ಇನ್ಯಾರು ಮಾಡಿಲ್ಲ.ಇದನ್ನು ನೋಡುತ್ತಿದ್ದರೆ ನಿಜಕ್ಕೂ ಅವರಿಗೆ ಭಯೋತ್ಪಾದನೆಯ ಮನಸ್ಥಿತಿ ಇದೆಯೇನೋ ಅನ್ನುವ ಅನುಮಾನ ಕಾಡುತ್ತದೆ.ಕೊನೆಯದಾಗಿ ಹೇಳಬೇಕೆಂದರೆ ದೇಶ ಕೊಮುದಳ್ಳುರಿಗೆ ಸಿದ್ಧವಾಗುತ್ತಿದೆ ಎನ್ನುವ ಸೂಚನೆ ಕಾಣಿಸುತ್ತದೆ.ಇದ್ಯಾವುದನ್ನೂ ಯೋಚಿಸದೆ ದೇಶದ ನೇತಾರರು ಚಪ್ಪಾಳೆ ತಟ್ಟಿ,ಘಂಟೆ ಬಾರಿಸಿ,ದೀಪ ಹಚ್ಚಿ ಎನ್ನುವ ಕರೆಗಳನ್ನು ಕೊಡುವುದರಲ್ಲಿ ಮಗ್ನರಾಗಿದ್ದಾರೆ.

ಜನ ಜೈ ಎನ್ನತೊಡಗಿದ್ದಾರೆ!

                                                                                                          ಲಕ್ಷ್ಮೀಕಾಂತ ನಾಯಕ

ಸೋಮವಾರ, ಮಾರ್ಚ್ 30, 2020

ನಂದನವನದಂತಹ ಈ ಸ್ವರ್ಗ ಭೂಮಿಗೆ ಅದೆಲ್ಲಿಂದ ಬಂದು ಒಕ್ಕರಿಸಿತು ಕರೋನಾ?


ನಂದನವನದಂತಹ  ಸ್ವರ್ಗ ಭೂಮಿಗೆ ಅದೆಲ್ಲಿಂದ ಬಂದು ಒಕ್ಕರಿಸಿತು ಕರೋನಾ

ಈ ಕರೋನಾ ಮಹಾ ಮಾರಿ ನಮ್ಮ ದೇಶವನ್ನು ಪ್ರವೇಶಿಸಿರುವ ಈ ಸಂದಿಗ್ಧ ಸಂದರ್ಭದಲ್ಲಿ ಸೋಕಾಲ್ಡ್‌ ಸಮಾಜ ಸೇವಕರು ವಿಚಿತ್ರ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ!ತಾವು ಮಾಡುತ್ತಿರುವುದು ಸರಿಯಾ,ಅರ್ಥಪೂರ್ಣವಾ?ಊಹುಂ,ಒಂದೂ ಗೊತ್ತಿಲ್ಲ.ಐದಾರು ರೂಪಾಯಿಗೆ ದೊರೆಯಬಹುದಾದ ಅತ್ಯಂತ ಕಳಪೆ ಗುಣಮಟ್ಟದ ಮಾಸ್ಕುಗಳನ್ನು ತಂದು ಅಮಾಯಕ ಜನರಿಗೆ ಹಂಚುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.ಹಾಗೆ ಮಾಡುತ್ತಾ ಪ್ರಕಟವಾಗದ ಕೇವಲ ಪಿಡಿಎಫ್‌ಗೆ ಮಾತ್ರ ಸೀಮಿತವಿರುವ ದಿನ ಪತ್ರಿಕೆಗಳಿಗೆ ಸುದ್ದಿ ಕೊಡುವ ಮೂಲಕ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುತ್ತಿದ್ದಾರೆ.ಇದರ ಹಿನ್ನೆಲೆಯಲ್ಲಿ ಮಾನವೀಯ ಕಳಕಳಿ ಇಲ್ಲ.ತಮ್ಮ ಪ್ರಚಾರದ ತೆವಲನ್ನು ಈ ಮೂಲಕ ಈಡೇರಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ.ಭಾರತದ ಹಳ್ಳಿಗಳ ಮುಗ್ಧ ಪ್ರಜೆಯ ಮನೋ ಭೂಮಿಕೆಯ ಮೇಲೆ ಹೀರೋ ಆಗಲೆತ್ನಿಸುವ ಆ ಕ್ರಮ ಅಕ್ಷಮ್ಯ!ಅವು ಅಮಾಯಕ ಜನ;ಹಾಲು ಎಂದು ನಂಬಿಸಿ ವಿಷ ಕೊಟ್ಟರೂ ಕುಡಿದು ಬಿಡುತ್ತವೆ.ಈ ತರಹದ ಉದಾಹರಣೆಗಳನ್ನು ಲಕ್ಷ ಕೊಡಬಹುದು;ಯಾರೋ ಹುಟ್ಟಿಸಿದ ಸುಳ್ಳು ವದಂತಿಗೆ ಕಲ್ಲಿನ ಗಣಪತಿಗೆ ಹಾಲು ಕುಡಿಸಿದ ದೇಶವಿದು;ಅತ್ಯಂತ ಬೇಗ ಸಮೂಹಸನ್ನಿಗೆ ಒಳಗಾಗುತ್ತದೆ.ಇಷ್ಟಕ್ಕೂ ನೀವು ನೀಡುವ ಆ ಅಗ್ಗದ ಮಾಸ್ಕುಗಳಿಂದ ಏನಾದರೂ ಪ್ರಯೋಜನೆ ಇದೆಯಾ ಎಂದು ಪ್ರಶ್ನೆ ಹಾಕಿಕೊಂಡು ಉತ್ತರ ಕಂಡುಕೊಳ್ಳಲು ಯತ್ನಿಸಿದಾಗ...

“ಸದ್ಯಕ್ಕೆ ಜನಗಳು ಹೋಮ್‌ ಕ್ವಾರೆಂಟೈನ್‌ನಲ್ಲಿ ಇರುವ ಅಗತ್ಯವಿದೆ.ಅದೆಲ್ಲದಕ್ಕೂ ಹೆಚ್ಚು ಅಂದರೆ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.ಇಲ್ಲಿ ಮುಖ್ಯವಾಗಿ ಜನಗಳಿಗೆ ಏನಾದರೂ ಸಹಾಯ ಮಾಡಲೇಬೇಕು ಎನ್ನುವುದಾದರೆ ಸ್ಯಾನಿಟೈಜೆಷನ್‌ ಬಗ್ಗೆ ಅರಿವು ಮೂಡಿಸಬೇಕು.ಶುಚಿತ್ವಕ್ಕೆ ಮಹತ್ವ ಕೊಡುವುದನ್ನು ಪ್ರತಿಯೊಬ್ಬರಿಗೂ ತಿಳಿಸಬೇಕು.ಪ್ರತಿ ವಸ್ತುವನ್ನು ಮುಟ್ಟಿದಾಗಲೂ ಸಾಬೂನಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು.ತಮ್ಮ ಕೈಗಳನ್ನು ವೈರಸ್‌ ದೇಹ ಪ್ರವೇಶಿಸಬಹುದಾದ ಕಣ್ಣು,ಬಾಯಿ,ಮೂಗಿನ ಹತ್ತಿರ ತಾರದೆ ಇರಬೇಕು.ಮುಖ್ಯವಾಗಿ ಪರಸ್ಪರರು ಅಂತರ ಕಾಯ್ದುಕೊಳ್ಳಬೇಕು.ಈ ಮಾಸ್ಕಿನಿಂದ ಏನೂ ಪ್ರಯೋಜನೆ ಇಲ್ಲ.ಮಾಸ್ಕು ಯಾರು ಬಳಸಬೇಕು ಎಂದರೆ ಕೆಮ್ಮು,ನೆಗಡಿ,ಜ್ವರ ಇರುವಂತಹ ವ್ಯಕ್ತಿಗಳು ಬಳಸಬೇಕು.ಏಕೆಂದರೆ,ಕೆಮ್ಮಿದಾಗ,ಸೀನಿದಾಗ ಆತನ ಮೂಗು ಮತ್ತು ಬಾಯಿಯಿಂದ ಹೊರ ಚಿಮ್ಮುವ ಕಣಗಳು ಇತರ ವ್ಯಕ್ತಿಗೆ ಸ್ಪ್ರೆಡ್‌ ಆಗದಿರಲಿ ಎಂದು.ನಾರ್ಮಲ್‌ ವ್ಯಕ್ತಿಗೆ ಅದರ ಅಗತ್ಯವಿಲ್ಲ.ಒಂದು ವೇಳೆ ನಾರ್ಮಲ್‌ ವ್ಯಕ್ತಿ ಮಾಸ್ಕ ಧರಿಸಿದಾಗ ಪಕ್ಕದಲ್ಲಿ ಕರೋನಾ ಸೋಂಕಿತ ವ್ಯಕ್ತಿ ಇದ್ದರೆ ಮಾಸ್ಕಿನಿಂದ ಸೋಂಕು ತಗಲುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ಈ ಮಾಸ್ಕಿನಿಂದ ಇನ್ನೊಂದು ತೊಂದರೆ ಇದೆ;ಒಂದು ಮಾಸ್ಕನ್ನು ಹೆಚ್ಚೆಂದರೆ ಆರು ತಾಸು ಬಳಸಬೇಕು.ಅದರ ಬಳಕೆಯ ನಂತರ ಅದನ್ನು ನಾಶ ಮಾಡಬೇಕು.ತುಂಬಾ ಜನ ಕೊಂಡ ಒಂದು ಮಾಸ್ಕನ್ನು ದೀರ್ಘಾವದಿ ಬಳಸುತ್ತಾರೆ,ತಪ್ಪದು.ಮಾಸ್ಕನ್ನು ಆರು ತಾಸು ಮಾತ್ರ ಬಳಸಬೇಕು.ಕೊನೆಯದಾಗಿ ಒಂದು ಮಾತು:ನಾರ್ಮಲ್‌ ವ್ಯಕ್ತಿಗಳು ಮಾಸ್ಕ್‌ ಬಳಸುವ ಅಗತ್ಯವಿಲ್ಲ.ಡಸ್ಟ್‌ ಅಲರ್ಜಿಯಂತಹ ತೊಂದರೆ ಇರುವವರು ಮಾಸ್ಕ್‌ ಬಳಸಬೇಕು.ಈ ಕಲುಷಿತ ವಾತಾವರಣದಲ್ಲಿ ಮಾಸ್ಕ್‌ ಬಳಸುವ ಅಗತ್ಯ ಕಡ್ಡಾಯವಾಗಿದ್ದರೂ ಈ ಕರೋನಾ ನೆಪಕ್ಕೆ ಮಾಸ್ಕ್‌ ಬಳಸುವುದು,ದೀರ್ಘಾವದಿ ಒಂದೇ ಮಾಸ್ಕನ್ನು ಬಳಸುವುದು,ಬಳಸಿದ ಮಾಸ್ಕನ್ನು ಎಲ್ಲಂದರಲ್ಲಿ ಬಿಸಾಕುವುದು ತುಂಬಾ ಅಪಾಯ!”ಎಂದರು ನನ್ನ ವೈದ್ಯ ಸ್ನೇಹಿತರೊಬ್ಬರು.ಇದು ಸತ್ಯ ಕೂಡಾ.ಜಾಗತಿಕವಾಗಿ ಬಹುತೇಕ ವೈದ್ಯರ ಅಭಿಪ್ರಾಯ ಕೂಡಾ ಇದೇ ಆಗಿದೆ.ನಾರ್ಮಲ್‌ ವ್ಯಕ್ತಿ ಕೆಮ್ಮಿದಾಗ,ಸೀನಿದಾಗ ಯಾವ ವೈರಸ್‌ ಸ್ಪ್ರೆಡ್‌ ಆಗುತ್ತವೆ ಹೇಳಿ?ಆದರೆ ಸೋಂಕಿತರು ಮಾತ್ರ ಕಡ್ಡಾಯವಾಗಿ ಮಾಸ್ಕ್‌ ಬಳಸಲೇಬೇಕು;ಬರೀ ಮಾಸ್ಕ್‌ ಬಳಸುವುದಷ್ಟೇ ಅಲ್ಲ;ಅವರು ಸಾಮಾಜಿಕ ಸ್ವಾಸ್ಥ್ಯವನ್ನೂ ಕಾಪಾಡಬೇಕು.ಹೋಮ್‌ ಕ್ವಾರೆಂಟೈನ್‌ ಅಥವಾ ಸರ್ಕಾರದ ನಿಗಾವಣೆಗೆ ಒಳಪಡಬೇಕು.
         

          ಏನಿದು ಮಾಸ್ಕ್‌ ಉಚಿತ ವಿತರಣೆಯ ಹಿನ್ನೆಲೆ?ಮಾಸ್ಕ್‌ ವಿತರಿಸುವ ಮೂಲಕ ಜನರನ್ನು ಕಾಪಾಡಿದಂತಾಗುತ್ತದಾ?ಮಾಸ್ಕ್‌ ಜೀವನಾವಶ್ಯಕ ವಸ್ತುವಾ?ಬಿಡಿ ಸ್ವಾಮಿ ನಾಟಕ!ಸಮಾಜಕ್ಕೆ,ಯಾವ ಮೂಲಭೂತ ಸೌಕರ್ಯಗಳನ್ನೂ ಹೊಂದಿರದ ಅನೇಕ ಹಳ್ಳಿಗಳು ಭಾರತದಲ್ಲಿವೆ.ಅವರಿಗಿನ್ನೂ ತಮ್ಮ ಮೂಲಭೂತ ಹಕ್ಕುಗಳೇ ಲಭ್ಯವಾಗಿಲ್ಲ.ಕೇಂದ್ರ ಸರ್ಕಾರ ಕೆಲವು ಸೌಲಭ್ಯಗಳನ್ನು ಘೋಷಿಸುವುದರ ಮೂಲಕ ಜನರ ಜೊತೆ ನಾವಿದ್ದೇವೆ ಎನ್ನುವ ವಿಶ್ವಾಸ ತುಂಬುವ ಪ್ರಯತ್ನ ನಡೆಸಿತು.ನಿಮಗೆ ಗೊತ್ತೇ?ಭಾರತದ ಬಹುತೇಕ ಹಳ್ಳಿಗರಿಗೆ ಕಾರ್ಮಿಕ ಇಲಾಖೆ ಎನ್ನುವುದೊಂದು ಇದೆ ಎನ್ನುವುದೇ ಗೊತ್ತಿಲ್ಲ.ತುಂಬಾ ಜನ ಜನಧನ್‌ ಖಾತೆಯನ್ನು ಹೊಂದಿಲ್ಲ.ಕೆಲವರ ಹತ್ತಿರ ಇನ್ನೂ ಆಧಾರ್‌ ಕಾರ್ಡೂ ಇಲ್ಲ.ಯಾವ ಬಡವನಿಗೆ ಈ ಸಂದರ್ಭದಲ್ಲಿ ಸರ್ಕಾರದ ಔದಾರ್ಯ ತಲುಪುತ್ತದೆ?ಹೀಗಿರುವಾಗ ಸಮಾಜ ಸೇವೆಯನ್ನು ಮಾಡಲೇಬೇಕು ಎನ್ನುವ ಆಶಯ ಇರುವವರು ಪ್ರಸ್ತುತ ಸಂದರ್ಭದಲ್ಲಿ ಜನರಿಗೆ ಏನು ಅಗತ್ಯ ಎನ್ನುವುದರ ಕುರಿತು ಯೋಚಿಸಬೇಕು.ಹಳ್ಳಿಗರಿಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇರುತ್ತವೆ,ಮಹಿಳೆಯರಿಗೆ ವಿಟಮಿನ್‌ ಮಾತ್ರೆಗಳ ಅಗತ್ಯ ಇರುತ್ತದೆ,ಗರ್ಭಿಣಿ ಸ್ತ್ರೀಯರಿರುತ್ತಾರೆ;ಅವರ ನಿಗಾವಣೆ ಅತ್ಯಗತ್ಯ.

          ಇದೆಲ್ಲದಕ್ಕೂ ಮಿಗಿಲು ಸ್ಯಾನಿಟೈಜೆಷನ್‌ನ ಅರಿವು ಮೂಡಿಸುವುದು!ಪದೇ ಪದೇ ಕೈತೊಳೆದುಕೊಳ್ಳುವುದರ ಬಗ್ಗೆ ಮನ ಮುಟ್ಟುವ ಹಾಗೆ ತಿಳಿಸುವುದು,ಸಾಮಾಜಿಕ ಅಂತರ ಮತ್ತು ಬೇರೆ ವ್ಯಕ್ತಿಯನ್ನು ಮನೆಯೊಳಕ್ಕೆ ಕರೆದುಕೊಳ್ಳುವುದನ್ನು ತಡೆಯುವುದು,ಮತ್ತು ವಲಸಿಗ ಕೂಲಿ ಕಾರ್ಮಿಕರನ್ನು ಸೂಕ್ತ ತಪಾಷಣೆಯ ಹೊರತು ಗ್ರಾಮ ಪ್ರವೇಶಿಸದ ಹಾಗೆ ನಿರ್ಬಂಧಿಸುವುದು.ಸದ್ಯಕ್ಕೆ ಸಮಾಜ ಸೇವಕರ ಅಗತ್ಯವಿಲ್ಲ ಜನಕ್ಕೆ.ಪೋಲಿಸ್‌ ಇಲಾಖೆ,ಆರೋಗ್ಯ ಸಹಾಯಕರು,ಗ್ರಾಮಪಂಚಾಯತಿ,ಗ್ರಾಮಲೆಖ್ಖಿಗರ ಅಗತ್ಯವಿದೆ.ಇದರ ಜೊತೆ ಜನರ ಸಹಕಾರವೂ ಅತ್ಯಗತ್ಯ.ಪ್ರಸ್ತುತ ಸಂದರ್ಭದಲ್ಲಿ ಗ್ರಾಮೀಣ ಭಾಗದವಿದ್ಯಾವಂತ  ಯುವಕರ ಹೆಗಲ ಮಹತ್ತರ ಜವಬ್ದಾರಿ ಇದೆ.ಅಶಿಕ್ಷಿತರು,ಕೆಲ ಮೊಂಡು ಜನಗಳಿಗೆ ಸೂಕ್ತ ರೀತಿಯ ತಿಳುವಳಿಕೆ ನೀಡಬೇಕು.ಜನ ಸಾಮೂಹಿಕವಾಗಿ ಸೇರುವುದನ್ನು ನಿರ್ಬಂಧಿಸಬೇಕು.ಜನ ಬುದ್ದಿಗೇಡಿಗಳ ಹಾಗೆ ವರ್ತಿಸಿದಾಗ ಕೂಡಲೆ ಸಂಬಂಧಿಸಿದವರ ಗಮನಕ್ಕೆ ತರಬೇಕು.

          ಬಿಡಿ,ಅಗ್ಗದ ಮಾಸ್ಕ್‌ ಹಂಚುವ ಆ ಮೂಲಕ ಬಿಟ್ಟಿ ಪ್ರಚಾರ ಪಡೆಯುವ ಸ್ವಾರ್ಥವನ್ನು.ಸ್ವಾರ್ಥಕ್ಕೆ ಇದು ಸೂಕ್ತ ಕಾಲವಲ್ಲ.ಒಂದು ಉಡಾಫೆ ಇಡೀ ಊರನ್ನೇ ಸ್ಮಶಾನ ಮಾಡಬಹುದು.ಈ ಮಾಸ್ಕ್‌ ಆರು ತಾಸಿನ ನಂತರ ಬದಲಾಯಿಸಬೇಕು.ನಿಮ್ಮಿಂದಲೇ ಹೊರಬಿದ್ದ ಕಣಗಳು ಅದರಲ್ಲಿ ತುಂಬಿರುತ್ತವೆ.ಅದನ್ನು ಸೂಕ್ತ ರೀತಿಯಲ್ಲಿ ನಾಶ ಮಾಡಿ.ಮಾಸ್ಕ್‌ ಫ್ಯಾಷನ್‌ ಅಲ್ಲ.

          ಕೊನೆಯದಾಗಿ:ಕರೋನಾ ವೈರಸ್ಸಿಗೆ ಮದ್ದಿಲ್ಲ ಎನ್ನುವುದೇ ಆತಂಕಕಾರಿ ವಿಷಯವಾಗಿದೆ.ಅದು ನೆಗಡಿ ಪ್ರಬೇಧಕ್ಕೆ ಸೇರಿದ ಖಾಯಿಲೆ.ನೆಗಡಿಯೂ ತೀವ್ರವಾಗಿ ಬಾಧಿಸಿದಾಗ ಶ್ವಾಸಕೋಶ ಸಂಬಂಧೀ ತೊಂದರೆಗಳು ಉಂಟಾಗುತ್ತವೆ.ಆ ವೈರಸ್‌ ಸೂಕ್ತ ಔಷಧಿಗಳಿಂದ ನಿಯಂತ್ರಣಕ್ಕೆ ಬರುತ್ತದೆ.ಈ ವೈರಾಣಿಗೆ ಔಷಧಿ ಇಲ್ಲ.ವೈರಸ್‌ ಸೋಂಕಿತ ಪ್ರತಿ ವ್ಯಕ್ತಿಯೂ ಸಾಯುತ್ತಾನೆ ಅಂತ ಅರ್ಥವಲ್ಲ.ಸದ್ಯಕ್ಕೆ ಇದಕ್ಕೆ ಏಕೆ ಹೆದರಬೇಕಾಗಿ ಬಂದಿದೆ ಎಂದರೆ ಇದರ ತೀವ್ರವಾದ ಹರಡುವಿಕೆಯ ಗುಣಕ್ಕಾಗಿ!ಯಾರಲ್ಲಿ ಹೆಚ್ಚು ರೋಗನಿರೋಧಕ ಶಕ್ತಿ ಇದೆ,ಯಾರಲ್ಲಿ ಇಲ್ಲ ಎಂದು ನಿರ್ಧರಿಸುವುದು ಹೇಗೆ?ಅದಲ್ಲದೆ ಇದು ಅರವತ್ತಕ್ಕಿಂತ ಮೇಲ್ಪಟ್ಟ ವಯಸ್ಸಿನ ಹಿರಿಯರಿಗೆ ಮಾರಣಾಂತಿಕವಾಗಿದೆ.ಇದೇ ಭಯವನ್ನು ಉಂಟು ಮಾಡಿದೆ.

          ಏನೇ ಕಷ್ಟಗಳಿರಲಿ,ಭ್ರಾತೃತ್ವ,ಅಣ್ಣ ತಮ್ಮ,ತಂದೆ ತಾಯಿ ಎನ್ನುವ ಭಾವನೆಗಳಿಂದ ಇಡೀ ದೇಶವೇ ಒಂದು ಕುಟುಂಬ ಎಂದು ಬದುಕುತ್ತಿರುವವರು ನಾವು.ಸ್ವರ್ಗ ಭೂಮಿ ಇದು.ಇದು ಸ್ಮಶಾನವಾಗದಿರಲಿ ಎನ್ನುವುದು ಪ್ರಜಾ ಸ್ಪಂದನದ ಆಶಯ.

                                                                                                                  ಲಕ್ಷ್ಮೀಕಾಂತ ನಾಯಕ

ಹೋರಾಟವೂ ಉದ್ದಿಮೆಯಾಗಿ ಹೋದ ಈ ಸಂಕೀರ್ಣ ಕಾಲಘಟ್ಟದ ಕುರಿತು

 ನೀವು ಪರೀಕ್ಷಿಸಿ ನೋಡಿ:ಲಕ್ಷಾಂತರ,ಕೋಟ್ಯಾಂತರ ಸಂಘಟನೆಗಳು ಹೋರಾಟಗಾರರು ಜನ್ಮತಳೆದಿದ್ದಾರೆ;ಅಷ್ಟೇ ಸಮಸ್ಯೆಗಳು ಹೆಚ್ಚಾಗುತ್ತಿವೆ.ಇವೆಲ್ಲವನ್ನೂ ವಿಶ್ಲೇಷಿಸಿ ನೋಡಿದಾಗ ಎ...