*ಕಳ್ಳರು,ಸುಳ್ಳರು,ಲೂಟಿಕೋರರ ಮಾಹಾ ತಂತ್ರಗಳ ಸುತ್ತಾ ಒಂದು ಚಿಂತನೆ*
ಕರ್ನಾಟಕದ ಒಬ್ಬ ವ್ಯಕ್ತಿ ದೂರ ರಾಜ್ಯದ ತಮ್ಮ ಬಂಧುವೊಬ್ಬರಿಗೆ ಕರೆ ಮಾಡುತ್ತಾರೆ,ಉಭಯಕುಶಲೋಪಚಾರದ ನಂತರ ಪವರ್ ಕಟ್ ಬಗ್ಗೆ ಕೇಳುತ್ತಾರೆ;ಆ ಪ್ರಶ್ನೆಗೆ ಅಯೋಮಯಗೊಳ್ಳುವ ಆ ಬಂಧು, “ಪವರ್ ಕಟ್ಟಾ?!ಹಾಗೆಂದರೆ ಏನು?”ಏಂದು ಮರು ಪ್ರಶ್ನೆ ಹಾಕುತ್ತಾಳಂತೆ!ನಂತರ ಈತ ಹೀಗೆಗೆ,ಯಾವಾಗಲೂ ಕರೆಂಟು ಹೋಗುವುದು ಬರುವುದು ಮಾಡುತ್ತಿರುತ್ತದಲ್ಲಾ?ನಮ್ ಕಡೆ ಬೆಂಗಳೂರಿನಲ್ಲೂ ಆಗಾಗ ಹೋಗುತ್ತಿರುತ್ತದಲ್ಲಾ?ಅದನ್ನು ಪವರ್ ಕಟ್ ಅಂತಾರೆ,ಹಾಗೆ ಹೋಗಲ್ಲವಾ ನಿಮ್ಮ ಕಡೆ ಎಂದು ಈತ ಪವರ್ ಕಟ್ ಎನ್ನುವ ಎನ್ನುವ ಶಬ್ದಕ್ಕೆ ಅರ್ಥವಿವರಣೆ ನೀಡಿದ ಮೇಲೆ ಜ್ಞಾನೋದಯಕ್ಕೊಳಗಾಗುವ ಮಹಿಳೆ ನಂತರ ಹೇಳುತ್ತಾಳಂತೆ,
“ಕಳೆದ ಹತ್ತು ಹದಿನೈದು ವರ್ಷಗಳಿಂದ ಹಾಗೆ ಕರೆಂಟ್ ಹೋಗಿರುವುದನ್ನು ನಾನು ನೋಡಿಲ್ಲ!ನಿಜ ಹೇಳಬೇಕು ಎಂದರೆ ಆ ಸಮಸ್ಯೆಯೇ ಇಲ್ಲಿಲ್ಲ.ದಿನದ ಇಪ್ಪತ್ತು ನಾಲ್ಕು ಗಂಟೆ ವಿದ್ಯುತ್ ನಿರಂತರವಾಗಿರುತ್ತದೆ!”ಎಂದು ಆಕೆ ದೃಢೀಕರಿಸಿದಳಂತೆ.ಇದು ಒಬ್ಬ ಭಾಷಣಕಾರ ಭಾಷಣದಿಂದ ಆಯ್ದ ಒಂದು ಉಲ್ಲೇಖ!ಈ ಉಲ್ಲೇಖಕ್ಕೆ ಎಲೆಕ್ಟ್ರಿಷಯನ್ನೂ ಆದ ನನ್ನ ವಿವರಣೆ:
ಯಾವುದೇ ವಿದ್ಯುತ್ ಉಪರಣಗಳ ತಯಾರಿಕಾ ಕಂಪನಿ ವಿದ್ಯುತ್ ಉಪಕರಣಗಳ ತಯಾರಿಕೆಗೆ ಸೂತ್ರವೊಂದನ್ನು ಅನುಸರಿಸುತ್ತದೆ;ಹೇವಿ ಡ್ಯೂಟಿ,ಲೋ ಡ್ಯೂಟಿ ಉಪಕರಣಗಳು ಎಂದು.ಗೃಹ ಬಳಕೆಯ ವಿದ್ಯುತ್ ಪರಿಕರಗಳಾದ ಮಿಕ್ಸಿ,ಗ್ರೈಂಡರ್ ಇತ್ಯಾದಿಗಳು ಲೋ ಡ್ಯೂಟಿ ಉಪಕರಣಗಳು,ಇವುಗಳನ್ನು ನಿರಂತರ ಚಾಲಿತ ಸ್ಥಿತಿಯಲ್ಲಿ ಇಡುವಂತಿಲ್ಲ.ಫ್ಯಾನು,ಟ್ಯೂಬ್ ಲೈಟ್ ಇವು ಹತ್ತನ್ನೆರಡು ತಾಸು ನಿರಂತರ ಬಳಸುವಂಥಹವು;ತದನಂತರ ಅವು ಅತಿಯಾದ ಉಷ್ಣತೆಗೆ ಒಳಗಾಗಿ ವಿಫಲಗೊಳ್ಳುತ್ತವೆ.ಕೃಷಿ ಪಂಪ್ ಸೆಟ್ಟುಗಳು ನಿರಂತರ ಇಪ್ಪತ್ತು ನಾಲ್ಕು ಗಂಟೆ ಚಾಲಿತ ಸ್ಥಿತಿಯಲ್ಲಿದ್ದರೂ ಅವು ಉಷ್ಣತೆಗೆ ಒಳಗಾಗುತ್ತವೆ,ನಂತರದಲ್ಲಿ ಅವುಗಳ ವೈಂಡಿಂಗ್ ವಿಫಲಗೊಂಡು ಸುಟ್ಟು ಹೋಗುತ್ತವೆ.ಭಾರತ ದೇಶದಲ್ಲಿ ವಿದ್ಯುತ್ ಕಂಪನಿಗಳು ಖಾಸಗೀಕರಣಗೊಂಡಿವೆ.ಸರ್ಕಾರಕ್ಕೆ ಷರತ್ತಿನ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿವೆ.ಷರತ್ತು ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ನೀಡುತ್ತೇವೆ ಎನ್ನುವ ಅಂಶವನ್ನು ಒಳಗೊಂಡಿರುತ್ತದೆ.ಮತ್ತು ಹಾಗೆ ಉತ್ತಮ ವಿದ್ಯುತ್ ವಿತರಿಸಲಾಗದ ಸಂದರ್ಭರದಲ್ಲಿ ಗ್ರಾಹಕರಿಗೆ ಉಂಟಾಗುವ ನಷ್ಟವನ್ನು ಕಂಪನಿಯೇ ಭರಿಸಬೇಕು ಎನ್ನುವ ಅಂಶವನ್ನೂ ಒಳಗೊಂಡಿರುತ್ತದೆ.ಸರ್ಕಾರದ ನಿಬಂಧನೆಯ ಪ್ರಕಾರ ವಿದ್ಯುತ್ ಕಂಪನಿಗಳು 415
ವಿ ಮತ್ತು 50 ಹಾರ್ಟ್ಜ್ ಸೈಕಲ್ಲಿನ ವಿದ್ಯುತ್ನ್ನು ಒದಗಿಸಬೇಕು.ಜಗತ್ತಿನ ಎಲ್ಲಾ ವಿದ್ಯುತ್ ಉಪಕರಣಗಳ ಉತ್ಪಾದನೆ ಈ ಕರೆಂಟ್ ಬೇಸಿಸ್ ಆಧಾರದ ಮೇಲೆ ಉತ್ಲಾದಿಸಲಾಗುತ್ತದೆ.ಇದನ್ನೆ ಗುಣಮಟ್ಟದ ವಿದ್ಯುತ್ ಎನ್ನಲಾಗುತ್ತದೆ.ಸದ್ಯ ದೇಶ ವಿದ್ಯುತ್ ಉತ್ಪಾದನೆಗೆ ಬೇಕಾದ ಕಚ್ಚಾ ಇಂಧನದ ಕೊರೆತೆಯನ್ನು ಎದುರಿಸುತ್ತಿದೆ.ಕಲ್ಲಿದ್ದಿಲು ಸರಬುರಾಜಿನ ಕೊರೆತೆಯಿಂದ ರಾಯಚೂರಿನ ಶಾಖೋತ್ಪನ್ನ ಘಟಕಗಳ ಪೈಕಿ ಅನೇಕ ಸ್ಥಾವರಗಳು ತಮ್ಮ ಉತ್ಪಾದನೆಯನ್ನು ನಿಲ್ಲಿಸಿವೆ;ನೆನಪಿರಲಿ:ಇಲ್ಲಿಂದ ವಿದ್ಯುತ್ ವಿವಿಧ ರಾಜ್ಯಗಳಿಗೆ ಸರಬುರಾಜಾಗುತ್ತಿದೆ.ಸದ್ಯ ಯಾದಗಿರಿ,ಕಲಬುರಗಿ,ರಾಯಚೂರಿನ ಭಾಗಗಳಲ್ಲಿ ಜೆಸ್ಕಾಂ ವಿತರಿಸುತ್ತಿರುವ ವಿದ್ಯುತ್ನ ಗುಣ ಮಟ್ಟದ ಬಗ್ಗೆ ಯೋಚಿಸೋಣ.ಅಧಿಕೃತವಾಗಿ ನಾನೊಬ್ಬ ಎಲೆಕ್ಟ್ರಿಷಿಯನ್
ಮತ್ತು ವಿದ್ಯುತ್ ಗುತ್ತಿಗೆದಾರ.ಮೊನ್ನೆ ರೈತನ ಕೃಷಿ ಪಂಪ್ ಸೆಟ್ಟು ದುರಸ್ತಿಗೆಂದು ಹೋದಾಗ ನನ್ನ ವಿದ್ಯುತ್ ಮಾಪಕ ಡಿಜಿಟಲ್ ಉಪಕರಣ ತೋರಿಸಿದ ಮಾಪನ ಎಷ್ಟು ಗೊತ್ತೆ?ಎರಡೂ ಫೇಸ್ ಸೇರಿ ಕೇವಲ ಎರಡು ನೂರಾ ನಲವತ್ತು ವೋಲ್ಟೇಜು!ಮೈಡಿಯರ್ ಫ್ರೇಂಡ್ಸ್,ನೆನಪಿರಲಿ:ಒಟ್ಟು ಮೂರು ಫೇಸ್ ವಿದ್ಯುತ್ ಸರಬುರಾಜಿಗೆ ಸಂಬಂಧಿಸಿದಂತೆ ಫೇಸೊಂದರಲ್ಲಿ ತಲಾ 220ರಂತೆ ವಿದ್ಯುತ್ ಸರಬುರಾಜು ಇರಬೇಕು,ಮತ್ತು 50 ಹಾರ್ಟ್ಜ್ ಇರಬೇಕು.ಎಲ್ಲಿದೆ ವಿದ್ಯುತ್?ಹೇಗೆ ಚಾಲಿತವಾಗುತ್ತದೆ ಪಂಪಸೆಟ್ಟು?ಬಲವಂತವಾಗಿ ಚಾಲಿಸಲು ಹೊರಟರೆ ಅದು ಕೆಲವೇ ನಿಮಿಷಗಳಲ್ಲಿ ಸುಟ್ಟು ಹೋಗುತ್ತದೆ!ಇದು ಬರೀ ಯಾದಗಿರ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳ ಕಥೆಯಲ್ಲ.ದೇಶದ ಎಲ್ಲಾ ರಾಜ್ಯಗಳ ಕಥೆಯೂ ಹೌದು!ಮನೆಗೆ ಬಂದು ಫ್ಯಾನು ಏಕೆ ನಿಧಾನವಾಗಿ ತಿರುಗುತ್ತಿದೆಯಲ್ಲಾ ಎಂದು ವಿದ್ಯುತ್ ಮಾಪನ ಮಾಡಲಾಗಿ ಮನೆಯಲ್ಲೂ ನೂರಿಪ್ಪತ್ತು ವೋಲ್ಟೇಜು!ದಿನಕ್ಕೆ ಹತ್ತಾರು ಸಲದ ಪವರ್ ಕಟ್ ಬಗ್ಗೆ ಸದ್ಯ ಪ್ರಸ್ತಾಪಿಸುವುದು ಬೇಡ.ಈ ವಿದ್ಯುತ್ ವಿವರಣೆಗೆ ಸಂಬಂಧಿಸಿದಂತೆ ಏನು ಹೇಳಲು ಹೊರಟಿದ್ದೆ ಎಂದರೆ 19/20/21
ಗೇಜಿನ ಅಲ್ಯುಮಿನಿಯಂ ವೈಯರಿನಿಂದ ಆಯಿಲ್ ಕೂಲಿಂಗ್ ಆಧಾರದ ಮೇಲೆ ತಯಾರಿಸಲಾಗುವ ವಿದ್ಯುತ್ ಪರಿವರ್ತಕಗಳು ನಿರಂತರ ಹತ್ತು ದಿನ ಪವರ್ ಕಟ್ ಇಲ್ಲದೆ ಚಾಲನೆಯಲ್ಲಿದ್ದರೆ ಅವು ಸುಟ್ಟು ಹೋಗುವ ಸಂಭವದಲ್ಲಿ ಯಾವುದೇ ಅನುಮಾನವಿಲ್ಲ.ಹತ್ತು ದಿನವಲ್ಲ;ಕಳಪೆ ವೈಂಡಿಂಗ್ ಮಾಡಿದ ಟಿಸಿಗಳು ಕೇವಲ ನಿರಂತರ ಎರಡು ದಿನಗಳ ಡ್ಯೂಟಿಯಲ್ಲಿ ಸುಟ್ಟು ಹೋದರೂ ಆಶ್ಚರ್ಯವಿಲ್ಲ!(ಇದಕ್ಕೆ ಸಂಬಂಧಿಸಿದ ಉದಾಹರಣೆ ನಮ್ಮ ಭಾಗದ ರೈತರಿಂದ ದೊರೆಯುತ್ತದೆ,ಸಂಪರ್ಕಿಸಬಹುದು).
ಹೀಗಿರುವಾಗ ಕಳೆದ ಹತ್ತಹದಿನೈದು ವರ್ಷಗಳಿಂದ ಒಂದು ನಿಮಿಷವೂ ವಿದ್ಯುತ್ ಕಡಿತ ಇಲ್ಲವೆಂದು ಆಕೆ ಹೇಳಿದ್ದು ಅದನ್ನು ಈ ಭಾಷಣಕಾರ ವೈಭವಿಸಿ ಹೇಳಿದ್ದು,ಭಾರತ ಪ್ರಜೆಗಳ ಕಿವಿಯ ಮೇಲೆ ಹೂ ಇಡಲು ಯತ್ನಿಸುವುದು,ಭಾರತದ ಪ್ರಜೆಗಳು ಹೂವನ್ನು ಕಿವಿಯ ಮೇಲೆ ಅಲಂಕರಿಸಿಕೊಳ್ಳುವುದು...ಹೇಗೆ ನಗಬೇಕು ಹೇಳಿ?ಉರುಳಾಡಿ ನಗಲಿಕ್ಕೆ ಇಡೀ ಭಾರತದ ಭೂ ಪ್ರದೇಶವೇ ಸಾಲದು!
ಸದ್ಯ ಕಳೆದ ಆರೇಳು ವರ್ಷಗಳಿಂದ ಅವತಾರ ಪುರುಷನ ಆಡಳಿತವಿದೆಯಲ್ಲಾ ಬದಲಾದದ್ದು ಏನು?ಮೋದಿ ಆಳ್ವಿಕೆಯಲ್ಲಿ ಭ್ರಷ್ಟಾಚಾರ ಇರುವುದಿಲ್ಲ;ಆ ಮನುಷ್ಯನಿಗೆ ಕುಟುಂಬವೇ ಇಲ್ಲ.ಆತನಿಗೆ ದುಡ್ಡಿನ ಅಗತ್ಯವಿಲ್ಲ.ಆತ ಹಣ ತೆಗೆದುಕೊಂಡು ಏನು ಮಾಡಬೇಕು?ಆತ ತಿನ್ನುವುದಿಲ್ಲ ಮತ್ತು ತಿನ್ನಲಿಕ್ಕೆ ಬಿಡುವುದಿಲ್ಲ ಎಂದು ಘನವಾಗಿ ಹೇಳಿಕೊಳ್ಳಲಾಯಿತು.ಖುದ್ದು ಚುನಾವಣೆ ಭಾಷಣಗಳಲ್ಲಿ ಸಾಕ್ಷಾತ್ ಅವತಾರ ಪುರುಷರೇ ಹಾಗೆಂದು ಹೇಳಿದ್ದರು!ನಮ್ಮ ಮೋದಿ ಎಷ್ಟೊಂದು ಸರಳ ಜೀವಿ ಎಂದರೆ ಅವರು ಆಹಾರವನ್ನೂ ಮಿತವಾಗಿ ಸೇವಿಸುತ್ತಾರೆ,ಯಾವ ಆಡಂಬರವೂ ಇಲ್ಲ.ಯೋಗ,ಧ್ಯಾನ,ಪೂಜೆ ಪುನಸ್ಕಾರಗಳೆ ಅವರ ಜೀವನದ ಅವಿಭಾಜ್ಯ ಅಂಶಗಳು ಎಂಬಂತೆ ಹೇಳಲಾಗುತ್ತಿತ್ತು.ಇತ್ತೀಚೆಗೆ ಹೊರ ಬಿದ್ದ ಅಂಶವೇನೆಂದರೆ ಅವತಾರ ಪುರುಷರ ಆಳಿಂಬೆಯ ಒಂದು ಊಟಕ್ಕೆ ಮೂರರಿಂದ ನಾಲ್ಕು ಸಾವಿರವಂತೆ!ಅವರ ವಸ್ತ್ರಗಳ ಬಗ್ಗೆ ದಂತಕಥೆಗಳೆ ಇವೆ,ಆ ಮಾತು ಬೇರೆ!ಕಳೆದ ಆರೇಳು ವರ್ಷಗಳಲ್ಲಿ ಮೋದಿ ಸರ್ಕಾರ ಮಾಡಿದ ವಿದೇಶ ಪ್ರವಾಸಗಳು ಮತ್ತ್ಯಾರು ಮಾಡಿಲ್ಲ.ಪ್ರತಿ ಪ್ರವಾಸವನ್ನೂ ಭಾವನಾತ್ಮಕ ವಿಷಯಗಳಿಗೆ ತಳುಕು ಹಾಕಲಾಗುತ್ತದೆ.ಆತ ಈ ಶತಮಾನದ ಘನ ನಾಯಕ ಎಂದು ಬಿಂಭಿಸ ಹೊರಟಿರುವ ಕೆಲ ಬಂಡವಾಳಶಾಹಿ ಮನಸ್ಸುಗಳ ಪ್ರಯತ್ನ ಯಶಸ್ವಿಯೂ ಆಗುತ್ತಿದೆ.ಇದಕ್ಕೆ ಸಾಕ್ಷಿ ಎಂಬಂತೆ ದಲಿತ ವರ್ಗಗಳ ಕೆಲ ಹುಡುಗರು ಮೋದಿಜಿಗೆ ಜೈ ಎನ್ನುವಂತೆ ಮಾತಾಡತೊಡಗಿವೆ.ಹಿಂದೂ ಎನ್ನುವ ಗುಲಾಮಿ ಶಬ್ದವನ್ನು ಬಲು ಹೆಮ್ಮೆಯಿಂದ ಹೇಳಿಕೊಳ್ಳುತ್ತಿವೆ.ಮೂಗಿನ ತುತಿಯಿಂದ ತಲೆಯವರೆಗೆ ಕುಂಕುಮ ಧರಿಸುವುದನ್ನು ರೂಢಿ ಮಾಡಿಕೊಂಡಿವೆ!ತಿನ್ನಲಿಕ್ಕೆ ಗತಿ ಇರದಿದ್ದರೂ ಮೀಸಲಾತಿ ಎನ್ನುವ ಘತ ಆಶಯಕ್ಕೆ ದಕ್ಕೆ ತರುವ ಹಲವು ಪ್ರಯತ್ನಗಳು ನಡೆಯುತ್ತಿದ್ದರೂ ಮುಸಲಾತಿ ನಮಗೆ ಬೇಕಿಲ್ಲ ಎನ್ನುವ ಮನಸ್ಥಿತಿಗೆ ಬಂದು ತಲುಪಿವೆ.ಆರ್ ಎಸ್ ಎಸ್ ಬಿತ್ತಿದ ಯಾವುದೋ ಕಾಲದ ಬೀಜ ಈಗ ಮೊಳಕೆ ಹೊಡೆದಿದೆ!
ನಿಮಗೆಲ್ಲೆ ಗೊತ್ತೇನು ಸೋದರರೆ,ಸ್ವಿಸ್ ಬ್ಯಾಂಕಿ ತಿಜೋರಿಗಳಲ್ಲಿ ಇರಬಹುದಾದ ಭಾರತದ ಕಪ್ಪು ಹಣ ಭಾರತಕ್ಕೆ ಮರಳಿ ಬಂದರೆ ಈ ದೇಶದ ಎಲ್ಲಾ ರಸ್ತೆಗಳನ್ನು ಚಿನ್ನದಿಂದ ನಿರ್ಮಿಸಬಹುದು ಎಂದಿದ್ದ ಒಬ್ಬಾತ!ರಾಜ್ಯವೊಂದರಲ್ಲಿ ಪವರ್ ಕಟ್ಟಿಗೆ ಅರ್ಥವೇ ಗೊತ್ತಿಲ್ಲ ಎನ್ನುವಂತೆ ವಿವವರಿಸಿದಾತ.ಮತ್ತಿದೇ ಸಂದರ್ಭದಲ್ಲಿ ಭಾರತದ ಪಕ್ಷವೊಂದು ದೇಶವಾಸಿಗಳೆ ನೀವು ಜನಾಧನ್ ಜೀರೋ ಅಕೌಂಟ್ ಮಾಡಿಸಿಕೊಂಡು ಹಣಕ್ಕಾಗಿ ಕಾದು ಕುಳಿತಿರಿ,ಯಾವಾಗ ನಿಮ್ಮ ಖಾತೆಗೆ ಹದಿನೈದು ಲಕ್ಷ ಬೀಳಬಹುದೋ ಗೊತ್ತಿಲ್ಲ.ನಾನು ಕೊಟ್ಟ ಮಾತಿಗೆ ತಪ್ಪಲಾರೆ ಎಂದಿತ್ತು.ತಮಾಷೆ ಎಂದರೆ ಸ್ವಿಸ್ ಬ್ಯಾಂಕು ನೀಡಿದ ಭಾರತದ ಕಪ್ಪು ಹಣ ಬಚ್ಚಿಟ್ಟ ಅನೇಕ ಕಳ್ಳರ ಪಟ್ಟಿಯಲ್ಲಿ ಬಿಜೆಪಿಯ ಅನೇಕ ಪ್ರತಿಷ್ಠಿತ ನಾಯಕರ ಹೆಸರಿದ್ದವು;ಸನ್ಮಾನ್ಯ ಬಿಎಸ್ ಯಡಿಯೂರಪ್ಪ ಮತ್ತು ಆರ್ ಅಶೋಕ ಹೆಸರುಗಳು ಮುಂಚೂಣಿಯಲ್ಲಿದ್ದವು.ಸ್ನೇಹಿತರೆ,ಈಗ ಎಲ್ಲಿಯಾದರೂ ಕಪ್ಪು ಹಣ ವಾಪಸ್ಸಾತಿಗೆ ಸಂಬಂಧಿಸಿದ ಹೇಳಿಕೆಗಳು ಬರುತ್ತಿವೆಯಾ ಹೇಳಿ?
ಬಿಜೆಪಿ ಅವರು ಹೇಳುವ ದೇವರ ಒಲುಮೆಯಿಂದ ಗೆದ್ದು ಬಂದ ಪಕ್ಷವಲ್ಲ.ಹಸಿ ಹಸಿ ಸುಳ್ಳುಗಳೊಂದಿಗೆ ಸಾವಿರಾರು ಕೋಟಿ ಸುರಿದೇ ಅಧಿಕಾರದ ಗೆದ್ದುಗೆ ಏರಿದ ಪಕ್ಷ.ಸಾವಿರಾರು ಕೋಟಿ ಬಂಡವಾಳ ಪುಗಸಟ್ಟೆ ಹೂಡಲಿಕ್ಕೆ ಯಾವನಿಗಾದರೂ ಹುಚ್ಚು ಹಿಡಿದಿರುತ್ತದೆಯೇ ?ನೆನಪಿರಲಿ:ಕರ್ನಾಟಕದಲ್ಲಿ ಶತಾಯಗಥಾಯ ಬಿಜೆಪಿ ಸರ್ಕಾರ ರಚಿಸಲೇಬೇಕು ಎಂದು ಆಡಿದ ನಾಟಕ,ಹೂಡಿದ ತಂತ್ರ ಮತ್ತು ಹರಿದ ಹಣ ನಿಮಗೆಲ್ಲಾ ಗೊತ್ತಿದೆ.
ಇಂಥಹ ಕಳ್ಳರಿಂದ,ಸುಳ್ಳರಿಂದ,ಹಗಲುದರೋಡೆಕೋರರಿಂದ,ಅಧಿಕಾರಕ್ಕಾಗಿ ಏನನ್ನಾದರೂ ಮಾಡಲು ಸಿದ್ದರಿರುವ ಲೂಟಿಕೋರರಿಂದ ಜನ ಕಲ್ಯಾಣ,ದೇಶದ ಅಭ್ಯೋದಯ ನಿರೀಕ್ಷಿಸುವುದು ಸಾಧ್ಯವೇ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ